ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗಡಿಪಾರು ಮಾಡಬೇಕೆಂದು ರಾಷ್ಟ್ರ ರಕ್ಷಣಾ ಪಡೆಯು ಬೃಹತ್ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಹಿಂದೂ ಮುಖಂಡ ವಸಂತ್ ಗಿಳಿಯಾರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಬೆಂಗಳೂರು (ಆ.16) ನಿನ್ನೆ ವಂದೇ ಮಾತರಂ ಹಾಡುವಾಗ ಒಬ್ಬ ಹೆಣ್ಣು ಮಗಳು(ಸೋನಿಯಾ ಗಾಂಧಿ) ಒದ್ದಾಡಿದಳು. ಅವರ ಪಕ್ಕದಲ್ಲೇ ಮಲ್ಲಿಕಾರ್ಜುನ ಖರ್ಗೆ ನಿಂತಿದ್ರು. ಅವರ ಮಗ ಕರ್ನಾಟಕದ ಗೃಹಮಂತ್ರಿಗಳು. ಈ ಗೃಹಮಂತ್ರಿಗಳಿಗೆ ನನ್ನ ಮೇಲೆ ತುಂಬಾ ಪ್ರೀತಿ, ನಾನು ಈ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ ಎಂಬ ಕಾರಣಕ್ಕೆ ನನಗೆ ನೋಟಿಸ್ ಬಂದಿತ್ತು. ಆದರೆ ನಾನು ನೋಟಿಸ್ ಸ್ವೀಕರಿಸಿಲ್ಲ..ಹಿಂದೂ ಮುಖಂಡ ವಸಂತ್ ಗಿಳಿಯಾರ್ ಸರ್ಕಾರದ ನಡೆ ವಿರುದ್ಧ ಟೀಕಿಸಿದರು.

ಅಕ್ರಮ ಬಾಂಗ್ಲಾದೇಶಿಗಳ ಗಡಿಪಾರಿಗೆ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಷ್ಟ್ರ ರಕ್ಷಣಾ ಪಡೆಯ ನೇತೃತ್ವದಲ್ಲಿ ನಡೆಯುತ್ತಿರುವಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದರು.

ಅಕ್ರಮ ಬಾಂಗ್ಲಾದೇಶಿಯರು ಹೇಗೆ ನುಸುಳಿದರು?

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಬಾಂಗ್ಲಾ ನುಸುಳುಕೋರರು ಹೇಗೆ ದೇಶದೊಳಗೆ ಬಂದ್ರೂ ಅಂತಾ ಗೃಹಮಂತ್ರಿಗಳೇ ಕೇಳ್ತಾರೆ! ಆದರೆ ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಯಾರ ಸರ್ಕಾರ ಇತ್ತು? ಅವರೇ ಎಲ್ಲರನ್ನ ದೇಶದೊಳಗೆ ಬಿಟ್ಟುಕೊಂಡವರು. ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎಸ್‌ಐಆರ್ ಶುರು ಮಾಡಿದಾಗಲೇ ಬಾಂಗ್ಲಾ ನುಸುಳುಕೋರರು ಸಾವಿರಾರು ಮಂದಿ ಹೇಗೆ ಬಾಂಗ್ಲಾದೇಶಕ್ಕೆ ತೆರಳಿದರು, ಮಮತಾ ಸರ್ಕಾರ ಬಂದ ಮೇಲೆ ಮತ್ತೆ ಬಂಗಾಳಕ್ಕೆ ಬರುತ್ತೇವೆ ಎಂದು ಬಾಂಗ್ಲಾಪ್ರಜೆಗಳು ಬಹಿರಂಗವಾಗಿ ಬೆದರಿಕೆ ಹಾಕವ ವಿಡಿಯೋಗಳು ನೋಡಿಯೇ ಇರುತ್ತೀರಿ. ಪಶ್ಚಿಮ ಬಂಗಾಳದಿಂದ ರೈಲುಗಳು ರಾಜ್ಯದೊಳಗೂ ನುಸುಳಿದ್ದಾರೆ. ಆದರೆ ನುಸುಳುಕೋರರನ್ನ ಪತ್ತೆ ಹಚ್ಚಿ ಗಡಿಪಾರು ಮಾಡುವ ಕೆಲಸ ಆಗುತ್ತಿಲ್ಲ ಎಂದರು.

ಪೊಲೀಸ್, ಸರ್ಕಾರ ಮಾಡಬೇಕಾದ ಕೆಲಸ ಕಾರ್ಯಕರ್ತರು ಮಾಡುತ್ತಿದ್ದಾರೆ

ನಾನು ಒಂದು ಮಾತು ಹೇಳ್ತೇನೆ; ಇವತ್ತು ಪೊಲೀಸರು, ಸರ್ಕಾರ ಮಾಡಬೇಕಾದ ಕೆಲಸವನ್ನು ಹಿಂದೂಪರ ಕಾರ್ಯಕರ್ತರು ಮಾಡುತ್ತಿದ್ದಾರೆ. ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಜೀವ ಪಣಕ್ಕಿಟ್ಟು ದೇಶದ ಸುರಕ್ಷತೆಗೆ ಈ ಕಾರ್ಯ ಮಾಡುತ್ತಿರುವ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪ್ರತಿಭಟನೆಯಲ್ಲಿ ಸೂಲಿಬೆಲೆ, ಕೆರೆಹಳ್ಳಿ ಭಾಗಿ

ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಷ್ಟ್ರ ರಕ್ಷಣಾ ಪಡೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬೃಹತ್ ಪ್ರತಿಭಟನೆಗೆ ಕರೆಗೆ ಓಗೊಟ್ಟು ರಾಜ್ಯದ ವಿವಿಧ ಜಿಲ್ಲೆಗಳಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದಾರೆ. ‘ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡಿ, ನಮ್ಮ ನಾಡನ್ನು ಉಳಿಸಿ’ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಚಕ್ರವರ್ತಿ ಸೂಲಿಬೆಲೆ, ಪುನೀತ್ ಕೆರೆಹಳ್ಳಿ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿದ್ದಾರೆ.