Resuse Egg Shell : ಮೊಟ್ಟೆ ತಿಂದು ಸಿಪ್ಪೆ ಎಸೆಯಬೇಡಿ, ಕಸದಿಂದ ರಸ ತೆಗೆಯುವ ವಿಧಾನ ಇಲ್ಲಿದೆ
ಮೊಟ್ಟೆ ಬಳಸಿ, ಮೊಟ್ಟೆಯ ಸಿಪ್ಪೆಯನ್ನು ಕಸಕ್ಕೆ ಎಸೆಯುವ ಬದಲು ಅದನ್ನು ನೀವು ನಾನಾ ರೀತಿಯಲ್ಲಿ ಬಳಸಬಹುದು. ಮೊಟ್ಟೆ ಸಿಪ್ಪೆಯನ್ನು ಗೊಬ್ಬರವಾಗಿ, ಪಾತ್ರೆ ಕ್ಲೀನ್ ಮಾಡಲು ಬಳಸಬಹುದು.

ಮೊಟ್ಟೆ ಸಿಪ್ಪೆಯಲ್ಲೇನಿದೆ?
ಮೊಟ್ಟೆಯ ಸಿಪ್ಪೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಕ್ಯಾಲ್ಸಿಯಂ ಕಾರ್ಬೊನೇಟ್ ಇರುತ್ತದೆ. ಇದು ಮನೆಯಲ್ಲಿರುವ ಗಿಡಗಳ ಆರೈಕೆಗೆ ಮಾತ್ರವಲ್ಲ, ಅಡುಗೆಮನೆಯ ಕೆಲವು ಕೆಲಸಗಳಿಗೂ ಉಪಯೋಗಕ್ಕೆ ಬರುತ್ತದೆ.
ಗಿಡಗಳಿಗೆ ಕ್ಯಾಲ್ಸಿಯಂಯುಕ್ತ ಗೊಬ್ಬರ
ಮೊಟ್ಟೆಯ ಸಿಪ್ಪೆಯನ್ನು ಚೆನ್ನಾಗಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಮನೆಯ ಗಿಡಗಳ ಮಣ್ಣಿಗೆ ಸ್ವಲ್ಪ ಪ್ರಮಾಣದಲ್ಲಿ ಸೇರಿಸಬಹುದು. ಟೊಮೆಟೊ, ಮೆಣಸಿನಕಾಯಿ ಮತ್ತು ಗುಲಾಬಿಯಂತಹ ಗಿಡಗಳಿಗೆ ಇದು ಕ್ಯಾಲ್ಸಿಯಂ ಒದಗಿಸಲು ಸಹಾಯ ಮಾಡುತ್ತದೆ. ಆದರೆ ಸಿಪ್ಪೆ ಮಣ್ಣಿನಲ್ಲಿ ನಿಧಾನವಾಗಿ ಕರಗುವುದರಿಂದ ಗಿಡಗಳಿಗೆ ತಕ್ಷಣ ಪೋಷಕಾಂಶ ಸಿಗುತ್ತದೆ ಎಂದಲ್ಲ.
ಮಿಕ್ಸಿ ಜಾರ್ನ ಬ್ಲೇಡ್ ಹರಿತಗೊಳಿಸಿ
ಮಿಕ್ಸಿ ಜಾರ್ನ ಬ್ಲೇಡ್ಗಳು ಮೊಂಡಾಗಿದ್ದರೆ ಮೊಟ್ಟೆಯ ಸಿಪ್ಪೆಯನ್ನು ಹಾಕಿ ಮಿಕ್ಸಿ ಮಾಡಿದರೆ ಮತ್ತೆ ಹರಿತವಾಗುತ್ತವೆ. ಮೊಟ್ಟೆ ಸಿಪ್ಪೆಯನ್ನು ಜಾರಿಗೆ ಹಾಕಿ ಒಂದೆರಡು ನಿಮಿಷ ರುಬ್ಬಿ. ಇದ್ರಿಂದ ಬ್ಲೇಡ್ ಹರಿತವಾಗುತ್ತದೆ.
ಜಿಡ್ಡು ಮತ್ತು ಸುಟ್ಟ ಕಲೆ
ಬಾಣಲೆ ಅಥವಾ ಪಾತ್ರೆಯಲ್ಲಿ ಜಿಡ್ಡು ಮತ್ತು ಸುಟ್ಟ ಕಲೆಗಳಿದ್ದರೆ ಮೊಟ್ಟೆಯ ಸಿಪ್ಪೆಯನ್ನು ಪುಡಿ ಮಾಡಿ ಸ್ಕ್ರಬ್ನಂತೆ ಬಳಸಬಹುದು. ನಿಮ್ಮ ಪಾತ್ರೆ ತೊಳೆಯುವ ಸೋಪ್ ಗೆ ಈ ಪುಡಿಯನ್ನು ಹಾಕಿ, ಪಾತ್ರೆ ತೊಳೆಯಿರಿ. ನಾನ್ಸ್ಟಿಕ್ ಪಾತ್ರೆಗಳಿಗೆ ಇದನ್ನು ಬಳಸಬೇಡಿ.
ಕೀಟ ಕಾಟಕ್ಕೆ ಮುಕ್ತಿ
ತೋಟದಲ್ಲಿರುವ ಗಿಡಗಳ ಎಲೆಗಳನ್ನು ಬಸವನ ಹುಳುಗಳು ತಿನ್ನುತ್ತಿದ್ದರೆ, ಗಿಡದ ಸುತ್ತ ಮೊಟ್ಟೆಯ ಸಿಪ್ಪೆಯ ಚೂರುಗಳನ್ನು ಹಾಕಬೇಕು. ಚೂಪಾದ ಸಿಪ್ಪೆಗಳು ಕೀಟಗಳನ್ನು ಸಂಪೂರ್ಣವಾಗಿ ತಡೆಯುತ್ತವೆ.
ಕುಂಡದಂತೆ ಬಳಸಿ
ಮೊಟ್ಟೆಯ ಸಿಪ್ಪೆಯ ಮೇಲ್ಭಾಗವನ್ನು ಸ್ವಲ್ಪ ಒಡೆದು, ಅದರೊಳಗೆ ಮಣ್ಣು ತುಂಬಿ ಕೊತ್ತಂಬರಿ, ಮೆಣಸಿನಕಾಯಿ ಅಥವಾ ಟೊಮೆಟೊದಂತಹ ಸಣ್ಣ ಬೀಜಗಳನ್ನು ಬಿತ್ತಬಹುದು. ಬೀಜ ಮೊಳಕೆಯೊಡೆದ ನಂತರ ಸಸಿಯನ್ನು ಸಿಪ್ಪೆ ಸಮೇತ ಮಣ್ಣಿನಲ್ಲಿ ನೆಡಬಹುದು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

