MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಲಕ್ಕುಂಡಿಗೆ ರಾಜ್ಯ ಸರ್ಕಾರದಿಂದ 2.25 ಕೋಟಿ; 15 ದಿನದ ಉತ್ಖನನದಲ್ಲಿ ಸಿಕ್ಕಿದ್ದೇನು?

ಲಕ್ಕುಂಡಿಗೆ ರಾಜ್ಯ ಸರ್ಕಾರದಿಂದ 2.25 ಕೋಟಿ; 15 ದಿನದ ಉತ್ಖನನದಲ್ಲಿ ಸಿಕ್ಕಿದ್ದೇನು?

ಗದಗ ಜಿಲ್ಲೆಯ ಐತಿಹಾಸಿಕ ತಾಣ ಲಕ್ಕುಂಡಿಗೆ ವಿದೇಶಿ ತಜ್ಞರು ಭೇಟಿ ನೀಡಿ ಅಭಿವೃದ್ಧಿ ಯೋಜನೆ ರೂಪಿಸುತ್ತಿದ್ದಾರೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ನಡೆಯುತ್ತಿರುವ ಉತ್ಖನನದಲ್ಲಿ ಪಚ್ಚೆ ಹರಳುಗಳು ಸೇರಿದಂತೆ 40ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ.

2 Min read
Author : Kannadaprabha News
Published : Feb 03 2026, 08:11 AM IST
Share this Photo Gallery
  • FB
  • TW
  • Linkdin
  • Whatsapp
15
 ಐತಿಹಾಸಿಕ ತಾಣ ಲಕ್ಕುಂಡಿ
Image Credit : Asianet News

ಐತಿಹಾಸಿಕ ತಾಣ ಲಕ್ಕುಂಡಿ

ಗದಗ ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ತಾಣ ಲಕ್ಕುಂಡಿ ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಭಾನುವಾರ ಮತ್ತು ಸೋಮವಾರ ವಿದೇಶಿ ತಜ್ಞರ ಭೇಟಿಯ ಮೂಲಕ ಗಮನ ಸೆಳೆಯುತ್ತಿದ್ದು, ಇತ್ತ ಉತ್ಖನನ ಕಾರ್ಯವೂ ಮುಂದುವರಿಯಿತು. ಇಟಲಿ ಹಾಗೂ ಗ್ರೀಸ್ ದೇಶದ ತಜ್ಞರನ್ನೊಳಗೊಂಡ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಲಕ್ಕುಂಡಿಯಲ್ಲಿನ ಅಭಿವೃದ್ಧಿ ಕಾರ್ಯಗಳು, ಮತ್ತು ಉತ್ಖನನ ಕುರಿತು ಮಾಹಿತಿ ಸಂಗ್ರಹಿಸಿದರು.

25
 3 ಎಕರೆ ಜಾಗದಲ್ಲಿ ಹರಡಿರುವ ಬಯಲು ವಸ್ತು ಸಂಗ್ರಹಾಲಯ
Image Credit : Asianet News

3 ಎಕರೆ ಜಾಗದಲ್ಲಿ ಹರಡಿರುವ ಬಯಲು ವಸ್ತು ಸಂಗ್ರಹಾಲಯ

ಡೆಕ್ಕನ್ ಹೆರಿಟೇಜ್ ಫೌಂಡೇಶನ್‌ನ ಮುಖ್ಯಸ್ಥರಾದ ಡಾ. ಹೆಲೆನ್ ನೇತೃತ್ವದ ತಜ್ಞರ ತಂಡ ಲಕ್ಕುಂಡಿಗೆ ಭೇಟಿ ನೀಡಿ, ಇಲ್ಲಿನ ಪ್ರಾಚ್ಯಾವಶೇಷಗಳು ಹಾಗೂ ದೇವಸ್ಥಾನಗಳ ವಾಸ್ತುಶಿಲ್ಪವನ್ನು ಕೂಲಂಕಷವಾಗಿ ಪರಿಶೀಲಿಸಿತು. ಸುಮಾರು 3 ಎಕರೆ ಜಾಗದಲ್ಲಿ ಹರಡಿರುವ ಬಯಲು ವಸ್ತು ಸಂಗ್ರಹಾಲಯವನ್ನು ಅತ್ಯಾಧುನಿಕ ಹಾಗೂ ಪ್ರವಾಸಿಸ್ನೇಹಿಯನ್ನಾಗಿ ರೂಪಿಸಲು ಈ ತಂಡ ಯೋಜನೆ ಸಿದ್ಧಪಡಿಸುತ್ತಿದೆ.

Related Articles

Related image1
ಲಕ್ಕುಂಡಿ ಬಳಿಕ ಅತೀ ದೊಡ್ಡ ಚಿನ್ನದ ಗಣಿಯಲ್ಲಿ ಹಾವಿನ ಪ್ರಭೇದದ ಕಪ್ಪು ಕಣ್ಣಿನ ಹೊಸ ಜೀವಿ ಪತ್ತೆ
Related image2
12 ಅಡಿ ಆಳಕ್ಕೆ ಅಗೆತ; ಪುರಾತತ್ವ ಇಲಾಖೆಯ ಉತ್ಖನನಕ್ಕೆ ಲಕ್ಕುಂಡಿ ಜನರಿಂದ ದಿಢೀರ್ ವಿರೋಧ
35
ನೂತನ ಯೋಜನೆ, ₹2.25 ಕೋಟಿ ಅನುದಾನ
Image Credit : Asianet News

ನೂತನ ಯೋಜನೆ, ₹2.25 ಕೋಟಿ ಅನುದಾನ

ರಾಜ್ಯ ಸರ್ಕಾರವು ಲಕ್ಕುಂಡಿ ಅಭಿವೃದ್ಧಿಗೆ ₹2.25 ಕೋಟಿ ಅನುದಾನ ಮೀಸಲಿಟ್ಟಿದ್ದು, ವಿದೇಶಿ ಸಂಸ್ಥೆಯು ಸರ್ಕಾರದ ಟೆಂಡರ್ ಪಡೆದು ಈ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ. ಶೀಘ್ರದಲ್ಲೇ ಈ ತಂಡವು ಸಮಗ್ರ ಪ್ರೊಜೆಕ್ಟ್ ರಿಪೋರ್ಟ್ ಸಿದ್ಧಪಡಿಸಲಿದೆ. ಪ್ರವಾಸಿಗರಿಗೆ ನೆರವಾಗಲು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶೇಷ ಗೈಡ್ ಬುಕ್ ಸಿದ್ಧಪಡಿಸುವ ಜವಾಬ್ದಾರಿಯನ್ನು ಫೌಂಡೇಶನ್ ನಿರ್ವಹಿಸಲಿದ್ದು, ಇದರಿಂದಾಗಿ ಲಕ್ಕುಂಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಮೆರುಗು ದೊರೆಯಲಿದೆ.

45
15ನೇ ದಿನದ ಉತ್ಖನನ
Image Credit : Asianet News

15ನೇ ದಿನದ ಉತ್ಖನನ

ಇನ್ನೊಂದೆಡೆ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ನಡೆಯುತ್ತಿರುವ ಉತ್ಖನನವು ಸೋಮವಾರ 15ನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರಕ್ರಿಯೆಯಲ್ಲಿ ಇದುವರೆಗೆ 40ಕ್ಕೂ ಹೆಚ್ಚು ಅಪರೂಪದ ಪ್ರಾಚೀನ ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. 

ವಿಶೇಷವಾಗಿ ಪಚ್ಚೆ ಹರಳುಗಳು, ಪ್ರಾಚೀನ ಮೂಳೆಗಳು, ನಾಗರ ಕಲ್ಲುಗಳು ಹಾಗೂ ವಿವಿಧ ಪೀಠಗಳು ಲಭ್ಯವಾಗಿದ್ದು, ಭೂಮಿಯ ಆಳದಲ್ಲಿ ಇನ್ನೂ ಅನೇಕ ರಹಸ್ಯಗಳು ಅಡಗಿರುವ ನಿರೀಕ್ಷೆ ಇದ್ದು, ಮುಂಬರುವ ದಿನಗಳಲ್ಲಿ ನಡೆಯುವ ಉತ್ಖನನ ಹೆಚ್ಚು ಮಹತ್ವ ಪಡೆಯಲಿದೆ.

ಇದನ್ನೂ ಓದಿ: ಲಕ್ಕುಂಡಿಗೆ ಆಗಮಿಸಿದ ಇಟಲಿ-ಗ್ರೀಸ್ ಡೆಕ್ಕನ್ ಹೆರಿಟೇಜ್ ಫೌಂಡೇಶನ್: ಯಾಕೆ ಈ ಭೇಟಿ?

55
ವಿಶೇಷ ಯೋಜನೆ
Image Credit : Asianet News

ವಿಶೇಷ ಯೋಜನೆ

ವಿದೇಶಿ ತಜ್ಞರ ತಂಡ ಲಕ್ಕುಂಡಿಯ ಪರಂಪರೆಯನ್ನು ಕಂಡು ಬೆರಗಾಗಿದೆ. ಸರ್ಕಾರ ಹಾಗೂ ಈ ಫೌಂಡೇಶನ್ ಸಹಯೋಗದಲ್ಲಿ ಲಕ್ಕುಂಡಿಯನ್ನು ವಿಶ್ವದರ್ಶನ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ವಿಶೇಷ ಯೋಜನೆ ರೂಪಿಸಿಲಾಗಿದೆ. ಅದಕ್ಕಾಗಿ ಸರ್ಕಾರ ಅನುದಾನವನ್ನು ಮೀಸಲಿಟ್ಟಿದೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ತಿಳಿಸಿದರು.

ಇದನ್ನೂ ಓದಿ: 9ನೇ ದಿನ ಉತ್ಖನನದಲ್ಲಿ ಲಕ್ಕುಂಡಿ ಮನೆಯ ಗೋಡೆಗಳಲ್ಲೂ ಅದ್ಭುತ ಐತಿಹಾಸಿಕ ಕುರುಹು ಪತ್ತೆ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಲಕ್ಕುಂಡಿ
ಬಂಗಾರದ ನಿಧಿ
ಗದಗ
ಕರ್ನಾಟಕ ಸರ್ಕಾರ

Latest Videos
Recommended Stories
Recommended image1
ಮಂಡ್ಯ: ಪದವಿ ಪರೀಕ್ಷೆಗಳು ಮುಗಿದ ದಿನವೇ ರಿಸಲ್ಟ್‌ ನೀಡಿದ ಸರ್ಕಾರಿ ಕಾಲೇಜು!
Recommended image2
ಹಾಸನ ನಿವೇಶನ ಗಲಾಟೆ; ಒಂದು ಹೆಜ್ಜೆ ಮುಂದಿಟ್ಟ ನಿರ್ಮಾಪಕಿ ಪುಷ್ಪಾ ಅರುಣ್‌ ಕುಮಾರ್
Recommended image3
ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರುವುದು ಉತ್ತಮ: ಪೇದೆ ಪೋಸ್ಟ್‌ ವೈರಲ್!
Related Stories
Recommended image1
ಲಕ್ಕುಂಡಿ ಬಳಿಕ ಅತೀ ದೊಡ್ಡ ಚಿನ್ನದ ಗಣಿಯಲ್ಲಿ ಹಾವಿನ ಪ್ರಭೇದದ ಕಪ್ಪು ಕಣ್ಣಿನ ಹೊಸ ಜೀವಿ ಪತ್ತೆ
Recommended image2
12 ಅಡಿ ಆಳಕ್ಕೆ ಅಗೆತ; ಪುರಾತತ್ವ ಇಲಾಖೆಯ ಉತ್ಖನನಕ್ಕೆ ಲಕ್ಕುಂಡಿ ಜನರಿಂದ ದಿಢೀರ್ ವಿರೋಧ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved