MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • 500 ಮೀ ಆಳದ ಪ್ರಪಾತಕ್ಕೆ ಉರುಳಿದ ಪ್ರವಾಸಿಗರ ಟ್ಯಾಕ್ಸಿ: 7 ಕನ್ನಡಿಗರು ಸೇರಿ 8 ಸಾವು

500 ಮೀ ಆಳದ ಪ್ರಪಾತಕ್ಕೆ ಉರುಳಿದ ಪ್ರವಾಸಿಗರ ಟ್ಯಾಕ್ಸಿ: 7 ಕನ್ನಡಿಗರು ಸೇರಿ 8 ಸಾವು

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಪ್ರವಾಸಿಗರ ಟ್ಯಾಕ್ಸಿಯೊಂದು 500 ಮೀಟರ್ ಆಳದ ಪ್ರಪಾತಕ್ಕೆ ಉರುಳಿ, ಬೆಂಗಳೂರಿನ ಎರಡು ಕುಟುಂಬಗಳಿಗೆ ಸೇರಿದ 7 ಕನ್ನಡಿಗರು ಸೇರಿದಂತೆ 8 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.

1 Min read
Author : Kannadaprabha News
Published : Jun 01 2026, 05:56 AM IST
Share this Photo Gallery
  • FB
  • TW
  • Linkdin
  • Whatsapp
13
 500 ಮೀ. ಆಳದ ಪ್ರಪಾತಕ್ಕೆ ಬಿದ್ದು 7 ಕನ್ನಡಿಗರು ಸೇರಿದಂತೆ 8 ಮಂದಿ ಸಾವು
Image Credit : Gemini

500 ಮೀ. ಆಳದ ಪ್ರಪಾತಕ್ಕೆ ಬಿದ್ದು 7 ಕನ್ನಡಿಗರು ಸೇರಿದಂತೆ 8 ಮಂದಿ ಸಾವು

ಹಿಮಾಚಲ ಪ್ರದೇಶದಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟ್ಯಾಕ್ಸಿಯೊಂದು 500 ಮೀ. ಆಳದ ಪ್ರಪಾತಕ್ಕೆ ಬಿದ್ದು 7 ಕನ್ನಡಿಗರು ಸೇರಿದಂತೆ 8 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಂಬಾ ಜಿಲ್ಲೆಯ ಪಂಗಿ ಪ್ರದೇಶದ ಬೈರಾಗಢ-ಪಂಗಿ-ಸಚ್ ಪಾಸ್ ರಸ್ತೆಯ ಕಲಾವನ್ ಬಳಿ ಈ ಅಪಘಾತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಟ್ಯಾಕ್ಸಿ ಉರುಳಿ ಬಿದ್ದು ಅಪಘಾತ ಸಂಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ಕರ್ನಾಟಕದ 2 ಕುಟುಂಬದ 7 ಮಂದಿ
Image Credit : Gemini

ಕರ್ನಾಟಕದ 2 ಕುಟುಂಬದ 7 ಮಂದಿ

ದುರಂತದಲ್ಲಿ ಕರ್ನಾಟಕದ 2 ಕುಟುಂಬದ 7 ಮಂದಿ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಡಾಲ್‌ಹೌಸಿಗೆ ಶೇರಿಂಗ್‌ ಟ್ಯಾಕ್ಸಿಯಲ್ಲಿ ತೆರಳುತ್ತಿದ್ದರು. ಮೃತರನ್ನು ಬೆಂಗಳೂರಿನ ನಿವಾಸಿಗಳಾದ ಅರವಿಂದ್‌ ಚಂದ್ರಾಕರ್, ಪತ್ನಿ ಪ್ರಾಚಿ, ಮಕ್ಕಳಾದ ದರ್ಶ್‌, ಅಕ್ಷದ್‌, ಕರ್ನಾಟಕದ ಕಾರ್ತಿಕೇಯನ್‌, ಪತ್ನಿ ಮಣಿಮಾಲಾ, ಅವರ ಪುತ್ರ ನಂದನ್‌ ಎಂದು ಗುರುತಿಸಲಾಗಿದೆ. ಇನ್ನು ಟ್ಯಾಕ್ಸಿ ಚಾಲಕನಾಗಿದ್ದ ಸ್ಥಳೀಯ ನಿವಾಸಿ ವಿಶ್ವಾಸ್‌ ಕೂಡ ಅಸುನೀಗಿದ್ದಾನೆ.

Related Articles

Related image1
ಟಿಬಿ ಡ್ಯಾಂ ಬಳಿ ಟ್ಯಾಂಕರ್, ಟ್ರಾಕ್ಟರ್ ಭೀಕರ ಅಪಘಾತ, ಮಗು ಸೇರಿ ಒಂದೇ ಕುಟುಂಬದ 6 ಸಾವು
Related image2
ಸಲ್ಮಾನ್ ಖಾನ್‌ಗೆ ಶೂಟಿಂಗ್ ವೇಳೆ ಭೀಕರ ಅಪಘಾತ: ಒಂದೂವರೆ ನಿಮಿಷ ಉಸಿರಾಟ ನಿಂತಿತ್ತಂತೆ!
33
 ಹವಾಮಾನ ವೈಪರೀತ್ಯ
Image Credit : Gemini

ಹವಾಮಾನ ವೈಪರೀತ್ಯ

ಶುಕ್ರವಾರ ತಡರಾತ್ರಿಯೇ ಈ ಅಪಘಾತ ನಡೆದಿದೆ. ಶನಿವಾರ ಮಧ್ಯಾಹ್ನ ವಾಹನದ ಮಾಲೀಕರು, ಅದರ ಜಿಪಿಎಸ್‌ ಲೊಕೇಶನ್‌ ಗಮನಿಸಿದಾಗ 1 ದಿನದಿಂದ ಅದೇ ಲೊಕೇಶನ್‌ನಲ್ಲಿ ಟ್ಯಾಕ್ಸಿ ಇದ್ದದ್ದು ಕಂಡುಬಂದಿದೆ. ಆಗ ಸ್ಥಳ ಪರಿಶೀಲಿಸಿದಾಗ ಅಪಘಾತ ಆಗಿದ್ದು ಗೊತ್ತಾಗಿದೆ. ಆದರೆ ಭಾನುವಾರದವರೆಗೂ ಮೃತರ ಶವ ಪತ್ತೆಯಾಗಿಲ್ಲ. ಸದ್ಯ ಸ್ಥಳದಲ್ಲಿ ಶವಗಳ ಶೋಧ ಕಾರ್ಯ ನಡೆಯುತ್ತಿದೆ. ಆದರೆ ಇದು ಅತ್ಯಂತ ದುರ್ಗಮ ಹಾದಿ ಹಾಗೂ ಹವಾಮಾನ ವೈಪರೀತ್ಯದಿಂದ ಶೋಧ ಕಾರ್ಯಕ್ಕೆ ತೊಡಕಾಗಿದೆ.

#WATCH | Himachal Pradesh: Vijay Saklani, Superintendent of Police, Chamba, says, "3 bodies have been recovered. There were 8 people. 2 families, one from Bangalore and the other from Chhattisgarh, and the driver is a local." https://t.co/BJ2ZZelS5rpic.twitter.com/n0jmroepbZ

— ANI (@ANI) May 31, 2026

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಹಿಮಾಚಲ ಪ್ರದೇಶ
ಅಪಘಾತ

Latest Videos
Recommended Stories
Recommended image1
India Latest News Live: 500 ಮೀ ಆಳದ ಪ್ರಪಾತಕ್ಕೆ ಉರುಳಿದ ಪ್ರವಾಸಿಗರ ಟ್ಯಾಕ್ಸಿ - 7 ಕನ್ನಡಿಗರು ಸೇರಿ 8 ಸಾವು
Recommended image2
ಪಾರ್ಶ್ವವಾಯು ಪೀಡಿತ ವೃದ್ಧನ ಕೈಗೆ ಸುತ್ತಿಕೊಂಡ ವಿಷಸರ್ಪ; ಸಾವಿನೊಂದಿಗೆ ಹೋರಾಡಿದ ಆ 4 ಗಂಟೆಗಳು!
Recommended image3
Viral: ಮರ ಹತ್ತಿ ಮಂಗನಿಂದ ನೋಟುಗಳ ಮಳೆ, 500ರ ನೋಟು ಹೆಕ್ಕಲು ಮುಗಿಬಿದ್ದ ಜನ!
Related Stories
Recommended image1
ಟಿಬಿ ಡ್ಯಾಂ ಬಳಿ ಟ್ಯಾಂಕರ್, ಟ್ರಾಕ್ಟರ್ ಭೀಕರ ಅಪಘಾತ, ಮಗು ಸೇರಿ ಒಂದೇ ಕುಟುಂಬದ 6 ಸಾವು
Recommended image2
ಸಲ್ಮಾನ್ ಖಾನ್‌ಗೆ ಶೂಟಿಂಗ್ ವೇಳೆ ಭೀಕರ ಅಪಘಾತ: ಒಂದೂವರೆ ನಿಮಿಷ ಉಸಿರಾಟ ನಿಂತಿತ್ತಂತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved