ಸರಳ ವಾಸ್ತು ಗುರೂಜಿ ಭೀಕರ ಹತ್ಯೆ: ಬೆಚ್ಚಿಬೀಳಿಸುತ್ತೆ ಮಹಾಂತೇಶ್‌ ಶಿರೂರು ಹಿಸ್ಟ್ರಿ!

ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಕೊಲೆ ಆಸ್ತಿಗಾಗಿ ನಡೆಯಿತೇ? ಅಥವಾ ವೈಯಕ್ತಿಕ ದ್ವೇಷ ಕಾರಣವೋ? ಅಥವಾ ಇನ್ನೇನಾದರೂ ವಿಷಯಕ್ಕೆ ಕೊಲೆಯಾಗಿದೆಯೇ? ಹೀಗೆ ಹಲವು ಪ್ರಶ್ನೆಗಳು ಹರಿದಾಡುತ್ತಿವೆ. 

First Published Jul 6, 2022, 11:19 AM IST | Last Updated Jul 6, 2022, 11:19 AM IST

ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ (Chandrashekhar Guruji) ಕೊಲೆ ಆಸ್ತಿಗಾಗಿ ನಡೆಯಿತೇ? ಅಥವಾ ವೈಯಕ್ತಿಕ ದ್ವೇಷ ಕಾರಣವೋ? ಅಥವಾ ಇನ್ನೇನಾದರೂ ವಿಷಯಕ್ಕೆ ಕೊಲೆಯಾಗಿದೆಯೇ? ಹೀಗೆ ಹಲವು ಪ್ರಶ್ನೆಗಳು ಹರಿದಾಡುತ್ತಿವೆ. 

ಮಹಾಂತೇಶ ಈ ಕಂಪನಿಗೆ ಸರಳ ವಾಸ್ತು ಮಾಡಿಸಲು ಬರುತ್ತಿದ್ದ ಜನರಿಂದ ತಾನೇ ಹಣ ತೆಗೆದುಕೊಂಡು ತಮ್ಮ ಸ್ವಂತಕ್ಕೆ ಉಪಯೋಗಿಸುತ್ತಿದ್ದ. ಇವರೊಂದಿಗೆ ಮಂಜುನಾಥ ಮರೇವಾಡ ಎಂಬಾತ ಕೂಡ ಸೇರಿ ಇನ್ನೂ 20ರಿಂದ 25 ಜನರು ಶಾಮೀಲಾಗಿದ್ದರು. ಚಂದ್ರಶೇಖರ ಅವರಿಗೆ ಆಗಾಗ ಜೀವ ಬೆದರಿಕೆ ಒಡ್ಡುತ್ತಿದ್ದ. ಇದೇ ಕಾರಣಕ್ಕೆ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಸೇರಿಕೊಂಡು ಚಂದ್ರಶೇಖರ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಚಂದ್ರಶೇಖರ ಹಾಗೂ ಅವರ ಪತ್ನಿ ಅಂಕಿತಾ ಉಳಿದುಕೊಂಡಿದ್ದ ಶ್ರೀನಗರದಲ್ಲಿರುವ ಪ್ರೆಸಿಡೆಂಟ್‌ ಹೋಟೆಲ್‌ ರಿಸೆಪ್ಶನ್‌ ಹಾಲಿಗೆ ಮಂಗಳವಾರ ಮಧ್ಯಾಹ್ನ ಆಗಮಿಸಿ ತಮ್ಮ ಬಳಿ ಕರೆಸಿಕೊಂಡು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ ಎಂದು ದೂರಲ್ಲಿ ಉಲ್ಲೇಖಿಸಲಾಗಿದೆ.

Video Top Stories