ನೀವು ಹೈನುಗಾರಿಕೆ (Dairy Business) ಆರಂಭಿಸಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸಬೇಕೆಂದು ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ನಿಮಗಾಗಿ ಒಂದು ಭರ್ಜರಿ ಸಿಹಿಸುದ್ದಿ ಇದೆ. ಹೆಚ್ಚಿನ ವಿವರ ಈ ಸ್ಟೋರಿಯಲ್ಲಿದೆ.
ನೀವು ಹೈನುಗಾರಿಕೆ (Dairy Business) ಆರಂಭಿಸಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸಬೇಕೆಂದು ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ನಿಮಗಾಗಿ ಒಂದು ಭರ್ಜರಿ ಸಿಹಿಸುದ್ದಿ ಇದೆ. ಗುಣಮಟ್ಟದ ಎಮ್ಮೆಗಳನ್ನು ಖರೀದಿಸಲು ಸರ್ಕಾರವು ಈಗ ಬರೋಬ್ಬರಿ 75% ರಷ್ಟು ಸಬ್ಸಿಡಿ ನೀಡುತ್ತಿದೆ. ಇದು ಹೈನುಗಾರಿಕೆಯಲ್ಲಿ ಆಸಕ್ತಿ ಇರುವವರಿಗೆ ಒಂದು ಅದ್ಭುತ ಅವಕಾಶ ಇದೆ. ಆದರೆ ಇದು ನಮ್ಮ ಕರ್ನಾಟಕದಲ್ಲಿ ಅಲ್ಲ.
ಯಾವುದು ಈ ಯೋಜನೆ?
ಮಧ್ಯಪ್ರದೇಶ ಸರ್ಕಾರವು ಪಶುಸಂಗೋಪನೆಯನ್ನು ಉತ್ತೇಜಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು 'ಮುಖ್ಯಮಂತ್ರಿ ಡೈರಿ ಪ್ಲಸ್ ಯೋಜನೆ' ಜಾರಿಗೆ ತಂದಿದೆ. ಈ ಯೋಜನೆಯಡಿ ಹೈನುಗಾರಿಕೆ ಆರಂಭಿಸುವವರಿಗೆ ಅತ್ಯುತ್ತಮ ತಳಿಯಾದ 'ಮುರ್ರಾ ಎಮ್ಮೆ'ಗಳನ್ನು (Murrah Buffalo) ವಿತರಿಸಲಾಗುತ್ತದೆ.
ಎಷ್ಟು ಸಬ್ಸಿಡಿ ಸಿಗಲಿದೆ?
ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಫಲಾನುಭವಿಗಳಿಗೆ ಒಟ್ಟು ವೆಚ್ಚದ 75 ಪ್ರತಿಶತ ರಷ್ಟು ಸಬ್ಸಿಡಿ ಸಿಗಲಿದೆ. ಇವರು ಕೇವಲ ₹73,700 ಪಾವತಿಸಬೇಕಾಗುತ್ತದೆ. ಸಾಮಾನ್ಯ ವರ್ಗದ ರೈತರಿಗೆ 50 ಪ್ರತಿಶತ ರಷ್ಟು ಸಬ್ಸಿಡಿ ಸಿಗಲಿದ್ದು, ಇವರು 1,47,500 ರೂಪಾಯಿ ಪಾವತಿಸಬೇಕಾಗುತ್ತದೆ. ಬಾಕಿ ಇರುವ ದೊಡ್ಡ ಮೊತ್ತವನ್ನು ಸರ್ಕಾರವೇ ಭರಿಸಲಿದೆ.
ಮುರ್ರಾ ಎಮ್ಮೆಯ ವಿಶೇಷತೆ ಏನು?
ಮುರ್ರಾ ತಳಿಯ ಎಮ್ಮೆಗಳು ಅತಿ ಹೆಚ್ಚು ಹಾಲು ನೀಡಲು ಹೆಸರುವಾಸಿ. ಯೋಜನೆಯಡಿ ನೀಡಲಾಗುವ ಎರಡು ಎಮ್ಮೆಗಳಿಂದ ದಿನಕ್ಕೆ ಅಂದಾಜು 18 ರಿಂದ 20 ಲೀಟರ್ ಹಾಲು ನಿರೀಕ್ಷಿಸಬಹುದು. ಸ್ಥಳೀಯ ಮಾರುಕಟ್ಟೆ ಅಥವಾ ಡೈರಿಗಳಿಗೆ ಈ ಹಾಲನ್ನು ಮಾರಾಟ ಮಾಡುವ ಮೂಲಕ ರೈತರು ಉತ್ತಮ ಲಾಭ ಗಳಿಸಬಹುದು.
ಯೋಜನೆಯ ಪ್ರಮುಖ ಪ್ರಯೋಜನಗಳು
- ಫಲಾನುಭವಿಗಳು ತಮಗೆ ಬೇಕಾದ ಎಮ್ಮೆಗಳನ್ನು ಹರಿಯಾಣ, ಪಂಜಾಬ್ ಅಥವಾ ಉತ್ತರ ಪ್ರದೇಶಕ್ಕೆ ಹೋಗಿ ಸ್ವತಃ ತಾವೇ ನೋಡಿ ಆಯ್ಕೆ ಮಾಡಿಕೊಳ್ಳಬಹುದು
- ಎಮ್ಮೆಗಳನ್ನು ಖರೀದಿಸಿದ ರಾಜ್ಯದಿಂದ ನಿಮ್ಮ ಮನೆಗೆ ತಲುಪಿಸಲು ತಗಲುವ ಸಾರಿಗೆ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಅಷ್ಟೇ ಅಲ್ಲದೆ, ಎಮ್ಮೆಗಳಿಗೆ ವಿಮೆಯ (Insurance) ಸೌಲಭ್ಯವನ್ನೂ ನೀಡಲಾಗುತ್ತದೆ.
- ಎಮ್ಮೆಗಳನ್ನು ಆಯ್ಕೆ ಮಾಡಲು ರೈತರು ಬೇರೆ ರಾಜ್ಯಕ್ಕೆ ಹೋಗಿ ಬರಲು ತಗಲುವ ಖರ್ಚನ್ನೂ ಸಹ ಯೋಜನೆಯಲ್ಲೇ ಸೇರಿಸಲಾಗಿದೆ.
ಹೈನುಗಾರಿಕೆಯನ್ನು ಒಂದು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಲು ಬಯಸುವವರು ಈ ಯೋಜನೆಯ ಪ್ರಯೋಜನವನ್ನು ಖಂಡಿತವಾಗಿ ಪಡೆದುಕೊಳ್ಳಬಹುದು.


