- Home
- News
- India News
- Last Indian Railway Station: ಭಾರತದ ಕೊನೆಯ ರೈಲ್ವೆ ನಿಲ್ದಾಣವಿದು! ಇಲ್ಲಿಂದ ಶುರುವಾಗುತ್ತೆ ಇನ್ನೊಂದು ದೇಶ
Last Indian Railway Station: ಭಾರತದ ಕೊನೆಯ ರೈಲ್ವೆ ನಿಲ್ದಾಣವಿದು! ಇಲ್ಲಿಂದ ಶುರುವಾಗುತ್ತೆ ಇನ್ನೊಂದು ದೇಶ
ಭಾರತೀಯ ರೈಲ್ವೆ ದೇಶದ ಪ್ರಮುಖ ಸಾರಿಗೆ ವ್ಯವಸ್ಥೆ. ನಮ್ಮ ದೇಶದಲ್ಲಿ ಸಾವಿರಾರು ರೈಲ್ವೆ ನಿಲ್ದಾಣಗಳಿವೆ. ಆದರೆ, ಭಾರತದ ಕೊನೆಯ ರೈಲ್ವೆ ನಿಲ್ದಾಣ ಯಾವುದು ಗೊತ್ತೇ? ಆ ನಿಲ್ದಾಣದ ನಂತರ ಬೇರೊಂದು ದೇಶವೇ ಆರಂಭವಾಗುತ್ತದೆ.

ಭಾರತೀಯ ರೈಲ್ವೆಯಲ್ಲಿ ಪ್ರತಿದಿನ 2.3 ಕೋಟಿ ಮಂದಿ ಪ್ರಯಾಣ
ಭಾರತೀಯ ರೈಲ್ವೆಯು ಜಗತ್ತಿನ ನಾಲ್ಕನೇ ಅತಿದೊಡ್ಡ ಸಾರಿಗೆ ನೆಟ್‌ವರ್ಕ್ ಆಗಿದ್ದು, ಪ್ರತಿದಿನ ಸುಮಾರು 13 ಸಾವಿರಕ್ಕೂ ಹೆಚ್ಚು ರೈಲುಗಳ ಮೂಲಕ 23 ಮಿಲಿಯನ್(2.3 ಕೋಟಿ) ಮಂದಿ ಪ್ರಯಾಣ ಮಾಡುತ್ತಾರೆ. ಭಾರತೀಯ ರೈಲ್ವೆ ಟ್ರ್ಯಾಕ್ ದೇಶದ ಗಡಿಯವರೆಗೂ ವಿಸ್ತರಿಸಿದೆ.
ಭಾರತದ ಕೊನೆಯ ರೈಲ್ವೇ ನಿಲ್ದಾಣ
ಭಾರತೀಯ ರೈಲ್ವೆಯು ದೇಶದ ಪ್ರಮುಖ ಸಾರಿಗೆ ಜಾಲ. ನಮ್ಮಲ್ಲಿ ಸಾವಿರಾರು ನಿಲ್ದಾಣಗಳಿವೆ. ಆದರೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿರುವ 'ಸಿಂಘಾಬಾದ್' ರೈಲ್ವೆ ನಿಲ್ದಾಣ ವಿಶೇಷವಾಗಿದೆ. ಇದು ಭಾರತೀಯ ರೈಲ್ವೆ ಜಾಲದ ಕೊನೆಯ ನಿಲ್ದಾಣ. ಈ ಹಳಿಗಳು ಮುಗಿದ ಕೆಲವೇ ಅಡಿಗಳ ದೂರದಲ್ಲಿ ನಮ್ಮ ನೆರೆಯ ದೇಶ ಬಾಂಗ್ಲಾದೇಶದ ಗಡಿ ಆರಂಭವಾಗುತ್ತದೆ.
ಈ ರೈಲು ನಿಲ್ದಾಣ ತುಂಬಾನೆ ವಿಚಿತ್ರ
ಈ ನಿಲ್ದಾಣ ನೋಡಲು ತುಂಬಾ ವಿಚಿತ್ರವಾಗಿದೆ. ದೇಶದ ಬೇರೆಲ್ಲಾ ನಿಲ್ದಾಣಗಳು ಪ್ರಯಾಣಿಕರಿಂದ ಗಿಜಿಗುಡುತ್ತಿದ್ದರೆ, ಸಿಂಘಾಬಾದ್ ನಿಲ್ದಾಣ ಮಾತ್ರ ಸ್ತಬ್ಧವಾಗಿರುತ್ತದೆ. ಇಲ್ಲಿ ಒಬ್ಬ ಪ್ರಯಾಣಿಕನೂ ಕಾಣಸಿಗುವುದಿಲ್ಲ.
ದೇಶ ವಿಭಜನೆಯ ಬಳಿಕ ಪ್ರಯಾಣಿಕರ ರೈಲು ಸೇವೆ ಸ್ಥಗಿತ
ಹೌದು, ದೇಶ ವಿಭಜನೆಯ ನಂತರ ಸರ್ಕಾರ ಇಲ್ಲಿಂದ ಪ್ರಯಾಣಿಕರ ರೈಲು ಸೇವೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಹೀಗಾಗಿ ಯಾವುದೇ ಪ್ಯಾಸೆಂಜರ್ ರೈಲು ಇಲ್ಲಿ ನಿಲ್ಲುವುದಿಲ್ಲ. ಈ ಕಾರಣಕ್ಕಾಗಿಯೇ ಇಲ್ಲಿ ಯಾವುದೇ ಪ್ರಯಾಣಿಕರು ಇಲ್ಲಿ ಇರುವುದಿಲ್ಲ.
ಈ ರೈಲ್ವೆ ನಿಲ್ದಾಣದ ವಿಶೇಷತೆ ಏನು?
ಸಿಂಘಾಬಾದ್ ರೈಲ್ವೆ ನಿಲ್ದಾಣದ ವಿಶೇಷತೆ ಎಂದರೆ, ಇಲ್ಲಿನ ಸಿಬ್ಬಂದಿ ಇಂದಿಗೂ ಬ್ರಿಟಿಷರ ಕಾಲದ ಹಳೆಯ ಗೇರ್‌ಗಳು ಮತ್ತು ಸಿಗ್ನಲ್ ವ್ಯವಸ್ಥೆಗಳನ್ನು ಬಳಸುತ್ತಾರೆ. ಇಲ್ಲಿ ರೈಲ್ವೆ ನೌಕರರು ಕೆಲಸ ಮಾಡುತ್ತಾರಾದರೂ, ರೈಲ್ವೆ ಇಲಾಖೆಯು ಸಾಮಾನ್ಯ ಪ್ರಯಾಣಿಕರಿಗಾಗಿ ಇರುವ ಟಿಕೆಟ್ ಕೌಂಟರ್‌ಗಳನ್ನು ಎಂದೋ ಮುಚ್ಚಿದೆ.
ಮತ್ತೆ ಈ ರೈಲ್ವೆ ಟ್ರ್ಯಾಕ್ ಯಾಕಿದೆ?
ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿರುವ 'ಸಿಂಘಾಬಾದ್' ರೈಲ್ವೆ ಟ್ರ್ಯಾಕ್ ಸರಕು ಸಾಗಣೆ ಹಾಗೂ ಆಯಕಟ್ಟಿನ ದೃಷ್ಟಿಯಿಂದ ಈ ನಿಲ್ದಾಣಕ್ಕೆ ಈಗಲೂ ಹೆಚ್ಚಿನ ಮಹತ್ವವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

