ಮೆಟ್ರೋ ಬರುವ ಖುಷಿಯಲ್ಲಿದ್ದ ತುಮಕೂರಿನ ಜನತೆಗೆ ಬೇಸರದ ಸಂಗತಿ; ನಮಗ್ಯಾಕೆ ಬೇಕೆಂದ ಜನ
ತುಮಕೂರು ನಗರಕ್ಕೆ ಮೆಟ್ರೋ ರೈಲು ಬರುತ್ತೆ ಎಂಬ ಖುಷಿಯಲ್ಲಿದ್ದ ಈ ಭಾಗದ ಜನತೆಗೆ ಬೇಸರದ ಸಂಗತಿಯೊಂದು ಬಂದಿದೆ. ಈ ವಿಷಯ ತಿಳಿದ ಜನರು, ನಮಗ್ಯಾಕೆ ಬೇಕು ಮೆಟ್ರೋ ರೈಲು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಮಾದಾವರದಿಂದ ತುಮಕೂರು
ಮಾದಾವರದಿಂದ ತುಮಕೂರು ನಡುವೆ ಮೆಟ್ರೋ ರೈಲು ಬರುತ್ತೆ ಎಂಬ ಖುಷಿಯಲ್ಲಿದ್ದ ಜನರಿಗೆ ಬೇಸರದ ಸಂಗತಿ ಎದುರಾಗಿದೆ. ನಮ್ಮೂರಿಗೆ ನಿಲ್ದಾಣಗಳಿಲ್ಲದ ಮೆಟ್ರೋ ನಮಗ್ಯಾಕೆ ಎಂದು ಈ ಭಾಗದ ಜನರು ಬಿಎಂಆರ್‌ಸಿಎಲ್‌ನ್ನು ಪ್ರಶ್ನೆ ಮಾಡುತ್ತಿದ್ದಾರೆ.
ನಿಲ್ದಾಣಗಳ ಸಂಖ್ಯೆ ಇಳಿಕೆ ಸಾಧ್ಯತೆ
ಮಾದಾವರ ಮತ್ತು ತುಮಕೂರು ಮಾರ್ಗದ ಡಿಪಿಆರ್‌ನಲ್ಲಿ 26 ನಿಲ್ದಾಣಗಳ ಸಂಖ್ಯೆಯನ್ನು 16ಕ್ಕೆ ಇಳಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಟು ತುಮಕೂರು ವರೆಗೆ ಪ್ರತಿ 4.5 ಕಿ.ಮೀಗೆ ಒಂದೇ ನಿಲ್ದಾಣ ಮಾಡುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಿಲ್ದಾಣಗಳು ಕಡಿತವಾಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಕೇವಲ 16 ನಿಲ್ದಾಣ
ನಿಲ್ದಾಣಗಳ ಸಂಖ್ಯೆ ಕಡಿತವಾಗುವ ವಿಷಯ ತಿಳಿದು ತುಮಕೂರು ಭಾಗದ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 58 ಕಿಲೋಮೀಟರ್ ಮಾರ್ಗ, ಕೇವಲ 16 ನಿಲ್ದಾಣಗಳನ್ನು ಮಾಡುವ ಕುರಿತು ಡಿಪಿಆರ್‌ನಲ್ಲಿ ಪ್ರಸ್ತಾಪವಿದೆ ಎಂದು ಹೇಳಲಾಗುತ್ತಿದೆ.
ಬಿಎಂಆರ್‌ಸಿಎಲ್
ಬಿಎಂಆರ್‌ಸಿಎಲ್ ಮೊದಲ ಬಾರಿಗೆ ಮೊದಲ ಬಾರಿಗೆ ಅಂತರ್ ಜಿಲ್ಲೆ ಮೆಟ್ರೋ ಶುರು ಮಾಡಲು ಮುಂದಾಗಿದೆ. ಈಗಾಗಗಲೇ ಬೆಂಗಳೂರಿನ ಹಸಿರು ಮಾರ್ಗ ಹೊರವಲಯ ಮಾದಾವರ ತಲುಪಿದೆ. ಇಲ್ಲಿಂದ ತುಮಕೂರು ನಗರಕ್ಕೆ ಮೆಟ್ರೋ ವಿಸ್ತರಿಸಲು ಬಿಎಂಆರ್‌ಸಿಎಲ್ ಮುಂದಾಗಿದ್ದು, ಇದು ಅಂದಾಜು 20 ಸಾವಿರ ಕೋಟಿಯ ಬೃಹತ್ ಯೋಜನೆಯಾಗಿದೆ.
ನಾನ್ ಸ್ಟಾಪ್
ಸದ್ಯ ಈ ಮಾರ್ಗದಲ್ಲಿ ಹೆಚ್ಚಿನ ನಿಲ್ದಾಣಗಳನ್ನು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ನಾನ್ ಸ್ಟಾಪ್ ಬಸ್ ಮತ್ತು ಸಾಮಾನ್ಯ ಬಸ್ ರೀತಿಯಲ್ಲಿ ಮೆಟ್ರೋ ರೈಲುಗಳಾದ್ರೆ ಎಲ್ಲಾ ವರ್ಗದವರಿಗೆ ಸೇವೆ ಸಿಗಲಿದೆ ಎಂಬುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: 6 ಕಾರಣಗಳಿಗೆ ತುಮಕೂರಿಗೆ ಮೆಟ್ರೋ ರೈಲು ಯೋಜನೆ ಬೇಡವಂತೆ; ಪತ್ರಿಕಾ ಹೇಳಿಕೆ ಬಿಡುಗಡೆ

