ಚಾಮರಾಜನಗರದಲ್ಲಿ ಲಾರಿ- ಕಾರು ಭೀಕರ ಅಪಘಾತ, ಗರ್ಭಿಣಿ ಹಾಗೂ ಚಾಲಕ ಸಾವು
ಚಾಮರಾಜನಗರದಲ್ಲಿ ಲಾರಿ- ಕಾರು ಭೀಕರ ಅಪಘಾತ, ಗರ್ಭಿಣಿ ಹಾಗೂ ಚಾಲಕ ಸಾವು, ಘಟನೆಯಲ್ಲಿ 9 ವರ್ಷದ ಬಾಲಕ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ಇಂದು ಬೆಳಗ್ಗೆ ನಡೆದ ಘಟನೆಗೆ ಆತಂಕ ತರಿಸಿದೆ.

ಚಾಮರಾಜನಗರದಲ್ಲಿ ಭೀಕರ ಅಪಘಾತ
ಚಾಮರಾಜನಗರ ಜನ ಮಳೆ, ಬೆಳೆ ಕುರಿತು ಲೆಕ್ಕಾಚಾರದಲ್ಲಿರುವಾಗಲೇ ಬೆಳ್ಳಂಬೆಳಗ್ಗೆ ಭೀಕರ ಅಪಘಾತಕ್ಕೆ ಬೆಚ್ಚಿ ಬಿದ್ದಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ-ಕೇರಳ ರಸ್ತೆಯ ಮದ್ದಯ್ಯನಹುಂಡಿ ಬಳಿ ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿದೆ.
ಗರ್ಭಿಣಿ , ಕಾರು ಚಾಲಕ ಸಾವು
ಕೇರಳದಿಂದ ಚಾಮರಾಜನಗರದತ್ತ ಆಗಮಿಸುತ್ತಿದ್ದ ಕಾರಿಗೆ ಕೇರಳದತ್ತ ತೆರಳುತ್ತಿದ್ದ ಲಾರಿ ಡಿಕ್ಕಿಯಾಗಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಕಾರಿನಲ್ಲಿದ್ದ ಗರ್ಭಿಣಿ ಹಾಗೂ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕಾರಿನಲ್ಲಿದ್ದ ಮತ್ತಿಬ್ಬರಿಗೆ ಗಾಯ
ಕಾರಿನಲ್ಲಿದ್ದ ಒಟ್ಟು ನಾಲ್ವರ ಪೈಕಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದರೆ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.
ಅತೀ ವೇಗದಿಂದ ಅಪಘಾತ
ಅತೀ ವೇಗದ ಚಾಲನೆಯೇ ಅಪಘಾತ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ. ಅತೀ ವೇಗದ ಕಾರಣ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಲಾರಿಗೆ ಡಿಕ್ಕಿಯಾದ ರಭಸಕ್ಕೆ ಕಾರು ರಸ್ತೆಯಿಂದ ಇಳಿಜಾರು ಪ್ರದೇಶದಲ್ಲಿ ಬಿದ್ದಿದೆ. ತಕ್ಷಣವೇ ಸ್ಛಳೀಯರು ನೆರವಿಗೆ ಧಾವಿಸಿದ್ದಾರೆ.
ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
ಗುಂಡ್ಲುಪೇಟೆ-ಕೇರಳ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ ಕಾರಣ ಭಾರಿ ಟ್ರಾಫಿಕ್ ಜಾಮ್ ಸಂಭವಿಸಿದೆ. ಮದ್ದಯ್ಯನಹುಂಡಿ ಬಳಿಕ ಘಟನೆ ಸಂಭವಿಸಿದೆ. ಲಾರಿ ರಸ್ತೆಯ ಅಡ್ಡಲಾಗಿ ನಿಂತಿದ್ದರೆ, ಕಾರು ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿತ್ತು.

