- Home
- Karnataka Districts
- Yellapur: ರಂಜಿತಾಳನ್ನು ಕೊಂದು ಎಸ್ಕೇಪ್ ಆಗಿದ್ದ ರಫೀಕ್ ನೇಣಿಗೆ ಶರಣು; ಕಾಡಿನಲ್ಲಿ ಶವ ಪತ್ತೆ
Yellapur: ರಂಜಿತಾಳನ್ನು ಕೊಂದು ಎಸ್ಕೇಪ್ ಆಗಿದ್ದ ರಫೀಕ್ ನೇಣಿಗೆ ಶರಣು; ಕಾಡಿನಲ್ಲಿ ಶವ ಪತ್ತೆ
ಯಲ್ಲಾಪುರದಲ್ಲಿ ರಂಜಿತಾ ಬನ್ಸೊಡೆ ಎಂಬ ಹಿಂದೂ ಮಹಿಳೆಯನ್ನು ಮದುವೆ ನಿರಾಕರಿಸಿದ್ದಕ್ಕೆ ಮಹಮ್ಮದ್ ರಫೀಕ್ ಎಂಬಾತ ಹ*ತ್ಯೆ ಮಾಡಿದ್ದ. ಕೊಲೆಯ ನಂತರ ಪರಾರಿಯಾಗಿದ್ದ ಆರೋಪಿ ರಫೀಕ್, ರಾಮಪುರ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ರಫೀಕ್ (30) ಆತ್ಮ*ಹತ್ಯೆ
ಯಲ್ಲಾಪುರದಲ್ಲಿ ಹಿಂದೂ ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಮ್ಮದ್ ರಫೀಕ್ ಇಮಾಮಸಾಬ್ (30) ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಯಲ್ಲಾಪುರದ ರಾಮಪುರ ಕಾಡಿನಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡಿದ್ದಾನೆ.
ಎಸ್ಕೇಪ್ ಆಗಿದ್ದ ರಫೀಕ್
ಮೃತ ರಫೀಲ್ ಕಾಳಮ್ಮನಗರದ ನಿವಾಸಿಯಾಗಿದ್ದನು. ಶನಿವಾರದಿಂದ ಆರೋಪಿ ರಫೀಕ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೀಗ ರಫೀಕ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶನಿವಾರ ಆಶ್ರಯ ನಗರ ನಿವಾಸಿ ರಂಜಿತಾ ಮಲ್ಲಪ್ಪ ಬನ್ಸೊಡೆ (30) ಎಂಬ ಮಹಿಳೆಯ ಕೊ*ಲೆಯಾಗಿತ್ತು. ರಂಜಿತಾ ಕೊ*ಲೆ ಬಳಿಕ ಮಹಮ್ಮದ್ ರಫೀಕ್ ಎಸ್ಕೇಪ್ ಆಗಿದ್ದನು.
ಅಡುಗೆ ಸಹಾಯಕಿಯಾಗಿದ್ದ ರಂಜಿತಾ
ಕೊ*ಲೆಯಾದ ರಂಜಿತಾ ರಾಮಾಪುರ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಗಂಡನಿಂದ ವಿಚ್ಛೇದನ ಪಡೆದು ತವರು ಮನೆಯಲ್ಲಿ ನೆಲೆಸಿದ್ದ ರಂಜಿತಾಗೆ ತನ್ನನ್ನು ಮದುವೆಯಾಗುವಂತೆ ರಫೀಕ್ ಪೀಡಿಸುತ್ತಿದ್ದನು. ಮದುವೆಯಾಗುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ.
ಮದುವೆಗೆ ಒಪ್ಪದ ರಂಜಿತಾ
ಆದ್ರೆ ಮದುವೆಯಾಗಲು ರಂಜಿತಾ ಒಪ್ಪಿರಲಿಲ್ಲ. ಮದುವೆಗೆ ನಿರಾಕರಿಸಿದ್ದ ಕೋಪಗೊಂಡಿದ್ದ ರಫೀಕ್, ಶನಿವಾರ ಶಾಲೆಯಿಂದ ಹಿಂದಿರುಗುತ್ತಿದ್ದ ರಂಜಿತಾ ಅವರನ್ನು ದಾರಿಯಲ್ಲಿ ಅಡ್ಡಗಟ್ಟಿದ್ದನು. ಈ ವೇಳೆ ರಂಜಿತಾ ಕುತ್ತಿಗೆಗೆ ಚಾಕು ಇರಿದು ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು. ಕುತ್ತಿಗೆಯ ಮೂರು ನರಗಳು ತುಂಡಾಗಿದ್ದು, ಹುಬ್ಬಳ್ಳಿ ಕಿಮ್ಸ್‌ಗೆ ಒಯ್ಯುವಾಗ ಮಾರ್ಗಮಧ್ಯೆ ಸಾವಾಗಿತ್ತು.
ಇದನ್ನೂ ಓದಿ: ದ್ವೇಷ ಭಾಷಣ ನಿಷೇಧ ಕಾಯ್ದೆ ವಿರುದ್ಧ ಕೋರ್ಟ್ ಮೆಟ್ಟಿಲೇರುತ್ತೇವೆ: ಪ್ರಮೋದ್ ಮುತಾಲಿಕ್
ಯಲ್ಲಾಪುರದಲ್ಲಿ ಪ್ರಕ್ಷುಬ್ಧ ವಾತಾವರಣ
ರಂಜಿತಾ ಸಾವಿನ ಸಂಬಂಧ ಮೃತಳ ಸಹೋದರಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಯಲ್ಲಾಪುರ ಪೊಲೀಸರಿಂದ ಕಾಡು ಹಾಗೂ ಇತರೆಡೆ ನಾಕಾಬಂಧಿ ಹಾಕಿ ಹುಡುಕಾಟ ನಡೆಸಿದ್ರು. ಹ*ತ್ಯೆ ಪ್ರಕರಣದ ಬಳಿಕ ಯಲ್ಲಾಪುರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ಇಂದು ಯಲ್ಲಾಪುರ ಬಂದ್ ಮಾಡಲು ಜನರಿಂದ ನಿರ್ಧಾರ ಮಾಡಿದ್ದರು. ಆದ್ರೆ, ಇಂದು ಆರೋಪಿ ರಫೀಕ್ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ
ಇದನ್ನೂ ಓದಿ: ನಮ್ಮ ಮೇಲೆ ದಬ್ಬಾಳಿಕೆ ಆದಾಗಲೆಲ್ಲಾ ಜಿಹಾದ್ ಇದ್ದೇ ಇರುತ್ತದೆ: ಮೌಲಾನಾ ಮಹಮೂದ್ ಮದನಿ

