ಲಕ್ಕುಂಡಿಗೆ ಆಗಮಿಸಿದ ಇಟಲಿ-ಗ್ರೀಸ್ ಡೆಕ್ಕನ್ ಹೆರಿಟೇಜ್ ಫೌಂಡೇಶನ್: ಯಾಕೆ ಈ ಭೇಟಿ?
ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಚಾಲುಕ್ಯರ ಕಾಲದ ಶಿವಲಿಂಗ, ನಾಗಶಿಲೆ ಸೇರಿದಂತೆ 40ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ಈ ಐತಿಹಾಸಿಕ ಸ್ಥಳವನ್ನು ಅಭಿವೃದ್ಧಿಪಡಿಸಲು ಡೆಕ್ಕನ್ ಹೆರಿಟೇಜ್ ಫೌಂಡೇಶನ್, ಸರ್ಕಾರದ ಸಹಯೋಗದೊಂದಿಗೆ ಬಯಲು ವಸ್ತು ಸಂಗ್ರಹಾಲಯ ನಿರ್ಮಿಸಲು ಮುಂದಾಗಿದೆ.

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮ
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮ ಇಡೀ ದೇಶದ ಗಮನವನ್ನು ಸಳೆಯುತ್ತಿದೆ. ಕಳೆದ 15 ದಿನಗಳಿಂದ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ನಡೆಯುತ್ತಿದೆ. ಶಿವಲಿಂಗ, ನಾಗಶಿಲೆ, ಹಸಿರು ಪಚ್ಚೆ ಸೇರಿದಂತೆ ಹಲವು ಪ್ರಾಚ್ಯ ವಸ್ತುಗಳು ಲಭ್ಯವಾಗಿದ್ದು, ಉತ್ಖನನ ಮುಂದುವರಿದಿದೆ.
3 ಎಕರೆ ಜಾಗದಲ್ಲಿರುವ ಬಯಲು ವಸ್ತು ಸಂಗ್ರಹಾಲಯ
ಇದೀಗ ಲಕ್ಕುಂಡಿ ಗ್ರಾಮಕ್ಕೆ ಇಟಲಿ ಹಾಗೂ ಗ್ರೀಸ್ ದೇಶದ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ತಂಡ ಭೇಟಿ ನೀಡಿದೆ. ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಮುಖ್ಯಸ್ಥರಾದ ಡಾ. ಹೆಲೆನ್ ಆಗಮಿಸಿದ್ದು, ಲಕ್ಕುಂಡಿ ಬಯಲು ವಸ್ತು ಸಂಗ್ರಹಾಲಯ ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಂಡಿದ್ದಾರೆ. ಸುಮಾರು 3 ಎಕರೆ ಜಾಗದಲ್ಲಿರುವ ಬಯಲು ವಸ್ತು ಸಂಗ್ರಹಾಲಯದ ಅಭಿವೃದ್ಧಿಗೆ ಮುಂದಾಗಿದೆ.
ಲಕ್ಕುಂಡಿ ಅಭಿವೃದ್ಧಿ
ತಮ್ಮ ತಂಡದೊಂದಿಗೆ ಲಕ್ಕುಂಡಿ ಗ್ರಾಮವನ್ನ ಹೆಲೆನ್ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೆಯೇ ಇದುವರೆಗೂ ಸಿಕ್ಕಿರುವ ಪ್ರಾಚ್ಯವಸ್ತುಗಳನ್ನು ತಂಡದ ಸದಸ್ಯರು ಪರಿಶೀಲಿಸಿರುವ ಮಾಹಿತಿ ಲಭ್ಯವಾಗಿದೆ. 2 ಕೋಟಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಲಕ್ಕುಂಡಿ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ.
ಡೆಕ್ಕನ್ ಹೆರಿಟೇಜ್ ಫೌಂಡೇಶನ್
ಮುಂದಿನ ದಿನಗಳಲ್ಲಿ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಸರ್ಕಾರದಿಂದ ಟೆಂಡರ್ ಪಡೆದುಕೊಂಡು ಲಕ್ಕುಂಡಿ ಬಯಲು ವಸ್ತು ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಲಿದೆ. ಈ ಸಂಬಂಧ ಶೀಘ್ರದಲ್ಲಿಯೇ ಪ್ರೊಜೆಕ್ಟ್ ರಿಪೋರ್ಟ್ ಸಿದ್ಧ ಮಾಡಲಿದೆ. ನಂತರ ಲಕ್ಕುಂಡಿ ಗೈಡ್ ಬುಕ್ ರೆಡಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಗೈಡ್ ಬುಕ್ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿರಲಿದೆ.
ಇದನ್ನೂ ಓದಿ: ಭೂಮಿಯಲ್ಲಿ ಸಿಗುವ ಬಂಗಾರವೆಲ್ಲಾ 'ನಿಧಿ' ಅಲ್ಲ, ಇದನ್ನು ಸರ್ಕಾರಕ್ಕೆ ಕೊಡದೇ ನೀವೇ ಇಟ್ಕೋಬಹುದು!
40ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆ
ಸರಿಸುಮಾರು 40ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ಅವುಗಳಲ್ಲಿ ಪ್ರಮುಖವಾಗಿ ಅಪರೂಪದ ಶಿವಲಿಂಗದ ಪೀಠಗಳು, ಕಲಾತ್ಮಕವಾಗಿ ಕೆತ್ತಲಾದ ನಾಗರ ಕಲ್ಲುಗಳು, ಪ್ರಾಚೀನ ಕಟ್ಟಡದ ಸ್ತಂಬಗಳು ಹಾಗೂ ಶಿಲ್ಪಕಲೆಯ ಭಾಗಗಳು, ಎಲುಬುಗಳು ಪ್ರಮುಖವಾಗಿವೆ. ಉತ್ಖನನ ನಡೆಯುತ್ತಿರುವ ಸ್ಥಳಕ್ಕೆ ಪ್ರತಿದಿನ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಇತಿಹಾಸ ತಜ್ಞರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಲಕ್ಕುಂಡಿಯ ಚಾಲುಕ್ಯರ ಕಾಲದ ವೈಭವವನ್ನು ಮರುಸೃಷ್ಟಿಸುವಲ್ಲಿ ಈ ಸಂಶೋಧನೆ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಲಕ್ಕುಂಡಿ: ನಿಧಿ ಸಿಕ್ಕ ಜಾಗದಲ್ಲಿ ದೊಡ್ಡ ಸರ್ಪ ಎದ್ದಿದೆ, ಒಂದಲ್ಲ ಒಂದು ದಿನ ಕಚ್ಚುತ್ತೆ, ನಮಗೆ ಆ ಜಾಗ ಬೇಡವೆಂದ ಕುಟುಂಬ!

