MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಭಾರತಕ್ಕೆ ಗಂಡಾಂತರ, ಭಾರಿ ಮಳೆಗಾಲದಲ್ಲೂ ಎಲ್ಲೆಡೆ ಬಿಸಿಲು, ಬೆಚ್ಚಿ ಬೀಳಿಸಿದ ಸ್ಯಾಟಲೈಟ್ ವರದಿ

ಭಾರತಕ್ಕೆ ಗಂಡಾಂತರ, ಭಾರಿ ಮಳೆಗಾಲದಲ್ಲೂ ಎಲ್ಲೆಡೆ ಬಿಸಿಲು, ಬೆಚ್ಚಿ ಬೀಳಿಸಿದ ಸ್ಯಾಟಲೈಟ್ ವರದಿ

ಮುಂಗಾರು ವಿಳಂಬವಾಗಿ ಕೇರಳಕ್ಕೆ ಅಪ್ಪಳಿಸಿದರೂ ದೇಶದ ಹಲವು ಭಾಗಕ್ಕೆ ಇನ್ನೂ ತಲುಪಿಲ್ಲ. ಇದೀಗ ಸ್ಯಾಟಲೈಟ್ ಚಿತ್ರ ಹಾಗೂ ವರದಿ ಗಂಡಾಂತರದ ಸೂಚನೆ ನೀಡಿದೆ. ಭಾರಿ ಮಳೆಗಾಲದಲ್ಲೂ ಭಾರತದಲ್ಲೆಡೆ ಬಿಸಿಲು ತೀವ್ರಗೊಂಡಿದೆ.

1 Min read
Author : Chethan Kumar
Published : Jun 16 2026, 08:47 PM IST
Share this Photo Gallery
  • FB
  • TW
  • Linkdin
  • Whatsapp
16
ಭಾರತದೆಲ್ಲೆಡೆ ಬಿಸಿಲು ತೀವ್ರ
Image Credit : Getty

ಭಾರತದೆಲ್ಲೆಡೆ ಬಿಸಿಲು ತೀವ್ರ

ಭಾರತದಲ್ಲಿ ಮುಂಗಾರು ವಿಳಂಬವಾಗಿ ಮಳೆ ಆರಂಭಗೊಂಡಿತ್ತು. ಈ ಬಾರಿ ಮಳೆ ಕೊರತೆ ಎಲ್ ನಿನೋ ಭೀತಿ ನೀಡುವೆ ಮುಂಗಾರು ಚಟುವಟಿಕೆಗಳು ಚುರುಕುಗೊಂಡಿತ್ತು. ಜೂನ್ 15ರ ವೇಳೆಗೆ ಮಳೆ ಮಾಯವಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಸಿಲು ಹೆಚ್ಚಾಗಿದೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಮಳೆಯೇ ಇಲ್ಲದಾಗಿದೆ. ಇದು ಹಲವು ಮುನ್ಸೂಚನೆ ನೀಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಜೂನ್ ಮಧ್ಯಭಾಗದ ಭಾರಿ ಮಳೆ ಇಲ್ಲ
Image Credit : X

ಜೂನ್ ಮಧ್ಯಭಾಗದ ಭಾರಿ ಮಳೆ ಇಲ್ಲ

ಸಾಮಾನ್ಯವಾಗಿ ಮುಂಗಾರು ವಿಳಂಭವಾದರೂ ಜೂನ್ ಮಧ್ಯಭಾಗದ ವೇಳೆ ಮುಂಗಾರು ಅಪ್ಪಳಿಸಿ ಉತ್ತಮ ಮಳೆಯಾಗುತ್ತದೆ. ದೇಶದೆಲ್ಲೆಡೆ ಮಳೆ ತೀವ್ರಗೊಳ್ಳುತ್ತದೆ. ನದಿಗಳು,ಜಲಾಶಗಳು ಭರ್ತಿಯಾಗುತ್ತದೆ. ಆದರೆ ಈ ಬಾರಿ ಹಲವು ರಾಜ್ಯಗಳು ಇನ್ನು ಮಳೆಗಾಗಿ ಕಾಯುತ್ತಿದೆ. ಭಾರಿ ಮಳೆ ಬರಬೇಕಾದ ಕಾಲದಲ್ಲೇ ಬಿಸಿಲು ತೀವ್ರಗೊಳ್ಳುತ್ತಿದೆ.

Related Articles

Related image1
Monsoon Pause: ಮಾಯವಾದ ಮುಂಗಾರು ಮಾರುತ, ಉಪಗ್ರಹ ಚಿತ್ರದಲ್ಲಿ ದಾಖಲಾಯ್ತು ಬೆಚ್ಚಿಬೀಳಿಸುವ ದೃಶ್ಯ!
Related image2
ಮಳೆ ಕೊರತೆ: ಕರಾವಳಿ ರೈತರಿಗೆ ಆತಂಕ, ಭತ್ತ ಉತ್ಪಾದನೆ ಕುಸಿತ ಭೀತಿ, ಮುಗಿಲು ನೋಡುತ್ತಾ ಕುಳಿತ ರೈತ!
36
ಸ್ಯಾಟಲೈಟ್ ಚಿತ್ರದಿಂದ ಆತಂಕ ಹೆಚ್ಚಳ
Image Credit : X

ಸ್ಯಾಟಲೈಟ್ ಚಿತ್ರದಿಂದ ಆತಂಕ ಹೆಚ್ಚಳ

ಯೂರೋಪ್ ಹಾಗೂ ಅಮೆರಿಕದ ಹವಾಮಾನ ಇಲಾಖೆ ಸ್ಯಾಟಲೈಟ್ ಚಿತ್ರವನ್ನು ಪ್ರಕಟಿಸಿದೆ. ಆತಂಕ ಎಂದರೆ ಸದ್ಯ ಭಾರತದ ಮೇಲೆ ಮಳೆ ಮೋಡವೇ ಇಲ್ಲ. ಸಂಪೂರ್ಣ ಭಾರತದಲ್ಲಿ ಬಿಸಿಲು ಸ್ಪಷ್ಟವಾಗಿದೆ. ಭಾರತದಲ್ಲಿ ಇಡಿ ವಾತಾವರಣವೇ ಬದಲಾಗಿದೆ. ರೈತರು ಕಂಗಾಲಾಗಿದ್ದಾರೆ. ಮಳೆ ಕೊರತೆ ಆರಂಭದಲ್ಲೇ ಭಾರತವನ್ನು ಸಂಕಷ್ಟಕ್ಕೆ ದೂಡಿದೆ.

46
ಸ್ಯಾಟಲೈನ್‌ನಲ್ಲಿ ಮುಂಗಾರು ಕ್ಷೀಣ ಸ್ಪಷ್ಟ
Image Credit : X

ಸ್ಯಾಟಲೈನ್‌ನಲ್ಲಿ ಮುಂಗಾರು ಕ್ಷೀಣ ಸ್ಪಷ್ಟ

ಸ್ಯಾಟಲೈಟ್ ಚಿತ್ರದಲ್ಲಿ ಮುಂಗಾರು ಕ್ಷೀಣಗೊಂಡಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಇಡೀ ದೇಶ ಡ್ರೈ ಆಗಿ ಕಾಣಿಸುತ್ತಿದೆ. ಮಳೆ ಮೋಡ ಇಲ್ಲ, ಎಲ್ಲೂ ಮಳೆ ಇಲ್ಲ. ಭಾರತದ ಪರಿಸ್ಥಿತಿ ಬಹುತೇಕ ಬದಲಾಗಿದೆ. ಮಳೆಗಾಲದಲ್ಲಿ ಇರಬೇಕಾದ ತೇವಾಶಂವೂ ವಾತಾವರಣದಲ್ಲಿ ಕಾಣುತ್ತಿಲ್ಲ. ಇದು ಭಾರಿ ಗಂಡಾಂತರಕ್ಕೆ ಕಾರಣವಾಗು ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ.

56
ಮಳೆ ಇಲ್ಲ ಆತಂಕ ಹೆಚ್ಚಳ
Image Credit : Asianet News

ಮಳೆ ಇಲ್ಲ ಆತಂಕ ಹೆಚ್ಚಳ

ಕೇರಳಕ್ಕೆ ಮುಂಗಾರು ಅಪ್ಪಳಿಸಿದ ಬಳಿಕ ದಕ್ಷಿಣ ಭಾರತದಲ್ಲಿ ಉತ್ತಮ ಮಳೆ ಆರಂಭಗೊಳ್ಳಲಿದೆ. ಬಳಿಕ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಉತ್ತಮ ಮಳೆಯಾಗಲಿದೆ. ಭಾರಿ ಮಳೆಯಾಗಬೇಕಿದ್ದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಇಲ್ಲದಾಗಿದೆ. ಆತಂಕ ಹೆಚ್ಚಾಗಿದೆ.

66
ಎಲ್ ನಿನೋ ಭೀತಿ
Image Credit : Asianet News

ಎಲ್ ನಿನೋ ಭೀತಿ

ಹವಾಮಾನ ಇಲಾಖೆ ಆರಂಭದಲ್ಲೇ ಎಲ್ ನಿನೋ ಎಚ್ಚರಿಕೆ ನೀಡಿತ್ತು. ಇದರಿಂದ ದೇಶದ ಹಲವು ಭಾಗದಲ್ಲಿ ಬರಗಾಲ ಸೃಷ್ಟಿಯಾಗಲಿದೆ ಎಂದಿತ್ತು. ಇನ್ನು ಕೆಲೆವೆಡೆ ವಿಪರೀತ ಮಳೆಯಿಂದ ಪ್ರವಾಹ ಪರಿಸ್ಥಿತಿಗಳು, ಪ್ರಾಕೃತಿಕ ವಿಕೋಪಗಳು ಸಂಭವಿಸಲಿದೆ ಎಂದಿತ್ತು. ಇದೀಗ ಭಾರತದ ಹಲವು ಭಾಗದಲ್ಲಿ ನೀರಿನ ಬರ ಎದುರಾಗುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಭಾರತೀಯ ಹವಾಮಾನ ಇಲಾಖೆ
ಹವಾಮಾನ ಮುನ್ಸೂಚನೆ
ಮಳೆ
ಭಾರತ ಸುದ್ದಿ

Latest Videos
Recommended Stories
Recommended image1
Viral Video: ರೈಲಿನಲ್ಲಿ ಯುವತಿಯರ ವಿಡಿಯೋ ಮಾಡಿ ಅಶ್ಲೀಲ ಹಾಡು ಸೇರಿಸಿ ವೈರಲ್ ಮಾಡಿದ ಕಿಡಿಗೇಡಿ; ಮುಂದೇನಾಯ್ತು ನೋಡಿ
Recommended image2
ರೈಲಿನಲ್ಲಿ ಮಹಿಳೆಯರು ಸೋಲೋ ಟ್ರಿಪ್ ಹೋಗ್ತೀರಾ? ಟಾಯ್ಲೆಟ್‌ ಒಳಗಿನ ಎಮರ್ಜೆನ್ಸಿ ಬಟನ್ ಬಗ್ಗೆ ತಿಳಿದುಕೊಳ್ಳಿ!
Recommended image3
Now Playing
ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Related Stories
Recommended image1
Monsoon Pause: ಮಾಯವಾದ ಮುಂಗಾರು ಮಾರುತ, ಉಪಗ್ರಹ ಚಿತ್ರದಲ್ಲಿ ದಾಖಲಾಯ್ತು ಬೆಚ್ಚಿಬೀಳಿಸುವ ದೃಶ್ಯ!
Recommended image2
ಮಳೆ ಕೊರತೆ: ಕರಾವಳಿ ರೈತರಿಗೆ ಆತಂಕ, ಭತ್ತ ಉತ್ಪಾದನೆ ಕುಸಿತ ಭೀತಿ, ಮುಗಿಲು ನೋಡುತ್ತಾ ಕುಳಿತ ರೈತ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved