- Home
- Karnataka Districts
- Shivamogga
- "ಬೈಕ್‌ನಿಂದ ಕೆಳಗೆ ಇಳಿದು ನನ್ನ ಬಳಿ ಬಾ".. ಸುಂದ್ರಿ ಕರೆಯುತ್ತಿದ್ದಂತೆ ಬೆಚ್ಚಿಬಿದ್ದ ಶಿವಮೊಗ್ಗ ಯುವಕ
"ಬೈಕ್‌ನಿಂದ ಕೆಳಗೆ ಇಳಿದು ನನ್ನ ಬಳಿ ಬಾ".. ಸುಂದ್ರಿ ಕರೆಯುತ್ತಿದ್ದಂತೆ ಬೆಚ್ಚಿಬಿದ್ದ ಶಿವಮೊಗ್ಗ ಯುವಕ
ಶಿವಮೊಗ್ಗದ 23 ವರ್ಷದ ಕಾರ್ತಿಕ್ ಜೀವನದಲ್ಲಿ ನಡೆದ ಒಂದು ಘಟನೆ ಇಂದು ಕೂಡ ಅವನನ್ನು ಕಾಡುತ್ತಿದೆ. ಸ್ನೇಹಿತನ ಊರಿನ ಜಾತ್ರೆ ಮುಗಿಸಿ ಮಧ್ಯರಾತ್ರಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ, ಕಾಡಿನ ರಸ್ತೆಯಲ್ಲಿ ಅವನಿಗೆ ವಿಚಿತ್ರ ಅನುಭವ ಎದುರಾಯಿತು.

ಕಾಡಿನ ರಸ್ತೆಯಲ್ಲಿ ಲಿಫ್ಟ್ ಕೇಳಿದ ಅಪರಿಚಿತ ಮಹಿಳೆ
ಶಿವಮೊಗ್ಗದ 23 ವರ್ಷದ ಕಾರ್ತಿಕ್ ಜೀವನದಲ್ಲಿ ನಡೆದ ಒಂದು ಘಟನೆ ಇಂದು ಕೂಡ ಅವನನ್ನು ಕಾಡುತ್ತಿದೆ. ಸ್ನೇಹಿತನ ಊರಿನ ಜಾತ್ರೆ ಮುಗಿಸಿ ಮಧ್ಯರಾತ್ರಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ, ಕಾಡಿನ ರಸ್ತೆಯಲ್ಲಿ ಅವನಿಗೆ ವಿಚಿತ್ರ ಅನುಭವ ಎದುರಾಯಿತು.
ಕಾಡಿನ ರಸ್ತೆಯಲ್ಲಿ ಲಿಫ್ಟ್ ಕೇಳಿದ ಅಪರಿಚಿತ ಮಹಿಳೆ
ರಾತ್ರಿ 10 ಗಂಟೆ ಸುಮಾರಿಗೆ ಕಾರ್ತಿಕ್ ಕುಣಿಗಲ್ ಸಮೀಪದ ಕಾಡಿನ ರಸ್ತೆಯಲ್ಲಿ ಬೈಕ್ ಓಡಿಸಿಕೊಂಡು ಬರುತ್ತಿದ್ದ. ಆಗ ರಸ್ತೆಯ ಮಧ್ಯೆ ಲಂಬಾಣಿ ಉಡುಪು ಧರಿಸಿದ್ದ ಸುಂದರ ಮಹಿಳೆಯೊಬ್ಬಳು ಬೈಕ್ ನಿಲ್ಲಿಸುವಂತೆ ಕೈ ಮಾಡಿದ್ದಾಳೆ. ಮೊದಲಿಗೆ ಭಯಪಟ್ಟ ಕಾರ್ತಿಕ್, ಆಕೆ ಸಂಕಷ್ಟದಲ್ಲಿರಬಹುದು ಎಂದು ಭಾವಿಸಿ ಬೈಕ್ ನಿಲ್ಲಿಸಿದ್ದಾನೆ. ಮಹಿಳೆ ಬಸ್ ಮಿಸ್ ಆಗಿದ್ದು, ಮುಂದಿನ ಊರಿನವರೆಗೆ ಬಿಡುವಂತೆ ಕೇಳಿದ್ದಾಳೆ.
ಮಹಿಳೆ ಬೈಕ್ ಹತ್ತಿದರೂ ತೂಕವೇ ಇರಲಿಲ್ಲ!
ಆಕೆ ಬೈಕ್ ಹತ್ತಿದ ಬಳಿಕ ಕಾರ್ತಿಕ್‌ಗೆ ಹಲವು ವಿಚಿತ್ರ ಸಂಗತಿಗಳು ಗಮನಕ್ಕೆ ಬಂದಿವೆ. ಮಹಿಳೆಯ ಬಳಿ ಯಾವುದೇ ಬ್ಯಾಗ್ ಇರಲಿಲ್ಲ. ಅಷ್ಟೇ ಅಲ್ಲ, ಆಕೆಯಿಂದ ದುರ್ವಾಸನೆ ಬರುತ್ತಿತ್ತು. ಇನ್ನೂ ಆಶ್ಚರ್ಯವೆಂದರೆ, ಬೈಕ್ ಮೇಲೆ ಯಾರೂ ಕುಳಿತಿಲ್ಲ ಎಂಬಂತೆ ಯಾವುದೇ ತೂಕವೇ ಅನುಭವವಾಗಲಿಲ್ಲ.
ಪಾಳುಬಿದ್ದ ಬಸ್ ನಿಲ್ದಾಣದಲ್ಲಿ ಮಾಯವಾದ ಮಹಿಳೆ
ಸ್ವಲ್ಪ ದೂರ ಸಾಗಿದ ಬಳಿಕ, ಕಾಡಿನ ಮಧ್ಯದಲ್ಲಿದ್ದ ಹಳೆಯ ಬಸ್ ನಿಲ್ದಾಣದ ಬಳಿ ಮಹಿಳೆ ಬೈಕ್ ನಿಲ್ಲಿಸುವಂತೆ ಹೇಳಿದ್ದಾಳೆ. "ಎರಡು ನಿಮಿಷದಲ್ಲಿ ಬರುತ್ತೇನೆ" ಎಂದು ಹೇಳಿ ಒಳಗೆ ಹೋಗಿದ್ದಾಳೆ. ಬಹಳ ಹೊತ್ತು ಕಾದರೂ ಮಹಿಳೆ ಹೊರಗೆ ಬರಲಿಲ್ಲ. ಕಾರ್ತಿಕ್ ಹಲವು ಬಾರಿ ಕೂಗಿದರೂ ಪ್ರತಿಕ್ರಿಯೆ ಇರಲಿಲ್ಲ. ನಂತರ ಬೈಕ್ ಹೆಡ್‌ಲೈಟ್ ಬೆಳಕನ್ನು ಬಸ್ ನಿಲ್ದಾಣದೊಳಗೆ ತಿರುಗಿಸಿ ನೋಡಿದಾಗ, ಅಲ್ಲಿ ಯಾರೂ ಇರಲಿಲ್ಲ!
ಸ್ವಾಮೀಜಿ ಹೇಳಿದ್ದೇ ಇನ್ನೂ ಭಯಾನಕ!
"ಬೈಕ್‌ನಿಂದ ಕೆಳಗೆ ಇಳಿದು ನನ್ನ ಬಳಿ ಬಾ..." ಅಷ್ಟರಲ್ಲಿ ಕತ್ತಲಿನಿಂದ ವಿಚಿತ್ರ ಧ್ವನಿ ಕೇಳಿಸಿತು. "ಬೈಕ್‌ನಿಂದ ಕೆಳಗೆ ಇಳಿದು ನನ್ನ ಬಳಿ ಬಾ..." ಈ ಧ್ವನಿ ಕೇಳುತ್ತಿದ್ದಂತೆ ಕಾರ್ತಿಕ್ ಭಯದಿಂದ ಅಲ್ಲಿಂದ ವೇಗವಾಗಿ ಬೈಕ್ ಓಡಿಸಿಕೊಂಡು ಮನೆ ಸೇರಿದ್ದಾನೆ.
ಸ್ವಾಮೀಜಿ ಹೇಳಿದ್ದೇ ಇನ್ನೂ ಭಯಾನಕ!
ಮರುದಿನ ಕಾರ್ತಿಕ್ ತನ್ನ ಪರಿಚಯದ ಸ್ವಾಮೀಜಿಯವರ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ಆಗ ಸ್ವಾಮೀಜಿ ಹೇಳಿದ ಮಾತು ಅವನನ್ನು ಬೆಚ್ಚಿಬೀಳಿಸಿತು. "ನಿನ್ನ ಬೈಕ್‌ಗೆ ಪೂಜೆ ಮಾಡಿಸಿದ್ದರಿಂದಲೇ ನೀನು ಬದುಕಿ ಬಂದಿದ್ದೀಯ. ಆ ಪಿಶಾಚಿ ನಿನ್ನ ಬೈಕ್ ಏರಲೇ ಇಲ್ಲ. ಅದು ನಿನ್ನನ್ನು ಬೈಕ್‌ನಿಂದ ಕೆಳಗಿಳಿಸಲು ಮಾತ್ರ ಪ್ರಯತ್ನಿಸಿತ್ತು. ನೀನು ಕೆಳಗೆ ಇಳಿದಿದ್ದರೆ ನಿನ್ನ ಕಥೆ ಬೇರೆ ಆಗುತ್ತಿತ್ತು" ಎಂದು ಅವರು ಹೇಳಿದ್ದಾರೆ.