Winter Recipe: ಚಳಿಗಾಲದಲ್ಲಿ ಇಡೀ ದೇಹವನ್ನು ಬೆಚ್ಚಗಿಡುವ ಪೆಪ್ಪರ್ ರಸಂ ಸಿಂಪಲ್ ರೆಸಿಪಿ
ಹೆಚ್ಚುತ್ತಿರುವ ಚಳಿಯಲ್ಲಿ ದೇಹವನ್ನು ಬೆಚ್ಚಗಿಡಲು ಆರೋಗ್ಯಕರ ಪೆಪ್ಪರ್ ರಸಂ ಉತ್ತಮ ಆಯ್ಕೆಯಾಗಿದೆ. ಕಾಳು ಮೆಣಸು, ಜೀರಿಗೆ, ಮತ್ತು ಬೆಳ್ಳುಳ್ಳಿಯಂತಹ ಸರಳ ಪದಾರ್ಥಗಳನ್ನು ಬಳಸಿ, ಬಿಸಿ ಅನ್ನದೊಂದಿಗೆ ಸವಿಯಲು ಸೂಕ್ತವಾದ ಈ ರುಚಿಕರ ರಸಂ ಅನ್ನು ಸುಲಭವಾಗಿ ತಯಾರಿಸಬಹುದು.

ರಸಂ
ಕಳೆದ ಒಂದು ವಾರದಿಂದ ಚಳಿ ಪ್ರಮಾಣ ಏರಿಕೆಯಾಗುತ್ತಿದ್ದು, ಇಂದು ನಾವು ಹೇಳುವ ರೀತಿಯಲ್ಲಿ ರಸಂ ಮಾಡಿಕೊಂಡ್ರೆ ಇಡೀ ದೇಹ ಬೆಚ್ಚಗಿರುತ್ತದೆ. ಆರೋಗ್ಯ ದೃಷ್ಟಿಯಿಂದಲೂ ಈ ರಸಂ ತುಂಬಾ ಒಳ್ಳೆಯದು. ಮಕ್ಕಳು ಮತ್ತು ವೃದ್ಧರಿಗೆ ಸೂಪ್ ರೀತಿಯಲ್ಲಿ ಈ ರಸಂ ಮಾಡಿಕೊಡಬಹುದಾಗಿದೆ.
ಪೆಪ್ಪರ್ ರಸಂ ಮಾಡಲು ಬೇಕಾಗುವ ಸಾಮಾಗ್ರಿಗಳು
ಕಾಳು ಮೆಣಸು: 6 ರಿಂದ 8, ಜೀರಿಗೆ: 1 ಟೀ ಸ್ಪೂನ್, ಬೆಳ್ಳುಳ್ಳಿ: 4 ರಿಂದ 6 ಎಸಳು, ಅರಿಶಿನ: ಚಿಟಿಕೆ, ಕೋತಂಬರಿ ಸೊಪ್ಪು, ಎಣ್ಣೆ: 1/2 ಟೀ ಸ್ಪೂನ್ ಮತ್ತು ಉಪ್ಪು ರುಚಿಗೆ ತಕ್ಕಷ್ಟು
ಪೆಪ್ಪರ್ ರಸಂ ಮಾಡುವ ವಿಧಾನ
ಮೊದಲಿಗೆ ಕಾಳು ಮೆಣಸು, ಜೀರಿಗೆ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿಕೊಂಡು ಚೆನ್ನಾಗಿ ಜಜ್ಜಿಕೊಂಡು ಎತ್ತಿಟ್ಟುಕೊಳ್ಳಿ. ನಂತರ ಕೋತಂಬರಿ ಸೊಪ್ಪನ್ನು ತೊಳೆದುಕೊಂಡು ಚಿಕ್ಕದಾಗಿ ಕತ್ತರಿಸಿಕೊಳ್ಳಿ ಅಥವಾ ತರಿತರಿಯಾಗಿ ಜಜ್ಜಿಕೊಳ್ಳಬಹುದು.
ಒಗ್ಗರಣೆ
ಇದೀಗ ಒಲೆ ಆನ್ ಮಾಡ್ಕೊಂಡು ಪಾತ್ರೆ ಇರಿಸಿಕೊಂಡು ಎಣ್ಣೆ ಅಥವಾ ತುಪ್ಪ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಜಜ್ಜಿಕೊಂಡಿರುವ ಕಾಳು ಮೆಣಸು, ಜೀರಿಗೆ ಮತ್ತು ಬೆಳ್ಳುಳ್ಳಿ ಮಿಶ್ರಣ ಸೇರಿಸಿಕೊಳ್ಳಬೇಕು. ಮಿಶ್ರಣವೆಲ್ಲಾ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಇದನ್ನೂ ಓದಿ: ಗೃಹಿಣಿಯರೇ ಇಲ್ ಕೇಳಿ.. ಈ Kitchen Tips ಗೊತ್ತಿದ್ರೆ ಊಟ ಮಾಡಿದವ್ರು ವಾರೆ ವ್ಹಾ ಅಂತಾರೆ!
ಬಿಸಿಯಾದ ಅನ್ನಕ್ಕೆ ಒಳ್ಳೆಯ ಕಾಂಬಿನೇಷನ್
ನಂತರ ಇದಕ್ಕೆ ಒಂದರಿಂದ ಎರಡು ಗ್ಲಾಸ್ ನೀರು ಸೇರಿಸಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಕೋತಂಬರಿ ಸೊಪ್ಪು ಹಾಕಿಕೊಂಡು 10 ರಿಂದ 15 ನಿಮಿಷ ಚೆನ್ನಾಗಿ ಕುದಿಸಿಕೊಳ್ಳಿ. ಬಿಸಿಯಾದ ಅನ್ನಕ್ಕೆ ಈ ರೀತಿಯ ಪೆಪ್ಪರ್ ರಸಂ ಒಳ್ಳೆಯದು. ಖಾರ ಹೆಚ್ಚು ಅನ್ನಿಸಿದ್ರೆ ತುಂಡು ಬೆಲ್ಲ ಸೇರಿಸಿಕೊಳ್ಳಬಹುದು.
ಇದನ್ನೂ ಓದಿ: Kitchen Tips: ಗ್ಯಾಸ್ ಸ್ಟವ್ ಬಳಿ ಎಂದಿಗೂ ಇಡಬಾರದ 6 ವಸ್ತುಗಳಿವು