ಮಠಾಧೀಶನಾಗಿದ್ದ ಮುಸ್ಲಿಂ ವ್ಯಕ್ತಿಯ ಸಲಿಂಗ ಕಾಮಪುರಾಣ: ನಿಜಲಿಂಗನ ನಿಜಸ್ವರೂಪ ಬಯಲು
ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾ ಮಠದ ಮಠಾಧೀಶ ನಿಜಲಿಂಗ ಸ್ವಾಮೀಜಿ ಅಲಿಯಾಸ್ ಮೊಹಮದ್ ನಿಸಾರ್ ಮುಸ್ಲಿಂ ವ್ಯಕ್ತಿಯಾಗಿದ್ದು, ಸಲಿಂಗಕಾಮಿ ಎಂಬುದು ಬೆಳಕಿಗೆ ಬಂದಿದೆ. ಮದ್ಯಪಾನ, ಮಾಂಸಾಹಾರ ಸೇವನೆ ಹಾಗೂ ಯುವಕನೊಂದಿಗೆ ಅಸಭ್ಯವಾಗಿ ವರ್ತಿಸುವ ವಿಡಿಯೋ ವೈರಲ್ ಆಗಿದೆ.

ಲಿಂಗದೀಕ್ಷೆ ಪಡೆದು ಮಠಾಧೀಶನಾಗಿದ್ದ ಮುಸ್ಲಿಂ ವ್ಯಕ್ತಿಯ ಸಲಿಂಗ ಕಾಮಪುರಾಣ ಬಯಲಾಗಿದೆ. ಯಾದಗಿರಿ ಜಿಲ್ಲೆಯ ಶಹಪುರ ಮೂಲದ ಮೊಹಮದ್ ನಿಸಾರ್ ತನ್ನ ಮೂಲ ಧರ್ಮ ಮರೆಮಾಚಿದ್ದನು. ಈ ವಿಷಯವನ್ನು ಯಾರಿಗೂ ತಿಳಿಸದೇ ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾ ಮಠಕ್ಕೆ ಮಠಾಧೀಶನಾಗಿದ್ದನು.
ಮತಾಂತರಗೊಂಡ ವಿಷಯ ತಿಳಿಯುತ್ತಲೇ ನನ್ನ ಹಿನ್ನೆಲೆಯನ್ನು ಹೇಳಿಕೊಂಡಿದ್ದನು. ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿಯಿಂದ ಜಂಗಮದೀಕ್ಷೆ ಪಡೆದುಕೊಂಡಿರೋದಾಗಿ ಹೇಳಿದ್ದನು. ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗುತ್ತಲೇ ತನಗೆ ಸಂಬಂಧಿಸಿದ ವಸ್ತುಗಳನ್ನು ತೆಗೆದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದನು. ಇದೀಗ ಮೊಹಮದ್ ನಿಸಾರ್ ಓರ್ವ ಸಲಿಂಗಕಾಮಿ ಎಂದು ತಿಳಿದು ಬಂದಿದೆ.
ಮೊಹಮದ್ ನಿಸಾರ್ ತನ್ನ ಕೋಣೆಯಲ್ಲಿ ಕುಡಿದು ತೂರಾಡುತ್ತಿರುವ ಮತ್ತು ಯುವಕನೋರ್ವನ ಜೊತೆ ಸರಸವಾಡುತ್ತಿರುವ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿದೆ. ಹಾಗೆ ಕೋಣೆಯಲ್ಲಿ ಮದ್ಯಪಾನ ಮಾಡುತ್ತಿರುವ ಮತ್ತು ಮಾಂಸಾಹಾರ ಸೇವನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಮಠಾಧೀಶನಾಗಿದ್ದ ಮೊಹಮದ್ ನಿಸಾರ್ ತನ್ನದೇ ಮೊಬೈಲ್‌ನಲ್ಲಿ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಇರಿಸಿಕೊಂಡಿದ್ದನು. ಇದೀಗ ಈ ಎಲ್ಲವೂ ವೈರಲ್ ಆಗಿದ್ದು, ಸ್ವಾಮೀಜಿ ಕಾಮಲೀಲೆ ಕಂಡು ಚೌಡಹಳ್ಳಿ ಗ್ರಾಮಸ್ಥರು ಶಾಕ್ ಆಗಿದ್ದಾರೆ. ನಿಜಲಿಂಗಸ್ವಾಮೀಜಿಯ ನಿಜಸ್ವರೂಪ ತಿಳಿದು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮೂರು ದಿನಗಳ ಹಿಂದೆ ಮುಸ್ಲಿಮರು ಧರಿಸುವ ಟೋಪಿಯನ್ನು ಆನ್‌ಲೈನ್ ಮೂಲಕ ನಿಜಲಿಂಗಸ್ವಾಮೀಜಿ ಅಲಿಯಾಸ್ ಮೊಹಮದ್ ನಿಸಾರ್ ತರಿಸಿಕೊಂಡಿದ್ದನು. ಇದು ಗ್ರಾಮಸ್ಥರ ಅನುಮಾನಕ್ಕೆ ಕಾರಣವಾಗಿತ್ತು. ವಿಚಾರಿಸಿದಾಗ ಆತ ಮತಾಂತರಗೊಂಡಿರುವ ವಿಷಯ ತಿಳಿದಿತ್ತು. ಮತಾಂತರವಾದ ನಂತರವೂ ನಿಜಲಿಂಗಸ್ವಾಮೀಜಿ, ದಾಖಲೆಗಳಲ್ಲಿ ಹಿಂದಿನ ಹೆಸರು ಅಂದ್ರೆ ಮೊಹಮದ್ ನಿಸಾರ್ ಎಂದು ಉಳಿಸಿಕೊಂಡಿದ್ದನು. ನಿಜಲಿಂಗಸ್ವಾಮೀಜಿಯ ನಿಜಸ್ವರೂಪ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದರು.
ಪೀಠತ್ಯಾಗ ಮಾಡುವುದಾಗಿ ಹೇಳಿ ಸದ್ದಿಲ್ಲದೆ ಜಾಗ ಖಾಲಿ ಮಾಡಿದ್ದಾನೆ. ನಿಸಾರ್ ಮೊಹಮದ್ ನಿಂದ ಅಕ್ಷರ ದಾಸೋಹ, ಶೈಕ್ಷಣಿಕ ಕ್ರಾಂತಿ ಮಾಡಿದ ವೀರಶೈವ ಲಿಂಗಾಯತ ಧರ್ಮಕ್ಕೆ ದ್ರೋಹ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವ್ಯಕ್ತವಾಗಿದೆ.