MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Liquor Mafia: ಗೋವಾ ಮದ್ಯ ಸಾಗಾಟಕ್ಕೆ ಖತರ್ನಾಕ್ ಪ್ಲಾನ್! ಮೇಲೆ ಗೊಬ್ಬರ ಒಳಗೆ ಕೋಟಿ ಮೌಲ್ಯದ ಲಿಕ್ಕರ್

Liquor Mafia: ಗೋವಾ ಮದ್ಯ ಸಾಗಾಟಕ್ಕೆ ಖತರ್ನಾಕ್ ಪ್ಲಾನ್! ಮೇಲೆ ಗೊಬ್ಬರ ಒಳಗೆ ಕೋಟಿ ಮೌಲ್ಯದ ಲಿಕ್ಕರ್

ಗೋವಾದಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸಲು ಖದೀಮರು ಹಾಕಿದ್ದ ಖತರ್ನಾಕ್ ಪ್ಲಾನ್ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಹತ್ತಾರು ಡ್ರೈವರ್ಸ್, ಪ್ರತ್ಯೇಕ ಜಿಪಿಎಸ್ ಲೊಕೇಶನ್, ಮೇಲೆ ಎರೆಹುಳ ಗೊಬ್ಬರದ ಮುಸುಕು! ಕರ್ನಾಟಕದ ಮೂರು ಜಿಲ್ಲೆಗಳ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಅಂತರರಾಜ್ಯ ಖದೀಮರ ಜಾಲ! 

2 Min read
Author : Ravi Janekal
Published : Jun 24 2026, 08:49 AM IST
Share this Photo Gallery
  • FB
  • TW
  • Linkdin
  • Whatsapp
15
ಗೋವಾ ಮದ್ಯ ಸಾಗಾಟಕ್ಕೆ ಸಿನಿಮಾ ರೀತಿಯಲ್ಲಿ ಸ್ಕೆಚ್..!
Image Credit : Asianet News

ಗೋವಾ ಮದ್ಯ ಸಾಗಾಟಕ್ಕೆ ಸಿನಿಮಾ ರೀತಿಯಲ್ಲಿ ಸ್ಕೆಚ್..!

ಗೋವಾದಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸಲು ಖದೀಮರು ಹಾಕಿದ್ದ ಖತರ್ನಾಕ್ ಪ್ಲಾನ್ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಹತ್ತಾರು ಡ್ರೈವರ್ಸ್, ಪ್ರತ್ಯೇಕ ಜಿಪಿಎಸ್ ಲೊಕೇಶನ್, ಮೇಲೆ ಎರೆಹುಳ ಗೊಬ್ಬರದ ಮುಸುಕು! ಕರ್ನಾಟಕದ ಮೂರು ಜಿಲ್ಲೆಗಳ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಅಂತರರಾಜ್ಯ ಖದೀಮರ ಜಾಲ ಕೊನೆಗೂ ವಿಜಯಪುರದಲ್ಲಿ ಬಯಲಾಗಿದೆ.. ಬರೋಬ್ಬರಿ 1 ಕೋಟಿ 65 ಲಕ್ಷ ಮೌಲ್ಯದ ಮದ್ಯ ಹಾಗೂ ಟ್ರಕ್ ಈಗ ಖಾಕಿ ವಶದಲ್ಲಿದೆ.

ಪೊಲೀಸ್ ಠಾಣೆಯಲ್ಲಿ ನಿಂತಿರೋ ಟ್ರಕ್.. ಟ್ರಕ್ ಪಕ್ಕದಲ್ಲೆ ಕೋಟಿ ಮೌಲ್ಯದ ಗೋವಾ ಲಿಕ್ಕರ್... ಪಕ್ಕದಲ್ಲೆ ಎರೆಹುಳ ಗೊಬ್ಬರ.. ಇದೆ ಗೊಬ್ಬರದ ಚೀಲಗಳ ಕೆಳಗೆ ಅಡಗಿಸಿಟ್ಟಿದ್ದು ಬರೋಬ್ಬರಿ ಕೋಟಿ ಕೋಟಿ ಮೌಲ್ಯದ ಗೋವಾ ಮದ್ಯ! ಹೌದು, ಗೋವಾದಿಂದ ಮಹಾರಾಷ್ಟ್ರಕ್ಕೆ ಲಿಕ್ಕರ್ ಸಪ್ಲೈ ಮಾಡಲು ಖದೀಮರು ಸಿನೆಮಾ ಸ್ಟೈಲ್‌ನಲ್ಲಿ ಸ್ಕೆಚ್ ಹಾಕಿದ್ರು. ಆದ್ರೆ ವಿಜಯಪುರ ಪೊಲೀಸರ ಹದ್ದಿನ ಕಣ್ಣಿಗೆ ಈ ಚಾಲಾಕಿ ಗ್ಯಾಂಗ್ ಕೊನೆಗೂ ಬಿದ್ದೇ ಬಿಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮೇಲೆ ಎರೆಹುಳು ಗೊಬ್ಬರ ; ಒಳಗೆ ಕೋಟಿ ಮೌಲ್ಯದ ಮದ್ಯ.!
Image Credit : Asianet News

ಮೇಲೆ ಎರೆಹುಳು ಗೊಬ್ಬರ ; ಒಳಗೆ ಕೋಟಿ ಮೌಲ್ಯದ ಮದ್ಯ.!

ವಿಜಯಪುರ ಜಿಲ್ಲೆಯ ಕೊಲ್ಹಾರ ಟೋಲ್ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮದ್ಯ ತುಂಬಿದ್ದ ಟ್ರಕ್ ಅನ್ನು ಅಡ್ಡಗಟ್ಟಿದ್ದಾರೆ. ಆರಂಭದಲ್ಲಿ ಡ್ರೈವರ್‌ಗಳು 'ಇದು ಎರೆಹುಳ ಗೊಬ್ಬರ ಸರ್, ಬೇಗ ಬಿಡಿ' ಅಂತ ಪೊಲೀಸರನ್ನೇ ಯಾಮಾರಿಸಲು ಯತ್ನಿಸಿದ್ರು. ಆದ್ರೆ ಅನುಮಾನಗೊಂಡು ಪೊಲೀಸರು ಗೊಬ್ಬರದ ಚೀಲಗಳನ್ನು ಕೆಳಗೆ ಇಳಿಸಿ ನೋಡಿದಾಗ ಕಣ್ಣು ಕತ್ತಲೆ ಬರುವಂತಾಗಿತ್ತು. ಟ್ರಕ್‌ನ ಒಳಭಾಗದಲ್ಲಿ ಕೋಟಿ ಮೌಲ್ಯದ ಗೋವಾ ಮದ್ಯದ ಬಾಕ್ಸ್‌ಗಳನ್ನು ಅತ್ಯಂತ ಚಾಕಚಕ್ಯತೆಯಿಂದ ಜೋಡಿಸಿಡಲಾಗಿತ್ತು.

Related Articles

Related image1
ಶೀಘ್ರದಲ್ಲಿಯೇ ವಿಜಯಪುರ–ತಿರುಪತಿ ನಡುವೆ ನೇರ ರೈಲು ಸೇವೆ : ಟ್ರೈನ್ ರೂಟ್ ಯಾವುದು?
Related image2
ಗೋಕರ್ಣ: ಅಕ್ರಮವಾಗಿ ಗೋವಾ ಮದ್ಯ ಮಾರಾಟ ಪೊಲೀಸ್ ಪೇದೆ ಬಂಧನ
35
ಹತ್ತಾರು ಡ್ರೈವರ್ಸ್, ಒಬ್ಬೊಬ್ಬರಿಗೆ ಒಂದೊಂದು ಜಿಪಿಎಸ್ ಲೊಕೇಶನ್..!
Image Credit : Asianet News

ಹತ್ತಾರು ಡ್ರೈವರ್ಸ್, ಒಬ್ಬೊಬ್ಬರಿಗೆ ಒಂದೊಂದು ಜಿಪಿಎಸ್ ಲೊಕೇಶನ್..!

ಅಷ್ಟಕ್ಕೂ ಈ ಖದೀಮರು ಪೊಲೀಸರಿಗೆ ಸಿಕ್ಕಿಬೀಳಬಾರದು ಅಂತ ಜಿಪಿಎಸ್ ಆಧಾರಿತ ಹೈಟೆಕ್ ಐಡಿಯಾ ಬಳಸಿದ್ರು. ಮದ್ಯ ಸಾಗಾಟದ ರೂಟ್ ಮ್ಯಾಪ್ ಯಾರಿಗೂ ಲೀಕ್ ಆಗಬಾರದು ಅಂತ ಇಡೀ ದಾರಿಯುದ್ದಕ್ಕೂ ಹತ್ತಾರು ಡ್ರೈವರ್‌ಗಳನ್ನು ಬದಲಾಯಿಸಲಾಗಿತ್ತು! ಒಬ್ಬ ಡ್ರೈವರ್‌ಗೆ ಕೇವಲ ಒಂದು ನಿರ್ದಿಷ್ಟ ಜಿಪಿಎಸ್ ಲೊಕೇಶನ್ ತಲುಪಿಸೋ ಟಾರ್ಗೆಟ್ ಅಷ್ಟೇ ಇರ್ತಿತ್ತು. ಅಲ್ಲಿಗೆ ಹೋದ ತಕ್ಷಣ ಮತ್ತೊಬ್ಬ ಡ್ರೈವರ್ ಗಾಡಿ ಹತ್ತುತ್ತಿದ್ದ. ಈ ಪ್ಲಾನ್‌ನಿಂದಾಗಿ ಗೋವಾ ಮೂಲಕ ಬಂದಿದ್ದ ಟ್ರಕ್, ಬೆಳಗಾವಿ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸರಾಗವಾಗಿ ದಾಟಿ ಬಂದಿತ್ತು.

45
ಮೂರು ಜಿಲ್ಲೆ ದಾಟಿ ಬಂದವರನ್ನ ಹೆಡೆಮುರಿ ಕಟ್ಟಿದ ವಿಜಯಪುರ ಖಾಕಿ..!
Image Credit : Asianet News

ಮೂರು ಜಿಲ್ಲೆ ದಾಟಿ ಬಂದವರನ್ನ ಹೆಡೆಮುರಿ ಕಟ್ಟಿದ ವಿಜಯಪುರ ಖಾಕಿ..!

ಆದ್ರೆ ವಿಜಯಪುರ ಜಿಲ್ಲೆಗೆ ಎಂಟ್ರಿ ಕೊಡ್ತಿದ್ದಂತೆ ಖದೀಮರ ಆಟ ಬಂದ್ ಆಗಿದೆ. ಸದ್ಯ ಪೊಲೀಸರು ಟ್ರಕ್‌ನಲ್ಲಿದ್ದ ಬರೋಬ್ಬರಿ 1.31 ಕೋಟಿ ಮೌಲ್ಯದ ಗೋವಾ ಮದ್ಯ ಹಾಗೂ ಟ್ರಕ್ ಸೇರಿ ಒಟ್ಟು 1 ಕೋಟಿ 65 ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ ಅಂತರರಾಜ್ಯ ಮದ್ಯದ ದಂಧೆಯಲ್ಲಿದ್ದ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಗದಗ ಮೂಲದ ಶ್ರೀನಿವಾಸ್, ವಿಜಯಪುರದ ಹುಸೇನ್‌ಸಾಬ ಮುಲ್ಲಾ, ಬಸವರಾಜ್ ಭಜಂತ್ರಿ ಹಾಗೂ ಮಹಾರಾಷ್ಟ್ರ ಸೊಲ್ಲಾಪುರದ ಸಿದ್ಧರಾಮ ಡಾಲೆ ಸದ್ಯ ಕಂಬಿ ಎಣಿಸುತ್ತಿದ್ದಾರೆ.

55
ಗೋವಾ ಮದ್ಯ ದಂಧೆ ಹಿಂದಿನ ಕಿಂಗ್‌ಪಿನ್ ಯಾರು..!?
Image Credit : Asianet News

ಗೋವಾ ಮದ್ಯ ದಂಧೆ ಹಿಂದಿನ ಕಿಂಗ್‌ಪಿನ್ ಯಾರು..!?

ಒಟ್ಟಿನಲ್ಲಿ ಮೂರು ಜಿಲ್ಲೆಗಳ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ ಬಂದಿದ್ದ ಚಾಲಾಕಿ ಖದೀಮರನ್ನು ಹಿಡಿಯುವಲ್ಲಿ ವಿಜಯಪುರ ಖಾಕಿ ಪಡೆ ಯಶಸ್ವಿಯಾಗಿದೆ. ಈ ಹೈಟೆಕ್ ಲಿಕ್ಕರ್ ಮಾಫಿಯಾದ ಕಿಂಗ್‌ಪಿನ್ ಯಾರು? ಇದರ ಹಿಂದೆ ಬೇರೆ ಯಾರಿದ್ದಾರೆ ಅನ್ನೋದನ್ನ ಪತ್ತೆ ಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ..

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ವಿಜಯಪುರ
ಕ್ರೈಮ್ ನ್ಯೂಸ್
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಕೈಗಾ ಹೋರಾಟಕ್ಕೆ ಜಯ: 7 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಎನ್‌ಪಿಸಿ ಅಧಿಕಾರಿಗಳ ಒಪ್ಪಿಗೆ
Recommended image2
ಬದುಕು ಸಿಹಿ ಮಾಡುವ ಕಹಿ ಬೇವಿನ ಹಣ್ಣು ಆಯುವ ಕಾಯಕ; ದಿನಕ್ಕೆ ಎಷ್ಟು ಸಿಗುತ್ತೆ ಹಣ?
Recommended image3
Basavaraj Patil Marum victory: ಮಹಾರಾಷ್ಟ್ರ ವಿಧಾನಪರಿಷತ್‌ಗೆ ಕಲಬುರಗಿಯ ಕನ್ನಡಿಗ ಆಯ್ಕೆ
Related Stories
Recommended image1
ಶೀಘ್ರದಲ್ಲಿಯೇ ವಿಜಯಪುರ–ತಿರುಪತಿ ನಡುವೆ ನೇರ ರೈಲು ಸೇವೆ : ಟ್ರೈನ್ ರೂಟ್ ಯಾವುದು?
Recommended image2
ಗೋಕರ್ಣ: ಅಕ್ರಮವಾಗಿ ಗೋವಾ ಮದ್ಯ ಮಾರಾಟ ಪೊಲೀಸ್ ಪೇದೆ ಬಂಧನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved