G Janardhana Reddy: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಕೊಪ್ಪಳ ಜಿಲ್ಲೆಗೆ ಇಬ್ಬರಿಗೆ ಸಚಿವ ಸ್ಥಾನ ನೀಡಿರುವದು ಸಂತಸ ತಂದಿದೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ಗಂಗಾವತಿ (ಆ.03): ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಕೊಪ್ಪಳ ಜಿಲ್ಲೆಗೆ ಇಬ್ಬರಿಗೆ ಸಚಿವ ಸ್ಥಾನ ನೀಡಿರುವದು ಸಂತಸ ತಂದಿದೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು. ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಮತ್ತು ಕನಕಗಿರಿ ಶಾಸಕ ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ನೀಡಿರುವದರಿಂದ ಈ ಭಾಗದ ಮತದಾರರ ಭಾಗ್ಯವಾಗಿದೆ. ಇದರಿಂದ ಹಚ್ಚಿನ ಅಭಿವೃದ್ದಿಯಾಗುತ್ತದೆ ಎನ್ನುವುದು ಮತದಾರರ ನೀರಿಕ್ಷೆ ಇದೆ.
ಇದ್ದ ಸ್ವಲ್ಪ ಸಮಯದಲ್ಲಿ ಜಿಲ್ಲೆಯ ಸರ್ವಾಂಗಿಣ ಅಭಿವೃದ್ದಿಗೆ ಸಚಿವದ್ವಯರು ಶ್ರಮಿಸಲಿ ಎಂದರು. ಹಿರಿಯ ಶಾಸಕರನ್ನು ಕಡೆಗಣಿಸಿದ್ದಾರೆಂಬ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ಯಾವ ಮಾನದಂಡ ಇಟ್ಟುಕೊಂಡು ಸ್ಥಾನಗಳನ್ನು ನೀಡಿದ್ದಾರೆ ಅವರಿಗೆ ಗೊತ್ತಿರ ವಿಷಯವಾಗಿದೆ. ಬಳ್ಳಾರಿಯ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಷಯ ಎಂದರು. ಈ ವೇಳೆ ಮನೋಹರಗೌಡ ಹೇರೂರು, ಜಿಲಾನ್ ಪಾಷಾ, ವಿರೇಶ ಬಲಕುಂದಿ, ಅಮರಜ್ಯೋತಿ ನರಸಪ್ಪ, ಟಿ.ಜಿ.ಬಾಬು ಇದ್ದರು.
ಮಾದಕ ವಸ್ತುಗಳ ಸೇವನೆಯಿಂದ ಕುಟಂಬಗಳು ಬೀದಿಪಾಲು
ಮಾದಕ ವಸ್ತುಗಳ ಸೇವನೆಯಿಂದ ಕುಟಂಬಗಳು ಬೀದಿ ಪಾಲಾಗುತ್ತದೆ ಕಾರಣ ಮಾದಕ ವಸ್ತುಗಳಿಂದ ದೂರ ಇರಬೇಕೆಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ಜರುಗಿದ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಆಯೋಜಿಸಲಾದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾದಕ ವ್ಯಸನವು ಕೇವಲ ಒಬ್ಬ ವ್ಯಕ್ತಿಯನ್ನಷ್ಟೇ ಅಲ್ಲದೆ, ಕುಟುಂಬ, ಸಮಾಜ ಹಾಗೂ ಇಡೀ ದೇಶದ ಭವಿಷ್ಯವನ್ನೇ ನಾಶಮಾಡುತ್ತದೆ.
ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ "ನಶಾ ಮುಕ್ತ ಯುವ-ವಿಕಸಿತ ಭಾರತ" ಕನಸು ನನಸಾಗಬೇಕಾದರೆ, 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣವಾಗಬೇಕಾದರೆ ನಮ್ಮ ಯುವಶಕ್ತಿ ಡ್ರಗ್ಸ್‌ನಿಂದ ಸಂಪೂರ್ಣ ಮುಕ್ತವಾಗಿರಬೇಕೆಂದರು. ನಮ್ಮ ದೇಶದ ಸಾಮರ್ಥ್ಯವನ್ನು ಕುಗ್ಗಿಸಲು ಯತ್ನಿಸುತ್ತಿರುವ ಬಾಹ್ಯ ಶಕ್ತಿಗಳ ಈ ಷಡ್ಯಂತ್ರವನ್ನು ನಾವೆಲ್ಲರೂ ಒಟ್ಟಾಗಿ ವಿಫಲಗೊಳಿಸಬೇಕಿದೆ. ಬನ್ನಿ, ಪ್ರತಿಯೊಬ್ಬರೂ ಮಾದಕ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸೋಣ ಎಂದರು.
ಇತ್ತೀಚಿಗೆ ಗಂಗಾವತಿ ತಾಲೂಕಿನಲ್ಲಿ ವಿದೇಶಿ ಮಹಿಳೆಯರ ಮೇಲೆ ನಡೆದ ಅಹಿತಕರ ಘಟನೆಗೆ ಮಾದಕ ವಸ್ತುಗಳ ಸೇವೆನೆ ಕಾರಣ ಎಂದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್ ಪ್ರಸ್ತಾವಿಕವಾಗಿ ಮಾತನಾಡಿ 16 ರಿಂದ 21 ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳು ಜಾಗೃತಿಯಿಂದ ಇರ ಬೇಕು. ಬಹಳಷ್ಟು ಯುವಕು ಮತ್ತು ಯುವತಿಯರು ಈ ವಯಸ್ಸಿನಲ್ಲಿಯೇ ದಾರಿ ತಪ್ಪುತ್ತಾರೆ. ಜಾಗೃತಿಯಿಂದ ಇರಬೇಕೆಂದರು.


