MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • 1 ವರ್ಷದ ಬಳಿಕ ಶಿವಮೊಗ್ಗ ಬಾಲಕಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್, ಶವ ಸೂಟ್‌ಕೇಸ್‌ಲ್ಲಿಟ್ಟು ಪ್ರಪಾತಕ್ಕೆ ತಳ್ಳಿದ ಪಿಜಿ ಓನರ್ಸ್!

1 ವರ್ಷದ ಬಳಿಕ ಶಿವಮೊಗ್ಗ ಬಾಲಕಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್, ಶವ ಸೂಟ್‌ಕೇಸ್‌ಲ್ಲಿಟ್ಟು ಪ್ರಪಾತಕ್ಕೆ ತಳ್ಳಿದ ಪಿಜಿ ಓನರ್ಸ್!

ಶಿಕಾರಿಪುರದಲ್ಲಿ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬ ಸತ್ಯ ತನಿಖೆಯಿಂದ ಬಯಲಾಗಿದೆ. ಪಿಜಿಗೆ ಕೆಟ್ಟ ಹೆಸರು ಬರುತ್ತದೆಂಬ ಭಯದಿಂದ, ಮಾಲೀಕರು ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪ್ರಪಾತಕ್ಕೆ ಎಸೆದಿದ್ದರು.

2 Min read
Author : Gowthami K
Published : Jul 08 2026, 02:50 PM IST
Share this Photo Gallery
  • FB
  • TW
  • Linkdin
  • Whatsapp
16
ಶಿಕಾರಿಪುರ ಬಾಲಕಿ ನಾಪತ್ತೆ ಕೇಸ್‌ಗೆ ಹಾರರ್ ಟ್ವಿಸ್ಟ್
Image Credit : Asianet News

ಶಿಕಾರಿಪುರ ಬಾಲಕಿ ನಾಪತ್ತೆ ಕೇಸ್‌ಗೆ ಹಾರರ್ ಟ್ವಿಸ್ಟ್

ಶಿವಮೊಗ್ಗ: ಒಂದು ವರ್ಷದ ಹಿಂದೆ ಶಿಕಾರಿಪುರದಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯ ನಿಗೂಢ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಬೆಚ್ಚಿಬೀಳಿಸುವ ಸತ್ಯಾಂಶ ಬೆಳಕಿಗೆ ಬಂದಿದೆ. ಪಿಜಿಯಲ್ಲಿ ಕೆಲಸಕ್ಕಿದ್ದ ಬಾಲಕಿ ಆತ್ಮHತ್ಯೆ ಮಾಡಿಕೊಂಡಾಗ, ಅದರಿಂದ ತಮಗೆ ಕೆಟ್ಟ ಹೆಸರು ಬರುತ್ತದೆ ಎಂಬ ಭಯದಿಂದ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪ್ರಪಾತಕ್ಕೆ ಎಸೆದು ಬಂದಿದ್ದ ಕರಾಳ ಕಥೆ ಈಗ ಬರೋಬ್ಬರಿ ಒಂದು ವರ್ಷದ ಬಳಿಕ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಆ ನಿಗೂಢ ಪ್ರಕರಣ ಈಗ ತೆರೆದುಕೊಂಡಿದ್ದು ಹೇಗೆ ಎಂಬುದೇ ರೋಚಕವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಭೀಕರ ಸಾಕ್ಷಿ ನಾಶ
Image Credit : Asianet News

ಭೀಕರ ಸಾಕ್ಷಿ ನಾಶ

ಈ ಭೀಕರ ಸಾಕ್ಷಿ ನಾಶ ಮತ್ತು ಆತ್ಮHತ್ಯೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಶಿಕಾರಿಪುರ ತಾಲೂಕಿನ ಇಟ್ಟಿಗೆಹಳ್ಳಿಯ ಬಿಜೆಪಿ ಮುಖಂಡ ಹಾಗೂ ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಗಂಗಾನಾಯ್ಕ, ಆತನ ಎರಡನೇ ಪತ್ನಿ ಸೌಭಾಗ್ಯ ಅಲಿಯಾಸ್ ಭಾಗ್ಯಶ್ರೀ, ಸೋಗಿಲು ಗ್ರಾಮದ ರಂಜಿತಾ ಮತ್ತು ಪೀರ್ಯಾನಾಯ್ಕ ಎಂಬ ನಾಲ್ವರನ್ನು ಈಗ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಗಂಗಾನಾಯ್ಕ ಮುದ್ದನಹಳ್ಳಿ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷನೂ ಆಗಿದ್ದಾನೆ.

Related Articles

Related image1
"ಬೈಕ್‌ನಿಂದ ಕೆಳಗೆ ಇಳಿದು ನನ್ನ ಬಳಿ ಬಾ".. ಸುಂದ್ರಿ ಕರೆಯುತ್ತಿದ್ದಂತೆ ಬೆಚ್ಚಿಬಿದ್ದ ಶಿವಮೊಗ್ಗ ಯುವಕ
Related image2
ತಮ್ಮ ಅಜ್ಜಿಯನ್ನೇ ಕೊಚ್ಚಿ ಕೊಂದ ಮೊಮ್ಮಗನ ಕಾಲಿಗೆ ಶಿವಮೊಗ್ಗ ಪೊಲೀಸರ ಗುಂಡೇಟು! ಎಸ್ಕೇಪ್ ಆಗಲು ಯತ್ನಿಸಿದ್ದ ಕೊಲೆ ಆರೋಪಿ
36
ತಾಯಿ ಇಲ್ಲದ ಬಾಲಕಿಗೆ ಆಶ್ರಯ ಕೊಟ್ಟಿದ್ದ ಪಿಜಿ
Image Credit : Asianet News

ತಾಯಿ ಇಲ್ಲದ ಬಾಲಕಿಗೆ ಆಶ್ರಯ ಕೊಟ್ಟಿದ್ದ ಪಿಜಿ

ಮೃತಪಟ್ಟ ಅಪ್ರಾಪ್ತ ಬಾಲಕಿ ಸಂಗೀತಾಗೆ ತಾಯಿ ಇರಲಿಲ್ಲ. ತಂದೆಯ ಜೊತೆ ಇರಲಾರದೆ ಆಕೆ ಕೆಲಸ ಹುಡುಕಿಕೊಂಡು ಶಿಕಾರಿಪುರಕ್ಕೆ ಬಂದು ಸೇರಿದ್ದಳು. ಪಿಜಿ ಮಾಲೀಕತ್ವ ವಹಿಸಿಕೊಂಡಿದ್ದ ಸೌಭಾಗ್ಯ, ಈ ಬಾಲಕಿಯನ್ನು ತನ್ನ ಮಗಳಂತೆ ಸಾಕಿ ಸಲುಹುತ್ತಿದ್ದಳು. 8ನೇ ತರಗತಿಯ ನಂತರ ಓದು ನಿಲ್ಲಿಸಿದ್ದ ಸಂಗೀತಾ, ಅದೇ ಪಿಜಿಯಲ್ಲಿ ಕೆಲಸ ಮಾಡಿಕೊಂಡಿದ್ದಳು.

2025 ರ ಮೇ 18 ರಂದು ಪಿಜಿಯಲ್ಲಿದ್ದ ರಂಜಿತಾ ಎಂಬಾಕೆಯೊಂದಿಗೆ ಬಾಲಕಿ ಸಂಗೀತಾಗೆ ಜಗಳವಾಗಿತ್ತು. ಬಾಲಕಿ ಸಂಗೀತಾ ಎಲ್ಲರ ಹತ್ತಿರ ಒಬ್ಬರ ಮೇಲೊಬ್ಬರು ಚಾಡಿ ಹೇಳುತ್ತಿದ್ದಾಳೆ ಎಂದು ಆರೋಪಿಗಳು ಆಕ್ಷೇಪಿಸಿದ್ದರು. ಪಿಜಿ ಕೆಳಗಿರುವ ಬ್ಯೂಟಿ ಪಾರ್ಲರ್‌ನಲ್ಲಿ ಬಾಲಕಿಯನ್ನು ಕರೆಸಿ, "ಚಾಡಿ ಹೇಳಿ ನಮ್ಮ ಮರ್ಯಾದೆ ತೆಗೆಯುತ್ತಿದ್ದೀಯಾ" ಎಂದು ತೀವ್ರವಾಗಿ ಹೆದರಿಸಿ, ನಿಂದಿಸಿ ಮಾನಸಿಕ ಮತ್ತು ದೈಹಿಕವಾಗಿ ಹಲ್ಲೆ ನಡೆಸಲಾಗಿತ್ತು. ಇದರಿಂದ ತೀವ್ರ ಮನನೊಂದ ಬಾಲಕಿ ಸಂಗೀತ, ಪಿಜಿಯ ಕೊಠಡಿಯೊಂದಕ್ಕೆ ತೆರಳಿ ನೇಣಿಗೆ ಶರಣಾಗಿದ್ದಳು.

46
ಮರ್ಯಾದೆಗೆ ಹೆದರಿ ಸೂಟ್‌ಕೇಸ್ ಡೆಡ್‌ಬಾಡಿ ಡೀಲ್!
Image Credit : Asianet News

ಮರ್ಯಾದೆಗೆ ಹೆದರಿ ಸೂಟ್‌ಕೇಸ್ ಡೆಡ್‌ಬಾಡಿ ಡೀಲ್!

ಬಾಲಕಿ ನೇಣು ಬಿಗಿದುಕೊಂಡು ಆತ್ಮHತ್ಯೆ ಮಾಡಿಕೊಂಡಿರುವುದನ್ನು ಕಂಡು ಪಿಜಿ ಮಾಲೀಕರು ಮತ್ತು ಅವರ ಸ್ನೇಹಿತರು ತಲ್ಲಣಗೊಂಡಿದ್ದರು. ಪೊಲೀಸರಿಗೆ ವಿಷಯ ತಿಳಿಸಿದರೆ ತಮ್ಮ ಪಿಜಿಗೆ ಕೆಟ್ಟ ಹೆಸರು ಬರುತ್ತದೆ ಹಾಗೂ ಕಾನೂನಿನ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಹೆದರಿದ ನಾಲ್ವರು ಆರೋಪಿಗಳು ಭೀಕರ ಪ್ಲ್ಯಾನ್ ರೂಪಿಸಿದರು. ಇದಕ್ಕಾಗಿ ಬಾಲಕಿಯ ಶವವನ್ನು ಯಾರಿಗೂ ತಿಳಿಯದಂತೆ ಗೌಪ್ಯವಾಗಿ ವಿಲೇವಾರಿ ಮಾಡಲು ನಿರ್ಧರಿಸಿದರು, ಮೃತದೇಹವನ್ನು ತಂದು ಒಂದು ದೊಡ್ಡ ಸೂಟ್‌ಕೇಸ್ ಒಳಗೆ ಇಟ್ಟು ಬಂದ್ ಮಾಡಿದರು. ಬಳಿಕ ಆ ಸೂಟ್‌ಕೇಸ್ ಅನ್ನು ಕಾರಿನಲ್ಲಿ ಇಟ್ಟುಕೊಂಡು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಾವಿನಗುಂಡಿ (ಜೋಗ ಜಲಪಾತದ ಸಮೀಪ) ಪ್ರಪಾತದ ಅಜ್ಞಾತ ಸ್ಥಳದಲ್ಲಿ ಎಸೆದು ಯಾರಿಗೂ ತಿಳಿಯದಂತೆ ವಾಪಸ್ ಬಂದಿದ್ದರು. ಈ ಘಟನೆ ನಡೆದು ಒಂದು ವರ್ಷದವರೆಗೂ ಬಾಲಕಿ ಜೀವಂತವಾಗಿದ್ದಾಳೆ ಎಂದು ನಂಬಿಸಲು ಆಕೆಯ ಮೊಬೈಲ್ ಫೋನ್ ಅನ್ನು ಯಾರಿಗೂ ಸಿಗದಂತೆ ಬಚ್ಚಿಟ್ಟಿದ್ದರು.

56
ರಂಜಿತಾ-ಪೀರಾ ನಾಯ್ಕ ಜಗಳದಿಂದ ಬಯಲಾದ ರಹಸ್ಯ!
Image Credit : Asianet News

ರಂಜಿತಾ-ಪೀರಾ ನಾಯ್ಕ ಜಗಳದಿಂದ ಬಯಲಾದ ರಹಸ್ಯ!

ಕಳೆದ ಒಂದು ವರ್ಷದಿಂದ ಯಾರಿಗೂ ತಿಳಿಯದ ಈ ರಹಸ್ಯ, ಇತ್ತೀಚೆಗೆ ಆರೋಪಿಗಳಾದ ರಂಜಿತಾ ಹಾಗೂ ಪೀರ್ಯಾನಾಯ್ಕ ನಡುವೆ ನಡೆದ ವೈಯಕ್ತಿಕ ಜಗಳದಿಂದಾಗಿ ಬೀದಿಗೆ ಬಂತು. ಜಗಳದ ವೇಳೆ ಈ ಕೊಲೆಯ ಸತ್ಯಾಂಶ ಹೊರಬೀಳುತ್ತಿದ್ದಂತೆ, ಕಳೆದ ಶುಕ್ರವಾರ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಅಧಿಕೃತವಾಗಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಕೊನೆಯದಾಗಿ ಬಾಲಕಿ ಮಾತನಾಡಿದ್ದ ರಂಜಿತಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ಆಕೆ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರನ್ನೂ ಹೆಡೆಮುರಿ ಕಟ್ಟಿದ್ದಾರೆ.

66
 ಎಫ್‌ಎಸ್‌ಎಲ್ (FSL) ತನಿಖೆಗೆ ಸಿಕ್ಕ ಅವಶೇಷಗಳು
Image Credit : Asianet News

ಎಫ್‌ಎಸ್‌ಎಲ್ (FSL) ತನಿಖೆಗೆ ಸಿಕ್ಕ ಅವಶೇಷಗಳು

ಈ ಕುರಿತು ಶಿವಮೊಗ್ಗದಲ್ಲಿ ಅಧಿಕೃತ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ (SP) ನಿಖಿಲ್ ಅವರು, " ಆತ್ಮHತ್ಯೆ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರೆ ಇದು ಇಷ್ಟು ದೊಡ್ಡ ಕ್ರಿಮಿನಲ್ ಕೇಸ್ ಆಗುತ್ತಿರಲಿಲ್ಲ. ಶವ ವಿಲೇವಾರಿ ಮಾಡಿ ಮುಚ್ಚಿಟ್ಟಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಮಾವಿನಗುಂಡಿ ಪ್ರಪಾತದಲ್ಲಿ ಶೋಧ ನಡೆಸಿದಾಗ ಬಾಲಕಿಯ ಶವದ ಕೆಲವು ಭಾಗಗಳು (ಅಸ್ಥಿಪಂಜರದ ಅವಶೇಷಗಳು) ನಮಗೆ ಪತ್ತೆಯಾಗಿವೆ. ಅವು ಬಾಲಕಿಯದ್ದೇ ಎಂದು ದೃಢಪಡಿಸಿಕೊಳ್ಳಲು ತಕ್ಷಣವೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಶಿವಮೊಗ್ಗ
ಕೊಲೆ
ಕ್ರೈಮ್ ನ್ಯೂಸ್
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ರೇಣುಕಾಸ್ವಾಮಿ ಕೇಸ್‌: ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣದ ಹಿಂದೆ ಪ್ರಭಾವಿಗಳಿರೋ ಶಂಕೆ? ಡೀಲ್ ಕೊಟ್ಟವರಿಗೂ ನಡುಕ
Recommended image2
ಕೈ ತುಂಬಾ ಸ್ಯಾಲರಿ ಉದ್ಯೋಗ, ಪ್ರಮೋಶನ್ ಬೇಕಾ? ದರ್ಶನ ಮಾಡಿದವರ ಕೈಬಿಟ್ಟಿಲ್ಲ ಬೆಂಗಳೂರಿನ ಟೆಕ್ಕಿ ಗಣೇಶ ಮಂದಿರ
Recommended image3
ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್: 6 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ!
Related Stories
Recommended image1
"ಬೈಕ್‌ನಿಂದ ಕೆಳಗೆ ಇಳಿದು ನನ್ನ ಬಳಿ ಬಾ".. ಸುಂದ್ರಿ ಕರೆಯುತ್ತಿದ್ದಂತೆ ಬೆಚ್ಚಿಬಿದ್ದ ಶಿವಮೊಗ್ಗ ಯುವಕ
Recommended image2
ತಮ್ಮ ಅಜ್ಜಿಯನ್ನೇ ಕೊಚ್ಚಿ ಕೊಂದ ಮೊಮ್ಮಗನ ಕಾಲಿಗೆ ಶಿವಮೊಗ್ಗ ಪೊಲೀಸರ ಗುಂಡೇಟು! ಎಸ್ಕೇಪ್ ಆಗಲು ಯತ್ನಿಸಿದ್ದ ಕೊಲೆ ಆರೋಪಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved