ಬೋಂಡಾ ಮಾಡೋಕೆ ಹಿಟ್ಟು ತಗೊಂಡ್ರೆ ಹುಳ ಕಾಣಿಸ್ತಾ, ಡೋಂಟ್‌ವರಿ..ಹೀಗ್ ಮಾಡಿ
ಈ ಸಣ್ಣ ಕಪ್ಪು ಹುಳಗಳಿಂದ ಕಡಲೆ ಹಿಟ್ಟನ್ನು ರಕ್ಷಿಸಲು ನೀವು ತುಂಬಾ ಸರಳವಾದ ಮನೆಮದ್ದನ್ನು ಪ್ರಯತ್ನಿಸಬಹುದು.

Besan storage tips: ಮಳೆಗಾಲದಲ್ಲಿ ವಿವಿಧ ಸ್ಥಳಗಳಲ್ಲಿ ನೀರು ನಿಲ್ಲುವುದರಿಂದ ಅನೇಕ ರೀತಿಯ ಕೀಟಗಳು, ಹುಳಗಳು ಮನೆಯೊಳಗೆ ಬರಲು ಪ್ರಾರಂಭಿಸುತ್ತವೆ. ಬೆಳಕನ್ನು ನೋಡಿದ ನಂತರ ಬರುವ ಹುಳಗಳ ಸಂಖ್ಯೆಯೂ ಕಡಿಮೆಯಿಲ್ಲ. ಹುಳಗಳು ಮತ್ತು ಸೊಳ್ಳೆಗಳ ಭಯವು ಉತ್ತುಂಗದಲ್ಲಿರುವ ಋತುವಿದು. ಮಸಾಲೆಗಳು ಮತ್ತು ಧಾನ್ಯಗಳನ್ನು ಸಹ ಈ ಹುಳಗಳಿಂದ ರಕ್ಷಿಸುವುದು ದೊಡ್ಡ ಸಾಹಸವೇ ಸರಿ.
ಆಗಾಗ್ಗೆ ಈ ಹುಳಗಳು ಹಿಟ್ಟಿನ ಡಬ್ಬಿಯಲ್ಲಿಯೂ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಹೇಗಿದ್ದರೂ ಈಗ ಮಳೆಗಾಲ. ಮನೆಯಲ್ಲಿ ಬೋಂಡಾ, ಬಜ್ಜಿಗೆಂದು ಕಡಲೆಹಿಟ್ಟು ಬಳಸುವುದು ಸಾಮಾನ್ಯ. ಹಾಗಾಗಿ ಈ ಸಣ್ಣ ಕಪ್ಪು ಹುಳಗಳಿಂದ ಕಡಲೆ ಹಿಟ್ಟನ್ನು ರಕ್ಷಿಸಲು ನೀವು ತುಂಬಾ ಸರಳವಾದ ಮನೆಮದ್ದನ್ನು ಪ್ರಯತ್ನಿಸಬಹುದು. ಹಾಗಾದ್ರೆ ಕಡಲೆ ಹಿಟ್ಟಿನಿಂದ ಹುಳಗಳನ್ನು ದೂರವಿಡಲು ಏನ್ಮಾಡಬೇಕೆಂದು ನೋಡೋಣ ಬನ್ನಿ...
ಕಡಲೆ ಹಿಟ್ಟಿನಿಂದ ಹುಳಗಳನ್ನು ದೂರವಿಡಲು ಪಲಾವ್ ಎಲೆಗಳನ್ನು ಡಬ್ಬಿಯಲ್ಲಿ ಇಡಬಹುದು. ಇದರ ಸುವಾಸನೆಯು ಹುಳಗಳನ್ನು ದೂರವಿಡುತ್ತದೆ. ಈ ನೈಸರ್ಗಿಕ ವಿಧಾನವು ಕಡಲೆ ಹಿಟ್ಟಿಗೆ ಹಾನಿ ಮಾಡುವುದಿಲ್ಲ. ಆದರೆ ಹುಳಗಳನ್ನು ದೂರವಿಡುತ್ತದೆ. ಕಡಲೆ ಹಿಟ್ಟಿನ ಹೊರತಾಗಿ, ಇತರ ಯಾವುದೇ ಹಿಟ್ಟನ್ನು ಹುಳಗಳಿಂದ ರಕ್ಷಿಸಲು ಪಲಾವ್ ಎಲೆಯನ್ನು ಬಳಸಬಹುದು.
ಕಡಲೆ ಹಿಟ್ಟಿನಿಂದ ಹುಳಗಳನ್ನು ದೂರವಿಡಲು ಬೇವಿನ ಎಲೆಗಳನ್ನು ಸಹ ಬಳಸಬಹುದು. ಲವಂಗ ಕೂಡ ಪರಿಣಾಮಕಾರಿ ಎಂದು ಸಾಬೀತಾಗಿದೆ. ನೀವು ಲವಂಗವನ್ನು ಕಡಲೆ ಹಿಟ್ಟಿನಲ್ಲಿ ಇಟ್ಟರೆ ಹುಳಗಳು ಕಡಲೆ ಹಿಟ್ಟಿನ ಡಬ್ಬಿಯತ್ತಲೂ ಸುತ್ತಾಡುವುದಿಲ್ಲ.
ಇಂಗುವನ್ನು ಕಡಲೆ ಹಿಟ್ಟಿನ ಡಬ್ಬಿಯಲ್ಲಿ ಇಡುವುದರಿಂದ ಹುಳಗಳು ದೂರವಾಗುತ್ತವೆ. ಇಂಗುವನ್ನು ನೇರವಾಗಿ ಕಡಲೆ ಹಿಟ್ಟಿನಲ್ಲಿ ಹಾಕುವ ಬದಲು, ಅದನ್ನು ಬಟ್ಟೆಯಲ್ಲಿ ಕಟ್ಟಿ ಒಂದು ಬಂಡಲ್ ಮಾಡಿ. ನಂತರ ಈ ಬಂಡಲ್ ಅನ್ನು ಕಡಲೆ ಹಿಟ್ಟಿನ ಪೆಟ್ಟಿಗೆಯಲ್ಲಿ ಇರಿಸಿ.
ನೀವು ಬಯಸಿದರೆ ಕಡಲೆ ಹಿಟ್ಟನ್ನು ಫ್ರಿಡ್ಜ್‌ನಲ್ಲಿಯೂ ಇಡಬಹುದು. ಕಡಲೆ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ, ಅದರಲ್ಲಿ ಬೆಳೆಯುವ ಹುಳಗಳ ಮೊಟ್ಟೆಗಳು ಸಾಯುತ್ತವೆ ಮತ್ತು ಹೊಸ ಹುಳಗಳು ಕಡಲೆ ಹಿಟ್ಟಿನೊಳಗೆ ಬರುವುದಿಲ್ಲ.
ಕಡಲೆ ಹಿಟ್ಟನ್ನು ಇಡುವ ಪಾತ್ರೆಯು ಒದ್ದೆಯಾಗಿರಬಾರದು. ಸಂಪೂರ್ಣವಾಗಿ ಸ್ವಚ್ಛವಾಗಿದೆಯಾ ಎಂದು ನೋಡಿಕೊಳ್ಳಿ.
ಕಡಲೆ ಹಿಟ್ಟನ್ನು ಶೇಖರಿಸಿಡಲು ಗಾಳಿಯಾಡದ ಪಾತ್ರೆಯನ್ನು ಬಳಸಿ. ಗಾಳಿಯಾಡದ ಪಾತ್ರೆಯು ಕಡಲೆ ಹಿಟ್ಟಿನೊಳಗೆ ಹುಳಗಳು ಪ್ರವೇಶಿಸುವುದನ್ನು ತಡೆಯುತ್ತದೆ. ಕಡಲೆ ಹಿಟ್ಟನ್ನು ಗಾಜಿನ ಅಥವಾ ಪ್ಲಾಸ್ಟಿಕ್ ಡಬ್ಬಿಗಳಲ್ಲಿಯೂ ಸಂಗ್ರಹಿಸಬಹುದು. ಹುಳಗಳು ಇವುಗಳ ಮೇಲೆ ಸುಲಭವಾಗಿ ದಾಳಿ ಮಾಡುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.