ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಇದ್ರೆ ಆಗಲ್ಲ ಸಪ್ತಪದಿ ತುಳಿದರೆ ಮಾತ್ರ ಹಿಂದೂ ಮದುವೆ ಮಾನ್ಯ; ಇದು ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ಆದೇಶ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದರೆ ಮಾತ್ರ ಕಾನೂನು ಬದ್ಧ ಎಂದಿದೆ. 

ನವದೆಹಲಿ (ಫೆ.10) ಹಿಂದೂ ಮದುವೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಇದರಿಂದ ದೇಶದಲ್ಲಿ ಇಷ್ಟು ದಿನ ನಡೆಯುತ್ತಿದ್ದ ಹಲವು ಹಿಂದೂ ಮದುವೆಗಳ ಮಾನ್ಯವಲ್ಲದಂತಾಗಿದೆ. ಹಿಂದೂ ಮದುವೆ ಹಾಗೂ ಕಾನೂನೂ ಬದ್ಧ ಮಾನ್ಯತೆ ಕುರಿತ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ಭಾರತೀಯ ಹಿಂದೂ ಮದುವೆ ಕಾಯ್ದೆಯ ಮೌಲ್ಯಗಳನ್ನು ಎತ್ತಿ ಹಿಡಿದಿದೆ.ರಿಜಿಸ್ಟ್ರೇಶನ್ ಕಚೇರಿಗೆ ತೆರಲಿ ನಾಲ್ಕು ಸಾಕ್ಷಿಗಳ ಸಹಿ ಹಾಕಿ ಹಾರ ಹಾಕಿ ಮಾಲೆ ಹಾಕಿಕೊಂಡು ಸರ್ಟಿಫಿಕೇಟ್ ಪಡೆದ ತಕ್ಷಣ ಹಿಂದೂ ಮದುವೆ ಮಾನ್ಯವಾಗುವುದಿಲ್ಲ. ನವ ಜೋಡಿಗಳು ಸಪ್ತಪದಿ ತುಳಿಯಬೇಕು. ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದರೆ ಮಾತ್ರ ಕಾನೂನು ಬದ್ಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Add Asianetnews Kannada as a Preferred SourcegooglePreferred

ಜಸ್ಟೀಸ್ ಬಿವಿ ನಾಗರತ್ನ, ಜಸ್ಟೀಸ್ ಅಗಸ್ಟಿನ್ ಜಾರ್ಜ್ ಸೇರಿದ ಪೀಠ ಈ ಮಹತ್ವದ ಆದೇಶ ನೀಡಿದೆ. ಸಂವಿಧಾನದ ಆರ್ಟಿಕಲ್ 142ರಲ್ಲಿ ಹೇಳಿರುವಂತೆ ಹಿಂದೂ ಮದುವೆ ಸಂಪ್ರದಾಯ ಪ್ರಕಾರ ನಡೆದರೆ ಮಾತ್ರ ಕಾನೂನು ಬದ್ಧ. ಹಿಂದೂ ಮದುವೆ ಮಾನ್ಯವಾಗಲು ಹಿಂದೂ ಸಂಪ್ರದಾಯದ ಪ್ರಕಾರ ನಡೆಯಬೇಕು. ಸಪ್ತಪದಿ, ಅಗ್ನಿಸಾಕ್ಷಿ ಸೇರಿದಂತೆ ಹಿಂದೂ ಸಂಪ್ರದಾಯದ ಪ್ರಕಾರ ನಡೆದ ಮದುವೆ ಕಾರ್ಯಕ್ರಮ ಮಾತ್ರ ಮಾನ್ಯವಾಗಲಿದೆ. ಇದಕ್ಕೆ ಮಾತ್ರ ಕಾನೂನು ಮಾನ್ಯತೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಏನಿದು ಅರ್ಜಿ ಪ್ರಕರಣ?

2021ರಲ್ಲಿ ಕೋರ್ಟ್‌ಗೆ ಪೈಲೆಟ್ ದಂಪತಿಗಳ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. 2021ರ ಮಾರ್ಚ್ 7 ರಂದು ಪೈಲೆಟ್ ಜೋಡಿ ಪ್ರೀತಿಯ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2021ರ ಜುಲೈ 7 ರಂದು ಪೈಲೆಟ್ ಜೋಡಿ ರಿಜಿಸ್ಟ್ರೇಶನ್ ಕಚೇರಿಯಲ್ಲಿ ಮದುವೆ ಸರ್ಟಿಫಿಕೇಟ್ ಪಡೆದಿದ್ದಾರೆ. ಬಳಿಕ ಖಾಸಗಿ ಹೊಟೆಲ್‌ನಲ್ಲಿ ಸಣ್ಣ ಪಾರ್ಟಿ ಇಟ್ಟುಕೊಂಡಿದ್ದಾರೆ. ಬಳಿಕ ಸರಿಸುಮಾರು ಒಂದು ವರ್ಷದ ಬಳಿಕ ಅಂದರೆ 2022ರಲ್ಲಿ ಅಕ್ಟೋಬರ್ ತಿಂಗಳಲ್ಲಿ ಪೋಷಕರ ಒಪ್ಪಿಸಿ ಹಿಂದೂ ಸಂಪ್ರದಾಯ ಪ್ರಕಾರ ಮದುವೆ ದಿನಾಂಕ ಫಿಕ್ಸ್ ಮಾಡಿದ್ದರು. ಆದರೆ ಅದಕ್ಕೂ ಮೊದಲೇ ಈ ಜೋಡಿಯಲ್ಲಿ ಮನಸ್ತಾಪ ಎದುರಾಗಿದೆ. ಮದುವೆಗೂ ಮೊದಲೇ ಜಗಳ ತಾರಕಕ್ಕೇರಿತ್ತು.

2022ರ ನವೆಂಬರ್ ತಿಂಗಳಲ್ಲಿ ಮಹಿಳಾ ಪೈಲೆಟ್ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾಳೆ. ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ದ ದೂರು ನೀಡಿದ್ದಾರೆ. ಈ ಪ್ರಕರಣ ಬಿಹಾರದ ಮುಝಾಫರ ಕೌಟುಂಬಿಕ ನ್ಯಾಯಾಲಯಲದ ಮೆಟ್ಟಿಲೇರಿತ್ತು. ಇದರ ಬೆನ್ನಲ್ಲೇ ಪೈಲೆಟ್ ಪತಿ ವಿಚ್ಚೇದನ ಆಗ್ರಹಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತ ಮಹಿಳಾ ಪೈಲೆಟ್ ಈ ಪ್ರಕರಣವನ್ನು ರಾಂಚಿಗೆ ವರ್ಗಾಯಿಸಬೇಕು, ತನ್ನ ಪೋಷಕರೊಂದಗೆ ರಾಂಚಿಯಲ್ಲಿರುವ ಕಾರಣ ಪ್ರಕರಣ ವರ್ಗಾಯಿಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದರು.

ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಈ ಜೋಡಿಯ ಮದುವೆ ಮಾನ್ಯವಲ್ಲ ಎಂದಿದೆ. ಕೇವಲ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಪಡೆದ ಮಾತ್ರಕ್ಕೆ ಹಿಂದೂ ಮದುವೆ ಮಾನ್ಯವಲ್ಲ, ಕಾನೂನು ಬದ್ಧವಲ್ಲ. ಹಿಂದೂ ಸಂಪ್ರದಾಯದ ಪ್ರಕಾರ, ಸಪ್ತಪದಿ ಅಥವಾ ಹಿಂದೂ ವಿವಾಹ ಮಹೋತ್ಸವದ ಪ್ರಕಾರ ನಡೆದ ಮದುವೆ ಮಾತ್ರ ಮಾನ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಷ್ಟೇ ಈ ಜೋಡಿಗಳ ಆರೋಪ, ಪ್ರತ್ಯಾರೋಪ ರದ್ದುಗೊಳಿಸಿ, ಮದುವೆಯೂ ರದ್ದುಗೊಳಿಸಿದೆ. ಇದು ಮಾನ್ಯತೆ ಪಡೆದ ಮದುವೆಯಲ್ಲ ಎಂದಿದೆ.