MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಮಗನ ಕಣ್ಣೆದುರೇ ಹೆತ್ತವರ ಕೊಂದ ಕಟುಕನಿಗೆ ಗಲ್ಲು ಶಿಕ್ಷೆ: ಚಿಕ್ಕಮಗಳೂರು ಕೋರ್ಟ್‌ನಿಂದ ಐತಿಹಾಸಿಕ ತೀರ್ಪು!

ಮಗನ ಕಣ್ಣೆದುರೇ ಹೆತ್ತವರ ಕೊಂದ ಕಟುಕನಿಗೆ ಗಲ್ಲು ಶಿಕ್ಷೆ: ಚಿಕ್ಕಮಗಳೂರು ಕೋರ್ಟ್‌ನಿಂದ ಐತಿಹಾಸಿಕ ತೀರ್ಪು!

ಚಿಕ್ಕಮಗಳೂರಿನ ಎನ್.ಆರ್.ಪುರದಲ್ಲಿ 2019ರಲ್ಲಿ ನಡೆದಿದ್ದ ದಂಪತಿ ಹತ್ಯೆ ಪ್ರಕರಣಕ್ಕೆ ಐತಿಹಾಸಿಕ ತೀರ್ಪು ಪ್ರಕಟವಾಗಿದೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ, ಎಂಟು ವರ್ಷದ ಮಗನ ಕಣ್ಣೆದುರೇ ಹೆತ್ತವರನ್ನು ಬರ್ಬರವಾಗಿ ಕೊಂದಿದ್ದ ಆರೋಪಿ ಗೋವಿಂದಪ್ಪನಿಗೆ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.

2 Min read
Author : Sathish Kumar KH
Published : Mar 13 2026, 04:36 PM IST
Share this Photo Gallery
  • FB
  • TW
  • Linkdin
  • Whatsapp
15
ಮಗನೆದುರು ಹೆತ್ತವರ ಹತ್ಯೆ ಮಾಡಿದ್ದ ಆರೋಪಿಗೆ ಮರಣದಂಡನೆ
Image Credit : Asianet News

ಮಗನೆದುರು ಹೆತ್ತವರ ಹತ್ಯೆ ಮಾಡಿದ್ದ ಆರೋಪಿಗೆ ಮರಣದಂಡನೆ

ಚಿಕ್ಕಮಗಳೂರು (ಮಾ.13): ಎಂಟು ವರ್ಷದ ಪುಟ್ಟ ಕಂದನ ಕಣ್ಣೆದುರೇ ಆತನ ಹೆತ್ತವರನ್ನು ಮಲಗಿದ್ದಲ್ಲೇ ಭೀಕರವಾಗಿ ಕಡಿದು ಕೊಂದಿದ್ದ ನರಹಂತಕನಿಗೆ ಕೊನೆಗೂ ನ್ಯಾಯದೇವತೆ ಮರಣದಂಡನೆ ವಿಧಿಸಿದ್ದಾಳೆ. ಕಾಫಿನಾಡು ಚಿಕ್ಕಮಗಳೂರಿನ ಎನ್.ಆರ್.ಪುರ ತಾಲ್ಲೂಕಿನ ಕುಸುಬೂರಿನಲ್ಲಿ 2019ರಲ್ಲಿ ನಡೆದಿದ್ದ ಈ ದೃಶ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಅಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ದಂಪತಿಯ ಪರವಾಗಿ ಇಂದು ನ್ಯಾಯಾಲಯ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

25
ಪ್ರಕರಣದ ಹಿನ್ನೆಲೆ
Image Credit : Asianet News

ಪ್ರಕರಣದ ಹಿನ್ನೆಲೆ

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಕುಸುಬೂರಿನ ಸಾತ್ಕೊಳಿ ಬಳಿ 2019ರಲ್ಲಿ ಈ ಭೀಕರ ಹತ್ಯೆ ನಡೆದಿತ್ತು. ಆರೋಪಿ ಗೋವಿಂದಪ್ಪ ಎಂಬಾತ ದಂಪತಿಗಳನ್ನು ಮಲಗಿದ್ದಲ್ಲೇ ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿದ್ದ. ಈ ಕೃತ್ಯದ ಹಿಂದೆ ಅಕ್ರಮ ಸಂಬಂಧದ ಕರಾಳ ಹಸ್ತವಿತ್ತು ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ಮೃತ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಗೋವಿಂದಪ್ಪ, ಆಕೆ ತನ್ನಿಂದ ದೂರವಾಗಿ ಪತಿಯೊಂದಿಗೆ ಸಂಸಾರ ನಡೆಸಲು ಮುಂದಾಗಿದ್ದಕ್ಕೆ ರೊಚ್ಚಿಗೆದ್ದು ಈ ಕ್ರೂರ ಕೃತ್ಯ ಎಸಗಿದ್ದ.

Related Articles

Related image1
ಅನೇಕಲ್ ಕಿಡ್ನಾಪ್ & ಹತ್ಯೆ ಕೇಸ್‌, ನಮ್ಮ ಕಮ್ಯೂನಿಟಿ ಕೊಲೆ ಮಾಡಿಲ್ಲ ಎಂದ ಪ್ರದೀಪ್ ಈಶ್ವರ್
Related image2
ಬೆಂಗಳೂರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಗುಂಡ್ಲುಪೇಟೆ ಕಾಡಿನಲ್ಲಿ ಭೀಕರ ಹತ್ಯೆ
35
ಐತಿಹಾಸಿಕ ತೀರ್ಪು ನೀಡಿದ ನ್ಯಾಯಾಲಯ
Image Credit : Asianet News

ಐತಿಹಾಸಿಕ ತೀರ್ಪು ನೀಡಿದ ನ್ಯಾಯಾಲಯ

ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಚಿಕ್ಕಮಗಳೂರಿನ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಅವರು ಇಂದು ಮಹತ್ವದ ತೀರ್ಪು ನೀಡಿದ್ದಾರೆ. ಆರೋಪಿ ಗೋವಿಂದಪ್ಪನಿಗೆ ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಿ ಆದೇಶಿಸಿದ್ದಾರೆ. ಕೇವಲ ಮರಣದಂಡನೆ ಮಾತ್ರವಲ್ಲದೆ, 20 ಸಾವಿರ ರೂಪಾಯಿ ದಂಡವನ್ನೂ ವಿಧಿಸುವ ಮೂಲಕ ಕಾನೂನು ತನ್ನ ಚಾಟಿ ಬೀಸಿದೆ. ಸರ್ಕಾರಿ ಅಭಿಯೋಜಕಿ ಪಿ. ವೀಣಾ ಅವರು ಸಂತ್ರಸ್ತರ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು.

45
ಮಗನ ಕಣ್ಣೆದುರೇ ನಡೆದಿದ್ದ ರಕ್ತಪಾತ
Image Credit : Asianet News

ಮಗನ ಕಣ್ಣೆದುರೇ ನಡೆದಿದ್ದ ರಕ್ತಪಾತ

ಈ ಪ್ರಕರಣದ ಅತ್ಯಂತ ಕರುಣಾಜನಕ ಸಂಗತಿಯೆಂದರೆ, ಹಂತಕ ಗೋವಿಂದಪ್ಪ ಎಂಟು ವರ್ಷದ ಪುಟ್ಟ ಬಾಲಕನ ಕಣ್ಣೆದುರೇ ಆತನ ತಂದೆ-ತಾಯಿಯನ್ನು ಕಡಿದು ಹಾಕಿದ್ದ. ಅಂದು ತಂದೆ-ತಾಯಿಯನ್ನು ಉಳಿಸಿಕೊಳ್ಳಲು ಆ ಪುಟ್ಟ ಕಂದ ಅದೆಷ್ಟು ಗೋಳಾಡಿದ್ದರೂ, ಮನ ಕರಗದ ಆ ಕಟುಕ ರಾಕ್ಷಸನಂತೆ ವರ್ತಿಸಿದ್ದ. ಅಂದಿನಿಂದ ಇಂದಿನವರೆಗೆ ನಡೆದ ಸುದೀರ್ಘ ಕಾನೂನು ಹೋರಾಟದಲ್ಲಿ ಇಂದು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ, ಇದೊಂದು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ (Rarest of Rare Case) ಎಂದು ಪರಿಗಣಿಸಿ ಆರೋಪಿಗೆ ಗಲ್ಲು ಶಿಕ್ಷೆಯನ್ನೇ ಅಂತಿಮಗೊಳಿಸಿದೆ.

55
ನ್ಯಾಯ ಸಿಕ್ಕ ಸಂಭ್ರಮ:
Image Credit : Asianet News

ನ್ಯಾಯ ಸಿಕ್ಕ ಸಂಭ್ರಮ:

ಈ ತೀರ್ಪು ಹೊರಬರುತ್ತಿದ್ದಂತೆ ಸಂತ್ರಸ್ತ ಕುಟುಂಬಕ್ಕೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ. ಪುಟ್ಟ ಬಾಲಕನ ಬದುಕನ್ನೇ ಕಸಿದುಕೊಂಡಿದ್ದ ಆ ನರಹಂತಕನಿಗೆ ಸಿಕ್ಕ ಗಲ್ಲು ಶಿಕ್ಷೆಯು ಸಮಾಜದಲ್ಲಿ ಕ್ರೂರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಅಕ್ರಮ ಸಂಬಂಧದ ವ್ಯಸನಕ್ಕೆ ಬಿದ್ದು ಒಂದು ಸುಂದರ ಕುಟುಂಬವನ್ನೇ ಸರ್ವನಾಶ ಮಾಡಿದ ಕಾಮಾಂಧನಿಗೆ ಕಾನೂನು ತಕ್ಕ ಶಾಸ್ತಿ ಮಾಡಿದೆ. ಐದು ವರ್ಷಗಳ ಹಿಂದಿನ ಆ ರಕ್ತಸಿಕ್ತ ಅಧ್ಯಾಯಕ್ಕೆ ಈಗ ನ್ಯಾಯಾಲಯದ ತೀರ್ಪಿನ ಮೂಲಕ ನ್ಯಾಯಯುತ ಅಂತ್ಯ ಸಿಕ್ಕಿದೆ. ಈ ಐತಿಹಾಸಿಕ ತೀರ್ಪು ಸಮಾಜದಲ್ಲಿ ಸೈತಾನನಂತೆ ವರ್ತಿಸುವವರಿಗೆ ಪಾಠವಾಗಲಿದೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ನ್ಯಾಯಾಲಯ
ಚಿಕ್ಕಮಗಳೂರು
ಕ್ರೈಮ್ ನ್ಯೂಸ್
Latest Videos
Recommended Stories
Recommended image1
ಕೆಎಸ್‌ಆರ್‌ಟಿಸಿ ಪಯಣದಲ್ಲಿ ಪಲ್ಲಕ್ಕಿ ವೈಭವ, 115 ನೂತನ ಬಸ್‌ಗಳ ಲೋಕಾರ್ಪಣೆ, ಯಾವ ರೂಟ್‌ನಲ್ಲಿ ಸಂಚಾರ?
Recommended image2
ಕಲ್ಯಾಣ ಕರ್ನಾಟಕ ಹೆಬ್ಬಾಗಿಲಲ್ಲಿ ಹೊಸ ವಿಮಾನ ನಿಲ್ದಾಣ; ಬಳ್ಳಾರಿ, ಹಂಪಿ, ಹೊಸಪೇಟೆ, ಕೊಪ್ಪಳಕ್ಕೂ ಹತ್ತಿರ!
Recommended image3
ಕುಮಾರ ಪರ್ವತ ಚಾರಣಕ್ಕೆ ಹೋಗುವ ಪ್ಲಾನ್ ಇದೆಯಾ? ಸರ್ಕಾರದ ಹೊಸ ನಿಯಮಗಳು ತಿಳ್ಕೊಳ್ಳಿ!
Related Stories
Recommended image1
ಅನೇಕಲ್ ಕಿಡ್ನಾಪ್ & ಹತ್ಯೆ ಕೇಸ್‌, ನಮ್ಮ ಕಮ್ಯೂನಿಟಿ ಕೊಲೆ ಮಾಡಿಲ್ಲ ಎಂದ ಪ್ರದೀಪ್ ಈಶ್ವರ್
Recommended image2
ಬೆಂಗಳೂರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಗುಂಡ್ಲುಪೇಟೆ ಕಾಡಿನಲ್ಲಿ ಭೀಕರ ಹತ್ಯೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved