- Home
- Karnataka Districts
- ಹೆಂಗಸರ ನೈಟಿ ತೊಟ್ಟು ಬಂದು ದೇವರ ಹುಂಡಿಗೆ ಕನ್ನ ಹಾಕಿದ ಖದೀಮ! CCTVಯಲ್ಲಿ ಚೋರನ ಕೃತ್ಯ ಸೆರೆ
ಹೆಂಗಸರ ನೈಟಿ ತೊಟ್ಟು ಬಂದು ದೇವರ ಹುಂಡಿಗೆ ಕನ್ನ ಹಾಕಿದ ಖದೀಮ! CCTVಯಲ್ಲಿ ಚೋರನ ಕೃತ್ಯ ಸೆರೆ
ಚಿಕ್ಕಮಗಳೂರಿನ ಶಂಕರಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗುರುತು ಸಿಗಬಾರದೆಂದು ನೈಟಿ ಧರಿಸಿ ಬಂದ ಕಳ್ಳ, ಹುಂಡಿಯಲ್ಲಿದ್ದ ನೋಟುಗಳನ್ನು ಮಾತ್ರ ಕದ್ದು ಚಿಲ್ಲರೆ ನಾಣ್ಯಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯದ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು (ಜು.26): ದೇವಸ್ಥಾನಗಳಲ್ಲಿ ಕಳ್ಳತನ ನಡೆಯುವುದು ಹೊಸದೇನಲ್ಲ. ಆದರೆ, ಪತ್ತೆಯಾಗಬಾರದು ಎಂದು ಕಳ್ಳರು ಹೂಡುವ ತಂತ್ರಗಳು ಮಾತ್ರ ಪೊಲೀಸರಿಗಷ್ಟೇ ಅಲ್ಲದೆ ಸಾರ್ವಜನಿಕರಿಗೂ ಅಚ್ಚರಿ ಮೂಡಿಸುತ್ತವೆ. ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹುದೇ ಒಂದು ವಿಚಿತ್ರ ಹಾಗೂ ಕತರ್ ನಾಕ್ ಕಳ್ಳತನ ಘಟನೆ ನಡೆದಿದ್ದು, ಕಳ್ಳನ ನೈಟಿ ಜಿಮಿಕ್ ಕಂಡು ಗ್ರಾಮಸ್ಥರು ಮತ್ತು ಪೊಲೀಸರು ಬೆಚ್ಚಿಬಿದ್ದಿದ್ದಾರೆ!
ನೈಟಿ ಧರಿಸಿ ಬಂದ ಖದೀಮ!
ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಅಜ್ಜಂಪುರ (Ajjampura) ತಾಲೂಕಿನ ಜಲ್ಲದೀಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪ್ರಸಿದ್ಧ ಶಂಕರಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ (Shankaralingeshwara Swamy Temple) ಮಧ್ಯರಾತ್ರಿ ನುಗ್ಗಿದ ಕಳ್ಳ, ದೇವರ ಹುಂಡಿಗೆ ಕನ್ನ ಹಾಕಿದ್ದಾನೆ. ಆದರೆ, ಇಲ್ಲಿ ವಿಶೇಷ ಏನೆಂದರೆ ತನ್ನ ಗುರುತು ಸಿಗಬಾರದು ಎಂಬ ಕಾರಣಕ್ಕೆ ಈತ ಮಹಿಳೆಯರು ಧರಿಸುವ 'ನೈಟಿ' (Nighty) ತೊಟ್ಟು ಬಂದಿದ್ದನು!
ನೋಟು ಲಪಟಾಯಿಸಿ, ಚಿಲ್ಲರೆ ಅಲ್ಲೇ ಬಿಟ್ಟ!
ಮೊನ್ನೆ ಮಧ್ಯರಾತ್ರಿ ಸುಮಾರು 1:45 ರ ವೇಳೆಗೆ ದೇವಸ್ಥಾನದ ಆವರಣಕ್ಕೆ ನುಗ್ಗಿದ ಈ ಖದೀಮ, ಮೈ ಮೇಲೆಲ್ಲಾ ಹೊದಿಕೆ ಹಾಕ್ಕೊಂಡು ಅತಿ ಚಾಣಾಕ್ಷತನದಿಂದ ಹುಂಡಿಯಲ್ಲಿದ್ದ ಹಣವನ್ನು ಕದ್ದಿದ್ದಾನೆ. ಹುಂಡಿಯಲ್ಲಿದ್ದ ಕಾಗದದ ನೋಟುಗಳನ್ನು ಮಾತ್ರ ಕಳವು ಮಾಡಿ, ಚಿಲ್ಲರೆ ನಾಣ್ಯಗಳನ್ನು (Coins) ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
CCTVಯಲ್ಲಿ ಸೆರೆಯಾಯ್ತು ಕಳ್ಳನ ಕಿಲಾಡಿ ಆಟ!
ಕಳ್ಳತನದ ಸಂಪೂರ್ಣ ದೃಶ್ಯಾವಳಿಗಳು ದೇವಸ್ಥಾನದ ಸಿಸಿಟಿವಿ (CCTV Camera) ಕ್ಯಾಮೆರಾದಲ್ಲಿ ಸೆರೆಯಾಗಿವೆ. ನೈಟಿ ಧರಿಸಿ, ಮುಖ ಮುಚ್ಚಿಕೊಂಡು ಹುಂಡಿ ಒಡೆಯುವ ಕಳ್ಳನ ಕೃತ್ಯ ಈಗ ವೈರಲ್ ಆಗಿದೆ. ಬೆಳಿಗ್ಗೆ ದೇವಸ್ಥಾನಕ್ಕೆ ಬಂದ ಅರ್ಚಕರು ಹಾಗೂ ಸ್ಥಳೀಯರು ಹುಂಡಿ ಒಡೆದಿರುವುದನ್ನು ನೋಡಿ ತಕ್ಷಣ ಅಜ್ಜಂಪುರ ಪೊಲೀಸ್ ಠಾಣೆಗೆ (Ajjampura Police Station) ದೂರು ನೀಡಿದ್ದಾರೆ.
ಜಲದಿಹಳ್ಳಿ ಗ್ರಾಮಸ್ಥರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಅಜ್ಜಂಪುರ ಪೊಲೀಸರು, ಸಿಸಿಟಿವಿ ಫೂಟೇಜ್ (CCTV Footage) ಆಧರಿಸಿ ಈ ಕತರ್ ನಾಕ್ 'ನೈಟಿ ಕಳ್ಳ'ನ ಪತ್ತೆಗಾಗಿ ಬಲೆ ಬೀಸಿದ್ದಾರೆ. ದೇವರ ಆಸ್ತಿಗೇ ಕನ್ನ ಹಾಕಿದ ಈ ಖದೀಮನ ವಿಚಿತ್ರ ಐಡಿಯಾ ಈಗ ಜಿಲ್ಲಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿ

