- Home
- Karnataka Districts
- ವಿದ್ಯಾರ್ಥಿಗಳಿಗಾಗಿ ಕೇವಲ 10 ರೂ.ಯಲ್ಲಿ ತಿಂಡಿ ನೀಡುವ ತಿಪ್ಪಣ್ಣ ಹೋಟೆಲ್; ಪ್ರೇಮಾ ಅಜ್ಜಿ ಅಂದ್ರೆ ಫೇಮಸ್
ವಿದ್ಯಾರ್ಥಿಗಳಿಗಾಗಿ ಕೇವಲ 10 ರೂ.ಯಲ್ಲಿ ತಿಂಡಿ ನೀಡುವ ತಿಪ್ಪಣ್ಣ ಹೋಟೆಲ್; ಪ್ರೇಮಾ ಅಜ್ಜಿ ಅಂದ್ರೆ ಫೇಮಸ್
ಕೊಟ್ಟೂರಿನಲ್ಲಿರುವ ತಿಪ್ಪಣ್ಣ ಹೋಟೆಲ್ ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಕೇವಲ 10 ರೂಪಾಯಿಗೆ ಉಪಹಾರ ನೀಡುತ್ತಿದೆ. ತಾವು ಓದಲಿಲ್ಲವಾದರೂ, ಓದುವ ಮಕ್ಕಳಿಗೆ ಸಹಾಯವಾಗಲಿ ಎಂಬ ಸದುದ್ದೇಶದಿಂದ ಹೋಟೆಲ್ ಮಾಲೀಕರು ಈ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ.

ಕೊಟ್ಟೂರಿನ ತಿಪ್ಪಣ್ಣ ಹೋಟೆಲ್
ಎಷ್ಟೋ ಜನರು ತಾವು ಮಾಡಿರುವ ಒಳ್ಳೆಯ ಕೆಲಸಗಳನ್ನು ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ಅಂತಹ ಜನರಗಳಲ್ಲಿ ಕಂಡು ಬರುವವರೇ ಕೊಟ್ಟೂರಿನ ತಿಪ್ಪಣ್ಣ ಹೋಟೆಲ್ ಮಾಲೀಕರು. ಕೊಟ್ಟೂರು ಪಟ್ಟಣಕ್ಕೆ ಓದಲು ಬರುವ ಪ್ರತಿ ವಿದ್ಯಾರ್ಥಿಗಳಿಗೂ ತಿಪ್ಪಣ್ಣ ಹೋಟೆಲ್ ಅಂದ್ರೆ ಅಚ್ಚುಮೆಚ್ಚು.
10 ರೂಪಾಯಿಯಲ್ಲಿ ತಿಂಡಿ
ಇಂದು ಹೋಟೆಲ್ ನಡೆಸೋದು ಸವಾಲಿನ ಕೆಲಸ. ಮಧ್ಯಪ್ರಾಚ್ಯ ಯುದ್ಧದ ಬಿಕ್ಕಟ್ಟಿನಿಂದ ಹೋಟೆಲ್‌ಗಳಿಗೆ ಪೂರೈಕೆಯಾಗುವ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಕೊರತೆಯುಂಟಾಗಿದೆ. ಹಾಗಾಗಿ ಬಹುತೇಕ ಹೋಟೆಲ್‌ಗಳು ಬೆಲೆ ಹೆಚ್ಚಳ ಮಾಡಿಕೊಂಡಿವೆ. ಆದ್ರೆ ಕೊಟ್ಟೂರಿನ ತಿಪ್ಪಣ ಹೋಟೆಲ್ ಮಾತ್ರ ವಿದ್ಯಾರ್ಥಿಗಳಿಗೆ ಕೇವಲ 10 ರೂಪಾಯಿಯಲ್ಲಿ ತಿಂಡಿ ನೀಡುತ್ತಿದೆ. ನಾವಂತೂ ಓದಲಿಲ್ಲ, ಓದುವ ಮಕ್ಕಳಿಗೆ ಈ ರೀತಿಯಾದ್ರೂ ಸಹಾಯ ಆಗಲಿ ಎಂದು ಹೋಟೆಲ್‌ನವರು ಹೇಳುತ್ತಾರೆ.
ಇಡ್ಲಿ, ರೈಸ್‌ಬಾತ್, ಪಡ್ಡು, ದೋಸೆ
ಕಳೆದ 27-28 ವರ್ಷಗಳಿಂದ ಕೊಟ್ಟೂರಿನಲ್ಲಿ ಈ ಹೋಟೆಲ್ ನಡೆಸಿಕೊಂಡು ಬರಲಾಗುತ್ತಿದೆ. ಹೆಸರೇ ಇಲ್ಲದೇ ಈ ಪುಟಾಣಿ ಆಹಾರ ಬಂಡಿಗೆ ತಿಪ್ಪಣ್ಣ ಹೋಟೆಲ್, ಪ್ರೇಮಾ ಅಜ್ಜಿ ಹೋಟೆಲ್ ಅಂತ ಇಲ್ಲಿನ ಜನರು ಕರೆಯುತ್ತಾರೆ. ಈ ಹೋಟೆಲ್‌ನಲ್ಲಿ ನಿಮಗೆ ಇಡ್ಲಿ, ರೈಸ್‌ಬಾತ್, ಪಡ್ಡು, ದೋಸೆ ಸೇರಿದಂತೆ ಬಗೆ ಬಗೆಯ ತಿಂಡಿ ಸಿಗುತ್ತದೆ. ವಿದ್ಯಾರ್ಥಿಗಳು ಯಾವುದಾರು ಒಂದು ತಿಂಡಿಯನ್ನು 10 ರೂಪಾಯಿಗೆ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಗ್ರಾಹಕರಿಗೆ ಇತರೆ ಹೋಟೆಲ್‌ಗಳಂತೆ ಸಾಮಾನ್ಯ ದರ ಪಡೆದುಕೊಳ್ಳುತ್ತಾರೆ.
ಮಕ್ಕಳಿಗೆ ಒಳ್ಳೆಯದಾಗ್ಲಿ
halekotturu ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳಿಗೆ 10 ರೂ.ಗೆ ತಿಂಡಿ ನೀಡುತ್ತಿದ್ದೇವೆ. ನಮಗೆ ಓದಿಸೋರು ಯಾರು ಇರಲಿಲ್ಲ. ಈಗ ಓದುವ ಮಕ್ಕಳಿಗೆ ಒಳ್ಳೆಯದಾಗ್ಲಿ ಎಂಬ ಉದ್ದೇಶದಿಂದ ಕಡಿಮೆ ಬೆಲೆಯಲ್ಲಿ ತಿಂಡಿ ನೀಡುತ್ತಿದ್ದೇವೆ. ಈ ಕೆಲಸ ಮಾಡ್ತಿರೋದರಿಂದ ನಮಗೂ ಸಹ ಒಳ್ಳೆಯದಾಗುತ್ತಿದೆ ಎಂದು ಹೋಟೆಲ್ ಮಾಲೀಕರು ಹೇಳುತ್ತಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಕನ್ನಡ ಗೊತ್ತಿಲ್ಲದ ಜನರೊಂದಿಗೆ ಸೂಪರ್ ಟೆಕ್ನಿಕ್ ಬಳಸಿ ವ್ಯಾಪಾರ: ಅಜ್ಜಿ ಜಾಣ್ಮೆಗೆ 20 ಲಕ್ಷ ವ್ಯೂವ್
ನೆಟ್ಟಿಗರು ಹೇಳಿದ್ದೇನು?
ಈ ವಿಡಿಯೋ ನೋಡಿದ ನೆಟ್ಟಿಗರು, ಅಜ್ಜಿ ಹೋಟೆಲ್ ನಲ್ಲಿ ರೈಸ್ ಬಾತ್ ಸೂಪರ್. ನಾವು ನಮ್ಮ ಜೀವನದಲ್ಲಿ ಮರೆಯಲಾಗದಂತ ಹೋಟೆಲ್. ನಾನು ಕೊಟ್ಟೂರುನಲ್ಲಿ ಓದುತ್ತಿರುವಾಗ ನಾವು ದಿನನಿತ್ಯ ಬೆಳಗಿನ ಉಪಹಾರಕ್ಕೆ ಗೆಳಯರ ಜೊತೆಗೆ ಹೋಗುತ್ತಿದೆವು. ಎಂದಿಗೂ ಎಂದೆಂದಿಗೂ ಮರೆಯಲಾಗದ ಸ್ಥಳ. ನಾನು ಕೂಡ ಕಾಲೇಜ್ ಗೆ ಹೋಗುವಾಗ ಇಲ್ಲೇ ಟಿಫನ್ ಮಾಡ್ತಿದ್ದೆ, ತುಂಬಾ ಚೆನ್ನಾಗಿರುತ್ತೆ ಇಲ್ಲಿ ಟಿಫನ್. ಪ್ರೇಮಾ ಅಜ್ಜಿ ಹೋಟೆಲ್ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಶ್ರೀಶೈಲ ಭಕ್ತರಿಗಾಗಿ ನಿದ್ದೆಯೂ ಮಾಡ್ತಿಲ್ಲ ಕೊಪ್ಪಳದ ವೆಂಕೊಬಾ ಕಾಕಾ; ಇವರೇ ಮಲ್ಲಯ್ಯ ಎಂದ ಜನ್ರು

