MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಹೆಂಡ್ತಿ ಹಿಂದೂ ಆದ್ರೂ ಪತ್ನಿಗೆ ಬುರ್ಖಾ ಹಾಕಿಸಿಲ್ಲ, ಹೆಸ್ರು ಬದಲಿಸಿಲ್ಲ ಮುಬಾರಕ್ ಅಲಿ

ಹೆಂಡ್ತಿ ಹಿಂದೂ ಆದ್ರೂ ಪತ್ನಿಗೆ ಬುರ್ಖಾ ಹಾಕಿಸಿಲ್ಲ, ಹೆಸ್ರು ಬದಲಿಸಿಲ್ಲ ಮುಬಾರಕ್ ಅಲಿ

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಮಾಜಸೇವೆಯಲ್ಲಿ ತೊಡಗಿರುವ ಮುಬಾರಕ್ ಅಲಿ, ತಮ್ಮ ಮಗಳನ್ನು ಹಿಂದೂ ಸಂಪ್ರದಾಯದಂತೆ ಹಿಂದೂ ಯುವಕನಿಗೆ ವಿವಾಹ ಮಾಡಿಕೊಟ್ಟಿದ್ದಾರೆ. ಜಾತಿಗಿಂತ ಮನುಷ್ಯತ್ವವೇ ಶ್ರೇಷ್ಠ ಎಂದು ನಂಬಿರುವ ಇವರು, ತಮ್ಮ ಮನೆಯಲ್ಲಿ ಸರ್ವಧರ್ಮಗಳನ್ನು ಪಾಲಿಸುತ್ತಾ ಮಾದರಿಯಾಗಿದ್ದಾರೆ.

2 Min read
Author : Mahmad Rafik
Published : Mar 11 2026, 10:15 AM IST
Share this Photo Gallery
  • FB
  • TW
  • Linkdin
  • Whatsapp
15
ತುಮಕೂರಿನ ನಿವಾಸಿ
Image Credit : Social Media

ತುಮಕೂರಿನ ನಿವಾಸಿ

ತುಮಕೂರಿನ ನಿವಾಸಿಯಾಗಿರುವ ಮುಬಾರಕ್ ಅಲಿ ಎಂಬವರು ಮಗಳ ಮದುವೆಯನ್ನು ಹಿಂದೂ ಸಂಪ್ರದಾಯದದಂತೆ ಮಾಡಿದ್ದರು. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಮುಬಾರಕ್ ಅಲಿ, ಹಲವು ವಿಷಯಗಳ ಬಗ್ಗೆ ದೀರ್ಘವಾಗಿ ಮಾತನಾಡಿದ್ದಾರೆ. ಮುಬಾರಕ್ ಅಲಿ ಮಗಳು ಮುಸ್ಕಾನ್ ಮದುವೆ ನಂತ್ರ, ಇದೀಗ ಇವರ ಸಂದರ್ಶನದ ವಿಡಿಯೋ ತುಣುಕುಗಳು ವೈರಲ್ ಆಗುತ್ತಿವೆ.

25
ತುಮಕೂರಿನ ಸಿದ್ದಗಂಗಾ ಮಠದ
Image Credit : Social Media

ತುಮಕೂರಿನ ಸಿದ್ದಗಂಗಾ ಮಠದ

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಕೆಲಸ ಮಾಡುವ ಮುಬಾರಕ್ ಅಲಿ, ತಮ್ಮನ್ನು ಸಮಾಜಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿರ್ಗತಿಕರಿಗೆ ಸಹಾಯ, ಮಕ್ಕಳ ಶಿಕ್ಷಣಕ್ಕೆ ನೆರವು, ಅನಾಥ ಶವಗಳಿಗೆ ಮುಕ್ತಿ ನೀಡುವಂತಹ ಕೆಲಸಗಳಲ್ಲಿ ಮುಬಾರಕ್ ಅಲಿ ತೊಡಗಿಕೊಂಡಿದ್ದಾರೆ. ಮುಬಾರಕ್ ಅಲಿ ಅವರ ಪತ್ನಿ ಹಿಂದೂ ಆಗಿದ್ದಾರೆ. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದರೂ ಮುಬಾರಕ್ ಪತ್ನಿ ಇದುವರೆಗೂ ಬುರ್ಖಾ ಹಾಕಿಲ್ಲ ಮತ್ತು ತಮ್ಮ ಹೆಸರನ್ನು ಸಹ ಬದಲಿಸಿಕೊಂಡಿಲ್ಲ.

Related Articles

Related image1
ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಗಣೇಶನಿಗೆ ಪ್ರಥಮ ಆಹ್ವಾನ ನೀಡಿದ ಮುಸ್ಲಿಂ ಯುವಕ; ಕಾರ್ಡ್ ವೈರಲ್
Related image2
ಅಡ್ಡಿಯಾದ ಮಳೆ, ಹಿಂದೂ ಜೋಡಿ ಮದುವೆಯಾಗಲು ಮಂಟಪ ಬಿಟ್ಟು ಕೊಟ್ಟ ಮುಸ್ಲಿಂ ಜೋಡಿಗಳು!
35
 ಮಗಳ ಮದುವೆ
Image Credit : our own

ಮಗಳ ಮದುವೆ

ಇತ್ತೀಚೆಗೆ ಮಗಳ ಮದುವೆಯನ್ನು ಹಿಂದೂ ಸಂಪ್ರದಾಯದಂತೆಯೇ ಮಾಡಿದ್ದಾರೆ. ಹಿಂದೂ ಹುಡುಗನ ಜೊತೆ ಮಗಳ ಮದುವೆ ಮಾಡಿಸಿರುವ ಮುಬಾರಕ್, ನಾನು ಹುಡುಗನ ಜಾತಿಯನ್ನು ನೋಡಿಲ್ಲ, ಬದಲಾಗಿ ಆತನ ಪ್ರೀತಿ ನೋಡಿದ್ದೇನೆ ಎಂದು ಮುಬಾರಕ್ ಅಲಿ ಹೇಳುತ್ತಾರೆ. ನಾನು ಮುಸ್ಲಿಮನಾಗಿ ಹುಟ್ಟಬೇಕೆಂದು ಯಾವ ದೇವರಿಗೂ ಅರ್ಜಿ ಹಾಕಿರಲಿಲ್ಲ. ಹುಟ್ಟಿದ ಮೇಲೆ ನನಗೆ ಎಲ್ಲಾ ಜಾತಿಗಳು ಇಷ್ಟವಾದವು ಎಬುವುದು ಮುಬಾರಕ್ ಅವರ ಮಾತಾಗಿದೆ.

45
 ಸಿದ್ದಗಂಗಾ ಮಠದ ಗದ್ದುಗೆ ದರ್ಶನ
Image Credit : X

ಸಿದ್ದಗಂಗಾ ಮಠದ ಗದ್ದುಗೆ ದರ್ಶನ

ನಮ್ಮ ಮನೆಯಲ್ಲಿ ಎಲ್ಲಾ ದೇವರ ಫೋಟೋಗಳಿವೆ. ಶುಕ್ರವಾರದ ಬೆಳಗ್ಗೆ ಸಿದ್ದಗಂಗಾ ಮಠದ ಗದ್ದುಗೆ ದರ್ಶನ ಪಡೆಯುತ್ತೇನೆ. ನಂತರ ಚಾಮುಂಡಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಮಧ್ಯಾಹ್ನ ನಮಾಜ್‌ಗೆ ಹೋಗುತ್ತೇನೆ. ನನ್ನ ಬದುಕಿಗೆ ಎಂದಿಗೂ ಜಾತಿ ಅಡ್ಡಿಯಾಗಿಲ್ಲ. ಚಿಕ್ಕ ವಯಸ್ಸಿನಿಂದಲೂ ಜಾತಿಗಿಂತ ಮನುಷ್ಯತ್ವವೇ ಮುಖ್ಯ ಎನ್ನುವ ನಂಬಿಕೆ ನನ್ನದು ಅಂತಾರೆ.

ಇದನ್ನೂ ಓದಿ: ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಇದ್ರೆ ಆಗಲ್ಲ ಸಪ್ತಪದಿ ತುಳಿದರೆ ಮಾತ್ರ ಹಿಂದೂ ಮದುವೆ ಮಾನ್ಯ; ಸುಪ್ರೀಂ

55
ಮುಬಾರಕ್ ಅಲಿ
Image Credit : our own

ಮುಬಾರಕ್ ಅಲಿ

ಇವತ್ತು ಸಹ ನಾನು ಊಟ ಮಾಡುವ ರೊಟ್ಟಿಯನ್ನು ಮೊದಲಿಗೆ ನಾಲ್ಕು ಭಾಗ ಮಾಡುತ್ತೇನೆ. ಊಟ ಮಾಡುವಾಗ ಯಾರಾದ್ರು ಬಂದ್ರೆ ಕೊಡೋಣ ಅಂತ ನಾಲ್ಕು ತುಂಡು ಮಾಡಿಕೊಳ್ಳುತ್ತೇನೆ. ಪ್ರತಿದಿನ ಸಿದ್ದಗಂಗಾ ಮಠದಲ್ಲಿನ ಎಲ್ಲಾ ಗದ್ದುಗೆಗಳ ದರ್ಶನ ಮಾಡ್ತೀನಿ. ಧರ್ಮಸ್ಥಳಕ್ಕೆ ಹೋಗಿ ಮುಡಿ ಕೊಟ್ಟಿದ್ದೇನೆ. ಮುಂದೆ ಕಾಶಿ, ಮಂತ್ರಾಲಯ ಮತ್ತು ಹಜ್ ಯಾತ್ರೆ ಮಾಡಬೇಕೆಂಬ ಆಸೆ ಇದೆ ಎಂದು ಮುಬಾರಕ್ ಅಲಿ ಹೇಳಿದ್ದಾರೆ.

ಇದನ್ನೂ ಓದಿ: ಹಿಂದೂ ಮದುವೆ, ಮುಸ್ಲಿಮರ ಸಾರಥ್ಯ: ಅನ್ಯಧರ್ಮದ ಮಕ್ಕಳಿಗೆ ಆಸರೆಯಾದ ಮುಲ್ಲಾ ದಂಪತಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ತುಮಕೂರು
ಹಿಂದೂ
ಮುಸ್ಲಿಂ
Latest Videos
Recommended Stories
Recommended image1
ಬನಶಂಕರಿ ಅಮ್ಮನವರ ಪ್ರಸಾದಕ್ಕೂ ತಟ್ಟಿದ ಯುದ್ಧದ ಬಿಸಿ, ಭಕ್ತಾದಿಗಳಿಗೆ ಸಿಗೋದಿಲ್ಲ ಪ್ರಸಾದ!
Recommended image2
ಧಗ ಧಗನೆ ಹೊತ್ತಿ ಉರಿದ ಹೊಸಪೇಟೆಯ ತಾಲೂಕು ಪಂಚಾಯತಿ : ಹಲವು ದಾಖಲೆಗಳು ಬೆಂಕಿಗಾಹುತಿ
Recommended image3
Bidar Tragedy: ಕೂಲಿ ಕೆಲಸ ಮುಗಿಸಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಜಾಡಿಸಿ ಒದ್ದ ಕುದುರೆ, ಬಡಪಾಯಿ ದುರಂತ ಸಾವು!
Related Stories
Recommended image1
ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಗಣೇಶನಿಗೆ ಪ್ರಥಮ ಆಹ್ವಾನ ನೀಡಿದ ಮುಸ್ಲಿಂ ಯುವಕ; ಕಾರ್ಡ್ ವೈರಲ್
Recommended image2
ಅಡ್ಡಿಯಾದ ಮಳೆ, ಹಿಂದೂ ಜೋಡಿ ಮದುವೆಯಾಗಲು ಮಂಟಪ ಬಿಟ್ಟು ಕೊಟ್ಟ ಮುಸ್ಲಿಂ ಜೋಡಿಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved