MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಹುಬ್ಬಳ್ಳಿ ಗ್ಯಾಸ್ ಸಿಲಿಂಡರ್ ಸೋರಿಗೆ ಬ್ಲಾಸ್ಟ್ ಕೇಸಿಗೆ ಭಾರೀ ಟ್ವಿಸ್ಟ್; ಇದು ಅವಘಡವಲ್ಲ, ಕೊಲೆ ಯತ್ನವಂತೆ!

ಹುಬ್ಬಳ್ಳಿ ಗ್ಯಾಸ್ ಸಿಲಿಂಡರ್ ಸೋರಿಗೆ ಬ್ಲಾಸ್ಟ್ ಕೇಸಿಗೆ ಭಾರೀ ಟ್ವಿಸ್ಟ್; ಇದು ಅವಘಡವಲ್ಲ, ಕೊಲೆ ಯತ್ನವಂತೆ!

ಹುಬ್ಬಳ್ಳಿಯಲ್ಲಿ ಶಿಕ್ಷಕ ದಂಪತಿಯ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿ, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳು ಮಹಿಳೆಯ ತಂಗಿ, ತಮ್ಮ ಅಕ್ಕನ ಗಂಡನೇ ಕೊಲೆ ಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

2 Min read
Author : Sathish Kumar KH
Published : Jul 24 2025, 04:28 PM IST
Share this Photo Gallery
  • FB
  • TW
  • Linkdin
  • Whatsapp
19
Image Credit : Asianet News

ಹುಬ್ಬಳ್ಳಿ (ಜು.24) : ಹುಬ್ಬಳ್ಳಿ ನಗರದಲ್ಲಿ ಶಿಕ್ಷಕ ದಂಪತಿಯ ಮನೆಯಲ್ಲಿ ಅಡುಗೆ ಮಾಡಲು ಬಳಸುವ ಗ್ಯಾಸ್ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿದ್ದು, ಮನೆಯಲ್ಲಿ ಕತ್ತಲಾಗಿದ್ದರಿಂದ ಮೊಬೈಲ್ ಟಾರ್ಚ್ ಆನ್ ಮಾಡುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ ದಂಪತಿ ಹಾಗೂ ಇಬ್ಬರು ಮಕ್ಕಳಿಗೆ ಗಂಭೀರ ಗಾಯವಾಗಿತ್ತು. ಆದರೆ, ಈ ಪ್ರಕರಣಕ್ಕೆ ಗಾಯಾಳು ಮಹಿಳೆಯ ತಂಗಿ, ತಮ್ಮ ಅಕ್ಕನ ಗಂಡನೇ ಕೊಲೆ ಯತ್ನ ಮಾಡಿದ್ದು, ಅವರನ್ನು ಬಂಧನ ಮಾಡಿ ತನಿಖೆ ಮಾಡುವಂತೆ ಆಗ್ರಹ ಮಾಡಿದ್ದಾರೆ.

29
Image Credit : Asianet News

ಹುಬ್ಬಳ್ಳಿ ನಗರ ಶಕ್ತಿ ಕಾಲನಿಯಲ್ಲಿ ಸಿಲಿಂಡರ್ ಸೋರಿಕೆಯಾಗಿ ಬ್ಲಾಸ್ಟ್ ಆದ ಅವಘದಲ್ಲಿ ನಾಲ್ಕು ಜನರಿಗೆ ಗಾಯವಾಗಿದೆ. ಶಿಕ್ಷಕ ಮಹಾಂತೇಶ ಬಳ್ಳಾರಿ, ಅವರ ಪತ್ನಿ ದೈಹಿಕ ಶಿಕ್ಷಣ ಶಿಕ್ಷಕಿ ಗಂಗಮ್ಮ ಬಳ್ಳಾರಿ, ಮಕ್ಕಳಾದ ಮನೋರಂಜನ್ ಮತ್ತು ಕಾರುಣ್ಯ ಎನ್ನುವವರು ಗಾಯಾಳು ಆಗಿದ್ದಾರೆ. ಗಂಗಮ್ಮ ಬಳ್ಳಾರಿ ಎನ್ನುವವರ ಸ್ಥಿತಿ ಗಂಭೀರವಾಗಿದೆ. ನೆನ್ನೆ ರಾತ್ರಿ ಅವಘಡ ಸಂಭವಿಸಿದ್ದು, ಹುಬ್ಬಳ್ಳಿ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Related image1
Prostitution Racket: ಹುಬ್ಬಳ್ಳಿ: ಕಾಲೇಜು ಪಕ್ಕದಲ್ಲೇ ಬೃಹತ್ ವೇಶ್ಯಾವಾಟಿಕೆ ಜಾಲ ಪತ್ತೆ, 10 ಮಹಿಳೆಯರ ರಕ್ಷಣೆ, 7 ವಿಟಪುರುಷರ ಬಂಧನ!
Related image2
ಹುಬ್ಬಳ್ಳಿ: ಮದುವೆ ಮನೆಯಲ್ಲಿ ಸುಡುವ ಸಾಂಬಾರು ಬಿದ್ದು ಎರಡೂವರೆ ವರ್ಷದ ಮಗು ದುರಂತ ಸಾವು
39
Image Credit : Asianet News

ಸಿಲಿಂಡರ್ ಸೋರಿಕೆ ಅವಘಡ ಪ್ರಕರಣದ ಗಾಯಳುಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಬಗ್ಗೆ ಕಿಮ್ಸ್ ನಿರ್ದೇಶಕ ಡಾ.ಈಶ್ವರ ಹೊಸಮನಿ ಮಾಧ್ಯಮಗಳೊಂದಿಗೆ ಮಾತನಾಡಿ, ಎಲ್‌ಪಿಜಿ ಅನಿಲ ಸೋರಿಕೆಯಿಂದ ಬೆಂಕಿ ಅವಘಡ ಆಗಿದೆ. ಮೊಬೈಲ್ ಟಾರ್ಚ್ ಆನ್ ಮಾಡಿದ್ದರಿಂದ ದುರ್ಘಟನೆ ಆಗಿದೆ. ಸಿಲಿಂಡರ್‌ಗೆ ಹತ್ತಿರವೇ ಇದ್ದ ಗಂಗಮ್ಮಗೆ ಹೆಚ್ಚಿನ ಗಾಯವಾಗಿದೆ. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪತಿ ಮಹಾಂತೇಶ ಶೇ.15 ರಷ್ಟು ಗಾಯವಾಗಿದೆ ಎಂದು ಮಾಹಿತಿ ನೀಡಿದರು.

49
Image Credit : Asianet News

ಇನ್ನು ಘಟನೆ ವಿವರಕ್ಕೆ ಬಂದರೆ ನಿನ್ನೆ ಮನೆಯವರೆಲ್ಲ ಸೇರಿ ಹೊರಗಡೆ ಹೋಗಿದ್ದರು. ಮರಳಿ ಮನೆಗೆ ಬಂದು ಮಲ್ಕೊಂಡಿದ್ದಾರೆ. ನಂತರ ಸ್ವಲ್ಪ ಕತ್ತಲಾದಾಗ ಎದ್ದು ಟಾರ್ಚ್ ಆನ್ ಮಾಡಿದ್ದಾರೆ. ಆನ್ ಮಾಡುತ್ತಲೇ ಮನೆಯೆಲ್ಲಾ ಬೆಂಕಿ ಆವರಿಸಿಕೊಂಡಿದೆ. ಗಾಯಾಳುಗಳಿಗೆ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸುಟ್ಟ ಗಾಯಗಳ ತಜ್ಞರು ಬಂದು ಅವರಿಗೆ ಚಿಕಿತ್ಸೆ ಆರಂಭ ಮಾಡಲಾಗಿದೆ.

59
Image Credit : Asianet News

ಅಕ್ಕನ ಕೊಲೆ ಯತ್ನ ಎಂದು ಆರೋಪ:

ಬೆಂಕಿಯಿಂದ ಗಂಭೀರ ಗಾಯಗೊಂಡ ಗಂಗಮ್ಮಳ ಸಹೋದರಿ ಅಕ್ಷತಾ ಕೊಲೆ ಆರೋಪ ಮಾಡಿದ್ದಾರೆ. ಮಹಾಂತೇಶನೇ ನನ್ನ ಅಕ್ಕಳನ್ನ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾನೆ. ಆಸ್ತಿಗಾಗಿ ನನ್ನ ಅಕ್ಕಳನ್ನ ಕೊಲೆ ಪ್ರಯತ್ನ ಮಾಡಲಾಗಿದೆ.

69
Image Credit : Asianet News

ಮೊಬೈಲ್ ಟಾರ್ಚ್‌ನಿಂದ ಬೆಂಕಿ ಹತ್ತಿದ್ದರೆ ಮೊಬೈಲ್ ಬ್ಲಾಸ್ಟ್ ಆಗಬೇಕಿತ್ತು. ಜೊತೆಗೆ ಇಡೀ ಮನೆಯ ಎಲ್ಲ ವಸ್ತುಗಳು ಛೀದ್ರವಾಗಬೇಕಿತ್ತು. ಇಲ್ಲಿ ಮಹಾಂತೇಶನಿಗೆ ಏನೂ ಆಗಿಲ್ಲ, ನನ್ನ ಅಕ್ಕಳಿಗೆ ಗಂಭೀರ ಗಾಯವಾಗಿದೆ. ಮನೆಯಲ್ಲಿನ ಒಂದು ವಸ್ತು ಸಹ ಅಲುಗಾಡಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

79
Image Credit : Asianet News

ನಮ್ಮ ಅಕ್ಕ ಗಂಗಮ್ಮ ಮತ್ತು ಮಾವ ಮಹಾಂತೇಶ್ ಇಬ್ಬರಿಗೂ ಮೊದಲಿನಿಂದಲೂ ಜಗಳ‌ ನಡೆಯುತ್ತಿತ್ತು. ನಮ್ಮ‌ ಅಕ್ಕನಿಗೆ ಅನೇಕ ಬಾರಿ ಆಕೆಯ ಪತಿ ಹಿಂಸೆ ನೀಡಿದ್ದಾನೆ. ನಮ್ಮ ಅಕ್ಕ ನಿನ್ನೆ ಎಲ್ಲೂ ಹೊರಗಡೆ ಹೋಗಿಲ್ಲ, ಮನೇಲೆ ಇದ್ದರು. ಮಾವ ಹಾಗೂ ಆತನ ಕುಟುಂಬಸ್ಥರಿಂದ ಕೊಲೆ ಪ್ರಯತ್ನ ನಡೆದಿದೆ. 

ಇದೀಗ ಕೊಲೆ ಯತ್ನ ಪ್ರಕರಣವನ್ನ ತಿರುಚುವ ಸಂಚು ಮಾಡುತ್ತಿದ್ದಾರೆ. ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಬೇಕು. ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಿದರೆ ಮಾತ್ರ ಸತ್ಯಾಸತ್ಯತೆ ಹೊರಬರಲಿದೆ ಎಂದು ಆಗ್ರಹ ಮಾಡಿದ್ದಾರೆ.

89
Image Credit : Asianet News

ಮೊಬೈಲ್ ಟಾರ್ಚ್ ಆನ್ ಮಾಡುತ್ತಿದ್ದಂತೆ ಬೆಂಕಿ:

ರಾತ್ರಿ ವೇಳೆ ಮನೆಯಲ್ಲಿ ಕರೆಂಟ್ ಹೋಗಿದ್ದರಿಂದ ಮಹಾಂತೇಶ್ ಬಳ್ಳಾರಿ ಅವರು ಮೊಬೈಲ್ ಟಾರ್ಚ್ ಆನ್ ಮಾಡಿದ್ದಾರೆ. ಮನೆಯಲ್ಲಿ ಅನಿಲ ತುಂಬಿಕೊಂಡಿದ್ದು, ಟಾರ್ಚ್ ಆನ್ ಮಾಡ್ತಿದ್ದಂತೆಯೇ ದಿಢೀರನೇ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಗಂಡ ಹೆಂಡತಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

99
Image Credit : Asianet News

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ:

ಮಹಾಂತೇಶ್ ಅವರು ಶಿಕ್ಷಕರಾಗಿದ್ದು, ವಿಶ್ವೇಶ್ವರ ನಗರದ ಸಂಕಾರಿ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪತ್ನಿ ಗಂಗಮ್ಮ ನಾಗಶಟ್ಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಗೆ ಸಭಾಪತಿ ಬಸವರಾಜ್ ಹೊರಟ್ಟಿ ಭೇಟಿ ನೀಡಿ ಗಾಯಳುಗಳ ಆರೋಗ್ಯ ವಿಚಾರಿಸಿದ್ದಾರೆ. ಆಕಸ್ಮಿಕವಾಗಿ ದುರ್ಘಟನೆ ನಡೆದಿದೆ. ಗಂಡ ಹೆಂಡತಿ ಇಬ್ಬರೂ ಶಿಕ್ಷಕರಾಗಿದ್ದರು. ನಾಲ್ವರು ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಎಲ್ಲರೂ ಆದಷ್ಟು ಬೇಗ ಗುಣಮುಖರಾಗಲಿ ಎಂದು ಬಸರಾಜ ಹೊರಟ್ಟಿ ಹೇಳಿದರು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕ್ರೈಮ್ ನ್ಯೂಸ್
ಧಾರವಾಡ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
Urdu Invitation Row: ನಾವು ಯಾರನ್ನೂ ಓಲೈಕೆ ಮಾಡೋಲ್ಲ, ಪ್ರತಿಭಟನೆ ಮಾಡೋದು ವಿಪಕ್ಷಗಳ ಚಾಳಿ ಎಂದ ಸಿಎಂ
Recommended image2
Kunigal hotel fire: ಹೆದ್ದಾರಿ ಬದಿಯ ಹೋಟೆಲ್‌ಗೆ ಬೆಂಕಿ, ನೋಡನೋಡುತ್ತಿದ್ದಂತೆ ಇಡೀ ಕಟ್ಟಡವೇ ಸುಟ್ಟು ಕರಕಲು!
Recommended image3
ಇಂದು ಮಧ್ಯರಾತ್ರಿಯಿಂದಲೇ ಮದ್ಯ ಮಾರಾಟ ನಿಷೇಧ; ಜಿಲ್ಲಾಧಿಕಾರಿ ಆದೇಶ, ಪೊಲೀಸರಿಂದ ಹೈ-ಅಲರ್ಟ್!
Related Stories
Recommended image1
Prostitution Racket: ಹುಬ್ಬಳ್ಳಿ: ಕಾಲೇಜು ಪಕ್ಕದಲ್ಲೇ ಬೃಹತ್ ವೇಶ್ಯಾವಾಟಿಕೆ ಜಾಲ ಪತ್ತೆ, 10 ಮಹಿಳೆಯರ ರಕ್ಷಣೆ, 7 ವಿಟಪುರುಷರ ಬಂಧನ!
Recommended image2
ಹುಬ್ಬಳ್ಳಿ: ಮದುವೆ ಮನೆಯಲ್ಲಿ ಸುಡುವ ಸಾಂಬಾರು ಬಿದ್ದು ಎರಡೂವರೆ ವರ್ಷದ ಮಗು ದುರಂತ ಸಾವು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved