MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ರೆಸಾರ್ಟ್‌ನಲ್ಲಿ ನಟಿಯರೊಂದಿಗೆ 'ರಾಯ್' ಮಿಡ್‌ನೈಟ್ ಫೋಟೋ ಸೆಷನ್: ಸ್ಫೋಟಕ ಮಾಹಿತಿ ಹೇಳಿದ ಚಂದ್ರಚೂಡ

ರೆಸಾರ್ಟ್‌ನಲ್ಲಿ ನಟಿಯರೊಂದಿಗೆ 'ರಾಯ್' ಮಿಡ್‌ನೈಟ್ ಫೋಟೋ ಸೆಷನ್: ಸ್ಫೋಟಕ ಮಾಹಿತಿ ಹೇಳಿದ ಚಂದ್ರಚೂಡ

ಸಿ.ಜೆ.ರಾಯ್ ಆತ್ಮಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ರಾಯ್ ಅವರು ಹನಿಟ್ರ್ಯಾಪ್‌ನಿಂದ ಹೇಗೆ ಬಚಾವ್ ಆಗಿದ್ದರು ಮತ್ತು ಅವರು ಕಾಂಗ್ರೆಸ್ ಪಕ್ಷಕ್ಕೆ ಫಂಡರ್ ಆಗಿದ್ದರು ಎಂಬ ವಿಷಯಗಳನ್ನು ಚಂದ್ರಚೂಡ ಬಹಿರಂಗಪಡಿಸಿದ್ದಾರೆ.

1 Min read
Author : Mahmad Rafik
Published : Feb 01 2026, 12:07 PM IST
Share this Photo Gallery
  • FB
  • TW
  • Linkdin
  • Whatsapp
15
ನಿರ್ದೇಶಕ ಚಕ್ರವರ್ತಿ ಚಂದ್ರಚೂಡ
Image Credit : Asianet News

ನಿರ್ದೇಶಕ ಚಕ್ರವರ್ತಿ ಚಂದ್ರಚೂಡ

ಉದ್ಯಮಿ ಸಿ.ಜೆ.ರಾಯ್ ಆತ್ಮ*ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಹಲವು ಸ್ಪೋಟಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಏಕಕಾಲಕ್ಕೆ 50 ಸಿನಿಮಾಗಳನ್ನು ಮಾಡಲು ರಾಯ್ ಮುಂದಾಗಿದ್ದು, ತಮ್ಮನ್ನು ಸೇರಿದಂತೆ ಸುಮಾರು 25 ನಿರ್ದೇಶಕರಿಗೆ ಮುಂಗಡ ಹಣ ನೀಡಿದ್ದರು ಎಂಬಿತ್ಯಾದಿ ಬಣ್ಣದ ಲೋಕದ ನಂಟಿನ ಮಾಹಿತಿಯನ್ನು ಚಕ್ರವರ್ತಿ ಚಂದ್ರಚೂಡ ರಿವೀಲ್ ಮಾಡಿದ್ದಾರೆ.

25
 ಹೇಗೆ ಹನಿಟ್ರ್ಯಾಪ್‌ನಿಂದ ಬಚಾವ್ ಆದ್ರು?
Image Credit : Asianet News

ಹೇಗೆ ಹನಿಟ್ರ್ಯಾಪ್‌ನಿಂದ ಬಚಾವ್ ಆದ್ರು?

ಇದೀಗ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಚಕ್ರವರ್ತಿ ಚಂದ್ರಚೂಡ ಮತ್ತೊಂದು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಸ್ವತಃ ಈ ವಿಷಯವನ್ನು ರಾಯ್ ಅವರೇ ತಮ್ಮೊಂದಿಗೆ ಶೇರ್ ಮಾಡಿಕೊಂಡಿದ್ರು ಅಂತಾನೂ ಹೇಳಿದ್ದಾರೆ. ಇದೇ ವೇಳೆ ರಾಯ್ ಹೇಗೆ ಹನಿಟ್ರ್ಯಾಪ್‌ನಿಂದ ಬಚಾವ್ ಆದ್ರು ಎಂಬುದನ್ನು ಹೇಳಿದ್ದಾರೆ.

Related Articles

Related image1
ಉದ್ಯಮಿ ಸಿಜೆ ರಾಯ್ ಪ್ರಕರಣ: ಸಮಜಾಯಿಷಿಗೆ ಇಳಿದು ಕೇಂದ್ರದ ಮೊರೆ ಹೋದ ಐಟಿ ಅಧಿಕಾರಿಗಳು
Related image2
ಖ್ಯಾತ ನಟಿ, ಮಾಡೆಲ್ & ರೆಸಾರ್ಟ್: ಇದೆಲ್ಲವೂ ಆಗರ್ಭ ಶ್ರೀಮಂತರ ತೆವಲುಗಳು ಎಂದ ಚಂದ್ರಚೂಡ
35
 ಮಿಡ್‌ನೈಟ್ ಸೆಷನ್ ಫೋಟೋ
Image Credit : Asianet News

ಮಿಡ್‌ನೈಟ್ ಸೆಷನ್ ಫೋಟೋ

2015-16ರಲ್ಲಿ ರಾಯ್ ಆಗತಾನೇ ಪರಿಚಯವಾಗಿದ್ರು. ಒಮ್ಮೆ ಕಾಲ್ ಮಾಡಿದ್ದ ರಾಯ್, ನಾನು ಮಿಡ್‌ನೈಟ್ ಸೆಷನ್ ಫೋಟೋ ಅಂತ ಮಾಡಿಸಿದ್ದೆ. ಮಿಡ್‌ನೈಟ್ ಸೆಷನ್ ಫೋಟೋ ಅಂದ್ರೆ ಎಲ್ಲರಿಗೂ ಅರ್ಥವಾಗುತ್ತದೆ. ಆಗ ಸಿನಿಮಾ ಮಾಡಲು ರಾಯ್ ಮುಂದಾಗಿದ್ದ ಸಮಯ. ರೆಸಾರ್ಟ್‌ನ ಮ್ಯಾನೇಜರ್‌ಗಳು ಕೆಲವು ನಟಿಯರನ್ನು ಕರೆಸಿದ್ದರು. ಬಂದಿದ್ದವರು ಪಾರ್ಟಿ ಎಂಜಾಯ್ ಮಾಡಿ ವಸಂತ ಕಾಲ ಕಳೆದು ವೈಶಾಖ ದಿನದಂದು ಹೊರಟು ಹೋಗಿದ್ದರು.

45
ಅದು ಪೂರ್ಣ ಪ್ರಮಾಣದ ಹನಿಟ್ರ್ಯಾಪ್?
Image Credit : Instagram

ಅದು ಪೂರ್ಣ ಪ್ರಮಾಣದ ಹನಿಟ್ರ್ಯಾಪ್?

ರೆಸಾರ್ಟ್‌ನಿಂದ ಹೋದ ಬಳಿಕ ನಟಿಯರು ರಾಯ್ ಜೊತೆಗೆ ನಡೆದುಕೊಳ್ಳುವ ರೀತಿ, ಕಳಿಸುವ ಮಸೇಜ್ ದಾಟಿ ಸಹ ಬದಲಾಗಿತ್ತು. ಅದು ಪೂರ್ಣ ಪ್ರಮಾಣದ ಹನಿಟ್ರ್ಯಾಪ್ ಆಗಿತ್ತು. ಈ ಬಗ್ಗೆ ನನ್ನೊಂದಿಗೆ ಮಾತಾಡಿದಾಗ, ನೀವೇನಾದ್ರೂ ಭಾವನಾತ್ಮಕವಾಗಿ ಅಟ್ಯಾಚ್ ಆಗಿಲ್ಲ ಅಂದ್ರೆ ನಿಮ್ಮದೇ ಶೈಲಿಯಲ್ಲಿ ಹ್ಯಾಂಡಲ್‌ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದೆ. ನಂತರ ಅದು ಅಲ್ಲಿಗೆ ಮುಗಿತು ಎಂದು ಚಂದ್ರಚೂಡ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಪ್ಯಾಲೇಸ್‌ನಂಥ ಮನೆಯಿದ್ರೂ ಹೋಟೆಲ್ ರೂಮ್ ಫಿಕ್ಸ್; 24ನೇ ಮಹಡಿಯ ಕೋಣೆ ರಹಸ್ಯ

55
 ಕಾಂಗ್ರೆಸ್‌ಗೆ ಫಂಡರ್
Image Credit : Asianet News

ಕಾಂಗ್ರೆಸ್‌ಗೆ ಫಂಡರ್

ದುಬೈವರೆಗೆ ಲಿಂಕ್ ಇರೋವಂತಹ ಆಗರ್ಭ ಶ್ರೀಮಂತರೊಂದಿಗೆ ಈ ರೀತಿಯಲ್ಲಿ ನಡೆಯುತ್ತಿರುತ್ತದೆ. ವೀರಪ್ಪ ಮೊಯ್ಲಿ ಅವರ ಕಾಲದಿಂದಲೂ ರಾಯ್ ಕಾಂಗ್ರೆಸ್ ಜೊತೆಯಲ್ಲಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್‌ಗೆ ಫಂಡರ್ ಸಹ ಆಗಿದ್ದರು ಎಂಬ ವಿಷಯವನ್ನು ಸಹ ತಿಳಿಸಿದರು.

ಇದನ್ನೂ ಓದಿ: ಸಿಜೆ ರಾಯ್ ಕೊನೆ ಕ್ಷಣ ಹೇಗಿತ್ತು? ಜೊತೆಯಲ್ಲಿಯೇ ಇದ್ದ ಮ್ಯಾನೇಜರ್ ದೂರಿನಲ್ಲಿದೆ ಇಂಚಿಂಚು ಮಾಹಿತಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸಿ.ಜೆ. ರಾಯ್
ಬೆಂಗಳೂರು
ನಟಿ

Latest Videos
Budget 2026 : SIP Calculator
Monthly Investment
₹
Expected Annual Return
%
Investment Duration
Yr
Recommended Stories
Recommended image1
Bengaluru: ಅತ್ಯಾ*ಚಾರವೆಸಗಿ ಕೊಂದು ನೇಣಿಗೆ ಕೊರಳೊಡಿದ್ದ ಆರೋಪಿ; ಮನೆಯಲ್ಲಿದ್ರೂ ಮಗಳಿಗೆ ಗೊತ್ತಾಗಲೇ ಇಲ್ಲ
Recommended image2
ಕೊಟ್ಟೂರು ಮರ್ಯಾದೆಗೇಡು ಹತ್ಯೆ ಕೇಸಿಗೆ ಬಿಗ್ ಟ್ವಿಸ್ಟ್; ಕೊಲೆಯಾಗಿದ್ದು 3 ಆದ್ರೆ ಸತ್ತಿದ್ದು ನಾಲ್ವರು!
Recommended image3
ಚಂದಿರನ ಮೇಲೆ ಮನೆ ಕಟ್ಟಲು ಬೆಂಗಳೂರಿನ ಮಣ್ಣೇ ಚೆಂದ: ಗಗನಯಾತ್ರಿ ಶುಭಾಂಶು ಶುಕ್ಲಾ
Related Stories
Recommended image1
ಉದ್ಯಮಿ ಸಿಜೆ ರಾಯ್ ಪ್ರಕರಣ: ಸಮಜಾಯಿಷಿಗೆ ಇಳಿದು ಕೇಂದ್ರದ ಮೊರೆ ಹೋದ ಐಟಿ ಅಧಿಕಾರಿಗಳು
Recommended image2
ಖ್ಯಾತ ನಟಿ, ಮಾಡೆಲ್ & ರೆಸಾರ್ಟ್: ಇದೆಲ್ಲವೂ ಆಗರ್ಭ ಶ್ರೀಮಂತರ ತೆವಲುಗಳು ಎಂದ ಚಂದ್ರಚೂಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved