- Home
- Karnataka Districts
- Bengaluru Urban
- ಉದ್ಯಮಿ ಸಿಜೆ ರಾಯ್ ಪ್ರಕರಣ: ಸಮಜಾಯಿಷಿಗೆ ಇಳಿದು ಕೇಂದ್ರದ ಮೊರೆ ಹೋದ ಐಟಿ ಅಧಿಕಾರಿಗಳು
ಉದ್ಯಮಿ ಸಿಜೆ ರಾಯ್ ಪ್ರಕರಣ: ಸಮಜಾಯಿಷಿಗೆ ಇಳಿದು ಕೇಂದ್ರದ ಮೊರೆ ಹೋದ ಐಟಿ ಅಧಿಕಾರಿಗಳು
ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣವು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸೋದರನ ಆರೋಪಗಳ ಬೆನ್ನಲ್ಲೇ, ಆದಾಯ ತೆರಿಗೆ ಇಲಾಖೆಯು ಗೃಹ ಸಚಿವಾಲಯಕ್ಕೆ ಸ್ಪಷ್ಟೀಕರಣ ಪತ್ರವನ್ನು ಕಳುಹಿಸಿದ್ದು, ತಾವು ಯಾವುದೇ ಒತ್ತಡ ಹೇರಿಲ್ಲ ಮತ್ತು ತೆರಿಗೆ ವಂಚನೆ ತನಿಖೆ ನಡೆಸುತ್ತಿದ್ದೆವು ಎಂದು ತಿಳಿಸಿದೆ.

ಉದ್ಯಮಿ ಸಿ.ಜೆ. ರಾಯ್ ಪ್ರಕರಣ
ಉದ್ಯಮಿ ಸಿ.ಜೆ. ರಾಯ್ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸಿ.ಜೆ.ರಾಯ್ ಅವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಒತ್ತಡವಿತ್ತು ಎಂದು ಸೋದರ ಬಾಬು ರಾಯ್ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಐಟಿ ಅಧಿಕಾರಿಗಳು ಪ್ರಕರಣ ಸಂಬಂಧ ಸಮಜಾಯಿಷಿಗೆ ಇಳಿದಿದ್ದಾರೆ.
ಆದಾಯ ತೆರಿಗೆ ಇಲಾಖೆ
ಸಿ.ಜೆ. ರಾಯ್ ಅವರ ಆತ್ಮ*ಹತ್ಯೆ ಪ್ರಕರಣದ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ನೇರವಾಗಿ ಗೃಹ ಸಚಿವಾಲಯಕ್ಕೆ (Ministry of Home Affairs) ನೀಡಿದೆ ಎಂದು ತಿಳಿದು ಬಂದಿದೆ. ತನಿಖೆ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿಕೊಂಡಿದೆಯಂತೆ. ಗೃಹ ಸಚಿವಾಲಯಕ್ಕೆ ಮೂರು ಪುಟಗಳ ಸ್ಪಷ್ಟನೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಪತ್ರದಲ್ಲಿ ಏನಿದೆ?
ಉದ್ಯಮಿ ಸಿ.ಜೆ.ರಾಯ್ ಅವರು ಆದಾಯ ತೆರಿಗೆ ವಂಚನೆ ಮಾಡಿದ್ದರ ಬಗ್ಗೆ ತನಿಖೆ ನಡೆಸಲಾಗುತ್ತಿತ್ತು. ಒಂದು ತಿಂಗಳ ಹಿಂದೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ರಾಯ್ ಅವರ ಆಡಿಟಿಂಗ್‌ನಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತಿತ್ತು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಸುದೀರ್ಘ ಮೂರು ಪುಟಗಳ ಸ್ಪಷ್ಟನೆ
ಶುಕ್ರವಾರ ಸಿ.ಜೆ.ರಾಯ್ ಅವರಿಂದ ಯಾವುದೇ ಹೇಳಿಕೆಗಳನ್ನು ದಾಖಲಿಸಿಕೊಂಡಿಲ್ಲ. ನಾವು ಯಾವುದೇ ರೀತಿಯ ಒತ್ತಡವನ್ನು ಸಹ ರಾಯ್ ಮೇಲೆ ಹೇರಿಲ್ಲ. ರಾಜಕೀಯ ಪ್ರೇರಿತವಾಗಿ ತನಿಖೆ ನಡೆಯುವ ಸಾಧ್ಯತೆಗಳಿರೋದರಿಂದ ಗೃಹ ಸಚಿವಾಲಯ ಪ್ರಕರಣದ ಮೇಲೆ ಗಮನ ನೀಡಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ. ಜಂಟಿ ನಿರ್ದೇಶಕ ನಿತೀನ್ ಬಿಜು ಹೇಳಿಕೆ ಆಧರಿಸಿ ಸುದೀರ್ಘ ಮೂರು ಪುಟಗಳ ಸ್ಪಷ್ಟನೆಯನ್ನು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಖ್ಯಾತ ನಟಿ, ಮಾಡೆಲ್ & ರೆಸಾರ್ಟ್: ಇದೆಲ್ಲವೂ ಆಗರ್ಭ ಶ್ರೀಮಂತರ ತೆವಲುಗಳು ಎಂದ ಚಂದ್ರಚೂಡ
ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ
ಕಳೆದ 10 ವರ್ಷದಿಂದ ಉದ್ಯಮಿಗಳ ಮೇಲೆ ದಾಳಿ ಆಗ್ತಿದೆ. ರಾಜ್ಯದಲ್ಲಿ ಈ ರೀತಿಯಾಗಿ 2-3 ಘಟನೆಗಳು ಆಗಿವೆ. ಕೇಂದ್ರ ಸರ್ಕಾರದ ಮಾತು ಕೇಳದವರ ಮೇಲೆ ದಾಳಿ ಆಗ್ತಿದೆ. ಕೇಂದ್ರ ಸರ್ಕಾರ ಅದಾನಿ- ಅಂಬಾನಿ ಪರವಾಗಿ ಕೆಲಸ ಮಾಡುತ್ತಿದೆ. ಎಷ್ಟು ಕಿರುಕುಳ ಆಗಿದೆ ಅನ್ನೋದನ್ನ ನೀವೂ ಯೋಚಿಸಬೇಕಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ: CJ Roy Case: ಸಾಲ, ಬೆದರಿಕೆ, ಒತ್ತಡ: ಸೋದರನ ಸಾವಿನ ಕಾರಣ ಬಿಚ್ಚಿಟ್ರಾ ಬಾಬು ರಾಯ್?

