MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರು ಮೂಲಸೌಕರ್ಯಕ್ಕೆ ₹1.5 ಲಕ್ಷ ಕೋಟಿ: ಮೆಟ್ರೋ ಜಾಲ 500 ಕಿ.ಮೀ.ಗೆ ವಿಸ್ತರಣೆ ಗುರಿ, ಎಐ ವಿವಿ ಸ್ಥಾಪನೆ!

ಬೆಂಗಳೂರು ಮೂಲಸೌಕರ್ಯಕ್ಕೆ ₹1.5 ಲಕ್ಷ ಕೋಟಿ: ಮೆಟ್ರೋ ಜಾಲ 500 ಕಿ.ಮೀ.ಗೆ ವಿಸ್ತರಣೆ ಗುರಿ, ಎಐ ವಿವಿ ಸ್ಥಾಪನೆ!

'ಟಾರ್ಗೆಟ್ ಇಂಡಿಯಾ' ಕಾರ್ಯಕ್ರಮದಲ್ಲಿ,  ಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು 1.50 ಲಕ್ಷ ಕೋಟಿ ರೂ.ಗಳ ಬೃಹತ್ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಲ್ಲಿ 500 ಕಿ.ಮೀ. ಮೆಟ್ರೋ ವಿಸ್ತರಣೆ, 40 ಕಿ.ಮೀ. ಸುರಂಗ ರಸ್ತೆ ನಿರ್ಮಾಣ  ಸೇರಿವೆ.

2 Min read
Author : Gowthami K
Published : Jul 09 2026, 02:43 PM IST
Share this Photo Gallery
  • FB
  • TW
  • Linkdin
  • Whatsapp
16
ಟಾರ್ಗೆಟ್ ಇಂಡಿಯಾ ಡಿಕೆಶಿ ಹೇಳಿದ್ದೇನು?
Image Credit : Asianet News

ಟಾರ್ಗೆಟ್ ಇಂಡಿಯಾ ಡಿಕೆಶಿ ಹೇಳಿದ್ದೇನು?

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಪರ್ಯಾಯವಾಗಿ ಸುಗಮ ಸಂಚಾರ ಕಲ್ಪಿಸಲು ಮತ್ತು ರಾಜ್ಯದ ಎರಡು ಹಾಗೂ ಮೂರನೇ ಹಂತದ ನಗರಗಳ ಉದ್ಯಮ ಪ್ರಗತಿಗೆ ಬೂಸ್ಟರ್ ಡೋಸ್ ನೀಡಲು ರಾಜ್ಯ ಸರ್ಕಾರ ಬೃಹತ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ನಗರದ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ‘ಟಾರ್ಗೆಟ್ ಇಂಡಿಯಾ’ ಜಾಗತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ  ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರಿನ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗಾಗಿ ಬರೋಬ್ಬರಿ 1.50 ಲಕ್ಷ ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಮೆಟ್ರೋ ಮತ್ತು ಟನಲ್ ರಸ್ತೆಯೇ ಪರಿಹಾರ!
Image Credit : Asianet News

ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಮೆಟ್ರೋ ಮತ್ತು ಟನಲ್ ರಸ್ತೆಯೇ ಪರಿಹಾರ!

ನಗರದಲ್ಲಿ ಪ್ರತಿ ತಿಂಗಳು ಸರಾಸರಿ 30 ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿದ್ದು, ಸಂಚಾರ ದಟ್ಟಣೆ ನಿಯಂತ್ರಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಪ್ರತಿಯೊಬ್ಬ ಉದ್ಯೋಗಿಯೂ ಕಚೇರಿ ಮುಗಿಸಿ 30 ರಿಂದ 40 ನಿಮಿಷಗಳಲ್ಲಿ ಮನೆ ಸೇರಬೇಕು ಎನ್ನುವ ಗುರಿಯೊಂದಿಗೆ ಈ ಕೆಳಗಿನ ಬೃಹತ್ ಯೋಜನೆಗಳನ್ನು ರೂಪಿಸಲಾಗಿದೆ.

'ನಮ್ಮ ಮೆಟ್ರೊ' 500 ಕಿ.ಮೀ ವಿಸ್ತರಣೆ

ಸದ್ಯ 350 ಕಿ.ಮೀ. ಮಾರ್ಗದಲ್ಲಿ ಮೆಟ್ರೊ ಸಂಪರ್ಕ ಕಲ್ಪಿಸಲು ಯೋಜನೆ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ವೇಳೆಗೆ ಈ ಜಾಲವನ್ನು 500 ಕಿ.ಮೀ.ಗೆ ವಿಸ್ತರಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಲಾಗಿದೆ.

Related Articles

Related image1
Hebbal ಟ್ರಾಫಿಕ್‌ ಕಿರಿಕಿರಿಗೆ ಮುಕ್ತಿ, ವೆಟರ್ನರಿ ಕಾಲೇಜು ಆವರಣದಲ್ಲಿ ಸುರಂಗ ಮಾರ್ಗಕ್ಕೆ ಮಣ್ಣು ಪರೀಕ್ಷೆ ಆರಂಭ
Related image2
ಹೆಬ್ಬಾಳ ಬಳಿಕ ಬೆಂಗಳೂರಿಗೆ 6 ಪಥಗಳ ಮತ್ತೊಂದು ಸುರಂಗ ರಸ್ತೆ, ಡಾ.ರಾಜ್ ಸ್ಮಾರಕದಿಂದ ಬಿಇಎಲ್ ವೃತ್ತದವರೆಗೆ ನಿರ್ಮಾಣ
36
40 ಕಿ.ಮೀ ಉದ್ದದ ಸುರಂಗ ರಸ್ತೆ (Tunnel Road)
Image Credit : Asianet News

40 ಕಿ.ಮೀ ಉದ್ದದ ಸುರಂಗ ರಸ್ತೆ (Tunnel Road)

ಹೆಬ್ಬಾಳದ ಬಳಿ ಸಂಚಾರ ದಟ್ಟಣೆ ನಿಯಂತ್ರಿಸಲು ಈಗಾಗಲೇ ಸಣ್ಣದೊಂದು ಟನಲ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರ ಮುಂದುವರಿದ ಭಾಗವಾಗಿ ನಗರದಲ್ಲಿ 40 ಕಿ.ಮೀ. ಉದ್ದದ ಬೃಹತ್ ಸುರಂಗ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಇದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗುವುದು.

ಮೇಲ್ಸೇತುವೆಗಳು ಮತ್ತು ಪಿಆರ್‌ಆರ್

ಸಂಚಾರ ಸುಧಾರಣೆಗಾಗಿ 44 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ರಸ್ತೆ, 133 ಕಿ.ಮೀ. ಉದ್ದದ ಮೇಲ್ಸೇತುವೆ (Flyover) ಮತ್ತು 123 ಕಿ.ಮೀ. ಉದ್ದದ ಪೆರಿಫೆರಲ್ ರಿಂಗ್ ರಸ್ತೆ (PRR) ನಿರ್ಮಾಣಕ್ಕೆ ಯೋಜನೆಗಳು ಸಿದ್ಧವಾಗಿವೆ. ಪಿಆರ್‌ಆರ್ ರಸ್ತೆ ನಿರ್ಮಾಣದ ಮೊದಲ ಹಂತಕ್ಕೆ 26,000 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

46
‘ಟೀಂ ಕರ್ನಾಟಕ’ ನಮ್ಮ ಮಂತ್ರ: ಬ್ರ್ಯಾಂಡ್ ಬೆಂಗಳೂರಿಗೆ ಡಬಲ್ ಎಫ್‌ಎಆರ್ ಕೊಡುಗೆ!
Image Credit : Asianet News

‘ಟೀಂ ಕರ್ನಾಟಕ’ ನಮ್ಮ ಮಂತ್ರ: ಬ್ರ್ಯಾಂಡ್ ಬೆಂಗಳೂರಿಗೆ ಡಬಲ್ ಎಫ್‌ಎಆರ್ ಕೊಡುಗೆ!

ರಾಜಧಾನಿಯ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು 'ಬೆಂಗಳೂರಿನ ಆಚೆಗೂ ಮತ್ತಷ್ಟು ಬೆಂಗಳೂರಿನಂತಹ ನಗರಗಳನ್ನು' ನಿರ್ಮಿಸಲು ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಸರ್ಕಾರ ಭರಪೂರ ಕೊಡುಗೆಗಳನ್ನು ಘೋಷಿಸಿದೆ.

ಬೆಂಗಳೂರಿನಲ್ಲಿ ಐಟಿ ಕಚೇರಿಗಳ ಜಾಗದ ಬಾಡಿಗೆಯು ಪ್ರತಿ ಚದರ ಅಡಿಗೆ 1 ರಿಂದ 1.50 ಡಾಲರ್‌ನಷ್ಟಿದೆ. ಆದರೆ, ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೇವಲ ಅರ್ಧ ಡಾಲರ್‌ಗೆ ಕಚೇರಿ ಜಾಗ ಸಿಗುತ್ತಿದೆ. ಈ ನಗರಗಳಲ್ಲಿ ಉದ್ಯಮ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ದುಪ್ಪಟ್ಟು ಎಫ್‌ಎಆರ್ (Floor Area Ratio) ನೀಡಲು ನಿರ್ಧರಿಸಲಾಗಿದ್ದು, ಅಲ್ಲಿಯೂ ಬಹುಮಹಡಿ ಕಟ್ಟಡಗಳ (High-rise Buildings) ನಿರ್ಮಾಣಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗುತ್ತಿದೆ.

56
ಜಾಗತಿಕ ಹೂಡಿಕೆಗೆ ಕರ್ನಾಟಕವೇ ಮೊದಲ ಆಯ್ಕೆ:
Image Credit : Asianet News

ಜಾಗತಿಕ ಹೂಡಿಕೆಗೆ ಕರ್ನಾಟಕವೇ ಮೊದಲ ಆಯ್ಕೆ:

ನೆರೆಯ ಮಹಾರಾಷ್ಟ್ರವು ಉದ್ಯಮಗಳಿಗೆ ಅತ್ಯಂತ ದುಬಾರಿಯಾಗುತ್ತಿದ್ದು, ಹವಾಮಾನ, ಸಂಸ್ಕೃತಿ ಮತ್ತು ಪ್ರತಿಭೆಯ ದೃಷ್ಟಿಯಿಂದ ಕರ್ನಾಟಕವೇ ಜಾಗತಿಕ ಕಂಪನಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 257 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಪ್ರತಿ ವರ್ಷ 1.50 ಲಕ್ಷ ಎಂಜಿನಿಯರ್‌ಗಳು ಹೊರಬರುತ್ತಿದ್ದಾರೆ. ಅಲ್ಲದೆ ದೇಶದಲ್ಲಿರುವ 138 ಅಂತರರಾಷ್ಟ್ರೀಯ ಶಾಲೆಗಳ ಪೈಕಿ 40 ಶಾಲೆಗಳು ಕರ್ನಾಟಕದಲ್ಲೇ ಇರುವುದು ನಮ್ಮ ಮಾನವ ಸಂಪನ್ಮೂಲದ ಶಕ್ತಿಯನ್ನು ತೋರಿಸುತ್ತದೆ. 2029ರ ವೇಳೆಗೆ ರಾಜ್ಯದಲ್ಲಿ 500 ಹೊಸ ಜಿಸಿಸಿ (Global Capability Centres)ಗಳನ್ನು ಆಕರ್ಷಿಸುವ, 3.50 ಲಕ್ಷ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ 4.76 ಲಕ್ಷ ಕೋಟಿ ಮೊತ್ತದ ಆರ್ಥಿಕ ಉತ್ಪಾದನೆಯ ಗುರಿ ತಲುಪಲು ಸರ್ಕಾರ ಬದ್ಧವಾಗಿದೆ.

66
ಬೆಂಗಳೂರಿನಲ್ಲಿ ‘ಎಐ ವಿಶ್ವವಿದ್ಯಾಲಯ’ ಸ್ಥಾಪನೆಗೆ ಚಿಂತನೆ!
Image Credit : Asianet News

ಬೆಂಗಳೂರಿನಲ್ಲಿ ‘ಎಐ ವಿಶ್ವವಿದ್ಯಾಲಯ’ ಸ್ಥಾಪನೆಗೆ ಚಿಂತನೆ!

ಭವಿಷ್ಯದ ಅತ್ಯಾಧುನಿಕ ಸಂಶೋಧನೆ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸರ್ಕಾರ, ಬೆಂಗಳೂರಿನಲ್ಲಿ ಪ್ರತ್ಯೇಕ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ (Artificial Intelligence University) ಸ್ಥಾಪಿಸುವ ಕುರಿತು ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ಜಾಗತಿಕ ತಜ್ಞರಿಂದ ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಇಡೀ ಪ್ರಪಂಚಕ್ಕೆ ಬೇಕಾದ ಮುಂದಿನ ತಲೆಮಾರಿನ ತಂತ್ರಜ್ಞಾನಗಳು ಬೆಂಗಳೂರಿನಿಂದಲೇ ವಿಸ್ತರಣೆಯಾಗಬೇಕು ಎನ್ನುವುದು ಸರ್ಕಾರದ ಸ್ಪಷ್ಟ ಉದ್ದೇಶವಾಗಿದೆ. ಈ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಸೇರಿದಂತೆ ಜಾಗತಿಕ ಉದ್ಯಮ ರಂಗದ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬೆಂಗಳೂರು
ಕರ್ನಾಟಕ ಸುದ್ದಿ
ನಮ್ಮ ಮೆಟ್ರೋ
ಸುರಂಗ ಮಾರ್ಗ
ಡಿ.ಕೆ. ಶಿವಕುಮಾರ್

Latest Videos
Recommended Stories
Recommended image1
'ಬರ್ತೀನಿ ಅಂದ್ರೆ..' ರಾಜ್ಯ ರಾಜಕಾರಣಕ್ಕೆ ಎಂಟ್ರಿ ಬಗ್ಗೆ ಕುಮಾರಸ್ವಾಮಿ ಮಹತ್ವದ ಹೇಳಿಕೆ
Recommended image2
Bengaluru Idli ದೇಶದ ಗಮನ ಸೆಳೆದ ಬೆಂಗಳೂರ 5 ರೂ. ಇಡ್ಲಿ: 60 ವರ್ಷದಿಂದ ಅದೇ ಟೇಸ್ಟ್​- ಅಜ್ಜನ ಕೈರುಚಿಗೆ ಜನರು ಫಿದಾ
Recommended image3
ಬಿಡದಿ ಟೌನ್ ಶಿಪ್ ವಿರುದ್ಧದ ಹೋರಾಟಕ್ಕೆ ಆನೆಬಲ; ಪ್ರತಿಭಟನೆಗೆ ಧುಮುಕಿದ ಸಂತೋಷ್ ಹೆಗ್ಡೆ
Related Stories
Recommended image1
Hebbal ಟ್ರಾಫಿಕ್‌ ಕಿರಿಕಿರಿಗೆ ಮುಕ್ತಿ, ವೆಟರ್ನರಿ ಕಾಲೇಜು ಆವರಣದಲ್ಲಿ ಸುರಂಗ ಮಾರ್ಗಕ್ಕೆ ಮಣ್ಣು ಪರೀಕ್ಷೆ ಆರಂಭ
Recommended image2
ಹೆಬ್ಬಾಳ ಬಳಿಕ ಬೆಂಗಳೂರಿಗೆ 6 ಪಥಗಳ ಮತ್ತೊಂದು ಸುರಂಗ ರಸ್ತೆ, ಡಾ.ರಾಜ್ ಸ್ಮಾರಕದಿಂದ ಬಿಇಎಲ್ ವೃತ್ತದವರೆಗೆ ನಿರ್ಮಾಣ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved