- Home
- Karnataka Districts
- ಬೆಳಗಾವಿ ಫೋಟೋಗ್ರಾಫರ್ ಹತ್ಯೆ: ಆಸ್ತಿ ವಿವಾದ ಇಲ್ಲ, ಹಳೇ ಸೇಡು ಇಲ್ಲ, ಹಿಂಗೂ ಕೊಲೆ ಮಾಡ್ತಾರಾ!?
ಬೆಳಗಾವಿ ಫೋಟೋಗ್ರಾಫರ್ ಹತ್ಯೆ: ಆಸ್ತಿ ವಿವಾದ ಇಲ್ಲ, ಹಳೇ ಸೇಡು ಇಲ್ಲ, ಹಿಂಗೂ ಕೊಲೆ ಮಾಡ್ತಾರಾ!?
ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದ ಫೋಟೋಗ್ರಾಫರ್ ಮಹೇಶ್ ಉಜನಿಮಠ (33) ಕ್ಷುಲ್ಲಕ ಕಾರಣಕ್ಕೆ ಭೀಕರ ಹತ್ಯೆಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡವಾಡ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಬೆಳಗಾವಿ ಫೋಟೋಗ್ರಾಫರ್ ಕೊಲೆ ಪ್ರಕರಣ
ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದ ಫೋಟೋಗ್ರಾಫರ್ ಮಹೇಶ್ ಉಜನಿಮಠ (33) ಕ್ಷುಲ್ಲಕ ಕಾರಣಕ್ಕೆ ಭೀಕರ ಹತ್ಯೆಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡವಾಡ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಇದನ್ನೂ ಓದಿ: Photos: ಚಾಲಕನ ನಿರ್ಲಕ್ಷ್ಯ, ತನ್ನಿಂತಾನೆ ಚಲಿಸಿ ಡಿಪೋದ ಕಟ್ಟಡಕ್ಕೆ ನುಗ್ಗಿದ BMTC ಬಸ್!
ಬೆಳಗಾವಿ ಫೋಟೋಗ್ರಾಫರ್ ಕೊಲೆ ಪ್ರಕರಣ: ಹಿಂಗೂ ಕೊಲೆ ಮಾಡ್ತಾರಾ?
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದೊಡವಾಡ ಗ್ರಾಮದಲ್ಲಿ ಹತ್ಯೆ ಮಾಡಲಾಗಿತ್ತು. ಹತ್ಯೆ ಘಟನೆ ಬಳಿಕ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ದೊಡವಾಡ ಪೊಲೀಸರು ಪ್ರಕರಣವನ್ನ ಭೇದಿಸಿದ್ದಾರೆ. ಆದರೆ, ಈ ಕೊಲೆಯ ಹಿಂದೆ ಇರುವ ಅಸಲಿ ಕಾರಣ ಕೇಳಿದರೆ ಹೀಗೂ ಕೊಲೆಯಾಗುತ್ತಾ ಅಂತಾ ನೀವು ಬೆಚ್ಚಿಬೀಳುವುದು ಗ್ಯಾರಂಟಿ. ಹೌದು ಯಾಕೆಂದರೆ ಫೋಟೋಗ್ರಾಫರ್ ಮಹೇಶ್‌ನ ಹತ್ಯೆ ಮಾಡಿದ್ದು ಬೇರೆ ಯಾರೂ ಅಲ್ಲ, ಸ್ವಂತ ರಕ್ತಸಂಬಂಧಿ ರುದ್ರಯ್ಯ ಉಜನಿಮಠ ಎಂಬುವವನಿಂದ!
ದಾರಿ ವಿಚಾರಕ್ಕೆ ಶುರುವಾದ ಕಿರಿಕ್ ಕೊಲೆಯಲ್ಲಿ ಅಂತ್ಯ!
ಈ ಕೊಲೆಯ ಹಿಂದೆ ಯಾವುದೇ ದೊಡ್ಡ ಆಸ್ತಿ ವಿವಾದ ಅಥವಾ ಹಳೇ ಸೇಡು ಅನ್ನೋದೇ ಇರಲಿಲ್ಲ. ಈ ಪ್ರಕರಣದ ಬಿಗ್ ಟ್ವಿಸ್ಟ್ ಏನೆಂದರೆ, ಕೇವಲ ಮನೆ ಮುಂದಿನ ರಸ್ತೆಯಲ್ಲಿ ಓಡಾಡುವ ವಿಚಾರಕ್ಕಾಗಿ ನಡೆದ ಕ್ಷುಲ್ಲಕ ಘಟನೆಯಿಂದ ಹತ್ಯೆ ಮಾಡುವ ಹಂತಕ್ಕೆ ಹೋಗಿದೆ. 'ನನ್ನ ಮನೆ ಮುಂದಿನ ರಸ್ತೆಯಲ್ಲಿ ನೀನು ಓಡಾಡಬಾರದು' ಎಂದು ರುದ್ರಯ್ಯ ಉಜನಿಮಠ ತಗಾದೆ ತೆಗೆದಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಸಣ್ಣದಾಗಿ ಶುರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ದಾರಿ ವಿಚಾರಕ್ಕೆ ಕೊಲೆ ಮಾಡಿರುವುದು ಇದೆಂಥ ದುರಂತ.
ಇದನ್ನೂ ಓದಿ: ಪೊಲೀಸ್ ವಶದಲ್ಲಿದ್ದಾಗಲೇ ವ್ಯಕ್ತಿ ಸಾವು; ಹುಳಿಯಾರು ಠಾಣೆಗೆ ಗ್ರಾಮಸ್ಥರ ಮುತ್ತಿಗೆ, ಬೀಗ ಜಡಿದು ಪ್ರತಿಭಟನೆ
ಫೋಟೋಗ್ರಾಫರ್ ಕೊಲೆಗೆ ಬೆಚ್ಚಿಬಿಳ್ತು ಇಡೀ ಗ್ರಾಮ!
ಮನೆ ಮುಂದಿನ ದಾರಿಯ ವಿಚಾರವಾಗಿ ಶುರುವಾದ ಜಗಳದಲ್ಲಿ ರುದ್ರಯ್ಯ, ಪ್ಲಾನ್ ಮಾಡಿ ಮಹೇಶ್ ಮೇಲೆ ಅಟ್ಯಾಕ್ ಮಾಡಿದ್ದಾನೆ. ಕೈಗೆ ಸಿಕ್ಕ ಮಾರಕಾಸ್ತ್ರದಿಂದ ಮಹೇಶ್‌ನನ್ನು ಮನಬಂದಂತೆ ಕೊಚ್ಚಿ ಸ್ಥಳದಲ್ಲೇ ಹೆಣವಾಗಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಮಹೇಶ್ ಉಸಿರು ಚೆಲ್ಲುತ್ತಿದ್ದಂತೆ, ಆರೋಪಿ ರುದ್ರಯ್ಯ ಸಿಕ್ಕಿಬಿದ್ದರೆ ಅಪಾಯವೆಂದರಿತು ಸ್ಥಳದಿಂದ ಪರಾರಿಯಾಗಿದ್ದ. ಗ್ರಾಮದ ಹೊರವಲಯದಲ್ಲಿ ನಡೆದ ಈ ಘಟನೆಯಿಂದ ಇಡೀ ದೊಡವಾಡ ಗ್ರಾಮವೇ ಭಯಭೀತಗೊಂಡಿತ್ತು. ಹತ್ಯೆ ನಡೆದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಬೆಳಗಾವಿ ಎಸ್ಪಿ ರಾಮರಾಜನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: Bengaluru Cab Scam: ₹285ರ ಟ್ರಿಪ್‌ಗೆ ₹5,950 ಬಿಲ್! ಬೆಂಗಳೂರಲ್ಲಿ ಕ್ಯಾಬ್ ಡ್ರೈವರ್‌ಗಳ ಹೊಸ ಕಳ್ಳಾಟ ಬಯಲು
ಪೊಲೀಸರ ಮಿಂಚಿನ ಕಾರ್ಯಾಚರಣೆ
ಕೊಲೆ ಮಾಡಿ ತಪ್ಪಿಸಿಕೊಳ್ಳಬಹುದೆಂದು ಅಂದುಕೊಂಡಿದ್ದ ರುದ್ರಯ್ಯನ ಆಟ ಬಹಳ ಹೊತ್ತು ನಡೆದಿಲ್ಲ. ಅತ್ತ ಆರೋಪಿ ಪರಾರಿಯಾದ ಬಳಿಕ ಇತ್ತ ದೊಡವಾಡ ಠಾಣೆ ಪೊಲೀಸರು ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ, ಖಚಿತ ಮಾಹಿತಿ ಮೇರೆಗೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಸಂಬಂಧಿಯನ್ನೇ ಕೊಂದು ಇಂದು ಆರೋಪಿ ಕಂಬಿ ಎಣಿಸುವಂತಾಗಿದೆ. ಒಂದು ಸಣ್ಣ ದಾರಿ ವಿಚಾರ ಇಷ್ಟೊಂದು ದೊಡ್ಡ ದುರಂತಕ್ಕೆ ಕಾರಣವಾಗಿದ್ದು ಗ್ರಾಮಸ್ಥರಲ್ಲಿ ತೀವ್ರ ವಿಷಾದ ಮೂಡಿಸಿದೆ.

