- Home
- Karnataka Districts
- Mantralaya: ಮಂತ್ರಾಲಯ ಮಠದ ಹುಂಡಿ ಎಣಿಕೆ: ಕೇವಲ 21 ದಿನದಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ಕಾಣಿಕೆ! ಚಿನ್ನ ಬೆಳ್ಳಿ ಎಷ್ಟು?
Mantralaya: ಮಂತ್ರಾಲಯ ಮಠದ ಹುಂಡಿ ಎಣಿಕೆ: ಕೇವಲ 21 ದಿನದಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ಕಾಣಿಕೆ! ಚಿನ್ನ ಬೆಳ್ಳಿ ಎಷ್ಟು?
Mantalaya hundi collection: ರಾಯಚೂರಿನ ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಜೂನ್ ತಿಂಗಳ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಕೇವಲ 21 ದಿನದಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ಕಾಣಿಕೆ ಸಂಗ್ರಹವಾಗಿದೆ. ಭಕ್ತರು ನೀಡಿದ ಚಿನ್ನ ಬೆಳ್ಳಿಯಷ್ಟು ತಿಳಿಯಿರಿ.
13

Image Credit : Asianet News
ಮಂತ್ರಾಲಯ ಹುಂಡಿ ಎಣಿಕೆ ಕಾರ್ಯ
ರಾಯಚೂರು (ಜೂ.26): ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಜೂನ್ ತಿಂಗಳ ಹುಂಡಿಯ ಎಣಿಕೆ ಕಾರ್ಯ ನಡೆಯಿತು. ಈ ಬಾರಿಯೂ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 21 ದಿನಗಳಲ್ಲಿ ₹3 ಕೋಟಿ 72 ಲಕ್ಷ, 40 ಸಾವಿರ ರೂಪಾಯಿ ಜಮೆಯಾಗಿದೆ ಎಂದು ಮಂತ್ರಾಲಯದ ಮಠದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
23
Image Credit : Asianet News
ಜಗತ್ತಿನಾದ್ಯಂತ ರಾಯರ ಭಕ್ತರು
ಮಂತ್ರಾಲಯ ರಾಯರ ಭಕ್ತರು ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶ, ವಿದೇಶಗಳಿಂದ ದರ್ಶನಕ್ಕೆ ಆಗಮಿಸುತ್ತಾರೆ. ರಾಯರ ದರ್ಶನ ಪಡೆದು ನಗದು ಹಣ, ಚಿನ್ನ ಬೆಳ್ಳಿಯನ್ನೇ ಕಾಣಿಕೆಯಾಗಿ ಅರ್ಪಿಸುತ್ತಾರೆ. ಈ ಬಾರಿಯೂ 67ಗ್ರಾಂ. ಚಿನ್ನ, 511ಗ್ರಾಂ ಬೆಳ್ಳಿ ಆಭರಣಗಳನ್ನ ಭಕ್ತರು ಕಾಣಿಕೆ ಅರ್ಪಿಸಿದ್ದಾರೆ.
33
Image Credit : Asianet News
ಮಂತ್ರಾಲಯ ಹುಂಡಿ ಎಣಿಕೆ
ಕಳೆದ ಬಾರಿ ಮೇ ತಿಂಗಳ ಹುಂಡಿಯಲ್ಲಿ 22 ದಿನದಲ್ಲಿ ಒಟ್ಟು 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ಸಂಗ್ರಹವಾಗಿದೆ. ಚಿನ್ನ ಬೆಳ್ಳಿ ಕಾಣಿಕೆ ಸ್ವಲ್ಪ ಇಳಿಮುಖವಾಗಿತ್ತು.
Latest Videos

