ಜಿರೋಧಾ ಸಹ-ಸಂಸ್ಥಾಪಕರಾದ ನಿತಿನ್ ಮತ್ತು ನಿಖಿಲ್ ಕಾಮತ್ ಅವರ ತಾಯಿ ರೇವತಿ ಕಾಮತ್, ತಮ್ಮ ಸರಳ ಜೀವನಶೈಲಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. ಗಣೇಶ ಚತುರ್ಥಿಯಂದು ದುಬಾರಿ ಮೂರ್ತಿಯ ಬದಲು ಸ್ವತಃ ಮಣ್ಣಿನ ಗಣಪತಿಯನ್ನು ಮಾಡಿ ಪೂಜಿಸಿ, ಪರಿಸರ ಸ್ನೇಹಿ ಸಂದೇಶ ಸಾರಿದ್ದಾರೆ.

ಕೊಟ್ಯಾಂತರ ಆಸ್ತಿ ಇದ್ರು, ಗಣೇಶ ಮಾತ್ರ ಸಿಂಪಲ್‌; ಸೋಶಿಯಲ್‌ ಮಿಡೀಯಾದಲ್ಲಿ ವೈರಲ್‌ ಆದ ರೇವತಿ ಕಾಮತ್! ದುಡ್ಡು, ದುನಿಯಾ ಮತ್ತು ಐಷಾರಾಮಿ ಜೀವನದ ಹಿಂದೆ ಇಡೀ ಜಗತ್ತೇ ಓಡುತ್ತಿರುವ ಈ ಕಾಲದಲ್ಲಿ, ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳ ಹೆತ್ತ ತಾಯಿಯೊಬ್ಬರು ಇಡೀ ದೇಶಕ್ಕೇ ಮಾದರಿಯಾಗುವಂತಹ ಸರಳತೆಯನ್ನು ಮೆರೆದಿದ್ದಾರೆ. ದೇಶದ ನಂಬರ್ ಒನ್ ಬ್ರೋಕರೇಜ್ ಸಂಸ್ಥೆ ‘ಜಿರೋಧಾ’ (Zerodha) ಸಹ-ಸಂಸ್ಥಾಪಕರಾದ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಅವರ ತಾಯಿ ರೇವತಿ ಕಾಮತ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಸಂಸ್ಕಾರದ ಪಾಠ ಮಾಡಿದ್ರಾ ಕಾಮತ್!

ಮಕ್ಕಳ ಆಸ್ತಿ ಮೌಲ್ಯ ಸಾವಿರಾರು ಕೋಟಿ ರೂಪಾಯಿ ದಾಟಿದ್ದರೂ, ಈ ತಾಯಿ ಮಾತ್ರ ಗಣೇಶ ಚತುರ್ಥಿಯ ದಿನದಂದು ಇಟ್ಟ ಹೆಜ್ಜೆ ಮತ್ತು ತೋರಿದ ಭಕ್ತಿ ಪ್ರತಿಯೊಬ್ಬರ ಕಣ್ಣು ತೇವಗೊಳಿಸುವಂತಿದೆ. ಮಾರುಕಟ್ಟೆಯಲ್ಲಿ ಸಿಗುವ ಜಗಮಗಿಸುವ ದುಬಾರಿ ಗಣೇಶನ ಮೂರ್ತಿಯನ್ನು ತರದೆ, ತಾವೇ ಸ್ವತಃ ಜೇಡಿಮಣ್ಣಿನಿಂದ ಸಿದ್ಧಪಡಿಸಿದ ಪುಟ್ಟ ಗಣಪನನ್ನು ಪೂಜಿಸುವ ಮೂಲಕ ಇಂದಿನ ತಲೆಮಾರಿಗೆ ಸಂಸ್ಕಾರದ ಪಾಠ ಹೇಳಿಕೊಟ್ಟಿದ್ದಾರೆ.

ಪ್ರಕೃತಿಗೆ ಗೌರವ!

ಅವರ ಈ ಅಪರೂಪದ ಆಚರಣೆಯ ಹಿಂದೆ ಕೇವಲ ಭಕ್ತಿಯಷ್ಟೇ ಇಲ್ಲ, ಬದಲಿಗೆ ಪರಿಸರದ ಮೇಲಿರುವ ಅಪಾರ ಕಾಳಜಿಯೂ ಅಡಗಿದೆ. ಬಹುತೇಕ ಶ್ರೀಮಂತರು ತಮ್ಮ ಅಂತಸ್ತನ್ನು ಪ್ರದರ್ಶಿಸಲು ಹಬ್ಬಗಳ ದಿನದಂದು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ದೊಡ್ಡ ದೊಡ್ಡ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾರೆ. ಆದರೆ, ರೇವತಿ ಕಾಮತ್ ಅವರು ಯಾವುದೇ ರಾಸಾಯನಿಕ ಅಥವಾ ಬಣ್ಣಗಳಿಲ್ಲದ ನೈಸರ್ಗಿಕ ಮಣ್ಣನ್ನು ತಂದು, ತಾವೇ ಕುಳಿತು ಗಣಪನಿಗೆ ಒಂದು ಸುಂದರ ರೂಪ ನೀಡುತ್ತಾರೆ. ಇನ್ನು ಹಬ್ಬ ಮುಗಿದ ನಂತರವೂ ಅವರು ತೋರುವ ಶಿಸ್ತು ನಿಜಕ್ಕೂ ಅದ್ಭುತ. ಕೆರೆ ಅಥವಾ ನದಿಗಳಿಗೆ ವಿಗ್ರಹವನ್ನು ತಂದು ನೀರು ಕಲುಷಿತಗೊಳಿಸುವ ಬದಲು, ಮನೆಯಲ್ಲೇ ಒಂದು ಬಕೆಟ್ ನೀರಿನಲ್ಲಿ ಗಣೇಶನನ್ನು ವಿಸರ್ಜನೆ ಮಾಡುತ್ತಾರೆ. ಆ ಕರಗಿದ ಮಣ್ಣನ್ನು ತೋಟದ ಗಿಡಗಳಿಗೆ ಗೊಬ್ಬರವಾಗಿ ಹಾಕುವ ಮೂಲಕ ಪ್ರಕೃತಿಗೆ ತಾವಿಟ್ಟ ಗೌರವವನ್ನು ಸಾಬೀತುಪಡಿಸುತ್ತಾರೆ.

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್!

ಕೊಟ್ಯಾಂತರ ಆಸ್ತಿ ಇದ್ರು, ಗಣೇಶ ಮಾತ್ರ ಸಿಂಪಲ್‌; ಸೋಶಿಯಲ್‌ ಮಿಡೀಯಾದಲ್ಲಿ ವೈರಲ್‌ ಆದ ರೇವತಿ ಕಾಮತ್!ದುಡ್ಡು, ದುನಿಯಾ ಮತ್ತು ಐಷಾರಾಮಿ ಜೀವನದ ಹಿಂದೆ ಇಡೀ ಜಗತ್ತೇ ಓಡುತ್ತಿರುವ ಈ ಕಾಲದಲ್ಲಿ, ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳ ಹೆತ್ತ ತಾಯಿಯೊಬ್ಬರು ಇಡೀ ದೇಶಕ್ಕೇ ಮಾದರಿಯಾಗುವಂತಹ ಸರಳತೆಯನ್ನು ಮೆರೆದಿದ್ದಾರೆ. ದೇಶದ ನಂಬರ್ ಒನ್ ಬ್ರೋಕರೇಜ್ ಸಂಸ್ಥೆ ‘ಜಿರೋಧಾ’ (Zerodha) ಸಹ-ಸಂಸ್ಥಾಪಕರಾದ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಅವರ ತಾಯಿ ರೇವತಿ ಕಾಮತ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಸಂಸ್ಕಾರದ ಪಾಠ ಮಾಡಿದ್ರಾ ಕಾಮತ್?

ಮಕ್ಕಳ ಆಸ್ತಿ ಮೌಲ್ಯ ಸಾವಿರಾರು ಕೋಟಿ ರೂಪಾಯಿ ದಾಟಿದ್ದರೂ, ಈ ತಾಯಿ ಮಾತ್ರ ಗಣೇಶ ಚತುರ್ಥಿಯ ದಿನದಂದು ಇಟ್ಟ ಹೆಜ್ಜೆ ಮತ್ತು ತೋರಿದ ಭಕ್ತಿ ಪ್ರತಿಯೊಬ್ಬರ ಕಣ್ಣು ತೇವಗೊಳಿಸುವಂತಿದೆ. ಮಾರುಕಟ್ಟೆಯಲ್ಲಿ ಸಿಗುವ ಜಗಮಗಿಸುವ ದುಬಾರಿ ಗಣೇಶನ ಮೂರ್ತಿಯನ್ನು ತರದೆ, ತಾವೇ ಸ್ವತಃ ಜೇಡಿಮಣ್ಣಿನಿಂದ ಸಿದ್ಧಪಡಿಸಿದ ಪುಟ್ಟ ಗಣಪನನ್ನು ಪೂಜಿಸುವ ಮೂಲಕ ಇಂದಿನ ತಲೆಮಾರಿಗೆ ಸಂಸ್ಕಾರದ ಪಾಠ ಹೇಳಿಕೊಟ್ಟಿದ್ದಾರೆ.

ಪ್ರಕೃತಿಗೆ ಗೌರವ!

ಅವರ ಈ ಅಪರೂಪದ ಆಚರಣೆಯ ಹಿಂದೆ ಕೇವಲ ಭಕ್ತಿಯಷ್ಟೇ ಇಲ್ಲ, ಬದಲಿಗೆ ಪರಿಸರದ ಮೇಲಿರುವ ಅಪಾರ ಕಾಳಜಿಯೂ ಅಡಗಿದೆ. ಬಹುತೇಕ ಶ್ರೀಮಂತರು ತಮ್ಮ ಅಂತಸ್ತನ್ನು ಪ್ರದರ್ಶಿಸಲು ಹಬ್ಬಗಳ ದಿನದಂದು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ದೊಡ್ಡ ದೊಡ್ಡ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾರೆ. ಆದರೆ, ರೇವತಿ ಕಾಮತ್ ಅವರು ಯಾವುದೇ ರಾಸಾಯನಿಕ ಅಥವಾ ಬಣ್ಣಗಳಿಲ್ಲದ ನೈಸರ್ಗಿಕ ಮಣ್ಣನ್ನು ತಂದು, ತಾವೇ ಕುಳಿತು ಗಣಪನಿಗೆ ಒಂದು ಸುಂದರ ರೂಪ ನೀಡುತ್ತಾರೆ. ಇನ್ನು ಹಬ್ಬ ಮುಗಿದ ನಂತರವೂ ಅವರು ತೋರುವ ಶಿಸ್ತು ನಿಜಕ್ಕೂ ಅದ್ಭುತ. ಕೆರೆ ಅಥವಾ ನದಿಗಳಿಗೆ ವಿಗ್ರಹವನ್ನು ತಂದು ನೀರು ಕಲುಷಿತಗೊಳಿಸುವ ಬದಲು, ಮನೆಯಲ್ಲೇ ಒಂದು ಬಕೆಟ್ ನೀರಿನಲ್ಲಿ ಗಣೇಶನನ್ನು ವಿಸರ್ಜನೆ ಮಾಡುತ್ತಾರೆ. ಆ ಕರಗಿದ ಮಣ್ಣನ್ನು ತೋಟದ ಗಿಡಗಳಿಗೆ ಗೊಬ್ಬರವಾಗಿ ಹಾಕುವ ಮೂಲಕ ಪ್ರಕೃತಿಗೆ ತಾವಿಟ್ಟ ಗೌರವವನ್ನು ಸಾಬೀತುಪಡಿಸುತ್ತಾರೆ.

ಸರಳತೆಗೆ ಪಿದಾ ಆದ ನೆಟ್ಟಿಗರು!

ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇವರ ಸರಳತೆಗೆ ಫಿದಾ ಆಗಿದ್ದಾರೆ. "ಹಣದಿಂದ ಏನನ್ನು ಬೇಕಾದರೂ ಕೊಳ್ಳಬಹುದು, ಆದರೆ ಇಂತಹ ಸಂಸ್ಕಾರವನ್ನು ಕೊಳ್ಳಲು ಸಾಧ್ಯವಿಲ್ಲ" ಎಂದು ಜನರು ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ. ರೇವತಿ ಕಾಮತ್ ಕೇವಲ ಬಿಲಿಯನೇರ್‌ಗಳ ತಾಯಿಯಷ್ಟೇ ಅಲ್ಲ, ಸ್ವತಃ ‘ಕ್ಯಾಲಿಕ್ಸ್’ (Calyx) ಎಂಬ ಯಶಸ್ವಿ ಸಸ್ಯೋದ್ಯಮ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಸಬಲ ಮಹಿಳೆ. ಇದರೊಂದಿಗೆ ಅವರು ಅತ್ಯುತ್ತಮ ವೀಣಾ ವಾದಕಿಯೂ ಹೌದು. ಈ ಹಿಂದೆ ಅವರು ಸಾಮಾನ್ಯ ಜನರಂತೆ ಬೆಂಗಳೂರು ಮೆಟ್ರೋದಲ್ಲಿ ಸದ್ದಿಲ್ಲದೆ ಪ್ರಯಾಣಿಸಿ ಎಲ್ಲರ ಗಮನ ಸೆಳೆದಿದ್ದರು. ಯುವ ಉದ್ಯಮಿಗಳಾದ ನಿತಿನ್ ಮತ್ತು ನಿಖಿಲ್ ಕಾಮತ್ ಇಷ್ಟೊಂದು ಎತ್ತರಕ್ಕೆ ಬೆಳೆದು ಯಶಸ್ವಿಯಾಗಿದ್ದರೂ, ತಳಮಟ್ಟದ ವಾಸ್ತವವನ್ನು ಮರೆಯದಿರಲು ಈ ತಾಯಿ ನೀಡಿದ ಸಂಸ್ಕಾರವೇ ಕಾರಣ ಎಂಬುದು ಈಗ ಇಡೀ ಜಗತ್ತಿಗೆ ಮನವರಿಕೆಯಾಗಿದೆ. ಹಣದ ಅಹಂಕಾರವಿಲ್ಲದ, ಸಂಸ್ಕೃತಿ ಮತ್ತು ಪ್ರಕೃತಿಯನ್ನು ಪೂಜಿಸುವ ರೇವತಿ ಕಾಮತ್ ಅವರ ಈ ನಡೆ ಇಂದಿನ ಸಮಾಜಕ್ಕೆ ಅತ್ಯಂತ ದೊಡ್ಡ ಪ್ರೇರಣೆಯಾಗಿದೆ.

ಸಮಾಜಕ್ಕೆ ದೊಡ್ಡ ಪ್ರೇರಣೆ!