ಟಿಕೆಟ್ ಇದ್ದರೂ ಸೀಟು ಸಿಗದೆ ನಿಂತುಕೊಂಡು ಪ್ರಯಾಣಿಸಿದ ಪ್ರಯಾಣಿಕನಿಗೆ 20,000 ರೂ ಪರಿಹಾರ
ಕನ್‌ಫರ್ಮ್ ಟಿಕೆಟ್ ಇದ್ದರೂ ರೈಲು ಹತ್ತಿ ನೋಡಿದರೆ ತನ್ನ ಸೀಟಿನಲ್ಲಿ ಹಲವರು ಕುಳಿತಿದ್ದಾರೆ. ಎಬ್ಬಿಸಿದರೂ ಏಳಲಿಲ್ಲ. ಬೇರೆ ದಾರಿಯಿಲ್ಲದೆ ನಿಂತುಕೊಡೆ ಪ್ರಯಾಣಿಸಿದ ಪ್ರಯಾಣಿಕನಿಗೆ ಇದೀಗ ಭಾರತೀಯ ರೈಲ್ವೇ 20 ಸಾವಿರ ರೂಪಾಯಿ ಪರಿಹಾರ ನೀಡಲು ಆದೇಶಿಸಿದೆ.

ನಿಂತುಕೊಂಡು ಪ್ರಯಾಣಿಸಿದರೆ ಪರಿಹಾರ
ರೈಲು ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಂದಿನ ರೈಲು ಜೊತೆಗೆ ವಿಶೇಷ ರೈಲು, ವಂದೇ ಭಾರತ್ ಸೇರಿದಂತೆ ಹಲವು ವಿಶೇಷ ರೈಲುಗಳಿದ್ದರೂ ಸಾಲುತ್ತಿಲ್ಲ. ಜನಸಂದಣಿ ಹೆಚ್ಚುತ್ತಿದೆ. ರೈಲಿನ ಬೋಗಿಗಳು ತುಂಬಿ ತುಳುಕುತ್ತಿದೆ. ರೈಲು ನಿಲ್ದಾಣಕ್ಕೆ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದೆ. ಹೀಗೆ ಕಿಕ್ಕಿರಿದು ತುಂಬಿದ ರೈಲಿನಲ್ಲಿ ಟಿಕೆಟ್ ಇದ್ದರೂ ನಿಂತುಕೊಂಡು ಪ್ರಯಾಣಿಸಿದ ಪ್ರಯಾಣಿಕನಿಗೆ ಇದೀಗ ಪರಿಹಾರ ಘೋಷಣೆಯಾಗಿದೆ.
ನಾಲ್ವರ ಪ್ರಯಾಣ ಸಂಕಷ್ಟ
ಉತ್ತರ ಪ್ರದೇಶಧ ವಿದ್ಯಾಚಲದಿಂದ ಬಿಹಾರದ ಅರಾಗೆ ದೂರುದಾರ ಹಾಗೂ ಆತನ ಮೂವರು ಗೆಳೆಯರು ಪ್ರಯಾಣ ಮಾಡಲು ರೈಲ್ವೇ ಟಿಕೆಟ್ ಬುಕ್ ಮಾಡಿದ್ದರು. ಪ್ರಯಾಣಕ್ಕೂ ಕೆಲ ದಿನಗಳ ಮೊದಲೇ ಟಿಕೆಟ್ ಬುಕ್ ಮಾಡಲಾಗಿತ್ತು. ಹೀಗಾಗಿ ಮೂವರಿಗೂ ಟಿಕೆಟ್ ಕನ್‌ಫರ್ಮ್ ಆಗಿತ್ತು. ಬಿ4 ಕೋಚ್‌ನಲ್ಲಿ 58, 62, 63, 68 ಟಿಕೆಟ್ ಕನ್‌ಫರ್ಮ್ ಆಗಿತ್ತು.
ದುಡ್ಡುಕೊಟ್ಟು ನಿಂತುಕೊಂಡು ಪ್ರಯಾಣ
1876 ರೂಪಾಯಿ ಪಾವತಿಸಿ ನಾಲ್ವರು ಪ್ರಯಾಣ ಮಾಡಲು ಬಂದಾಗ ತಮ್ಮ ಸೀಟಿನಲ್ಲಿ ಹಲವರು ಕುಳಿತುಕೊಂಡಿದ್ದರು. ಎಬ್ಬಿಸಲು ಹೋದಾಗ ತಾವು ರೈಲ್ವೇ ಸಿಬ್ಬಂದಿಗಳು ಇವತ್ತು ಕೆಲ ರೈಲ ರದ್ದಾಗಿದೆ ಅನ್ನೋ ಕತೆ ಹೇಳಿ ಗದರಿಸಿದ್ದಾರೆ. ರೈಲಿನ ಟಿಟಿಇ ಬಳಿ ದೂರು ಕೊಡಲು ಕಾದರೆ ಟಿಟಿಇ ಬರಲೇ ಇಲ್ಲ. ಇತ್ತ ಹೆಲ್ಪ್‌ಲೈನ್ ನಂಬರ್‌ಗೆ ಕರೆ ಮಾಡಿದರೆ ಕನೆಕ್ಟ್ ಆಗಲೇ ಇಲ್ಲ.
ಕೈತೊಳೆದುಕೊಂಡ ಟಿಟಿಇ
ನಾಲ್ವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ಮೂಲಕ ರೈಲ್ವೇ ಇಲಾಖೆಯನ್ನು ಟ್ಯಾಗ್ ಮಾಡಿ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. ಬುಕ್ಸರ್ ರೈಲು ನಿಲ್ದಾಣ ಬಂದಾಗ ಟಿಟಿಇ ಆಗಮಿಸಿದ್ದಾನೆ. ಈ ವೇಳೆ ಈ ನಾಲ್ವರು ಪ್ರಯಾಣಿಕರು ತಮ್ಮ ಸೀಟಿನಲ್ಲಿ ಬೇರೆಯವರು ಕುಳಿತುಕೊಂಡಿದ್ದಾರೆ. ಎಬ್ಬಿಸಲು ಸೂಚಿಸಿದ್ದಾರೆ. ಸೀಸನ್ ಇರೋದರರಿಂದ ಜನಸಂದಣಿ ಹೆಚ್ಚಿದೆ. ಈ ಬಾರಿ ಸ್ವಲ್ಪ ಮ್ಯಾನೇಜ್ ಮಾಡಿ ಎಂದು ಟಿಟಿಐ ಕೈತೊಳೆದುಕೊಂಡಿದ್ದಾನೆ.
ಗ್ರಾಹಕರ ಕೋರ್ಟ್‌ಗೆ ದೂರು
ನಾಲ್ವರು ಗೆಳೆಯರು ಬೋಜಪುರಿ ಜಿಲ್ಲಾ ಗ್ರಾಹಕರ ವೇದಿಕೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. 2022ರಲ್ಲಿ ನಡೆದ ಈ ಘಟನೆ ಸತತ ವಿಚಾರಣೆ ನಡೆದಿತ್ತು. ಬಳಿಕ ತನಿಖೆ, ಹಲವು ದಾಖಲೆಗಳ ಸಲ್ಲಿಕೆ ಮಾಡಲಾಗಿತ್ತು. ಇತ್ತ ರೈಲ್ವೇ ಇಲಾಖೆ ಈ ಘಟನೆಯಲ್ಲಿ ತನ್ನ ತಪ್ಪಿಲ್ಲ ಎಂದು ವಾದಿಸಿತ್ತು.
ಭಾರತೀಯ ರೈಲ್ವೆಗೆ ಪರಿಹಾರ ಪಾವತಿಸಲು ಆದೇಶ
ದಾಖಲೆ,ತನಿಖೆ ಬಳಿಕ ಗ್ರಾಹಕರ ವೇದಿಕೆ ಕೋರ್ಟ್ ಮಹತ್ವದ ಆದೇಶ ನೀಡಿದೆ. ರೈಲು ಟಿಕೆಟ್ ಬುಕ್ ಮಾಡಿದ ಪ್ರಯಾಣಿಕನಿಗೆ ಸೀಟು ಒದಗಿಸಬೇಕಾದ ಜವಾಬ್ದಾರಿ ರೈಲ್ವೇ ಇಲಾಖೆಯದ್ದು. ಹೀಗಾಗಿ 20,000 ರೂಪಾಯಿ ಪರಿಹಾರ ಪಾವತಿಸಲು ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

