ಎಲ್ಲಾ ವಿರೋಧ ಮೀರಿ ಮದುವೆಯಾದ ಖ್ಯಾತ ಯುಟ್ಯೂಬರ್ ಸಕೀಬ್ ಸೈಫಿ ಮತ್ತು ಕನ್ನಿಕಾ ಶರ್ಮಾ
ಜನಪ್ರಿಯ ಯುಟ್ಯೂಬರ್‌ಗಳಾದ ಸಕೀಬ್ ಸೈಫಿ ಮತ್ತು ಕನ್ನಿಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲವ್ ಜಿಹಾದ್ ಆರೋಪ ಹಾಗೂ ವಿರೋಧಗಳ ನಡುವೆಯೂ ಈ ಜೋಡಿ ಹಿಂದೂ ಮತ್ತು ಇಸ್ಲಾಂ ಎರಡೂ ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದಾರೆ.

ಸಕೀಬ್ ಸೈಫಿ ಮತ್ತು ಕನ್ನಿಕಾ ಶರ್ಮಾ ಮದುವೆ
ಜನಪ್ರಿಯ ಯುಟ್ಯೂಬರ್, ಕಂಟೆಂಟ್ ಕ್ರಿಯೇಟರ್ ಆಗಿರುವ ಸಕೀಬ್ ಸೈಫಿ ಮತ್ತು ಕನ್ನಿಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ಕಳೆದ ಕೆಲವು ದಿನಗಳಿಂದ ಇವರಿಬ್ಬರ ಪ್ರೀತಿ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಕಾಮಿಡಿ ವಿಡಿಯೋಗಳ ಮೂಲಕ ಸಕೀಬ್ ಮತ್ತು ಕನ್ನಿಕಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಸಕೀಬ್ ಮತ್ತು ಕನ್ನಿಕಾ ಮದುವೆ
ಸಕೀಬ್ ಮತ್ತು ಕನ್ನಿಕಾ ಮದುವೆ ವಿಷಯ ಮುನ್ನಲೆಗೆ ಬರುತ್ತಿದ್ದಂತೆ ಇದೊಂದು ಲವ್ ಜಿಹಾದ್ ಎಂಬ ಆರೋಪಗಳು ಕೇಳಿ ಬಂದಿದ್ದವು. ಇಬ್ಬರ ಮದುವೆಗೆ ಸಾಕಷ್ಟು ವಿರೋಧ ಸಹ ವ್ಯಕ್ತವಾಗಿತ್ತು. ಈ ಎಲ್ಲಾ ಅಡೆತಡೆಗಳ ನಡುವೆಯೂ ಆಪ್ತರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಎರಡು ಸಂಪ್ರದಾಯದಂತೆ ಮದುವೆ
ಇಬ್ಬರ ಧರ್ಮ ಬೇರೆಯಾಗಿರೋದರಿಂದ ಸಾಕಿಬ್ ಮತ್ತು ಕನ್ನಿಕಾ ಎರಡು ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಮೊದಲು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ಜೋಡಿ, ನಂತರ ಇಸ್ಲಾಂನಂತೆ ನಿಖಾ ನೆರವೇರಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಮದುವೆಯ ಫೋಟೋ ಮತ್ತು ವಿಡಿಯೋಗಳು ಹರಿದಾಡುತ್ತಿವೆ. ಈ ಜೋಡಿಯ ಫೋಟೋಗಳನ್ನು ಶೇರ್ ಮಾಡಿಕೊಳ್ತಿರೋ ಜನರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ.
ಮದುವೆ ಫೋಟೋಗಳು ವೈರಲ್
ಮದುವೆಗೆ ತೀವ್ರ ವಿರೋಧ ವ್ಯಕ್ತವಾಗಿದ್ರೂ ಸಕೀಬ್ ಮತ್ತು ಕನ್ನಿಕಾ ಮಾತ್ರ ಯಾವುದನ್ನು ಲೆಕ್ಕಿಸದೇ ಕುಟುಂಬಸ್ಥರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಿಂದೂ ಸಂಪ್ರದಾಯದಂತೆ ಎಲ್ಲಾ ಮದುವೆಯಲ್ಲಿ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಲಾಗಿದೆ. ತದನಂತರ ಇಸ್ಲಾಂ ಸಂಪ್ರದಾಯದಂತೆಯೂ ಪ್ರತಿಯೊಂದು ಶಾಸ್ತ್ರಗಳು ನಡೆದಿವೆ. ಈ ಎಲ್ಲಾ ಫೋಟೋ ಮತ್ತು ವಿಡಿಯೋಗಳನ್ನು ಸಕೀಬ್ ಮತ್ತು ಕನ್ನಿಕಾ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ನಮ್ಮ ಮೇಲೆ ದಬ್ಬಾಳಿಕೆ ಆದಾಗಲೆಲ್ಲಾ ಜಿಹಾದ್ ಇದ್ದೇ ಇರುತ್ತದೆ: ಮೌಲಾನಾ ಮಹಮೂದ್ ಮದನಿ
ಕಲರ್ ಫುಲ್ ಉಡುಗೆ
ಹಿಂದೂ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ಕನ್ನಿಕಾ ಕೆಂಪು ಬಣ್ಣದ ಸುಂದರವಾದ ಆಕರ್ಷಕ ಲೆಹಂಗಾ ಮಾದರಿಯ ಡ್ರೆಸ್ ಧರಿಸಿದ್ರೆ, ಸಕೀಬ್ ಸಿಲ್ವರ್ ಕಲರ್ ಶೇರ್ವಾನಿ ಧರಿಸಿ ಮಿಂಚಿದ್ದಾರೆ. ಉತ್ತರ ಭಾರತದ ಸಂಪ್ರದಾಯದಂತೆ ಸಾಕೀಬ್, ತಿಲಕಧಾರಿಯಾಗಿ ಕೈಯಲ್ಲಿ ಖಡ್ಗ ಹಿಡಿದುಕೊಂಡಿದ್ದಾರೆ. ಇಸ್ಲಾಂ ಸಂಪ್ರದಾಯದ ಮದುವೆಯಲ್ಲಿ ಇಬ್ಬರು ಮಿಲ್ಕಿ ಕ್ರೀಮ್ ಕಲರ್ ಉಡುಗೆಯಲ್ಲಿ ಮಿಂಚಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಲವ್ ಜಿಹಾದ್; ಮೋಸ, ಬೆದರಿಕೆ, ಮತಾಂತರ ಒತ್ತಡ; ಇಶಾಕ್ ವಿರುದ್ಧ ದೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

