ಹಾಸ್ಟೆಲ್‌ನಲ್ಲಿ ಇರೋರು, ಬ್ಯಾಚುಲರ್ಸ್ ಈ 6 ತಿಂಡಿಯನ್ನ ಐದೇ ನಿಮಿಷದಲ್ಲಿ ಮಾಡ್ಬೋದು
Electric kettle recipes: ಎಲೆಕ್ಟ್ರಿಕ್ ಕೆಟಲ್‌ಗಳು ಮಿನಿ ಅಡುಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತವೆ. ಒಂದು ವೇಳೆ ನಿಮಗೆ ಇದ್ದಕ್ಕಿದ್ದಂತೆ ಹಸಿವಾದರೆ ಈ ಕೆಟಲ್ ಬಳಸಿ ಕೆಲವೇ ನಿಮಿಷದಲ್ಲಿ ರುಚಿಕರವಾದ ಭಕ್ಷ್ಯಗಳನ್ನು ತಯಾರಿಸುವ ಮೂಲಕ ನಿಮ್ಮ ಹಸಿವನ್ನು ನೀಗಿಸಿಕೊಳ್ಳಬಹುದು.

ಎಲೆಕ್ಟ್ರಿಕ್ ಕೆಟಲ್ಸ್ ಇದ್ಯಾ?
ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆ, ಹಾಸ್ಟೆಲ್ ಅಥವಾ ಕಚೇರಿಯಲ್ಲಿ ಎಲೆಕ್ಟ್ರಿಕ್ ಕೆಟಲ್‌ಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಎಲ್ಲರೂ ಅವುಗಳನ್ನು ನೀರು ಬಿಸಿ ಮಾಡಲು ಅಥವಾ ಚಹಾ ಅಥವಾ ಕಾಫಿ ಮಾಡಲು ಮಾತ್ರ ಬಳಸುತ್ತಾರೆ. ಆದರೆ ಅರ್ಜೆಂಟಲ್ಲಿ ಇದ್ದಾಗ, ಹಾಸ್ಟೆಲ್‌ನಲ್ಲಿ ಇದ್ದವರಿಗೆ ಅಥವಾ ಸೀಮಿತ ಅಡುಗೆ ಉಪಕರಣಗಳನ್ನು ಹೊಂದಿರುವವರಿಗೆ ಎಲೆಕ್ಟ್ರಿಕ್ ಕೆಟಲ್‌ಗಳು ಮಿನಿ ಅಡುಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತವೆ. ಒಂದು ವೇಳೆ ನಿಮಗೆ ಇದ್ದಕ್ಕಿದ್ದಂತೆ ಹಸಿವಾದರೆ ಈ ಕೆಟಲ್ ಬಳಸಿ ಕೆಲವೇ ನಿಮಿಷದಲ್ಲಿ ರುಚಿಕರವಾದ ಭಕ್ಷ್ಯಗಳನ್ನು ತಯಾರಿಸುವ ಮೂಲಕ ನಿಮ್ಮ ಹಸಿವನ್ನು ನೀಗಿಸಿಕೊಳ್ಳಬಹುದು.
ಪಾಸ್ತಾ
ನೀವು ಪಾಸ್ತಾವನ್ನು ಕೆಟಲ್‌ನಲ್ಲಿ ಬೇಯಿಸಬಹುದು. ನೀರು ಮತ್ತು ಸ್ವಲ್ಪ ಉಪ್ಪು ಸೇರಿಸಿ ಕೆಟಲ್‌ನಲ್ಲಿ ಕುದಿಸಿ. ನಂತರ ಪಾಸ್ತಾವನ್ನು ಸೇರಿಸಿ. ಪಾಸ್ತಾ ಮೃದುವಾಗುವವರೆಗೆ ಕೆಟಲ್ ಅನ್ನು ಪದೇ ಪದೇ ಆನ್ ಮತ್ತು ಆಫ್ ಮಾಡಿ ಕುದಿಸಿ. ನಂತರ ನೀವು ಮೇಯನೇಸ್ ಅಥವಾ ಟೊಮೆಟೊ ಕೆಚಪ್ ಸೇರಿಸಿ ಬಡಿಸಬಹುದು.
ಸೂಪ್
ಚಳಿಗಾಲದ ತಿಂಗಳುಗಳಲ್ಲಿ ಅಥವಾ ನಿಮಗೆ ಸ್ವಲ್ಪ ಹಸಿವಾದಾಗ ಬಿಸಿ ಸೂಪ್‌ಗಳು ಸಹ ಸಹಕಾರಿ. ಒಂದು ಕೆಟಲ್‌ನಲ್ಲಿ ನೀರನ್ನು ಕುದಿಸಿ. ಸೂಪ್ ಪುಡಿಯನ್ನು ಮಾತ್ರ ಒಂದು ಮಗ್‌ನಲ್ಲಿ ಹಾಕಿ. ಕುದಿಸಿದ ನೀರನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಬೆರೆಸಿ. ಹೀಗೆ ನಿಮ್ಮ ಬಿಸಿ ಸೂಪ್ ಅನ್ನು ಸರಳವಾಗಿ ತಯಾರಿಸಿ.
ಮ್ಯಾಗಿ ಮತ್ತು ಇನ್ಸ್ಟೆಂಟ್ ನೂಡಲ್ಸ್
ಸಾಮಾನ್ಯ ಮತ್ತು ಸುಲಭವಾದ ಖಾದ್ಯ. ಕೆಟಲ್‌ನಲ್ಲಿ ನೀರು ಕುದಿಯುತ್ತಿದ್ದ ಹಾಗೆ ಇದಕ್ಕೆ ನೂಡಲ್ಸ್ ಮತ್ತು ಮಸಾಲೆ ಸೇರಿಸಿ. ಮತ್ತೆ ಕುದಿಸಿ. ನಿಮ್ಮ ಮ್ಯಾಗಿ ನಿಮಿಷಗಳಲ್ಲಿ ಸಿದ್ಧವಾಗುತ್ತದೆ.
ಮೊಟ್ಟೆ
ಪ್ರೋಟೀನ್ ಭರಿತ ಉಪಹಾರವನ್ನು ಮಾಡಲು ಸುಲಭವಾದ ಮಾರ್ಗವಿದು. ಒಂದು ಕೆಟಲ್‌ನಲ್ಲಿ ಮೊಟ್ಟೆಗಳು ಮುಳುಗುವ ಹಾಗೆ ಸಾಕಷ್ಟು ನೀರು ಹಾಕಿ. ಬೆಂದ ನಂತರ ಸ್ಟವ್ ಆಫ್ ಮಾಡಿ. 8-10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಈಗ ಮೊಟ್ಟೆಗಳು ತಿನ್ನಲು ಸಿದ್ಧ.
ಓಟ್ಸ್ ಅಥವಾ ಗಂಜಿ
ಉಪಾಹಾರಕ್ಕಾಗಿ ಒಂದು ಕೆಟಲ್‌ನಲ್ಲಿ ನೀರು ಅಥವಾ ಹಾಲನ್ನು ಬಿಸಿ ಮಾಡಿ. ನಂತರ ಓಟ್ಸ್ ಸೇರಿಸಿ 2-3 ನಿಮಿಷ ಕುದಿಸಿ. ನಂತರ ಉರಿಯನ್ನು ಆಫ್ ಮಾಡಿ.
ಅಕ್ಕಿ ಬೇಯಿಸುವುದು
ಅಕ್ಕಿಯನ್ನು ಸಣ್ಣ ಭಾಗಗಳಲ್ಲಿ ಬೇಯಿಸಲು ಸಹ ಸಾಧ್ಯವಿದೆ. ಪಾತ್ರೆಯಲ್ಲಿ ಬೇಯಿಸುವ ಹಾಗೆ ಅಕ್ಕಿ ಮತ್ತು ನೀರನ್ನು ಹಾಕಿ ಕುದಿಸಿ. ಬತ್ತಿಸಿ ಅನ್ನ ಮಾಡುವ ಬದಲು, ಹೆಚ್ಚಿನ ಪ್ರಮಾಣದಲ್ಲಿ ನೀರು ಸೇರಿಸಿ ಬಸಿದು ಮಾಡುವ ಅನ್ನ ಸೂಕ್ತ.

