MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • Photos: ಚಾಲಕನ ನಿರ್ಲಕ್ಷ್ಯ, ತನ್ನಿಂತಾನೆ ಚಲಿಸಿ ಡಿಪೋದ ಕಟ್ಟಡಕ್ಕೆ ನುಗ್ಗಿದ BMTC ಬಸ್!

Photos: ಚಾಲಕನ ನಿರ್ಲಕ್ಷ್ಯ, ತನ್ನಿಂತಾನೆ ಚಲಿಸಿ ಡಿಪೋದ ಕಟ್ಟಡಕ್ಕೆ ನುಗ್ಗಿದ BMTC ಬಸ್!

ಚಾಲಕನ ಸಣ್ಣ ನಿರ್ಲಕ್ಷ್ಯದಿಂದಾಗಿ ಬೆಂಗಳೂರಿನ ಪೀಣ್ಯ ಎರಡನೇ ಹಂತದ ಡಿಪೋದಲ್ಲಿ ನಿಯಂತ್ರಣ ಕೊಠಡಿಗೆ ನುಗ್ಗಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಘಟನೆ ಹೇಗೆ ನಡೆಯಿತು, ಘಟನೆಯ ಫೋಟೋ ಇಲ್ಲಿವೆ ನೋಡಿ

1 Min read
Author : Ravi Janekal
Published : Mar 20 2026, 10:42 AM IST
Share this Photo Gallery
  • FB
  • TW
  • Linkdin
  • Whatsapp
15
ಚಾಲಕನ ನಿರ್ಲಕ್ಷ್ಯ ತನ್ನಿಂತಾನೇ ಚಲಿಸಿದ ಬಿಎಂಟಿಸಿ ಬಸ್!
Image Credit : Asianet News

ಚಾಲಕನ ನಿರ್ಲಕ್ಷ್ಯ ತನ್ನಿಂತಾನೇ ಚಲಿಸಿದ ಬಿಎಂಟಿಸಿ ಬಸ್!

ಬೆಂಗಳೂರಿನಲ್ಲಿಂದು ಬೆಳ್ಳಂಬೆಳಗ್ಗೆಯೇ ಭೀಕರ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೀಣ್ಯ 2ನೇ ಹಂತದ ಬಿಎಂ‌ಟಿಸಿ ಡಿಪೋದಲ್ಲಿ ಎಂದಿನಂತೆ ಬಸ್‌ಗಳ ಓಡಾಟದ ಸಿದ್ಧತೆ ನಡೆಯುತ್ತಿತ್ತು. ಗಂಟೆ ಸರಿಯಾಗಿ ಮುಂಜಾನೆ 6:40. ಆದರೆ, ಅದೇ ಕ್ಷಣದಲ್ಲಿ ಅಲ್ಲಿ ಸಂಭವಿಸಿದ ಅನಾಹುತ ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸಿತು.

25
ಪೀಣ್ಯ ಬಸ್ ಡಿಪೋದಲ್ಲಿ ಭೀಕರ ಅಪಘಾತ
Image Credit : Asianet News

ಪೀಣ್ಯ ಬಸ್ ಡಿಪೋದಲ್ಲಿ ಭೀಕರ ಅಪಘಾತ

ನಿಂತಿದ್ದ ಬಸ್ಸೊಂದು ಇದ್ದಕ್ಕಿದ್ದಂತೆ ತನ್ನಿಂದ ತಾನೇ ಚಲಿಸಲು ಶುರು ಮಾಡಿ ವೇಗವಾಗಿ ಗೋಡೆಗೆ ಡಿಕ್ಕಿ ಹೊಡೆದಿದೆ. ದಢೀರ್ ನಡೆದ ಈ ಘಟನೆಯಿಂದ ಚಾಲಕರು ಒಂದು ಕ್ಷಣ ಏನಾಯ್ತು ಎಂದು ತಿಳಿಯದೇ ಬೆಚ್ಚಿಬಿದ್ದರು.

Related Articles

Related image1
ರಾಮನಗರ-ಕನಕಪುರಕ್ಕೆ ಬಿಎಂಟಿಸಿ ಬಸ್ ಸಂಚಾರ
Related image2
ಆನ್‌ಲೈನ್‌ನಲ್ಲಿ ಆಂಧ್ರದಿಂದ ಅಕ್ಕಿ ಖರೀದಿಸಲು ಬಿಎಂಟಿಸಿ ಚಾಲಕನ ಹುಡುಕಾಟ, 1 ಲಿಂಕ್, 10 ನಿಮಿಷ ಖಾತೆ ಸಂಪೂರ್ಣ ಖಾಲಿ!
35
ಪೀಣ್ಯ: ಕಟ್ಟಡಕ್ಕೆ ಗುದ್ದಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್!
Image Credit : Asianet News

ಪೀಣ್ಯ: ಕಟ್ಟಡಕ್ಕೆ ಗುದ್ದಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್!

ಅಲ್ಲಿ ನಿಂತಿದ್ದ ಎಲೆಕ್ಟ್ರಿಕ್ ಬಸ್ (KA51-AK4169) ಇದ್ದಕ್ಕಿದ್ದಂತೆ ಚಲಿಸಲಾರಂಭಿಸಿ ಹಠಾತ್ತನೆ ವೇಗ ಪಡೆಯಿತು. ಚಾಲಕನ ಸೀಟಿನಲ್ಲಿ ಯಾರೂ ಇಲ್ಲದಿದ್ದರೂ ಬಸ್ ಮಾತ್ರ ನೇರವಾಗಿ ಬಿಎಂಟಿಸಿ ಕಟ್ಟಡದತ್ತ ನುಗ್ಗಿದೆ. ಅಲ್ಲಿ ಪಾರ್ಕ್ ಮಾಡಲಾಗಿದ್ದ ನಾಲ್ಕು ದ್ವಿಚಕ್ರ ವಾಹನಗಳಿಗೆ ಗುದ್ದಿ ಪುಡಿಪುಡಿ ಮಾಡಿತು. ಬಸ್ ನಿಯಂತ್ರಣ ತಪ್ಪಿ ನುಗ್ಗುತ್ತಿದ್ದ ವೇಗ ಕಂಡು ಅಲ್ಲಿದ್ದವರು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಬೇಕಾಯಿತು.

45
ಪೀಣ್ಯ ಬಿಎಂಟಿಸಿ ಬಸ್ ದುರಂತ, ಅದೃಷ್ಟವಶಾತ್ ಪ್ರಾಣಾಪಾಯ ಇಲ್ಲ
Image Credit : Asianet News

ಪೀಣ್ಯ ಬಿಎಂಟಿಸಿ ಬಸ್ ದುರಂತ, ಅದೃಷ್ಟವಶಾತ್ ಪ್ರಾಣಾಪಾಯ ಇಲ್ಲ

ಬಸ್ ಕೇವಲ ಬೈಕ್‌ಗೆ ಗುದ್ದಿ ನಿಲ್ಲಲಿಲ್ಲ. ಅದು ನೇರವಾಗಿ ನುಗ್ಗಿದ್ದು ಸಂಚಾರ ನಿಯಂತ್ರಕರ (Traffic Controller) ಕೊಠಡಿಗೆ. ಕಟ್ಟಡದ ಗೋಡೆಗೆ ಬಸ್ ಜೋರಾಗಿ ಅಪ್ಪಳಿಸಿದ ಸದ್ದಿಗೆ ಇಡೀ ಕಟ್ಟಡ ನಡುಗಿಹೋಯಿತು. ಬಸ್ ಗುದ್ದಿದ ಒಂದು ಬದಿಯ ಕಟ್ಟಡ, ಕಿಟಕಿ ಗೋಡೆ ಬಿರುಕು ಬಿಟ್ಟಿದೆ. ಒಂದು ವೇಳೆ ಕೊಠಡಿಯೊಳಗೆ ಜನಜಂಗುಳಿ ಇದ್ದಿದ್ದರೆ ಅಥವಾ ಬಸ್ ಮುಂಭಾಗದಲ್ಲಿ ಯಾರಾದರೂ ಇದ್ದಿದ್ದರೆ ಇಂದು ದೊಡ್ಡ ದುರಂತವೇ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

55
ಚಾಲಕನ ಒಂದು ಸಣ್ಣ ತಪ್ಪು ದೊಡ್ಡ ದುರಂತಕ್ಕೆ ಕಾರಣವಾಯ್ತು!
Image Credit : Asianet News

ಚಾಲಕನ ಒಂದು ಸಣ್ಣ ತಪ್ಪು ದೊಡ್ಡ ದುರಂತಕ್ಕೆ ಕಾರಣವಾಯ್ತು!

ಹಾಗಾದರೆ ಈ ಅನಾಹುತಕ್ಕೆ ಕಾರಣವೇನು? ಎಂದು ವಿಚಾರಿಸಿದಾಗ ಹೊರಬಿದ್ದ ಸತ್ಯ ಬೆಚ್ಚಿಬೀಳಿಸುವಂತಿದೆ. ಚಾಲಕ ಬಸ್ಸನ್ನು ನಿಲ್ಲಿಸಿ ಹೋಗುವಾಗ ಹ್ಯಾಂಡ್ ಬ್ರೇಕ್ ಹಾಕುವುದನ್ನೇ ಮರೆತಿದ್ದ! ಎಲೆಕ್ಟ್ರಿಕ್ ಬಸ್‌ನ ಈ ತಾಂತ್ರಿಕ ಸೂಕ್ಷ್ಮತೆಯನ್ನು ಅರಿಯದ ಚಾಲಕನ ನಿರ್ಲಕ್ಷ್ಯ ಇಂದು ಬಿಎಂಟಿಸಿಗೆ ಸಾವಿರಾರು ರೂಪಾಯಿ ನಷ್ಟ ಉಂಟುಮಾಡಿದೆ. ಸಣ್ಣದೊಂದು ಹ್ಯಾಂಡ್ ಬ್ರೇಕ್ ಹಾಕಿದ್ದರೆ ಇಷ್ಟೊಂದು ಅಪಘಾತ ಸಂಭವಿಸುತ್ತಿರಲಿಲ್ಲ ಎಂಬ ಮಾತುಗಳು ಈಗ ಡಿಪೋ ಆವರಣದಲ್ಲಿ ಕೇಳಿಬರುತ್ತಿವೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಬೆಂಗಳೂರು
ಬಿಎಂಟಿಸಿ
ಅಪಘಾತ
ಕರ್ನಾಟಕ ಸುದ್ದಿ
Latest Videos
Recommended Stories
Recommended image1
ನಿನ್ನೆ ಯುಗಾದಿ, ಇಂದು ಹೊಸತೊಡಕು, ಮಾಂಸ ಖರೀದಿಗೆ ಮುಗಿಬಿದ್ದ ಜನ, ಪಾಪಣ್ಣ ಮಟನ್‌ ಸ್ಟಾಲ್‌ ಮುಂದೆ ಬೆಳ್ಳಂಬೆಳಗ್ಗೆ ಕ್ಯೂ ನಿಂತ ಮಂದಿ!
Recommended image2
ಉಡುಪಿ ಜಿಲ್ಲೆಗೆ ಇಂದು ಸಾರ್ವತ್ರಿಕ ರಜೆ ಘೋಷಿಸಿದ ಜಿಲ್ಲಾಧಿಕಾರಿ, ಹಬ್ಬದ ಸಂಭ್ರಮ ಡಬಲ್
Recommended image3
8 ವರ್ಷಗಳ ಬಳಿಕ ಕೃಷಿ ಇಲಾಖೆಯಲ್ಲಿ ನೇಮಕಾತಿ : 945 ಹುದ್ದೆಗಳ ಭರ್ತಿಗೆ ಮೂರು ತಿಂಗಳೊಳಗೆ ಮುಹೂರ್ತ: ಚಲುವರಾಯ
Related Stories
Recommended image1
ರಾಮನಗರ-ಕನಕಪುರಕ್ಕೆ ಬಿಎಂಟಿಸಿ ಬಸ್ ಸಂಚಾರ
Recommended image2
ಆನ್‌ಲೈನ್‌ನಲ್ಲಿ ಆಂಧ್ರದಿಂದ ಅಕ್ಕಿ ಖರೀದಿಸಲು ಬಿಎಂಟಿಸಿ ಚಾಲಕನ ಹುಡುಕಾಟ, 1 ಲಿಂಕ್, 10 ನಿಮಿಷ ಖಾತೆ ಸಂಪೂರ್ಣ ಖಾಲಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved