ಮಾವಿಗೆ ಕೆಮಿಕಲ್ ಬಳಕೆಯಾಗಿದ್ಯಾ? ನಿಂಬೆ ಹಣ್ಣು ಬಿಚ್ಚಿಡುತ್ತೆ ಸತ್ಯ
Kitchen Hacks : ಈಗ ಎಲ್ಲವೂ ಕಲಬೆರಿಕೆ. ನಿಮ್ಮಿಷ್ಟದ ಮಾವಿಗೂ ಕೆಮಿಕಲ್ ಸೇರಿರುತ್ತೆ. ಮಾವು ತಿಂದು ನೀವು ಆರೋಗ್ಯವಾಗಿರಬೇಕು ಅಂದ್ರೆ ಅದಕ್ಕೆ ಕೆಮಿಕಲ್ ಬಳಕೆ ಆಗಿದ್ಯಾ ಇಲ್ವಾ ಅನ್ನೋದನ್ನು ಮೊದಲು ಟೆಸ್ಟ್ ಮಾಡಿ.

ಕೃತಕ ಮಾವಿನ ಹಣ್ಣು
ನೈಸರ್ಗಿಕವಾಗಿ ಮಾವು ಹಣ್ಣಾಗುವವರೆಗೆ ಕಾಯಲು ಯಾರಿಗೂ ಸಮಯ ಇಲ್ಲ. ಎಳೆ ಕಾಯಿಯನ್ನೇ ಕೊಯ್ದು ಹಣ್ಣಾಗಿಸುವ ಕೆಲಸ ಈಗ ನಡೆಯುತ್ತಿದೆ. ಮಾವಿನ ಕಾಯಿಯನ್ನು ಕೃತಕವಾಗಿ ಹಣ್ಣು ಮಾಡಲಾಗ್ತಿದೆ. ಕೃತಕವಾಗಿ ಹಣ್ಣಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಸಲಾಗುತ್ತೆ. ಇದು ಮಾವಿನ ಹಣ್ಣಿಗೆ ಹಳದಿ ಹೊಳಪು ನೀಡುತ್ತದೆ. ಗ್ರಾಹಕರನ್ನು ಈ ಹಣ್ಣುಗಳು ಆಕರ್ಷಿಸುತ್ತವೆ.

ಕಾಲ್ಸಿಯಿಂ ಕಾರ್ಬೈಡ್ ನಿಂದ ಹೇಗೆ ಹಣ್ಣಾಗುತ್ತೆ ಮಾವು?
ಕ್ಯಾಲ್ಸಿಯಂ ಕಾರ್ಬೈಡ್ ಅಸಿಟಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದು ನೈಸರ್ಗಿಕ ಹಣ್ಣಾಗುವಿಕೆಯನ್ನು ಅನುಕರಿಸುತ್ತದೆ. ಆದರೆ ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಮಾವಿಗೆ ಹಾಕೋದ್ರಿಂದ ಅದು ವಿಷಕಾರಿ ಅವಶೇಷಗಳನ್ನು ಬಿಡಬಹುದು. ಇಂಥ ಹಣ್ಣನ್ನು ನಾವು ಪದೇ ಪದೇ ತಿನ್ನೋದ್ರಿಂದ ಕಿರಿಕಿರಿ, ತಲೆತಿರುಗುವಿಕೆ ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಮಾವಿನ ಹಣ್ಣಿನ ಪರೀಕ್ಷೆ
ನೀವು ಮಾರ್ಕೆಟ್ ನಿಂದ ತಂದ ಮಾವಿನ ಹಣ್ಣಿಗೆ ಕಾಲ್ಸಿಯಂ ಕಾರ್ಬೈಡ್ ಬಳಸಿದ್ದಾರೆಯೇ ಎಂಬುದನ್ನು ನಿಂಬೆ ಹಣ್ಣಿನಿಂದ ಪತ್ತೆ ಮಾಡ್ಬಹುದು. ಒಂದು ನಿಂಬೆ ಹಣ್ಣನ್ನು ಕತ್ತರಿಸಿ ಅರ್ಧ ಭಾಗವನ್ನು ತೆಗೆದುಕೊಳ್ಳಿ. ಈ ಅರ್ಧ ನಿಂಬೆ ಹಣ್ಣನ್ನು ಮಾವಿನ ಕಾಯಿ ತೊಟ್ಟಿನ ಭಾಗಕ್ಕೆ ಹಚ್ಚಬೇಕು. ನೀವು ಐದು ಸೆಕೆಂಡಿನ ಕಾಲ ನಿಂಬೆ ರಸವನ್ನು ತೊಟ್ಟಿನ ಭಾಗಕ್ಕೆ ಉಜ್ಜಬೇಕು.
ಕೆಮಿಕಲ್ ಬಳಕೆ
ನೀವು ಮಾವಿನ ಹಣ್ಣಿನ ತೊಟ್ಟಿನ ಭಾಗವನ್ನು ನಿಂಬೆ ಹಣ್ಣಿನಿಂದ ಉಜ್ಜಿದಾಗ ಬದಲಾಗುವ ಬಣ್ಣವನ್ನು ಗಮನಿಸಿ. ಒಂದು ವೇಳೆ ಬಣ್ಣ ನೀಲಿ ಅಥವ ಪರ್ಪಲ್ ಬಣ್ಣಕ್ಕೆ ತಿರುಗಿದ್ರೆ ಅದರಲ್ಲಿ ಕೆಮಿಕಲ್ ಬಳಕೆ ಆಗಿದೆ ಎಂದರ್ಥ. ಮಾವನ್ನು ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡಲಾಗಿದೆ ಎಂಬುದನ್ನು ನೀವು ತಿಳಿಯಬಹುದು. ಒಂದ್ವೇಳೆ ಮಾವಿನ ಬಣ್ಣ ಬದಲಾಗಿಲ್ಲ ಎಂದಾದ್ರೆ ನೈಸರ್ಗಿಕವಾಗಿ ಮಾವು ಹಣ್ಣಾಗಿದೆ, ಯಾವುದೇ ಕೆಮಿಕಲ್ ಬಳಕೆಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ನೀವು ಯಾವುದೇ ಭಯವಿಲ್ಲದೆ ಈ ಮಾವಿನ ಹಣ್ಣನ್ನು ತಿನ್ನಬಹುದು.
ಮಾಗಿದ ಮಾವಿನ ಹಣ್ಣು
ನೈಸರ್ಗಿಕವಾಗಿ ಮಾವು ಹಣ್ಣಾಗಿದ್ದಲ್ಲಿ ಸೌಮ್ಯವಾದ ಸಿಹಿ ಪರಿವಳವನ್ನು ಮಾವು ಹೊಂದಿರುತ್ತದೆ. ರಾಸಾಯನಿಕ ಪರಿಮಳ ಅದ್ರಲ್ಲಿರೋದಿಲ್ಲ. ಒತ್ತಿದಾಗ ಮೃದುವಾಗಿರುತ್ತದೆ. ನೀವು ವಿಶ್ವಾಸಾರ್ಹ ಮಾರುಕಟ್ಟೆಯಿಂದ ಮಾವಿನ ಹಣ್ಣು ಖರೀದಿ ಮಾಡುವುದು ಉತ್ತಮ.
ಮಾವಿನ ಹಣ್ಣು ಬಳಸುವ ಮುನ್ನ
ಪ್ರತಿ ಬಾರಿ ಮನೆಗೆ ತಂದ ಮಾವಿನ ಹಣ್ಣನ್ನು ತೊಳೆಯದೆ ತಿನ್ನಬೇಡಿ. ಶುದ್ಧವಾದ ನೀರಿನಲ್ಲಿ ಮಾವಿನ ಹಣ್ಣನ್ನು ಸ್ವಚ್ಛಗೊಳಿಸಿ ತಿನ್ನಬೇಕು. ಮಾವಿನ ಹಣ್ಣಿನ ತೊಟ್ಟಿನ ಭಾಗವನ್ನು ಸ್ವಲ್ಪ ಕತ್ತರಿಸಿ, ಅರ್ಧಗಂಟೆ ನೀರಿನಲ್ಲಿ ನೆನೆಹಾಕಿ ನಂತ್ರ ಸೇವನೆ ಮಾಡಿದಲ್ಲಿ ಮಾವಿನ ಹಣ್ಣಿನ ಉಷ್ಣತೆ ಕಡಿಮೆಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

