MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಆರೋಗ್ಯ ಸಚಿವರ ತವರಲ್ಲಿ ಮಾದಕ ಆತಂಕ: ವಿದ್ಯಾರ್ಥಿಗಳಿಗೆ ಆಂಬುಲೆನ್ಸ್ ಮೂಲಕವೇ ಡ್ರಗ್ಸ್ ಮಾರಾಟ!

ಆರೋಗ್ಯ ಸಚಿವರ ತವರಲ್ಲಿ ಮಾದಕ ಆತಂಕ: ವಿದ್ಯಾರ್ಥಿಗಳಿಗೆ ಆಂಬುಲೆನ್ಸ್ ಮೂಲಕವೇ ಡ್ರಗ್ಸ್ ಮಾರಾಟ!

ಮಂಗಳೂರು ಸಿಸಿಬಿ ಪೊಲೀಸರು ಆ್ಯಂಬುಲೆನ್ಸ್‌ನಲ್ಲಿಯೇ ಡ್ರಗ್ಸ್‌ ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆಘಾತಕಾರಿ ಜಾಲವನ್ನು ಬಯಲಿಗೆಳೆದಿದ್ದಾರೆ. ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ನೀಡಿದ ಮಾಹಿತಿಯಂತೆ, ಪ್ರಮುಖ ಆರೋಪಿ ಆ್ಯಂಬುಲೆನ್ಸ್ ಚಾಲಕ ಜಲೀಲ್ ಬಾಬಾ ತಲೆಮರೆಸಿಕೊಂಡಿದ್ದಾನೆ.

1 Min read
Author : Sathish Kumar KH| Kannada Prabha
Published : Jul 27 2026, 06:44 AM IST
Share this Photo Gallery
  • FB
  • TW
  • Linkdin
  • Whatsapp
14
Image Credit : stockPhoto

ಕನ್ನಡಪ್ರಭ ವಾರ್ತೆ ಮಂಗಳೂರು

ತುರ್ತು ಚಿಕಿತ್ಸೆ ಅಗತ್ಯವಿರುವರ ಜೀವ ಕಾಪಾಡಲು ಬಳಸುವ ಆ್ಯಂಬುಲೆನ್ಸ್‌ನಲ್ಲಿಯೇ ಡ್ರಗ್ಸ್‌ ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆಘಾತಕಾರಿ ಪ್ರಕರಣವೊಂದನ್ನು ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಲೇ ಆರೋಪಿ, ಆ್ಯಂಬುಲೆನ್ಸ್‌ ಚಾಲಕ ಬೆಳ್ತಂಗಡಿಯ ಜಲೀಲ್‌ ಬಾಬಾ ಎಂಬಾತ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
Image Credit : Asianet News

ಪ್ರಕರಣ ಬೆಳಕಿಗೆ:

ಸಿಸಿಬಿ ಪೊಲೀಸರು ಜೂ.25ರಂದು ಸುರತ್ಕಲ್‌ ಸಮೀಪದ ಕುಳಾಯಿಗುಡ್ಡೆ ಸಮೀಪ ಬಾಡಿಗೆ ಮನೆಯೊಂದರ ದಾಳಿ ನಡೆಸಿ ಅಣ್ಣಪ್ಪ ಸ್ವಾಮಿ ಎಂಬಾತನನ್ನು ಬಂಧಿಸಿ ಆತನಿಂದ ₹1.50 ಲಕ್ಷ ಮೌಲ್ಯದ 15.17 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಮಾದಕ ವಸ್ತು ಪೂರೈಕೆ ಜಾಲದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ದೆಹಲಿಯಿಂದ ಎಂಡಿಎಂಎ ಖರೀದಿಸಿಕೊಂಡು ಬೆಂಗಳೂರಿಗೆ ಸಾಗಿಸುತ್ತಿದ್ದ ಜಾಲದ ಬಗ್ಗೆ ಸುಳಿವು ಪಡೆದಿದ್ದರು.

Related Articles

Related image1
ಭಾರತಕ್ಕೆ ಡ್ರಗ್ಸ್ ಸಪ್ಲೇ ಮಾಡಿ ಸಿಕ್ಕಿಬಿದ್ದ ಪಾಕಿಸ್ತಾನದ ಈ ಕ್ರಿಕೆಟಿಗರು, ರಹಸ್ಯ ಬಿಚ್ಚಿ ಮಾಜಿ MHA ಅಧಿಕಾರಿ
Related image2
'ಕೇರಳದ ಸ್ಫೂರ್ತಿದಾಯಕ ಮಹಿಳೆ' ಕಿರೀಟ ಪಡೆದಾಕೆ ಈಗ ಡ್ರಗ್ಸ್​ ಪೆಡ್ಲರ್​: ವಯನಾಡಿನ ಸುಂದರಿ ಸಿಕ್ಕಿಬಿದ್ದದ್ದೇ ರೋಚಕ
34
Image Credit : Asianet News

ಇದರ ಆಧಾರದಲ್ಲಿ ಜು.15ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲಾಡ್ಜ್ ಮೇಲೆ ದಾಳಿ ನಡೆಸಿ ಮತ್ತೆ ಮೊಹಮ್ಮದ್ ಅಲ್ತಾಫ್, ಉಜಿರೆ ಹಳೆಪೇಟೆಯ ಮೊಹಮ್ಮದ್ ಮುಸ್ತಫಾರನ್ನು ಬಂಧಿಸಿದ್ದರು. ಅವರಿಂದ ಅಂದಾಜು ₹5.5 ಕೋಟಿ ಮೌಲ್ಯದ ಒಟ್ಟು 5 ಕೆ.ಜಿ ಎಂಡಿಎಂಎ, ಕಾರು, ಬ್ಯಾಗ್ ಮತ್ತು ಮೊಬೈಲ್ ಫೋನ್‌ ವಶಪಡಿಸಿಕೊಳ್ಳಲಾಗಿತ್ತು.

44
Image Credit : Asianet News

ಈ ಜಾಲದಲ್ಲಿ ಇನ್ನೂ ಹಲವರು ಭಾಗಿ ಆಗಿರುವ ಶಂಕೆಯಲ್ಲಿ, ತನಿಖೆ ಮುಂದುವರಿದಿತ್ತು. ಪೊಲೀಸ್ ವಿಚಾರಣೆಯ ವೇಳೆ ಆರೋಪಿಗಳು ಜಲೀಲ್ ಬಾಬಾನ ಬಗ್ಗೆ ಮಾಹಿತಿ ನೀಡಿದ್ದಾರೆ. ಈತ ತನ್ನ ಖಾಸಗಿ ಆ್ಯಂಬುಲೆನ್ಸ್‌ನಲ್ಲಿಯೇ ಡ್ರಗ್ಸ್‌ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ. ಡ್ರಗ್ಸ್‌ ಖರೀದಿಗೆ ಹೋಗಿದ್ದ ಮೂವರು ಆರೋಪಿಗಳ ಜೊತೆ ನೇರ ನಂಟು ಹೊಂದಿದ್ದ. ತಂದ ಮಾಲನ್ನು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಮಾರಾಟ ಮಾಡುತ್ತಿದ್ದುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಆರೋಪಿಸಲಾಗಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಮಂಗಳೂರು
ದಕ್ಷಿಣ ಕನ್ನಡ
ಔಷಧಿ

Latest Videos
Recommended Stories
Recommended image1
ರಾಜ್ಯ ಗೃಹ ಸಚಿವರಿಗೆ ಅನಾಮಧೇಯ ಪತ್ರ, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಪೊಲೀಸ್ ಲೆಟರ್
Recommended image2
ಪತಿ ಜೊತೆ ಪ್ರಿಯಾಂಕಾ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ? ಈ ಬಗ್ಗೆ ಖುದ್ದು ನಟಿ ಹೇಳಿದ್ದೇನು
Recommended image3
ರಾಯಚೂರಿನಲ್ಲಿ ರೈಲ್ವೇ ಟ್ರಾಕ್ ಕಾಮಗಾರಿ ಗುಂಡಿಗೆ ಬಿದ್ದು ಬಾಲಕ ಸಾವು, ಪೋಷಕರ ನರಳಾಟ
Related Stories
Recommended image1
ಭಾರತಕ್ಕೆ ಡ್ರಗ್ಸ್ ಸಪ್ಲೇ ಮಾಡಿ ಸಿಕ್ಕಿಬಿದ್ದ ಪಾಕಿಸ್ತಾನದ ಈ ಕ್ರಿಕೆಟಿಗರು, ರಹಸ್ಯ ಬಿಚ್ಚಿ ಮಾಜಿ MHA ಅಧಿಕಾರಿ
Recommended image2
'ಕೇರಳದ ಸ್ಫೂರ್ತಿದಾಯಕ ಮಹಿಳೆ' ಕಿರೀಟ ಪಡೆದಾಕೆ ಈಗ ಡ್ರಗ್ಸ್​ ಪೆಡ್ಲರ್​: ವಯನಾಡಿನ ಸುಂದರಿ ಸಿಕ್ಕಿಬಿದ್ದದ್ದೇ ರೋಚಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved