MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • News
  • India News
  • ವಿಜಯ್‌ ಸಿಎಂ ಕನಸಿಗೆ ಅಡ್ಡಗಾಲಾಯ್ತಾ ಕಾಂಗ್ರೆಸ್? ಮೈತ್ರಿಯೊಂದಿಗೆ ಸರ್ಕಾರ ರಚನೆಗೆ ಹೋಗಿದ್ದೇ ಪ್ರಮಾದವಾಯ್ತಾ?

ವಿಜಯ್‌ ಸಿಎಂ ಕನಸಿಗೆ ಅಡ್ಡಗಾಲಾಯ್ತಾ ಕಾಂಗ್ರೆಸ್? ಮೈತ್ರಿಯೊಂದಿಗೆ ಸರ್ಕಾರ ರಚನೆಗೆ ಹೋಗಿದ್ದೇ ಪ್ರಮಾದವಾಯ್ತಾ?

ತಮಿಳುನಾಡು ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ಗೆದ್ದರೂ, ದಳಪತಿ ವಿಜಯ್ ಅವರ TVK ಪಕ್ಷಕ್ಕೆ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ರಾಜ್ಯಪಾಲರ ಬಳಿ ಮೈತ್ರಿ ಸರ್ಕಾರದ ಪ್ರಸ್ತಾಪ ಮುಂದಿಟ್ಟಿದ್ದೇ ಸಿಎಂ ಕನಸಿಗೆ ಮುಳುವಾಯಿತು. ಈ ಎಡವಟ್ಟಿನಿಂದಾಗಿ ಬಹುಮತದ ಹತ್ತಿರ ಬಂದಿದ್ದ ವಿಜಯ್ ಅವಕಾಶ ಕಳೆದುಕೊಂಡರು.

2 Min read
Author : Sathish Kumar KH
Published : May 08 2026, 03:51 PM IST
Share this Photo Gallery
  • FB
  • TW
  • Linkdin
  • Whatsapp
15
ದಳಪತಿ ಸಣ್ಣ ತಪ್ಪು ಯಾವುದು?
Image Credit : Asianet News

ದಳಪತಿ ಸಣ್ಣ ತಪ್ಪು ಯಾವುದು?

ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಇಡೀ ದೇಶದ ಗಮನ ಸೆಳೆದಿದೆ. ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರ್ಕಾರ ರಚಿಸುವಲ್ಲಿ ವಿಫಲವಾಗಿದೆ. ರಾಜಕೀಯ ಅನುಭವದ ಕೊರತೆ ಮತ್ತು ಸಲಹೆಗಾರರ ಎಡವಟ್ಟು ವಿಜಯ್ ಅವರ ಸಿಎಂ ಕನಸಿಗೆ ತಣ್ಣೀರು ಎರಚಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಸಂಖ್ಯೆಗಳ ಆಟ ಮತ್ತು ವಿಜಯ್ ಎಡವಟ್ಟು:
Image Credit : AI

ಸಂಖ್ಯೆಗಳ ಆಟ ಮತ್ತು ವಿಜಯ್ ಎಡವಟ್ಟು:

ತಮಿಳುನಾಡಿನ 234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಶಾಸಕರ ಬೆಂಬಲ ಅಗತ್ಯವಿದೆ. ವಿಜಯ್ ಅವರ TVK ಪಕ್ಷ 108 ಸ್ಥಾನಗಳನ್ನು ಗೆದ್ದು ಭರ್ಜರಿ ಪ್ರದರ್ಶನ ನೀಡಿತ್ತು. ವಿಜಯ್ ಸ್ವತಃ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ನಿಯಮದಂತೆ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕಿದೆ. ಆಗ ಪಕ್ಷದ ಬಲ 107ಕ್ಕೆ ಇಳಿಯುತ್ತದೆ. ಈ ನಡುವೆ 5 ಸ್ಥಾನ ಗೆದ್ದಿದ್ದ ಕಾಂಗ್ರೆಸ್, ವಿಜಯ್ ಅವರಿಗೆ ಬೆಂಬಲ ಘೋಷಿಸಿತ್ತು. ಇದರಿಂದ ಮೈತ್ರಿಕೂಟದ ಬಲ 112ಕ್ಕೆ ಏರಿತು. ಆದರೂ ಬಹುಮತಕ್ಕೆ 6 ಸ್ಥಾನಗಳ ಕೊರತೆಯಿತ್ತು.

Related Articles

Related image1
ಒಂದೇ ತಪ್ಪಿನಿಂದ ನಟ ವಿಜಯ್ ಸಿಎಂ ಪಟ್ಟ ಮಿಸ್? ಅನುಭವ ಕೊರತೆಯಿಂದ ಟಿವಿಕೆ ಮಾಡಿದ ಎಡವಟ್ಟು
Related image2
ರಾಜಕೀಯ ಬಿರುಗಾಳಿ, ಟಿವಿಕೆ ಪಕ್ಷದ 108 ಶಾಸಕರು ರಾಜೀನಾಮೆ ಎಚ್ಚರಿಕೆ ಕೊಟ್ಟ ನಟ ವಿಜಯ್
35
ರಾಜಭವನದಲ್ಲಿ ನಡೆದಿದ್ದೇನು?
Image Credit : Asianet News

ರಾಜಭವನದಲ್ಲಿ ನಡೆದಿದ್ದೇನು?

ರಾಜಕೀಯ ತಜ್ಞರ ಪ್ರಕಾರ, ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ ಅತಿದೊಡ್ಡ ಪಕ್ಷದ ನಾಯಕನಿಗೆ ಸರ್ಕಾರ ರಚಿಸಲು ಮೊದಲ ಅವಕಾಶ ನೀಡಲಾಗುತ್ತದೆ. ವಿಜಯ್ ಅವರು ಕೇವಲ ತಮ್ಮ ಪಕ್ಷದ (TVK) 108 ಶಾಸಕರ ಬೆಂಬಲ ಪತ್ರವನ್ನು ಹಿಡಿದು ರಾಜ್ಯಪಾಲರನ್ನು ಭೇಟಿಯಾಗಬೇಕಿತ್ತು. ಆಗ ರಾಜ್ಯಪಾಲರು ಅತಿದೊಡ್ಡ ಪಕ್ಷದ ನಾಯಕ ಎಂಬ ನೆಲೆಯಲ್ಲಿ ವಿಜಯ್ ಅವರಿಗೆ ಪ್ರಮಾಣವಚನ ಬೋಧಿಸಿ, ಸದನದಲ್ಲಿ ಬಹುಮತ ಸಾಬೀತುಪಡಿಸಲು ಕಾಲಾವಕಾಶ ನೀಡುತ್ತಿದ್ದರು.

45
ಮುಳ್ಳಾದ ಮೈತ್ರಿ ಸರ್ಕಾರದ ಪ್ರಸ್ತಾಪ
Image Credit : Asianet News

ಮುಳ್ಳಾದ ಮೈತ್ರಿ ಸರ್ಕಾರದ ಪ್ರಸ್ತಾಪ

ಆದರೆ, ವಿಜಯ್ ಅವರು ತಮ್ಮ ಪತ್ರದಲ್ಲಿ ಕಾಂಗ್ರೆಸ್ ಶಾಸಕರ ಸಹಿಯನ್ನೂ ಸೇರಿಸಿ 'ಮೈತ್ರಿ' ಸರ್ಕಾರ ರಚನೆಯ ಪ್ರಸ್ತಾಪ ಮುಂದಿಟ್ಟರು. ಒಮ್ಮೆ ಮೈತ್ರಿ ಸರ್ಕಾರದ ಪ್ರಸ್ತಾಪ ಹೋದರೆ, ರಾಜ್ಯಪಾಲರು ಅಲ್ಲಿ ಸಂಖ್ಯಾಬಲವನ್ನು (Magic Number 118) ಕಟ್ಟುನಿಟ್ಟಾಗಿ ಪರಿಶೀಲಿಸುತ್ತಾರೆ. ವಿಜಯ್ ಅವರ ಮೈತ್ರಿಕೂಟದ ಬಳಿ ಕೇವಲ 112 ಶಾಸಕರಿದ್ದ ಕಾರಣ, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಈ ಮನವಿಯನ್ನು ತಾಂತ್ರಿಕ ಕಾರಣ ನೀಡಿ ತಿರಸ್ಕರಿಸಿದರು.

55
ರಾಜಕೀಯ ಸಲಹೆಗಾರರ ಕೊರತೆ
Image Credit : Gemini AI

ರಾಜಕೀಯ ಸಲಹೆಗಾರರ ಕೊರತೆ

ಎರಡನೇ ಬಾರಿ ರಾಜ್ಯಪಾಲರನ್ನು ಭೇಟಿಯಾದಾಗಲೂ ಬಹುಮತಕ್ಕೆ ಬೇಕಾದ 118 ಶಾಸಕರ ಬೆಂಬಲದ ದಾಖಲೆ ಒದಗಿಸಲು ವಿಜಯ್‌ಗೆ ಸಾಧ್ಯವಾಗಲಿಲ್ಲ. ಒಂದು ವೇಳೆ ಅವರು ಅತಿದೊಡ್ಡ ಪಕ್ಷದ ನಾಯಕನಾಗಿ ಹಕ್ಕು ಮಂಡಿಸಿದ್ದರೆ, ನೇರವಾಗಿ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದರು. ಉತ್ತಮ ರಾಜಕೀಯ ಸಲಹೆಗಾರರ ಕೊರತೆಯಿಂದಾಗಿ ವಿಜಯ್ ಅವರು ಸಿಎಂ ಪಟ್ಟದ ಹತ್ತಿರಕ್ಕೆ ಬಂದು ಅವಕಾಶ ಕೈಚೆಲ್ಲುವಂತಾಗಿದೆ. ಸದ್ಯ ತಮಿಳುನಾಡಿನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ತಮಿಳುನಾಡು
ಟಿವಿ ಶೋ
ದಳಪತಿ ವಿಜಯ್

Latest Videos
Recommended Stories
Recommended image1
ಅಪ್ಪನ ಸೆಲ್ಯೂಟ್‌ಗಾಗಿ 1.5 ಲಕ್ಷದ ಕೆಲಸಕ್ಕೆ ಗುಡ್‌ಬೈ! ಬಡ ಡ್ರೈವರ್​ ಪುತ್ರನ ಸ್ಟೋರಿ ಕೇಳಿ ಅಮಿತಾಭ್​ ಬಚ್ಚನ್​ ಭಾವುಕ
Recommended image2
ನನಗೆ ಗಂಡನೂ ಬೇಕು ಅವನೂ ಬೇಕು! ಗಂಡ ಒಪ್ಪಿದರೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇಕೆ ಈ ಪ್ರಕರಣ?
Recommended image3
ರಾಮಮಂದಿರದ ತೀರ್ಪಿನ ದಿನ ನ್ಯಾಯಮೂರ್ತಿಗಳನ್ನು ಹಿಂಬಾಲಿಸಿದ್ದ ಆ ಕೋತಿ: ಆತ್ಮಚರಿತ್ರೆಯಲ್ಲಿ ರೋಚಕ ಅನುಭವ
Related Stories
Recommended image1
ಒಂದೇ ತಪ್ಪಿನಿಂದ ನಟ ವಿಜಯ್ ಸಿಎಂ ಪಟ್ಟ ಮಿಸ್? ಅನುಭವ ಕೊರತೆಯಿಂದ ಟಿವಿಕೆ ಮಾಡಿದ ಎಡವಟ್ಟು
Recommended image2
ರಾಜಕೀಯ ಬಿರುಗಾಳಿ, ಟಿವಿಕೆ ಪಕ್ಷದ 108 ಶಾಸಕರು ರಾಜೀನಾಮೆ ಎಚ್ಚರಿಕೆ ಕೊಟ್ಟ ನಟ ವಿಜಯ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved