- Home
- Karnataka Districts
- Shivamogga: ಜನ್ಮ ನೀಡಿದ ಎರಡೇ ದಿನಕ್ಕೆ 4 ಸಿಂಹದ ಮರಿಗಳ ಸಾವು; ಸಿಂಹಿಣಿ ಸಾರಾಗೆ ಚೊಚ್ಚಲ ಹೆರಿಗೆ
Shivamogga: ಜನ್ಮ ನೀಡಿದ ಎರಡೇ ದಿನಕ್ಕೆ 4 ಸಿಂಹದ ಮರಿಗಳ ಸಾವು; ಸಿಂಹಿಣಿ ಸಾರಾಗೆ ಚೊಚ್ಚಲ ಹೆರಿಗೆ
ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಏಷ್ಯಾಟಿಕ್ ಸಿಂಹಿಣಿ 'ಸಾರಾ' ಜನ್ಮ ನೀಡಿದ್ದ ನಾಲ್ಕು ಮರಿಗಳು ಸಾವನ್ನಪ್ಪಿವೆ. ಚೊಚ್ಚಲ ತಾಯ್ತನದ ಅನುಭವದ ಕೊರತೆಯಿಂದಾಗಿ ಮರಿಗಳು ಮೃತಪಟ್ಟಿದ್ದು, ಇದು ಪ್ರಾಣಿ ವಿನಿಮಯ ಯೋಜನೆಗೆ ತೀವ್ರ ಹಿನ್ನಡೆಯುಂಟುಮಾಡಿದೆ.
13

Image Credit : Asianet News
4 ಸಿಂಹದ ಮರಿಗಳ ಸಾವು
ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ 5 ವರ್ಷದ ಏಷ್ಯಾಟಿಕ್ ಸಿಂಹಿಣಿ 'ಸಾರಾ' ಜನ್ಮ ನೀಡಿದ್ದ ನಾಲ್ಕೂ ಮರಿಗಳು ಹುಟ್ಟಿದ ಎರಡು ದಿನಗಳಲ್ಲೇ ಸಾವನ್ನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
23
Image Credit : Asianet News
ಇಂದೋರ್‌ನಿಂದ ಬಂದಿತ್ತು ಶಿವ ಮತ್ತು ಸಾರಾ ಹೆಸರಿನ ಸಿಂಹ
ಅಳವಿನಂಚಿನಲ್ಲಿರುವ ಈ ಪ್ರಭೇದದ ಸಂತಾನೋತ್ಪತ್ತಿ ಉದ್ದೇಶದಿಂದ, ಪ್ರಾಣಿ ವಿನಿಮಯ ಯೋಜನೆಯಡಿ 2025 ರಲ್ಲಿ ಮಧ್ಯಪ್ರದೇಶದ ಇಂದೋರ್‌ನಿಂದ 'ಶಿವ' ಮತ್ತು 'ಸಾರಾ' ಸಿಂಹಗಳನ್ನು ಕರೆತರಲಾಗಿತ್ತು.
33
Image Credit : Asianet News
ನಾಲ್ಕೂ ಮರಿಗಳ ಸಾವು
ಸೆಪ್ಟೆಂಬರ್ 16 ರಂದು 'ಸಾರಾ' ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತಾದರೂ, ಚೊಚ್ಚಲ ತಾಯ್ತನದ ಅನುಭವದ ಕೊರತೆಯಿಂದಾಗಿ ಅವುಗಳನ್ನು ಸರಿಯಾಗಿ ಪೋಷಿಸಲು ವಿಫಲವಾದ ಹಿನ್ನೆಲೆಯಲ್ಲಿ ಮರಿಗಳು ಮೃತಪಟ್ಟಿವೆ. ಈ ದುರ್ಘಟನೆಯಿಂದಾಗಿ ಮೃಗಾಲಯದ ಪ್ರಾಣಿ ವಿನಿಮಯ ಹಾಗೂ ಸಂತಾನೋತ್ಪತ್ತಿ ಯೋಜನೆಗೆ ತೀವ್ರ ಹಿನ್ನಡೆಯಾಗಿದೆ.
Latest Videos

