- Home
- Karnataka Districts
- Lakkundi excavation ಬಾವಿಯ ಗೋಡೆಗಳು ಹೇಳ್ತಿವೆ ಇತಿಹಾಸ; 12 ನೇ ಶತಮಾನದ ಶಿಲೆಗಳು ಪತ್ತೆ
Lakkundi excavation ಬಾವಿಯ ಗೋಡೆಗಳು ಹೇಳ್ತಿವೆ ಇತಿಹಾಸ; 12 ನೇ ಶತಮಾನದ ಶಿಲೆಗಳು ಪತ್ತೆ
ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದ ನಡುವೆ, ಬಳಗಾನೂರು ಕುಟುಂಬಕ್ಕೆ ಸೇರಿದ ನೂರು ವರ್ಷ ಹಳೆಯ ಬಾವಿಯ ಗೋಡೆಯಲ್ಲಿ ಪ್ರಾಚೀನ ಶಿಲೆಗಳು ಪತ್ತೆಯಾಗಿವೆ. ದಾನ ಶಿಲೆ, ದ್ವಾರಪಾಲಕನ ಶಿಲೆ ಸೇರಿದಂತೆ ಹಲವು ಶಿಲಾಕೃತಿಗಳು ಪತ್ತೆಯಾಗಿದ್ದು, ಇದು ಊರಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ತೋಟದ ಬಾವಿ
ಲಕ್ಕುಂಡಿ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಲಕ್ಕುಂಡಿ ದೇವಸ್ಥಾನದ ಆವರಣದಲ್ಲಿನ ಉತ್ಖನನ 9ನೇ ದಿನಕ್ಕೆ ಕಾಲಿಟ್ಟಿದ್ದು, ಇಡೀ ಊರಿನಲ್ಲಿ ಏನೆಲ್ಲಾ ಸಿಗಬಹುದು ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಇದೀಗ ತೋಟದ ಬಾವಿಯೊಂದರಲ್ಲಿ ಶಿಲೆಗಳು ಪತ್ತೆಯಾಗಿವೆ.
ನೂರು ವರ್ಷದ ಹಳೆಯದಷ್ಟು ಕಾಲದ ಬಾವಿ
ಸುಮಾರು ನೂರು ವರ್ಷದ ಹಳೆಯದಷ್ಟು ಕಾಲದ ಬಾವಿಯ ಗೋಡೆಯಲ್ಲಿ ಶಿಲೆಗಳಿವೆ. ಈ ಶಿಲೆಗಳನ್ನು ಕಲ್ಲುಗಳ ಮಧ್ಯೆ ಇರಿಸಿಯೇ ಪ್ಲಾಸ್ಟರ್ ಮಾಡಲಾಗಿದೆ. ದಾನ ಶಿಲೆ, ದ್ವಾರಪಾಲಕನ ಶಿಲೆ, ಬೋದಿಗೆ ಶಿಲೆಗಳು ಪತ್ತೆಯಾಗಿವೆ. ಕಿಟಕಿಯ ಭಾಗದಲ್ಲೂ ವಿಶೇಷ ಶಿಲಾಕೃತಿಯೊಂದು ಪತ್ತೆಯಾಗಿದೆ.
ಬಳಗಾನೂರು ಕುಟುಂಬಕ್ಕೆ ಸೇರಿದ ಬಾವಿ
ಲಕ್ಕುಂಡಿಯ ನಿವಾಸಿಗಳಾದ ಬಳಗಾನೂರು ಕುಟುಂಬಕ್ಕೆ ಸೇರಿದ ಬಾವಿಯ ಗೋಡೆಗಳಲ್ಲಿ ಶಿಲೆಗಳು ಕಾಣಿಸಿವೆ. ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಬಳಗಾನೂರು ಕುಟುಂಬಸ್ಥರು, ಇದು ನನ್ಮ ಪೂರ್ವಜರು ಕಟ್ಟಿರುವ ಬಾವಿಯಾಗಿದೆ. ಈ ಮೊದಲಿನಿಂದಲೂ ಶಿಲೆಗಳು ಗೋಡೆಯಲ್ಲಿವೆ. ಶಿಲೆಗಳು ಯಾವ ಕಾಲದ್ದು ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಸರ್ಕಾರ ಸೌಕರ್ಯ ಕಲ್ಪಿಸಿದ್ರೆ ಶಿಲೆಗಳನ್ನು ಹಸ್ತಾಂತರಿಸುತ್ತೇವೆ ಎಂದು ಹೇಳಿದ್ದಾರೆ.
ಮತ್ತಷ್ಟು ಕುತೂಹಲ
ಲಕ್ಕುಂಡಿಯಲ್ಲಿ ದಿನದಿಂದ ದಿನಕ್ಕೆ ವಿಶೇಷ ವಸ್ತುಗಳು ಭೂಮಿ ಒಡಲಾಳದಲ್ಲಿ ಪತ್ತೆಯಾಗುತ್ತಿವೆ. ಈ ಹಿಂದೆ ಟಂಕಸಾಲೆಯಾಗಿದ್ದರಿಂದ ಇಲ್ಲಿ ಮತ್ತಷ್ಟು ಚಿನ್ನ ಸಿಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಇದಕ್ಕೆ ಹಸಿರು ಬಣ್ಣದ ಪಚ್ಚೆ ಕಲ್ಲು ಮತ್ತಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: 7 ತಲೆ ಘಟಸರ್ಪ, ನಿಧಿ ರಹಸ್ಯ! ಲಕ್ಕುಂಡಿ ನಿಧಿಗೆ ಕಾವಲು ಕಾಯ್ತಿದ್ಯಾ ಘಟಸರ್ಪ? ಏನಿದು ರಹಸ್ಯ?
ವಿದೇಶಿ ಪ್ರವಾಸಿಗರು
ಶುಕ್ರವಾರ ಲಕ್ಕುಂಡಿಗೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗರು ರಿತ್ತಿ ಕುಟುಂಬದ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಉತ್ಖನನ ನಡೆಯುತ್ತಿರುವ ಸ್ಥಳಗಳನ್ನು ಮಕ್ಕಳಿಗೆ ತೋರಿಸಲು ಸುತ್ತಲಿನ ಶಾಲೆಯ ಶಿಕ್ಷಕರು ಬರುತ್ತಿದ್ದಾರೆ.
ಇದನ್ನೂ ಓದಿ: ಲಕ್ಕುಂಡಿಯಲ್ಲಿ ಅಗೆದಷ್ಟು ಇತಿಹಾಸ ಬಯಲು; ₹80 ಲಕ್ಷದಿಂದ ₹1 ಕೋಟಿಯವರೆಗೆ ಏರಿಕೆಯಾದ ಭೂಮಿ ಬೆಲೆ

