ಕೊಪ್ಪಳ: ಮುಸ್ಲಿಂ ಮನೆಯಲ್ಲಿ ಗಣೇಶನಿಗೆ ಪೂಜೆ, ಭಾವೈಕ್ಯತೆ ಮೆರೆದ ಶಮಿದ್ ಅಲಿ..!
ಶಮಿದ್ ಅಲಿ ಅವರು ತಮ್ಮ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದ್ದಾರೆ. ಹಿಂದೂ ಆರಾಧಕ ಗಣೇಶ ಮೂರ್ತಿಯನ್ನು ಶಮಿದ್ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ್ದಾರೆ. ಗಣೇಶ ಮೂರ್ತಿಯನ್ನು ತಂದು ಶಮಿದ್ ಅವರು ಹಿಂದೂ ಸಂಪ್ರದಾಯದಂತೆ ತಮ್ಮ ಮನೆಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಸಿಹಿ ತಿನಿಸು ಮಾಡಿ ನೈವೇದ್ಯ ಮಾಡಿದ್ದಾರೆ.
ಕೊಪ್ಪಳ(ಸೆ.09): ಈಶಪುತ್ರ ವಿನಾಯಕನನ್ನು ಮುಸ್ಲಿಮರೊಬ್ಬರು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದಿದ್ದಾರೆ.
ನಗರದ ಸರದಾರ ಗಲ್ಲಿಯ ಶಮಿದ್ ಅಲಿ ಅವರು ತಮ್ಮ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದ್ದಾರೆ. ಹಿಂದೂ ಆರಾಧಕ ಗಣೇಶ ಮೂರ್ತಿಯನ್ನು ಶಮಿದ್ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ್ದಾರೆ. ಗಣೇಶ ಮೂರ್ತಿಯನ್ನು ತಂದು ಶಮಿದ್ ಅವರು ಹಿಂದೂ ಸಂಪ್ರದಾಯದಂತೆ ತಮ್ಮ ಮನೆಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಸಿಹಿ ತಿನಿಸು ಮಾಡಿ ನೈವೇದ್ಯ ಮಾಡಿದ್ದಾರೆ.
ಕೊಪ್ಪಳ: ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಭಾವೈಕ್ಯತೆಗೆ ಸಾಕ್ಷಿಯಾದ ಹನುಮಸಾಗರ ಗ್ರಾಮ
ಹಿಂದೂ-ಮುಸ್ಲಿಂ ಎಂಬ ಭೇದ ಇರಬಾರದು. ನಾವೆಲ್ಲರೂ ಒಂದೆ. ಗಣೇಶ, ಅಲ್ಲಾ ನಮಗೆಲ್ಲ ಸಮಾನರು. ಗಣೇಶ ದೇವರ ಆರಾಧನೆಯಿಂದ ನಮಗೆ ಹಿತ ಅನಿಸಿದೆ ಎನ್ನುತ್ತಾರೆ ಶಮೀದ್. ಗಣೇಶ ಮೂರ್ತಿ ಸ್ಥಾಪನೆ ಮಾಡಿರುವುದಕ್ಕೆ ಅವರ ಕುಟುಂಬ ಸದಸ್ಯರು ಸಹ ಸಂತೋಷದಿಂದ ಗಣೇಶ ಆರಾಧನೆಯಲ್ಲಿ ಭಾಗಿಯಾದರು.