MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಉದ್ಯಮಿ ಸಿ.ಜೆ.ರಾಯ್ ಕೇಸ್‌: ಎಸ್‌ಐಟಿ ಅಧಿಕಾರಿಗಳಿಗೆ ಎದುರಾದ ಮಿಲಿಯನ್ ಡಾಲರ್ ಪ್ರಶ್ನೆ!

ಉದ್ಯಮಿ ಸಿ.ಜೆ.ರಾಯ್ ಕೇಸ್‌: ಎಸ್‌ಐಟಿ ಅಧಿಕಾರಿಗಳಿಗೆ ಎದುರಾದ ಮಿಲಿಯನ್ ಡಾಲರ್ ಪ್ರಶ್ನೆ!

ಸಿ.ಜೆ. ರಾಯ್ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ರಾಯ್‌ಗೆ ಯಾವುದೇ ಕೌಟುಂಬಿಕ ಅಥವಾ ಆರ್ಥಿಕ ಸಮಸ್ಯೆಗಳಿರಲಿಲ್ಲ, ಆದರೆ ಅವರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು. ಈ ಮಾನಸಿಕ ಒತ್ತಡದ ಹಿಂದಿನ ನಿಜವಾದ ಕಾರಣವನ್ನು ಪತ್ತೆಹಚ್ಚಲು ಅಧಿಕಾರಿಗಳು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

1 Min read
Author : Mahmad Rafik
| Updated : Feb 07 2026, 10:12 AM IST
Share this Photo Gallery
  • FB
  • TW
  • Linkdin
  • Whatsapp
15
ಉದ್ಯಮಿ ಸಿ.ಜೆ. ರಾಯ್ ಆತ್ಮ*ಹತ್ಯೆ ಪ್ರಕರಣ
Image Credit : Asianet News

ಉದ್ಯಮಿ ಸಿ.ಜೆ. ರಾಯ್ ಆತ್ಮ*ಹತ್ಯೆ ಪ್ರಕರಣ

ಉದ್ಯಮಿ ಸಿ.ಜೆ. ರಾಯ್ ಆತ್ಮ*ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳಿಗೆ ಮಿಲಿಯನ್ ಡಾಲರ್ ಪ್ರಶ್ನೆಯೊಂದು ಎದುರಾಗಿದೆ. ಈ ಪ್ರಶ್ನೆಯ ಉತ್ತರಕ್ಕಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಹಾಗೆಯೇ ಪ್ರಕರಣವನ್ನು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ.

25
ಆದಾಯ ತೆರಿಗೆ ಇಲಾಖೆಯ ದಾಳಿ
Image Credit : Asianet News

ಆದಾಯ ತೆರಿಗೆ ಇಲಾಖೆಯ ದಾಳಿ

ಉದ್ಯಮಿ ಸಿ.ಜೆ.ರಾಯ್ ಸಾವಿಗೆ ಕೇವಲ ಆದಾಯ ತೆರಿಗೆ ಇಲಾಖೆಯ ದಾಳಿ ಕಾರಣನಾ ಅಥವಾ ಬೇರೆ ಯಾವುದಾದ್ರು ಸಮಸ್ಯೆಯನ್ನು ಎದುರಿಸುತ್ತಿದ್ರಾ ಎಂಬುದರ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ಸ್ಪಷ್ಟತೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಸಾವಿನ ನಿಖರ ಕಾರಣಕ್ಕಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

Related Articles

Related image1
ಸಿಜೆ ರಾಯ್ ಬೆನಲ್ಲೇ ಮತ್ತೊಬ್ಬ ಉದ್ಯಮಿ ದುರಂತ ಸಾವು, 17 ಫ್ಲೋರ್‌ನಿಂದ ಜಿಗಿದ ಮುಲ್ತಾನಿ ಬೇಕರಿ ಮಾಲೀಕ
Related image2
ಸಿಜೆ ರಾಯ್ ಸಾವಿಗೂ ಮುನ್ನ ನಡೆದಿತ್ತು ಮಹತ್ವದ ಘಟನೆ, ದಿಢೀರ್ ದಿಕ್ಕು ಬದಲಿಸಿದ್ದ ಉದ್ಯಮಿ
35
ಕೌಟುಂಬಿಕ ಜೀವನ
Image Credit : Asianet News

ಕೌಟುಂಬಿಕ ಜೀವನ

ಸಿ.ಜೆ.ರಾಯ್‌ ಅವರು ಯಾವುದೇ ಉದ್ಯಮ ಸಂಬಂಧ ಸಾಲವಿರಲಿಲ್ಲ. ಬ್ಯಾಂಕ್‌ನಿಂದ ಯಾವುದೇ ಲೋನ್ ಪಡೆದಿರಲಿಲ್ಲ. ಕೌಟುಂಬಿಕ ಜೀವನದಲ್ಲಿ ಯಾವುದೇ ಸಮಸ್ಯೆಯಿರಲಿಲ್ಲ. ಸೋದರ ಸಂಬಂಧಿಗಳ ಜೊತೆಯಲ್ಲೂ ಯಾವುದೇ ಮನಸ್ತಾಪ ಇರಲಿಲ್ಲ.

ಇದನ್ನೂ ಓದಿ: ಉದ್ಯಮಿ ಸಿಜೆ ರಾಯ್ ಪ್ರಕರಣ: ಸಮಜಾಯಿಷಿಗೆ ಇಳಿದು ಕೇಂದ್ರದ ಮೊರೆ ಹೋದ ಐಟಿ ಅಧಿಕಾರಿಗಳು

45
ದುಬೈ ಕೇರಳದಲ್ಲಿನ ಹೂಡಿಕೆ
Image Credit : Asianet News

ದುಬೈ ಕೇರಳದಲ್ಲಿನ ಹೂಡಿಕೆ

ಸಿ.ಜೆ.ರಾಯ್ ಅವರು ಇತ್ತೀಚೆಗೆ ಹೊಸ ಪ್ರಾಜೆಕ್ಟ್ ಗಳನ್ನು ಘೋಷಣೆ ಮಾಡಿದ್ದರು. ಆತ್ಮ*ಹತ್ಯೆ ಸಂದರ್ಭದಲ್ಲಿ ದುಬೈ ಕೇರಳದಲ್ಲಿನ ಹೂಡಿಕೆಯಿಂದ ನಷ್ಟವಾಗಿದೆ ಅನ್ನೋ ಮಾತು ಕೇಳಿ ಬಂದಿತ್ತು. ಉದ್ಯಮದಲ್ಲಿ ನಷ್ಟವಾಗಿರೋದ್ರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಿಲ್ಲ. ಈ ಸಂಬಂಧವೂ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಖ್ಯಾತ ನಟಿ, ಮಾಡೆಲ್ & ರೆಸಾರ್ಟ್: ಇದೆಲ್ಲವೂ ಆಗರ್ಭ ಶ್ರೀಮಂತರ ತೆವಲುಗಳು ಎಂದ ಚಂದ್ರಚೂಡ

55
 ಆರೋಗ್ಯದ ಸಮಸ್ಯೆ
Image Credit : Social Media

ಆರೋಗ್ಯದ ಸಮಸ್ಯೆ

ಸಿ.ಜೆ.ರಾಯ್ ಅವರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು. ಇದಕ್ಕಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಮಾನಸಿಕ ಒತ್ತಡ ಹೊರತುಪಡಿಸಿ ಸಿ.ಜೆ.ರಾಯ್ ಅವರಿಗೆ ಯಾವುದೇ ಆರೋಗ್ಯದ ಸಮಸ್ಯೆಗಳಿರಲಿಲ್ಲ. ಈ ಹಿಂದೆ ಚಿಕಿತ್ಸೆ ನೀಡ್ತಿದ್ದ ವೈದ್ಯರಿಂದ ಸಿ.ಜೆ.ರಾಯ್ ಅವರ ಆರೋಗ್ಯದ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಹತ್ತು ಹಲವು ಆಯಾಮಗಳಲ್ಲಿ ತನಿಖೆ ನಡೆಸ್ತಿದ್ರು ಮಾನಸಿಕ ಒತ್ತಡದ ಹಿಂದಿನ ಕಾರಣವೇನು ಅನ್ನೋದು ಪತ್ತೆಯಾಗ್ತಿಲ್ಲ.

ಇದನ್ನೂ ಓದಿ: ರೆಸಾರ್ಟ್‌ನಲ್ಲಿ ನಟಿಯರೊಂದಿಗೆ 'ರಾಯ್' ಮಿಡ್‌ನೈಟ್ ಫೋಟೋ ಸೆಷನ್: ಸ್ಫೋಟಕ ಮಾಹಿತಿ ಹೇಳಿದ ಚಂದ್ರಚೂಡ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸಿ.ಜೆ. ರಾಯ್
ಬೆಂಗಳೂರು
ಎಸ್.ಐ.ಟಿ.

Latest Videos
Recommended Stories
Recommended image1
ಬೆಂಗಳೂರಿನಲ್ಲಿ ಗರ್ಭಿಣಿ ಬೆಕ್ಕಿನ ಅಪಹರಣ; 9 ಜನರ ವಿರುದ್ಧ FIR ದಾಖಲು! ಇಂಥ ಘಟನೆಗೆ ಕಾರಣ ಏನು?
Recommended image2
'ಸಿಎಂ ಆಯ್ಕೆ ಮಾಡಲು ನಂದೂ ಒಂದು ವೋಟ್ ಇದೆ' 5 ವರ್ಷ ನಮ್ಮ ತಂದೆಯೇ ಸಿಎಂ ಎಂದ ಯತೀಂದ್ರಗೆ ಡಿಕೆಶಿ ಆಪ್ತ ಟಾಂಗ್!
Recommended image3
ಖಾಸಗಿ ಕ್ಷಣ ಸೆರೆ ಹಿಡಿದು ಮಹಿಳಾ ಅಧಿಕಾರಿಗೆ ಧಮ್ಕಿ ಪ್ರಕರಣ: ಮಹಿಳಾ ಆಯೋಗದಿಂದ ಪತ್ರ
Related Stories
Recommended image1
ಸಿಜೆ ರಾಯ್ ಬೆನಲ್ಲೇ ಮತ್ತೊಬ್ಬ ಉದ್ಯಮಿ ದುರಂತ ಸಾವು, 17 ಫ್ಲೋರ್‌ನಿಂದ ಜಿಗಿದ ಮುಲ್ತಾನಿ ಬೇಕರಿ ಮಾಲೀಕ
Recommended image2
ಸಿಜೆ ರಾಯ್ ಸಾವಿಗೂ ಮುನ್ನ ನಡೆದಿತ್ತು ಮಹತ್ವದ ಘಟನೆ, ದಿಢೀರ್ ದಿಕ್ಕು ಬದಲಿಸಿದ್ದ ಉದ್ಯಮಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved