70ನೇ ವಯಸ್ಸಿನಲ್ಲಿ 20ರ ಯುವತಿಯನ್ನು 4ನೇ ಮದುವೆಯಾದ 11 ಮಕ್ಕಳ ತಂದೆ; ದೂರು ದಾಖಲು
70 ವರ್ಷದ ವ್ಯಕ್ತಿ ತಮಗಿಂತ 50 ವರ್ಷ ಚಿಕ್ಕ ಯುವತಿಯನ್ನು ನಾಲ್ಕನೇ ಮದುವೆಯಾಗಿದ್ದಾರೆ. ಈ ಮದುವೆಯಿಂದಾಗಿ ಅವರ ಎರಡನೇ ಪತ್ನಿ ಆಸ್ತಿ ಕಬಳಿಕೆ ಮತ್ತು ಜೀವಬೆದರಿಕೆ ಆರೋಪದ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

50 ವರ್ಷ ಚಿಕ್ಕ ಯುವತಿ ಜೊತೆ ಮದುವೆ
ಸಮಾಜವಾದಿ ಪಕ್ಷದ ನಾಯಕನೊಬ್ಬನ ನಾಲ್ಕನೇ ಮದುವೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 70 ವರ್ಷದ ಪತಿಯ ವಿರುದ್ಧ ಎರಡನೇ ಪತ್ನಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಗಂಡನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿಂದೆಯೂ ಈ ವ್ಯಕ್ತಿ ವೈಯಕ್ತಿಕ ವಿಷಯಗಳಿಂದ ಸುದ್ದಿಯಲ್ಲಿದ್ದರು.

ಯಾರು ಈ ವ್ಯಕ್ತಿ?
ಉತ್ತರ ಪ್ರದೇಶದ ಕೋತ್ವಾಲಿ ಕ್ಷೇತ್ರದ ಕೈಲಾ ಭಟ್ಟಾ ನಿವಾಸಿಯಾಗಿರುವ ಮಾಜಿ ಕೌನ್ಸಿಲರ್ ಆಗಿರುವ ಹಾಜಿ ಖಲೀಲ ತನಗಿಂತ 50 ವರ್ಷ ಚಿಕ್ಕವಳಾದ ಯುವತಿಯನ್ನು ಮದುವೆಯಾಗಿದ್ದಾನೆ. ಎರಡನೇ ಪತ್ನಿ ನಾಜರೀನ್, ಗಂಡನ ವಿರುದ್ಧ ಮೋಸ, ಜೀವಬೆದರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪುತ್ರನೊಂದಿಗೆ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ ದೂರು ಸಲ್ಲಿಸಿದ್ದಾರೆ.
ಗಂಡನ ವಿರುದ್ಧ ಆಸ್ತಿ ಕಬಳಿಕೆಯ ಆರೋಪ ಮಾಡಿದ 2ನೇ ಮಡದಿ
ಈ ಹಿಂದೆ ಮೆಹರ್‌ನಲ್ಲಿ (ವಧುದಕ್ಷಿಣೆ) ಪಡೆದುಕೊಂಡಿದ್ದ ಆಸ್ತಿಯನ್ನು ಪಡೆದುಕೊಳ್ಳಲು ಗಂಡ ಹಾಜಿ ಖಲೀಲ ಪ್ರಯತ್ನಿಸುತ್ತಿದ್ದಾನೆ. ಕಳೆದ ಹಲವು ದಿನಗಳಿಂದ ಆಸ್ತಿ ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದು, ನಮಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ನಾಜರೀನ್ ಆರೋಪಿಸಿದ್ದಾರೆ.
11 ಮಕ್ಕಳ ತಂದೆ ಹಾಜಿ ಖಲೀಲ್
1991ರಲ್ಲಿ ಹಾಜಿ ಖಲೀಲ್ ಮೊದಲ ಮದುವೆ ವಿಷಯ ಮುಚ್ಚಿಟ್ಟು ನನ್ನನ್ನು ಮದುವೆಯಾದೆ. ಮೊದಲ ಪತ್ನಿಗೆ 8 ಮಕ್ಕಳಿದ್ದು, ತಮಗೆ ಮೂರು ಮಕ್ಕಳಿವೆ ಎಂದು ನಾಜರೀನ್ ಹೇಳುತ್ತಾರೆ. ಮುಂದುವರಿದು 2010ರಲ್ಲಿ ಮದುವೆಯಾದ ಹಾಜಿ ಖಲೀಲ್, ಆಕೆಗೆ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ 20 ವರ್ಷದ ಯುವತಿಯನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ. 20 ವರ್ಷದ ಯುವತಿಯನ್ನು ಕರೆದುಕೊಂಡು ಬರುತ್ತಿದ್ದಂತೆ ಮನೆಯಲ್ಲಿ ಕೌಟುಂಬಿಕ ಕಲಹ ಶುರುವಾಗಿದೆ.
ಇದನ್ನೂ ಓದಿ: Bengaluru: ಬೆತ್ತಲೆ ಸ್ಥಿತಿಯಲ್ಲಿ ಜಾರ್ಖಂಡ್ ಮೂಲದ ಯುವತಿಯ ಅರೆಕೊಳೆತ ಶವ ಪತ್ತೆ
ಇಸ್ಲಾಂನಗರ ವಾರ್ಡ್ ಸದಸ್ಯ
ಸಮಾಜವಾದಿ ಪಕ್ಷದ ನಾಯಕನಾಗಿರುವ ಹಾಜಿ ಖಲೀಲ್ 1995 ರಿಂದ 2000ರವರೆಗೆ ಇಸ್ಲಾಂನಗರ ವಾರ್ಡ್ ಸದಸ್ಯನಾಗಿದ್ದನು. ಈ ಹಾಜಿ ಖಲೀಲ್ ವಿರುದ್ಧ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಕಬಳಿಸಿರುವ ಆರೋಪವಿದೆ. ಎರಡನೇ ಪತ್ನಿಯ ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಖಲೀಲ್ ನಾಲ್ಕನೇ ಮದುವೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಬೆಂಗಳೂರು: ಸಂಸಾರ ತ್ಯಜಿಸಿದ ಮಹಿಳೆ ಜತೆ ಚಿತ್ರದುರ್ಗ ಯುವಕನ ಲಿವ್-ಇನ್, ಪ್ರೇಮಕಥೆಯಲ್ಲಿ ಅನುಮಾನದ ಸಾವು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

