ಗೃಹಿಣಿಯರೇ ನಿಮಗಿದು ತಿಳಿದಿರಲಿ: ಅಡುಗೆ ಮನೇಲಿ ರಾತ್ರಿ ವೇಳೆಯೇ ಜಿರಳೆಗಳು ಕಾಣಿಸಿಕೊಳ್ಳೋದೇಕೆ?
ಮನೆ ಎಷ್ಟೇ ಸ್ವಚ್ಛ ಸುರಕ್ಷವಾಗಿದ್ದರೂ, ಬಾಗಿಲು ಕಿಟಕಿಗಳು ಭದ್ರವಾಗಿದ್ದರೂ ಅದೆಲ್ಲಿಂದಲೋ ಜಿರಳೆಗಳು ಮನೆಯೊಳಗೆ ನುಸುಳಿ ಅಡುಗೆ ಮನೆಯಲ್ಲಿ ಕಾಣಿಸಿಕೊಳ್ಳುತ್ತವೆ. ಅದೂ ಹಗಲಲ್ಲಿ ಕಾಣದ ಜಿರಳೆಗಳು ರಾತ್ರಿಯೇ ಯಾಕೆ ಕಾಣಿಸಿಕೊಳ್ಳುತ್ತವೆ ಹಲವು ಕಾರಣಗಳು ಇಲ್ಲಿವೆ ತಿಳಿಯೋಣ

ಮನೆ ಮನೆಯ ಶತ್ರು ಜಿರಳೆ
ಮನೆ ಎಷ್ಟೇ ಸ್ವಚ್ಛ ಸುರಕ್ಷವಾಗಿದ್ದರೂ, ಬಾಗಿಲು ಕಿಟಕಿಗಳು ಭದ್ರವಾಗಿದ್ದರೂ ಅದೆಲ್ಲಿಂದಲೋ ಜಿರಳೆಗಳು ಮನೆಯೊಳಗೆ ನುಸುಳಿ ಅಡುಗೆ ಮನೆಯಲ್ಲಿ ಕಾಣಿಸಿಕೊಳ್ಳುತ್ತವೆ. ಅದೂ ಹಗಲಲ್ಲಿ ಕಾಣದ ಜಿರಳೆಗಳು ರಾತ್ರಿಯೇ ಯಾಕೆ ಕಾಣಿಸಿಕೊಳ್ಳುತ್ತವೆ ಎಂದು ಗೃಹಿಣಿಯರು ಯೋಚಿಸಿ ಉತ್ತರ ಸಿಗದೆ ತಲೆಕೆರೆದುಕೊಳ್ಳುವುದುಂಟು. ರಾತ್ರಿ ವೇಳೆಯೇ ಜಿರಳೆಗಳು ಹೇಗೆ ಹೊರಬರುತ್ತವೆ ಅನ್ನೋದಕ್ಕೆ ಹಲವು ಕಾರಣಗಳು ಇಲ್ಲಿವೆ ತಿಳಿಯೋಣ
ರಾತ್ರಿ ವೇಳೆಯೇ ಜಿರಳೆ ಉಪಟಳ
ರಾತ್ರಿ ಊಟ ಮಾಡಿ, ಅಡುಗೆ ಪಾತ್ರೆ ತೊಳೆದು ಮಟ್ಟಸನಾಗಿ ಜೋಡಿಸಿಟ್ಟು ಲೈಟ್ ಆಫ್ ಮಾಡುತ್ತಿದ್ದಂತೆ ಜಿರಳೆಗಳು ಎಂಟ್ರಿ ಆಗಿರುತ್ತವೆ. ನೀವು ಏನನ್ನೋ ಮರೆತು ಮತ್ತೆ ಲೈಟ್ ಆನ್ ಮಾಡಿ ತಕ್ಷಣ ಜಿರಳೆಗಳು ಅಲ್ಲಲ್ಲಿ ಓಡುತ್ತಿರುವುದು ಕಂಡರೆ ಮೈಯೆಲ್ಲ ಉರಿದುಹೋಗುತ್ತದೆ. ಜಿರಳೆಗಳು ಸ್ವಭಾವತಃ ರಾತ್ರಿಯ ಕೀಟಗಳು. ಅವು ದಿನವಿಡೀ ಕತ್ತಲಿರುವೆಡೆ ಅಡಗಿರುತ್ತವೆ. ಆದರೆ ರಾತ್ರಿ ಆಗ್ತಿದ್ದಂತೆ ಅವುಗಳ ಕೆಲಸ ಶುರುವಾಗುತ್ತದೆ. ಅಷ್ಟೊತ್ತಿಗೆ ಮನೆಯಲ್ಲಿ ಎಲ್ಲರದೂ ಊಟ ಆಗಿ ಮಲಗಿದ ವೇಳೆ ಜಿರಳೆಗಳು ಅಳಿದುಳಿದ ಆಹಾರ ನೀರು ಹುಡುಕಿಕೊಂಡು ಹೊರಬರುತ್ತವೆ.
ಜಿರಳೆಗಳಿಗೆ ಬೆಳಕು ಆಗಿರಬುವುದಿಲ್ಲ. ಅದಕ್ಕಾಗಿಯೇ ಅವು ಹಗಲಿನ ಹೊತ್ತು ಸಿಂಕ್ ಅಡಿಯಲ್ಲಿ, ಗ್ಯಾಸ್ ಸ್ಟೌವ್ ಹಿಂದೆ, ಕಪಾಟಿನ ಬಿರುಕುಗಳಲ್ಲಿ, ಪೈಪ್‌ಲೈನ್ ಸುತ್ತಲೂ ಅಥವಾ ಅಡುಗೆಮನೆಯ ಇತರ ಕತ್ತಲೆಯ ಪ್ರದೇಶಗಳಲ್ಲಿ ಅಡಗಿರುತ್ತವೆ. ಮನೆಯಲ್ಲಿ ಮೌನ ಆವರಿಸಿ ದೀಪಗಳು ಆಫ್ ಆಗಲು ಪ್ರಾರಂಭಿಸಿದ ತಕ್ಷಣ, ಅವು ಹೊರಗೆ ಬಂದು ಆಹಾರವನ್ನು ಹುಡುಕಲು ಪ್ರಾರಂಭಿಸುತ್ತವೆ.
ಜಿರಳೆಗಳಿಗೆ ಇವು ಆಕರ್ಷಿಸುತ್ತವೆ
ಉಳಿದ ಆಹಾರ, ತೆರೆದ ಪಾತ್ರೆಗಳು, ಚೆಲ್ಲಿದ ಅನ್ನ ಅಡುಗೆಮನೆಯಲ್ಲಿ ಕಸದ ವಾಸನೆ ಜಿರಳೆಗಳನ್ನು ಆಕರ್ಷಿಸುವ ಪ್ರಮುಖ ಅಂಶಗಳಾಗಿವೆ. ಊಟದ ಬಳಿಕ ಪಾತ್ರೆಗಳನ್ನು ರಾತ್ರಿಯಿಡೀ ತೊಳೆಯದೆ ಬಿಡುವುದು ಅಥವಾ ಸಿಂಕ್‌ನಲ್ಲಿ ಅನ್ನ ಚೆಲ್ಲುವುದು ಜಿರಳೆಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಇದರೊಂದಿಗೆ ಅಡುಗೆ ಮನೇಲಿ ಯಾವಾಗಲೂ ನೀರು ಚೆಲ್ಲಿದಂತಹ ತೇವಾಂಶವಿದ್ದರೆ, ಸೋರುವ ಪೈಪ್‌ಗಳು, ಒದ್ದೆಯಾದ ಸಿಂಕ್, ಅದರ ಬಟ್ಟೆಗಳು ಇದ್ದರೆ ಜಿರಳೆಗಳು ಬೇಗ ಒಳಬರುತ್ತವೆ.
ಜಿರಳೆಗಳ ಸಂತಾನೋತ್ಪತ್ತಿಗೆ ರಾತ್ರಿ ಸಮಯ ಅನುಕೂಲ
ಜಿರಳೆಗಳ ಸಂತಾನೋತ್ಪತ್ತಿಗೆ ರಾತ್ರಿಯ ಸಮಯವೂ ಅನುಕೂಲಕರ. ಅವು ಕತ್ತಲೆ ಮತ್ತು ಶಾಂತ ವಾತಾವರಣದಲ್ಲಿ ಬೆಳೆಯುತ್ತವೆ. ಆದ್ದರಿಂದ, ನೀವು ರಾತ್ರಿಯಲ್ಲಿ ಆಗಾಗ್ಗೆ ಜಿರಳೆಗಳನ್ನು ನೋಡಿದರೆ, ಅದು ನಿಮ್ಮ ಮನೆಯಲ್ಲಿ ಅವುಗಳ ಸಂಖ್ಯೆ ಹೆಚ್ಚುತ್ತಿರುವುದರ ಸಂಕೇತವಾಗಿರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
