MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರು ಪಾರ್ಕಿಂಗ್ ಗೆ ಹೊಸ ನಿಯಮ, ತಪ್ಪಿದರೆ ಬೀಳಲಿದೆ ದಂಡ, ಜೊತೆಗೆ ಟೋಯಿಂಗ್! ಯಾವ ಗಾಡಿಗೆ ಎಷ್ಟು ಪೇ ಮಾಡ್ಬೇಕು?

ಬೆಂಗಳೂರು ಪಾರ್ಕಿಂಗ್ ಗೆ ಹೊಸ ನಿಯಮ, ತಪ್ಪಿದರೆ ಬೀಳಲಿದೆ ದಂಡ, ಜೊತೆಗೆ ಟೋಯಿಂಗ್! ಯಾವ ಗಾಡಿಗೆ ಎಷ್ಟು ಪೇ ಮಾಡ್ಬೇಕು?

ಬೆಂಗಳೂರಿನ ತೀವ್ರ ಸಂಚಾರ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು, ಜಿಬಿಎ ಮತ್ತು ಸಂಚಾರಿ ಪೊಲೀಸರು ಮತ್ತೆ ಟೋಯಿಂಗ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದಾರೆ. ಇದರೊಂದಿಗೆ, ನಗರದ ಪ್ರಮುಖ ರಸ್ತೆಗಳಲ್ಲಿ 'ಪೇ ಆ್ಯಂಡ್ ಪಾರ್ಕ್' ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ.

3 Min read
Author : Gowthami K
Published : Feb 02 2026, 12:12 PM IST
Share this Photo Gallery
  • FB
  • TW
  • Linkdin
  • Whatsapp
17
ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್‌ಗೆ ಬ್ರೇಕ್!
Image Credit : Asianet News

ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್‌ಗೆ ಬ್ರೇಕ್!

ಬೆಂಗಳೂರು: ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ನಗರ ಸಂಚಾರ ವ್ಯವಸ್ಥೆಗೆ ಭಾರೀ ಸವಾಲಾಗಿ ಪರಿಣಮಿಸಿದೆ. ಟ್ರಾಫಿಕ್ ಕಿರಿಕಿರಿ, ಅನಧಿಕೃತ ಪಾರ್ಕಿಂಗ್ ಹಾಗೂ ರಸ್ತೆ ಬದಿಯಲ್ಲಿ ವಾಹನಗಳನ್ನು ಅಸಮರ್ಪಕವಾಗಿ ನಿಲ್ಲಿಸುವ ಪ್ರವೃತ್ತಿ ಬೆಂಗಳೂರು ನಗರದ ಪ್ರಮುಖ ಸಮಸ್ಯೆಗಳಾಗಿ ಬೆಳೆಯುತ್ತಿವೆ. ಇದರ ಪರಿಣಾಮವಾಗಿ ನಗರದ ಹಲವೆಡೆ ಸಂಚಾರ ಸುಗಮತೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದು, ಸಾರ್ವಜನಿಕರು ದಿನನಿತ್ಯ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅನಧಿಕೃತವಾಗಿ ವಾಹನ ನಿಲುಗಡೆ ಮಾಡುವುದರಿಂದ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳು ಹಾಗೂ ವ್ಯಾಪಾರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ವಾಹನಗಳು ಅಚಾನಕ್ ಕೆಟ್ಟು ನಿಂತಾಗ ಅಥವಾ ನಿಲುಗಡೆಗೆ ಅವಕಾಶವಿಲ್ಲದ ಸ್ಥಳಗಳಲ್ಲಿ ಪಾರ್ಕ್ ಮಾಡಿದಾಗ, ಇತರ ವಾಹನಗಳ ಚಲನವಲನಕ್ಕೆ ಭಾರೀ ಅಡ್ಡಿಯಾಗುತ್ತಿದೆ. ಈ ಪರಿಸ್ಥಿತಿ ಸಂಚಾರಿ ಪೊಲೀಸರಿಗೂ ವಾಹನ ಸಂಚಾರ ನಿಯಂತ್ರಣದಲ್ಲಿ ದೊಡ್ಡ ತಲೆನೋವಾಗುತ್ತಿದೆ.

27
ಜಿಬಿಎ ಮತ್ತು ಬೆಂಗಳೂರು ಸಂಚಾರಿ ಪೊಲೀಸರಿಂದ ಟೋಯಿಂಗ್ ವ್ಯವಸ್ಥೆ
Image Credit : Asianet News

ಜಿಬಿಎ ಮತ್ತು ಬೆಂಗಳೂರು ಸಂಚಾರಿ ಪೊಲೀಸರಿಂದ ಟೋಯಿಂಗ್ ವ್ಯವಸ್ಥೆ

ಇಂತಹ ಹಿನ್ನೆಲೆದಲ್ಲಿ, ನಗರದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಬೆಂಗಳೂರು ಸಂಚಾರಿ ಪೊಲೀಸರು ಮತ್ತೆ ಟೋಯಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಸಜ್ಜಾಗಿದ್ದಾರೆ. ಅನಧಿಕೃತ ಪಾರ್ಕಿಂಗ್ ಹಾಗೂ ಸಂಚಾರಕ್ಕೆ ಅಡ್ಡಿಯಾಗುವ ವಾಹನಗಳನ್ನು ತಕ್ಷಣ ತೆರವುಗೊಳಿಸುವ ಮೂಲಕ ಸಂಚಾರವನ್ನು ಸುಗಮಗೊಳಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.

Related Articles

Related image1
Bengaluru New Year 2026: ಎಂಜಿ ರೋಡ್ ಬಿಟ್ಟು ಕೋರಮಂಗಲಕ್ಕೆ ಜನಸಾಗರ; ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಹಿಳೆ ಜೊತೆ ಟೋಯಿಂಗ್ ಚಾಲಕನ ಕಿರಿಕ್!
Related image2
ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ನೀಗಲು ಪಾರ್ಕಿಂಗ್‌ ಶುಲ್ಕ ಹೆಚ್ಚಳಕ್ಕೆ ಆರ್ಥಿಕ ಸಮೀಕ್ಷೆ ಪ್ರಸ್ತಾಪ!
37
ವಿಶ್ವದಲ್ಲೇ ಟಾಪ್ 2 ಸ್ಥಾನ ಪಡೆದ ಬೆಂಗಳೂರು
Image Credit : Asianet News

ವಿಶ್ವದಲ್ಲೇ ಟಾಪ್ 2 ಸ್ಥಾನ ಪಡೆದ ಬೆಂಗಳೂರು

ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಇದೀಗ ರಾಷ್ಟ್ರಮಟ್ಟಕ್ಕೆ ಮಾತ್ರ ಸೀಮಿತವಾಗದೇ, ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದೆ. ನೆದರ್ಲೆಂಡ್ಸ್ ಮೂಲದ ‘ಟಾಮ್‌ಟಾಮ್’ ಸಂಸ್ಥೆ ಬಿಡುಗಡೆ ಮಾಡಿರುವ 2025ರ ಸಂಚಾರ ಸೂಚ್ಯಂಕ ವರದಿ ಪ್ರಕಾರ, ಟ್ರಾಫಿಕ್ ಸಮಸ್ಯೆಯಲ್ಲಿ ಬೆಂಗಳೂರು ನಗರವು ವಿಶ್ವದಲ್ಲೇ ಟಾಪ್ 2 ಸ್ಥಾನ ಪಡೆದಿದೆ. ವರದಿ ಪ್ರಕಾರ, 2025ರಲ್ಲಿ ಬೆಂಗಳೂರಿನ ಸರಾಸರಿ ಸಂಚಾರ ದಟ್ಟಣೆ ಶೇ 74.4ಕ್ಕೆ ಏರಿಕೆಯಾಗಿದೆ. 2024ರಲ್ಲಿ ಇದು ಶೇ 72.7 ಆಗಿದ್ದು, ಕೇವಲ ಒಂದೇ ವರ್ಷದಲ್ಲಿ ಶೇ 1.7ರಷ್ಟು ದಟ್ಟಣೆ ಹೆಚ್ಚಿರುವುದು ಆತಂಕಕಾರಿ ಸಂಗತಿಯಾಗಿದೆ.

ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಬಿಎ, ಸಂಚಾರಿ ಪೊಲೀಸ್ ವಿಭಾಗಕ್ಕೆ ಅಗತ್ಯವಿರುವ ಟೋಯಿಂಗ್ ವಾಹನಗಳನ್ನು ಒದಗಿಸುವ ನಿರ್ಧಾರ ಕೈಗೊಂಡಿದೆ. ನಗರದಲ್ಲಿ ನಿಲುಗಡೆಗೆ ಅವಕಾಶವಿಲ್ಲದ ಸ್ಥಳಗಳಲ್ಲಿ ವಾಹನ ನಿಲ್ಲಿಸುವುದು, ಹೆಚ್ಚಿನ ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲಿ ವಾಹನ ಕೆಟ್ಟು ನಿಂತು ಸಂಚಾರಕ್ಕೆ ಅಡ್ಡಿಯಾಗುವ ಸಂದರ್ಭಗಳನ್ನು ತ್ವರಿತವಾಗಿ ನಿಯಂತ್ರಿಸಲು ಟೋಯಿಂಗ್ ವ್ಯವಸ್ಥೆ ಅತ್ಯವಶ್ಯಕವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

47
ಐದು ನಗರ ಪಾಲಿಕೆ ವ್ಯಾಪ್ತಿಗಳಿಂದ ತಲಾ ಎರಡು ಟೋಯಿಂಗ್ ವಾಹನ
Image Credit : Asianet News

ಐದು ನಗರ ಪಾಲಿಕೆ ವ್ಯಾಪ್ತಿಗಳಿಂದ ತಲಾ ಎರಡು ಟೋಯಿಂಗ್ ವಾಹನ

ಪ್ರಾಥಮಿಕ ಹಂತದಲ್ಲಿ ನಗರದ ಐದು ನಗರ ಪಾಲಿಕೆ ವ್ಯಾಪ್ತಿಗಳಿಂದ ತಲಾ ಎರಡು ಟೋಯಿಂಗ್ ವಾಹನಗಳನ್ನು ಖರೀದಿಸಿ, ಆಯಾ ವ್ಯಾಪ್ತಿಯ ಸಂಚಾರಿ ಪೊಲೀಸ್ ಠಾಣೆಗಳಿಗೆ ನೀಡಲು ನಿರ್ಧರಿಸಲಾಗಿದೆ. ಈ ಸಂಬಂಧ ಟೋಯಿಂಗ್ ವಾಹನಗಳನ್ನು ತ್ವರಿತವಾಗಿ ಖರೀದಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಇದಲ್ಲದೆ, ವಿವಿಧ ವಿಷಯಗಳ ಕುರಿತು ನಡೆದ ಸಭೆಯಲ್ಲಿ ಸಂಚಾರಿ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ, ಟೋಯಿಂಗ್‌ಗೆ ಬಳಸುವ ವಾಹನಗಳನ್ನು ನಿಲ್ಲಿಸಲು ಪಾಲಿಕೆವಾರು ನಿರ್ದಿಷ್ಟ ಸ್ಥಳಗಳನ್ನು ಗುರುತಿಸುವಂತೆ ಎಲ್ಲಾ ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ಟೋಯಿಂಗ್ ಕಾರ್ಯಾಚರಣೆ ಸುಗಮವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

57
ಪೇ ಆ್ಯಂಡ್‌ ಪಾರ್ಕ್‌ ಜಾರಿ!
Image Credit : Asianet News

ಪೇ ಆ್ಯಂಡ್‌ ಪಾರ್ಕ್‌ ಜಾರಿ!

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎಲ್ಲ ನಗರ ಪಾಲಿಕೆಗಳು ತಮ್ಮ ವ್ಯಾಪ್ತಿಯಲ್ಲಿ ಎರಡು ರೀತಿಯ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಿ ಪೇ ಆ್ಯಂಡ್ ಪಾರ್ಕ್ ಜೊತೆಗೆ ಟೋಯಿಂಗ್‌ಗೂ ಮುಂದಾಗಿದ್ದು, ಶೀಘ್ರ ಜಾರಿಗೆ ಬರಲಿದೆ. ಅಗಲ ರಸ್ತೆಗಳಲ್ಲಿ ಅವಕಾಶ ಇರುವೆಡೆ ಆನ್‌ ಸ್ಟ್ರೀಟ್‌ ಪೇ ಪಾರ್ಕಿಂಗ್‌, ರಸ್ತೆ ಹೊರತುಪಡಿಸಿ ಸರ್ಕಾರಿ ಕಚೇರಿ, ಸರ್ಕಾರಿ ಆಸ್ಪತ್ರೆ ಮೈದಾನ ಹಾಗೂ ಗುರುತಿಸಿದ ಖಾಲಿ ಜಾಗಗಳಲ್ಲಿ ಆಫ್‌ ಸ್ಟ್ರೀಟ್‌ ಪೇ ಪಾರ್ಕಿಂಗ್‌ ಮಾಡಲಿವೆ. ಇದರ ಜತೆಗೆ ಬೇಕಾಬಿಟ್ಟಿ ಪಾರ್ಕಿಂಗ್‌ ಮಾಡಿ ಹೋದಲ್ಲಿ ಟೋಯಿಂಗ್‌ ಜಾರಿಗೆ ತಂದು ದಂಡ ವಿಧಿಸಲು ತೀರ್ಮಾನವಾಗಿದೆ. ಈ ಸಂಬಂಧ ಎಲ್ಲ ಐದು ಪಾಲಿಕೆಗಳು ಟೆಂಡರ್‌ ಕರೆದಿದ್ದು ಒಂದೆರಡು ವಾರದಲ್ಲಿ ಅಂತಿಮಗೊಳ್ಳಲಿದೆ. ಬಹುತೇಕ ಫೆಬ್ರವರಿ ಎರಡನೇ ವಾರದಿಂದ ಹಲವೆಡೆ ಇದು ಜಾರಿಯಾಗಲಿದೆ.

67
ಯಾವ ಗಾಡಿಗೆ ಎಷ್ಟು? ಒಂದು ತಾಸಿಗೆ ಎಷ್ಟು?
Image Credit : Bengaluru Greater Authority

ಯಾವ ಗಾಡಿಗೆ ಎಷ್ಟು? ಒಂದು ತಾಸಿಗೆ ಎಷ್ಟು?

ರಸ್ತೆಯ ಪಕ್ಕದಲ್ಲಿ ವಾಹನ ನಿಲ್ಲಿಸುವುದಕ್ಕೆ ಸ್ಥಳ ಮಾರ್ಕಿಂಗ್‌ ಮಾಡಲಾಗುತ್ತದೆ. ಗುರುತಿಸಿದ ಸ್ಥಳದಲ್ಲಿ ಮಾತ್ರ ವಾಹನ ನಿಲ್ಲಿಸುವುದಕ್ಕೆ ಅವಕಾಶ ಇರಲಿದೆ. ಒಂದು ತಾಸಿಗೆ ಬೈಕ್‌ಗೆ ₹ 15 ರು, ಕಾರಿಗೆ ₹ 30, ಇಡೀ ದಿನಕ್ಕೆ ಬೈಕ್‌ಗೆ ₹ 75, ಕಾರಿಗೆ ₹ 150 ಪಾವತಿಸಬೇಕಾಗಲಿದೆ. ಜತೆಗೆ ಪಾರ್ಕಿಂಗ್‌ಗೆ ಮಾಸಿಕ ಪಾಸ್‌ ವ್ಯವಸ್ಥೆ ಸಹ ಜಾರಿಗೊಳಿಸಲು ಪಾಲಿಕೆಗಳು ಯೋಜಿಸಿವೆ. ಎರಡು ಪ್ಯಾಕೇಜ್‌ನಲ್ಲಿ ಟೆಂಡರ್‌ ಕರೆಯಲಾಗಿದೆ. ಕಮರ್ಷಿಯಲ್ ಸ್ಟ್ರೀಟ್, ಕೇಂಬ್ರಿಡ್ಜ್ ರಸ್ತೆ, ಫುಡ್ ಸ್ಟ್ರೀಟ್, ಕ್ಯಾಸಲ್ ಸ್ಟ್ರೀಟ್, ಮಗ್ರತ್ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ಕ್ರೆಸೆಂಟ್ ರಸ್ತೆ ಹಾಗೂ ಸಂಪಿಗೆ ರಸ್ತೆ ಸೇರಿದಂತೆ ಮೊದಲ ಪ್ಯಾಕೇಜಲ್ಲಿ ಒಟ್ಟು 23 ರಸ್ತೆಗಳು ಸೇರಿವೆ. ಎರಡನೇ ಪ್ಯಾಕೇಜಲ್ಲಿ 80 ಫೀಟ್‌ ರೋಡ್‌, ಬ್ರಿಗೇಡ್‌ ರಸ್ತೆ ಸೇರಿ 13 ರಸ್ತೆ ಸೇರಿ ಒಟ್ಟೂ 35 ರಸ್ತೆ ಗುರುತಿಸಲಾಗಿದೆ.

77
ಟೆಂಡರ್ ಕರೆದ ಜಿಬಿಎ
Image Credit : Bengaluru Greater Authority

ಟೆಂಡರ್ ಕರೆದ ಜಿಬಿಎ

ಪಶ್ಚಿಮ ನಗರ ಪಾಲಿಕೆ ಟೆಂಡರ್ ಆಹ್ವಾನ ಮಾಡಿದ್ದು, ಸಂಪಿಗೆ ರಸ್ತೆ, 11,15 ಹಾಗೂ 18ನೇ ಅಡ್ಡ ರಸ್ತೆಗಳಲ್ಲಿ ಪಾರ್ಕಿಂಗ್​ಗೆ ಶುಲ್ಕ ಸಂಗ್ರಹಿಸಲಿದೆ. ವಾರ್ಷಿಕ ಪರವಾನಗಿ ಪಡೆಯಲು ಬಯಸುವ ಏಜೆನ್ಸಿಗಳಿಗೆ ₹ 2.20 ಕೋಟಿ ಶುಲ್ಕವನ್ನು ನಿಗದಿ ಮಾಡಿದೆ. ಶಾಪಿಂಗ್ ಪ್ರಿಯರ ಹಾಟ್ ಸ್ಪಾಟ್​ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಪಾರ್ಕಿಂಗ್‌ ಜಾರಿ ಅನಿವಾರ್ಯ. ಇಲ್ಲಿ ಉಂಟಾಗುವ ಟ್ರಾಫಿಕ್‌ ತಡೆಗೂ ಇದು ನೆರವಾಗಲಿದೆ ಎಂಬುದು ಅಧಿಕಾರಿಗಳ ಮಾಹಿತಿ. ಉತ್ತರ ಪಾಲಿಕೆಯು ವಾರದ ಹಿಂದೆ ಟೆಂಡರ್‌ ಕರೆದಿದೆ. ವರ್ಷಕ್ಕೆ 1.6 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ. ಟ್ರಾಫಿಕ್ ಹಬ್ ಅಂದರೆ ಹೆಬ್ಬಾಳ ಏರ್‌ಪೋರ್ಟ್ ರಸ್ತೆಯಲ್ಲಿ ಸಂಚಾರ ದಟ್ಟಣೆ, ಟ್ರಾಫಿಕ್ ಸಮಸ್ಯೆ ನಿವಾರಿಸಲು ಜಿಬಿಎ ನಿರ್ಧರಿಸಿದೆ. ಬಳಿಕ ಆಫ್‌ ಸ್ಟ್ರೀಟ್‌ ಪೇ ಪಾರ್ಕಿಂಗ್‌ ಮಾಡಲು ಜಾಗ ಗುರುತಿಸಲಾಗಿದೆ. ದಕ್ಷಿಣ ನಗರ ಪಾಲಿಕೆಯಲ್ಲಿ ಆರಂಭಿಕವಾಗಿ ಜಯನಗರ ಕ್ಷೇತ್ರದಲ್ಲಿ ಪೇ ಪಾರ್ಕಿಂಗ್‌ ಟೆಂಡರ್‌ ಕರೆಯಲಾಗುತ್ತಿದೆ. ಪೂರ್ವ ನಗರ ಪಾಲಿಕೆಯು 6 ರಸ್ತೆಗೆ ಪೇ ಪಾರ್ಕಿಂಗ್‌ಗೆ ಟೆಂಡರ್‌ ಕರೆದಿತ್ತು. ಆದರೆ, ಗುತ್ತಿಗೆದಾರರು ಮುಂದೆ ಬಾರದ ಹಿನ್ನೆಲೆಯಲ್ಲಿ ರಿಟೆಂಡರ್‌ ಮಾಡಲು ಮುಂದಾಗಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬೆಂಗಳೂರು
ಸಂಚಾರ ದಂಡ
ಸಂಚಾರ ನಿಯಮಗಳು
ಬೆಂಗಳೂರು ಸಂಚಾರ
ಬೆಂಗಳೂರು ಮಹಾನಗರ
ಗ್ರೇಟರ್ ಬೆಂಗಳೂರು ಪ್ರಾಧಿಕಾರ

Latest Videos
Recommended Stories
Recommended image1
ಚಿಮುಲ್ ಚುನಾವಣೆ : ಕಾಂಗ್ರೆಸ್‌ ಬೆಂಬಲಿತರಿಗೆ ಅಧಿಕಾರ ?
Recommended image2
ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾದ ಕಾರ್; ಕ್ಷಣಾರ್ಧದಲ್ಲಿ ಉರಿದು ಬೂದಿ; ಓರ್ವ ಸಾವು
Recommended image3
ಲಕ್ಕುಂಡಿಗೆ ಆಗಮಿಸಿದ ಇಟಲಿ-ಗ್ರೀಸ್ ಡೆಕ್ಕನ್ ಹೆರಿಟೇಜ್ ಫೌಂಡೇಶನ್: ಯಾಕೆ ಈ ಭೇಟಿ?
Related Stories
Recommended image1
Bengaluru New Year 2026: ಎಂಜಿ ರೋಡ್ ಬಿಟ್ಟು ಕೋರಮಂಗಲಕ್ಕೆ ಜನಸಾಗರ; ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಹಿಳೆ ಜೊತೆ ಟೋಯಿಂಗ್ ಚಾಲಕನ ಕಿರಿಕ್!
Recommended image2
ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ನೀಗಲು ಪಾರ್ಕಿಂಗ್‌ ಶುಲ್ಕ ಹೆಚ್ಚಳಕ್ಕೆ ಆರ್ಥಿಕ ಸಮೀಕ್ಷೆ ಪ್ರಸ್ತಾಪ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved