- Home
- News
- India News
- ಡೀಸೆಲ್ ಸೋರಿಕೆಯಾಗ್ತಿದ್ರೂ 120 km ವೇಗದಲ್ಲಿ ಹೊರಟಿತ್ತು ಎಕ್ಸ್‌ಪ್ರೆಸ್ ರೈಲು; ತಪ್ಪಿದ ದೊಡ್ಡ ಅನಾಹುತ
ಡೀಸೆಲ್ ಸೋರಿಕೆಯಾಗ್ತಿದ್ರೂ 120 km ವೇಗದಲ್ಲಿ ಹೊರಟಿತ್ತು ಎಕ್ಸ್‌ಪ್ರೆಸ್ ರೈಲು; ತಪ್ಪಿದ ದೊಡ್ಡ ಅನಾಹುತ
ಗಾಜಿಯಾಬಾದ್‌ನಿಂದ ಅಲಿಗಢ್‌ಗೆ ತೆರಳುತ್ತಿದ್ದ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ನಲ್ಲಿ ಡೀಸೆಲ್ ಸೋರಿಕೆಯಾಗಿದ್ದು, ಭಾರೀ ಅನಾಹುತ ತಪ್ಪಿದೆ. ಡೀಸೆಲ್ ಟ್ಯಾಂಕ್‌ನಲ್ಲಿ ಡ್ರಿಲ್ ಯಂತ್ರ ಸಿಲುಕಿದ್ದರಿಂದ ಸೋರಿಕೆಯಾಗಿದ್ದು, ಸುಮಾರು ಎರಡು ಗಂಟೆಗಳ ಕಾಲ ರೈಲು ಅಲಿಗಢ್ ನಿಲ್ದಾಣದಲ್ಲಿ ನಿಂತಿತ್ತು.
17

ಗಾಜಿಯಾಬಾದ್‌ನಿಂದ ಅಲಗಢ್‌ಗೆ ಮಾರ್ಗವಾಗಿ ಚಲಿಸುವ ಬಿಹಾರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲು ಭಾರೀ ಅನಾಹುತದಿಂದ ತಪ್ಪಿದೆ. ರೈಲು 120 ಕಿಮೀ ವೇಗದಲ್ಲಿ 14 ನಿಲ್ದಾಣಗಳನ್ನು ಕ್ರಮಿಸಿದ ಬಳಿಕ ಡೀಸೆಲ್ ಸೋರಿಕೆ ವಿಷಯ ಲೋಕೋಪೈಲಟ್‌ಗಳ ಗಮನಕ್ಕೆ ಬಂದಿದೆ. ಅಲಿಗಢ ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿ ಗಮನಕ್ಕೆ ಸೋರಿಕೆ ಕಂಡು ಬಂದಿದೆ.
27
ಭಾರತೀಯ ರೈಲ್ವೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬರೋಬ್ಬರಿ 2 ಸಾವಿರ ಪ್ರಯಾಣಿಕರ ಪ್ರಾಣ ಅಪಾಯದಲ್ಲಿತ್ತು. ರೈಲು ಚಲಿಸಿದ ಮಾರ್ಗದಲ್ಲಿ ಒಂದೇ ಒಂದು ಬೆಂಕಿ ಕಿಡಿ ತಾಗಿದ್ರೂ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲು ಸುಟ್ಟು ಭಸ್ಮವಾಗುತ್ತಿತ್ತು. ಅಲಿಗಢ್ ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿಗೆ ಡೀಸೆಲ್ ಸೋರಿಕೆಯಾಗುತ್ತಿರೋದು ಗಮನಕ್ಕೆ ಬಂದಿದೆ. ಡೀಸೆಲ್ ಟ್ಯಾಂಕ್‌ನಲ್ಲಿ ಡ್ರಿಲ್ ಯಂತ್ರ ಸಿಲುಕಿತ್ತು ಎಂದು ವರದಿಯಾಗಿದೆ.
37
ಗಾಜಿಯಾಬಾದ್‌ನಿಂದ ಅಲಿಗಢ ಮಾರ್ಗದಲ್ಲಿ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಗಂಟೆಗೆ 120 ರಿಂದ 130 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ. ಗಾಜಿಯಾಬಾದ್ ಮತ್ತು ಅಲಿಗಢ ಮಧ್ಯೆ ದಾದ್ರಿ, ಮಾರಿಪತ್, ಬೋಡ್ಕಿ, ದನ್ಕೌರ್, ಖುರ್ಜಾ, ಚೋಲಾ, ಸೋಮ್ನಾ, ಕುಲ್ವಾ, ಮಹರ್ವಾಲ್ ನಿಲ್ದಾಣಗಳು ಬರುತ್ತವೆ. ಇಷ್ಟು ನಿಲ್ದಾಣಗಳಲ್ಲಿಯೂ ಡೀಸೆಲ್ ಸೋರಿಕೆಯಾಗಿರೋದು ಯಾರ ಗಮನಕ್ಕೂ ಬಂದಿಲ್ಲ.
47
Sampark Kranti
ಡೀಸೆಲ್ ಸೋರಿಕೆ ವಿಷಯ ತಿಳಿಯುತ್ತಲೇ ಅಲಿಗಢ ನಿಲ್ದಾಣದಲ್ಲಿ ಹಲ್ ಚಲ್ ಸೃಷ್ಟಿಯಾಗಿತ್ತು. ಲೋಕೋ ಪೈಲಟ್‌ಗಳು ಮತ್ತು ಅಧಿಕಾರಿಗಳು ಮುಂಜಾಗ್ರತ ಕ್ರಮ ತೆಗೆದುಕೊಂಡು ದೀರ್ಘ ಸಮಯದವರೆಗೆ ರೈಲು ನಿಲ್ಲಿಸಲಾಯ್ತು. ಸ್ಟೇಶನ್ ಅಧೀಕ್ಷಕರು ಸೇರಿದಂತೆ ಪ್ರಮುಖ ಅಧಿಕಾರಿಗಳೆಲ್ಲಾ ನಿಲ್ದಾಣದಲ್ಲಿ ಜಮಾಯಿಸಿದ್ದರು. ಇನ್ನು ಪ್ರಯಾಣಿಕರಿಗೆ ಏನಾಗುತ್ತಿದೆ ಅನ್ನೋದು ಕೆಲ ಸಮಯದವರೆಗೆ ತಿಳಿಯದೇ ಗೊಂದಲದಲ್ಲಿದ್ದರು.
57
ಮೊದಲಿಗೆ ಸೋರಿಕೆಯಾಗುತ್ತಿರುವ ಜಾಗದಲ್ಲಿ ಕಟ್ಟಿಗೆ ಮತ್ತು ಬಟ್ಟೆ ಇರಿಸಲಾಗಿತ್ತು. ಆದರೂ ಸೋರಿಕೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಪೈಪ್ ಮೂಲಕ ಬ್ಯಾರಲ್‌ಗಳಿಗೆ ತುಂಬಿಸಲಾಯ್ತು. ಡೀಸೆಲ್ ಟ್ಯಾಂಕ್‌ನಲ್ಲಿ ಡ್ರಿಲಿಂಗ್ ಮಷೀನ್ ಪತ್ತೆಯಾಗಿದೆ. ಸುಮಾರು 2 ಗಂಟೆ 19 ನಿಮಿಷ ಪರಿಶೀಲನೆ ನಡೆಸಿದ ಬಳಿಕ ಸಂಜೆ 5 ಗಂಟೆ 5 ನಿಮಿಷಕ್ಕೆ ರೈಲು ತನ್ನ ಪ್ರಯಾಣವನ್ನು ಆರಂಭಿಸಿತು.
67
ಸುಮಾರು 2 ಗಂಟೆಗಳ ಕಾಲ ರೈಲು ಅಲಿಗಢ್ ನಿಲ್ದಾಣದಲ್ಲಿಯೇ ನಿಂತಿದ್ದರಿಂದ ಪ್ರಯಾಣಿಕರು ಹೈರಾಣಾದರು. ಜನರಲ್ ಕೋಚ್‌ನಲ್ಲಿಯೇ ಸಾಕಷ್ಟು ಪ್ರಯಾಣಿಕರು ಹೊರ ಬರಲಾರದೇ 39 ಡಿಗ್ರಿ ಸೆಲ್ಸಿಯಸ್‌ನಲ್ಲಿ ತಾಪಮಾನದಲ್ಲಿ ಸಿಲುಕಿ ಸುಸ್ತಾದರು. ಇನ್ನು ಪುರುಷರು ಶರ್ಟ ಕಳಚಿ, ಬನಿಯನ್ ಮೇಲೆಯೇ ನಿಲ್ದಾಣದಲ್ಲಿ ಓಡಾಡುತ್ತಿದ್ದರು.
77
ರೈಲ್ವೆ ಹಳಿಯಲ್ಲಿ ಡ್ರಿಲ್ ಯಂತ್ರವನ್ನು ಹೇಗೆ ಬಿಡಲಾಯಿತು ಎಂಬುದರ ಕುರಿತು ಸಂಬಂಧಪಟ್ಟ ಕಾರ್ಯನಿರ್ವಾಹಕ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಮಧ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ರೈಲ್ವೆ ಮಾಹಿತಿ ನೀಡಿದೆ.
Latest Videos