- Home
- Karnataka Districts
- Kalaburagi
- Mahantesh Bilagi Death: ತಿಂಗಳ ಹಿಂದೆ ಅವಳಿ ಮಕ್ಕಳು ಹುಟ್ಟಿದ್ದಕ್ಕೆ 150kg ಪೇಡೆ ಹಂಚಿದ್ದ ಶಂಕರ್
Mahantesh Bilagi Death: ತಿಂಗಳ ಹಿಂದೆ ಅವಳಿ ಮಕ್ಕಳು ಹುಟ್ಟಿದ್ದಕ್ಕೆ 150kg ಪೇಡೆ ಹಂಚಿದ್ದ ಶಂಕರ್
Mahantesh Bilagi Death: ಕಲಬುರಗಿಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಅಪಘಾತವಾಗಿದ್ದು, ಕಾರ್‌ನಲ್ಲಿದ್ದ ನಾಲ್ವರು ನಿಧನರಾಗಿದ್ದಾರೆ. ಅವರಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಕೂಡ ಒಬ್ರು. ಇವರು ದಕ್ಷ ಅಧಿಕಾರಿಯಾಗಿದ್ದರು.

ಕಾರ್ ಅಪಘಾತ ಹೇಗಾಯ್ತು?
ಡ್ರೈವರ್ ಅತಿವೇಗವಾಗಿ ಕಾರ್ ಓಡಿಸುತ್ತಿದ್ದರು. ಬೈಕ್ ಬಂದಿದ್ದು, ಅವರನ್ನು ತಪ್ಪಿಸಲು ಹೋಗಿ ಕಾರ್ ಮೂರು ನಾಲ್ಕು ಬಾರಿ ಪಲ್ಟಿ ಆಗಿದೆ. ಆಸ್ಪತ್ರೆಯಲ್ಲಿ ಮಹಾಂತೇಶ್ ಅವರು ನಿಧನರಾಗಿದ್ದಾರೆ. ಒಟ್ಟೂ ನಾಲ್ವರು ಈ ಅಪಘಾತದಲ್ಲಿ ನಿಧನರಾಗಿದ್ದಾರೆ.
ಬೀಳಗಿ ಕುಟುಂಬದಲ್ಲಿಯೇ ಮೂವರು ಇಹಲೋಕ ತ್ಯಜಿಸಿದ್ದು, ಸಾರ್ವಜನಿಕರು, ಐಎಎಸ್, ಐಪಿಎಸ್ ಅಧಿಕಾರಿಗಳು ಇವರ ಪಾರ್ಥಿವ ಶರೀರದ ದರ್ಶನ ಪಡೆಯುತ್ತಿದ್ದಾರೆ,
ಡ್ರೈವರ್ ವಿರುದ್ಧ ದೂರು ದಾಖಲು
ಕಾರ್ ಚಾಲಕ ಆಂಥೋನಿ ರಾಜ್ ಅವರಿಗೂ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ವಿರುದ್ಧ ದೂರು ದಾಖಲಾಗಿದೆ. ಬಸವರಾಜ್ ಕಮರಟಗಿ ಎನ್ನುವವರು ಜೇವರ್ಗಿ ಠಾಣೆಯಲ್ಲಿ ಡ್ರೈವರ್ ವಿರುದ್ಧ ದೂರು ದಾಖಲಿಸಿದ್ದಾರೆ.
ಒಂದು ಮದುವೆ ಕಾರ್ಯಕ್ರಮಕ್ಕಾಗಿ ಮಹಾಂತೇಶ್ ಅವರು ಕಾರ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಸಂಜೆ 5.30ಕ್ಕೆ ಅಪಘಾತ ಆಗಿದೆ. ಕಾರ್ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಇನ್ನೂ ಯಾರು ಯಾರು ನಿಧನರಾದರು?
ಮಹಾಂತೇಶ್ ಬೀಳಗಿ ಅವರ ಚಿಕ್ಕಪ್ಪನ ಮಕ್ಕಳಾದ ಈರಣ್ಣ ಬೀಳಗಿ, ಶಂಕರ ಬೀಳಗಿ, ಸ್ನೇಹಿತ ಈರಣ್ಣ ಸರಸಂಗಿ ಅವರು ನಿಧನರಾಗಿದ್ದಾರೆ.
ವೀರಶೈವ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಹೇಳಲಾಗಿದೆ. ಅಪಘಾತ ಆಗಿರೋದಿಕ್ಕೆ ಅಗ್ನಿ ಸ್ಪರ್ಶವನ್ನು ಮಾಡಲಾಗುವುದಂತೆ. ಅಂದಹಾಗೆ ಅಗ್ನಿಸ್ಪರ್ಶ ಆಗಬೇಕು ಎಂದು ಮಹಾಂತೇಶ್ ಅವರು ಬಯಸಿದ್ದರಂತೆ.
ನಾಮಕರಣ ಮಾಡಿಲ್ಲ
ಶಂಕರ್ ಅವರಿಗೆ ಒಂದು ತಿಂಗಳ ಹಿಂದೆ ಅವಳಿ ಮಕ್ಕಳು ಹುಟ್ಟಿದ್ದರು. ಆ ಮಕ್ಕಳಿಗೆ ನಾಮಕರಣ ಮಾಡಿಲ್ಲ. ಮಕ್ಕಳು ಹುಟ್ಟಿದರು ಎಂಬ ಖುಷಿಯಲ್ಲಿ ಇಡೀ ಊರಿಗೆ 150kg ಪೇಡೆ ಹಚ್ಚಿದ್ದರು. ಆದರೆ ಈ ಖುಷಿ ಮಧ್ಯೆ ಈಗ ಸಾವಿನ ವಿಷಯ ಬರಸಿಡಿಲಿನ ಥರ ಬಂದು ಬಡಿದಿದೆ.
ಸಂಬಂಧಿಕರ ಆಕ್ರಂದನ
ಮಹಾಂತೇಶ್ ಅವರು ಹಣೆಗೆ ವಿಭೂತಿ ಹಚ್ಚಿಯೇ ಮನೆಯಿಂದ ಹೊರಗಡೆ ಬರುತ್ತಿದ್ದರು. ಈ ರೀತಿ ಕಾಣಸಿಗೋದು ಅಪರೂಪ.
ಬಡತನದಲ್ಲಿ ಬೆಳೆದ ಮಹಾಂತೇಶ್ ಅವರು ಡಿಪ್ರೆಶನ್‌ಗೆ ಜಾರಿ, ಅದನ್ನು ಗೆದ್ದು ಕೆಎಎಸ್ ಆಫೀಸರ್ ಆಗಿದ್ದರು, ಆಮೇಲೆ ಬಡ್ತಿ ಪಡೆದರು.
ಸಾಕಷ್ಟು ಜನರಿಗೆ ಅವರು ಸಹಾಯ ಮಾಡಿದ್ದಾರೆ. ಇಂದು ಕೂಡ ಜನರು ಅವರ ಸಹಾಯವನ್ನು ಸ್ಮರಿಸುತ್ತಾರೆ.

