MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Photos: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ ಸೆರೆ

Photos: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ ಸೆರೆ

ಶಿವಮೊಗ್ಗ ವಿಮಾನ ನಿಲ್ದಾಣದೊಳಗೆ ನುಗ್ಗಿ ಆತಂಕ ಮೂಡಿಸಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಘಟನೆ ಸೋಮವಾರ ನಡೆದಿದೆ. ಘಟನೆಯ ಫೋಟೋಗಳು ಇಲ್ಲಿವೆ. 

1 Min read
Author : Ravi Janekal
Published : Mar 31 2026, 11:14 AM IST
Share this Photo Gallery
  • FB
  • TW
  • Linkdin
  • Whatsapp
15
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ
Image Credit : Asianet News

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ

ಶಿವಮೊಗ್ಗ ವಿಮಾನ ನಿಲ್ದಾಣದೊಳಗೆ ನುಗ್ಗಿ ಆತಂಕ ಮೂಡಿಸಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಘಟನೆ ಸೋಮವಾರ ನಡೆದಿದೆ.

25
ಪೊದೆಯಿಂದ ಏರ್‌ಪೋರ್ಟ್ ಕಾಂಪೌಂಡ್ ಹಾರಿದ ಕರಡಿ
Image Credit : Asianet News

ಪೊದೆಯಿಂದ ಏರ್‌ಪೋರ್ಟ್ ಕಾಂಪೌಂಡ್ ಹಾರಿದ ಕರಡಿ

ವಿಮಾನ ನಿಲ್ದಾಣದ ಸುತ್ತಮುತ್ತ ಗ್ರಾಮಗಳಲ್ಲಿ ಕರಡಿ ಕೆಲ ದಿನಗಳಿಂದ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಡುತ್ತಿರುವ ವೇಳೆ ಪೊದೆಯಿಂದ ಜಿಗಿದು ಏರ್‌ಪೋರ್ಟ್ ಕಾಂಪೌಂಡ್ ಒಳಗೆ ಹಾರಿ ಪೊದೆಯೊಳಗೆ ಸೇರಿಕೊಂಡಿತ್ತು. ಇದೀಗ ಅರಣ್ಯ ಇಲಾಖೆ ಅರವಳಿಕೆ ನೀಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Related Articles

Related image1
ಆಹಾರ ಅರಸಿ ಬಂದ ಕರಡಿ ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣ ಸಾವು
Related image2
ಕರಡಿ ದಾಳಿಗೆ ಕುರಿಗಾಹಿ ಓಬಣ್ಣ ಸಾವು; ರೊಚ್ಚಿಗೆದ್ದ ಜನರಿಂದ ದೊಣ್ಣೆಯ ಹೊಡೆತ ತಿಂದು ಪ್ರಾಣಬಿಟ್ಟ ಜಾಂಬವಂತ!
35
ಸ್ಥಳೀಯರ ಮೊಬೈಲ್‌ನಲ್ಲಿ ಕರಡಿ ಓಡಾಟದ ದೃಶ್ಯಗಳು ಸೆರೆ
Image Credit : Asianet News

ಸ್ಥಳೀಯರ ಮೊಬೈಲ್‌ನಲ್ಲಿ ಕರಡಿ ಓಡಾಟದ ದೃಶ್ಯಗಳು ಸೆರೆ

ಸೋಮವಾರ ಬೆಳಿಗ್ಗೆ ವಿಮಾನ ನಿಲ್ದಾಣದ ಪಕ್ಕದ ವಿನಾಯಕ ನಗರ, ಜ್ಯೋತಿ ನಗರದಲ್ಲಿ ಕರಡಿ ಕಾಣಿಸಿಕೊಂಡಿತ್ತು. ಅಲ್ಲಿನ ಮನೆಗಳು, ತೋಟಗಳ ಪಕ್ಕದಲ್ಲಿ ಕರಡಿ ಓಡಾಡಿದೆ. ಸ್ಥಳೀಯರು ಇದರ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದರು.

45
ಕರಡಿ ಸೆರೆಹಿಡಿಯಲ ಅರಣ್ಯ ಸಿಬ್ಬಂದಿ ಹರಸಾಹಸ
Image Credit : Asianet News

ಕರಡಿ ಸೆರೆಹಿಡಿಯಲ ಅರಣ್ಯ ಸಿಬ್ಬಂದಿ ಹರಸಾಹಸ

ವಿಮಾನ ನಿಲ್ದಾಣದೊಳಗೆ ನುಗ್ಗಿರುವ ಕರಡಿಯ ಕತ್ತಿನಲ್ಲಿ ರೇಡಿಯೋ ಕಾಲರ್ ಕೂಡ ಇದೆ. ಕರಡಿ ಸಂಚಾರ ವಿಷಯ ತಿಳಿಯುತ್ತಿದ್ದಂತೆ ಉಂಬ್ಳೆಬೈಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿದರು.

55
ಪುನರ್ವಸತಿ ಕೇಂದ್ರಕ್ಕೆ ಕರಡಿ ಸ್ಥಳಾಂತರ
Image Credit : Asianet News

ಪುನರ್ವಸತಿ ಕೇಂದ್ರಕ್ಕೆ ಕರಡಿ ಸ್ಥಳಾಂತರ

ಜನಸಂದಣಿ ಹೆಚ್ಚಾದ ಹಿನ್ನೆಲೆ ಕರಡಿ ಭಯಗೊಂಡು ವಿಮಾನ ನಿಲ್ದಾಣಕ್ಕೆ ನುಗ್ಗಿದೆ. ನಂತರ ಜ್ಯೋತಿನಗರದ ಅಂಗನವಾಡಿ ಕೇಂದ್ರದ ಬಳಿ ಕಾಣಿಸಿಕೊಂಡಿದೆ. ಕರಡಿಗೆ ಎರಡು ಅರಿವಳಿಕೆ ಮದ್ದು ನೀಡಿ ಕೊನೆಗೂ ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ.

ಜನಸಂದಣಿ ಹೆಚ್ಚಾದ ಹಿನ್ನೆಲೆ ಕರಡಿ ಭಯಗೊಂಡು ವಿಮಾನ ನಿಲ್ದಾಣಕ್ಕೆ ನುಗ್ಗಿದೆ. ನಂತರ ಜ್ಯೋತಿನಗರದ ಅಂಗನವಾಡಿ ಕೇಂದ್ರದ ಬಳಿ ಕಾಣಿಸಿಕೊಂಡಿದೆ. ವನ್ಯಜೀವಿ ವಿಭಾಗದ ಪಶು ವೈದ್ಯ ಮುರುಳಿ ಮನೋಹರ್ ನೀಡಿದ ಕರಡಿಗೆ ಎರಡು ಅರಿವಳಿಕೆ ಮದ್ದು ನೀಡಿ ಕೊನೆಗೂ ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ.ಬಳಿಕ ಕರಡಿ ಸೆರೆಹಿಡಿದು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಶಿವಮೊಗ್ಗ
ಕಾಡ್ಗಿಚ್ಚು
ಕರಡಿ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಸಂಸದ ಸಾಗರ್ ಖಂಡ್ರೆ ಹೆಸರೇಳಿಕೊಂಡು ಭಗವಂತ ಖೂಬಾರಿಗೆ ಜೀವ ಬೆದರಿಕೆ! FIR
Recommended image2
ಮಂಗಳೂರಿನ ಸುರತ್ಕಲ್‌ನಲ್ಲಿ ಅತ್ಯಾಧುನಿಕ Gen Z ಅಂಚೆ ಕಚೇರಿ ಉದ್ಘಾಟನೆ; ಏನಿದರ ವಿಶೇಷತೆ?
Recommended image3
ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್‌: ತಾನೇ ಬೆಳೆದ ನಾಲ್ಕು ಎಕರೆ ಹೂಕೋಸು ನಾಶಪಡಿಸಿದ ರೈತ!
Related Stories
Recommended image1
ಆಹಾರ ಅರಸಿ ಬಂದ ಕರಡಿ ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣ ಸಾವು
Recommended image2
ಕರಡಿ ದಾಳಿಗೆ ಕುರಿಗಾಹಿ ಓಬಣ್ಣ ಸಾವು; ರೊಚ್ಚಿಗೆದ್ದ ಜನರಿಂದ ದೊಣ್ಣೆಯ ಹೊಡೆತ ತಿಂದು ಪ್ರಾಣಬಿಟ್ಟ ಜಾಂಬವಂತ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved