Kannada

ಬ್ರಷ್‌ನಲ್ಲಿ ಜಿಡ್ಡು ಹಾಗೇ ಉಳಿಯುತ್ತೆ

ನಾವು ಪ್ರತಿದಿನ ದೋಸೆ ಕಾವಲಿಗೆ ಎಣ್ಣೆ ಸವರಲು ಬ್ರಷ್ ಬಳಸುತ್ತೇವೆ. ಮೇಲ್ನೋಟಕ್ಕೆ ಇದು ಕ್ಲೀನ್ ಅನಿಸಿದರೂ, ಇದರ ಒಳಗಡೆ ಎಣ್ಣೆ ಜಿಡ್ಡು ಹಾಗೇ ಉಳಿದುಕೊಂಡಿರುತ್ತದೆ.

Kannada

ಬಿಸಿ ನೀರು ಮತ್ತು ವಿಮ್ ಲಿಕ್ವಿಡ್ ಸಾಕು

ಈ ಜಿಡ್ಡನ್ನು ಹೋಗಲಾಡಿಸಲು ಕಷ್ಟಪಟ್ಟು ತೊಳೆಯುವ ಅವಶ್ಯಕತೆಯಿಲ್ಲ. ಮನೆಯಲ್ಲೇ ಇರುವ ಈ ಎರಡು ವಸ್ತುಗಳು ಸಾಕು.

Image credits: AI Image
Kannada

ಬಿಸಿ ನೀರಿಗೆ ವಿಮ್ ಲಿಕ್ವಿಡ್ ಹಾಕಿ

ಒಂದು ಗ್ಲಾಸ್‌ಗೆ ಸ್ವಲ್ಪ ಬಿಸಿ ನೀರನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ವಿಮ್ ಲಿಕ್ವಿಡ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

Image credits: AI Image
Kannada

15 ನಿಮಿಷ ನೆನೆಸಿಡಿ

ಎಣ್ಣೆ ಜಿಡ್ಡು ಹಿಡಿದಿರುವ ಬ್ರಷ್ ಅನ್ನು ಈ ಬಿಸಿ ನೀರಿನಲ್ಲಿ 15 ನಿಮಿಷಗಳ ಕಾಲ ಹಾಗೇ ಬಿಡಿ.

Image credits: AI Image
Kannada

ನೀರಿನ ಕಲರ್ ಚೇಂಜ್ ಆಗುತ್ತೆ

15 ನಿಮಿಷದ ಬಳಿಕ ನೋಡಿದರೆ ನೀರಿನ ಬಣ್ಣವೇ ಬದಲಾಗಿರುತ್ತದೆ. ಬ್ರಷ್‌ನಲ್ಲಿದ್ದ ಸಂಪೂರ್ಣ ಎಣ್ಣೆ ಜಿಡ್ಡು ನೀರಿಗೆ ಬಿಟ್ಟುಕೊಂಡಿರುತ್ತದೆ.

Image credits: AI Image
Kannada

ಹೊಸ ಬ್ರಷ್‌ನಂತೆ ನಳನಳಿಸುತ್ತೆ

ಬಳಿಕ ನಾರ್ಮಲ್ ನೀರಿನಲ್ಲಿ ಸೋಪು ಹಾಕಿ ಬ್ರಷ್ ಅನ್ನು ತೊಳೆದು ಒಣಗಿಸಿ. ಈಗ ನಿಮ್ಮ ಬ್ರಷ್ ಹೊಸದರಂತೆ ಕ್ಲೀನ್ ಆಗಿರುತ್ತದೆ! ವಾರಕ್ಕೊಮ್ಮೆ ಇದನ್ನು ಟ್ರೈ ಮಾಡಿ.

Image credits: AI Image

ನಿಂಬೆಹಣ್ಣಿನ ಒಂದು ಹನಿಯೂ ವ್ಯರ್ಥವಾಗದಂತೆ ರಸ ಹಿಂಡಲು ಸಿಂಪಲ್ ಟ್ರಿಕ್

ಫ್ರಿಡ್ಜ್‌ನಲ್ಲಿ ಇಡದಿದ್ರೂ ಮೊಸರು ಹುಳಿಯಾಗಲ್ಲ, ಅಜ್ಜಿ ಕಾಲದ ಸಿಂಪಲ್ ಟ್ರಿಕ್!

ನೀರು, ಸೋಪು ಬಳಸದೆ ಎರಡೇ ನಿಮಿಷದಲ್ಲಿ ಎಣ್ಣೆ ಕ್ಯಾನ್ ಜಿಡ್ಡು ಹೀಗೆ ಕ್ಲೀನ್ ಮಾಡಿ!

Kitchen Cleaning Tips: ಎಚ್ಚರ, ಅಡುಗೆಮನೆಯಲ್ಲಿ ನೀವು ಮರೆಯದೆ ಸ್ವಚ್ಛಗೊಳಿಸಬೇಕಾದ 3 ವಸ್ತುಗಳಿವು!