MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಆಡುಗಳ ಸಾಯಿಸಿದ ನಾಯಿ, ನಾಯಿಗೆ ವಿಷವಿಟ್ಟ ಮನುಷ್ಯ: ವಿಷಪೂರಿತ ನಾಯಿಗಳ ತಿಂದು 25ಕ್ಕೂ ಹೆಚ್ಚು ಅತೀ ಅಪರೂಪದ ರಣಹದ್ದುಗಳು ಸಾವು

ಆಡುಗಳ ಸಾಯಿಸಿದ ನಾಯಿ, ನಾಯಿಗೆ ವಿಷವಿಟ್ಟ ಮನುಷ್ಯ: ವಿಷಪೂರಿತ ನಾಯಿಗಳ ತಿಂದು 25ಕ್ಕೂ ಹೆಚ್ಚು ಅತೀ ಅಪರೂಪದ ರಣಹದ್ದುಗಳು ಸಾವು

ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ, ಮೇಕೆಗಳನ್ನು ಕೊಂದ ಸೇಡಿಗಾಗಿ ಗ್ರಾಮಸ್ಥರು ಬೀದಿ ನಾಯಿಗಳಿಗೆ ವಿಷವಿಟ್ಟಿದ್ದಾರೆ. ಈ ವಿಷಾಹಾರ ಸೇವಿಸಿ ಸತ್ತ ನಾಯಿಗಳ ಶವವನ್ನು ತಿಂದ 25ಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಹಿಮಾಲಯನ್ ಗ್ರೀಫನ್ ರಣಹದ್ದುಗಳು ಸಾವನ್ನಪ್ಪಿವೆ.

2 Min read
Author : Anusha Kb
Published : Apr 20 2026, 10:12 AM IST
Share this Photo Gallery
  • FB
  • TW
  • Linkdin
  • Whatsapp
16
ಮಾನವನ ಅವಾಂತರಕ್ಕೆ ಉಸಿರು ಚೆಲ್ಲಿದ ಮುಗ್ಧ ಜೀವಿಗಳು
Image Credit : google

ಮಾನವನ ಅವಾಂತರಕ್ಕೆ ಉಸಿರು ಚೆಲ್ಲಿದ ಮುಗ್ಧ ಜೀವಿಗಳು

ಮನುಷ್ಯರು ಮಾಡುವ ಕೆಲವೊಂದು ಅವಾಂತರಗಳು ಇಡೀ ಪರಿಸರಕ್ಕೆ ದೊಡ್ಡ ಹಾನಿಯುಂಟು ಮಾಡುತ್ತದೆ. ಇದರಿಂದ ಮುಗ್ಧ ಜೀವಿಗಳು ಪ್ರಾಣ ಬಿಡುವಂತಾಗುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಮಾನವ ಮಾಡಿದ ಅವಾಂತರದಿಂದ ಹಲವು ಅಮೂಲ್ಯ ಹಾಗೂ ಅಪರೂಪದ ಪ್ರಾಣಿ ಪಕ್ಷಿಗಳು ಉಸಿರು ಚೆಲ್ಲಿವೆ. ಹಾಗಿದ್ದರೆ ಆಗಿದ್ದೇನು ಇಲ್ಲಿದೆ ಡಿಟೇಲ್ ಸ್ಟೋರಿ...

26
ಮೇಕೆಗಳ ಸಾಯಿಸಿದ್ದ ಬೀದಿನಾಯಿಗಳು
Image Credit : google

ಮೇಕೆಗಳ ಸಾಯಿಸಿದ್ದ ಬೀದಿನಾಯಿಗಳು

ನಾಯಿಗಳು ಆಡು ಮೇಕೆಗಳ ಮೇಲೆ ದಾಳಿ ಮಾಡಿ ಅವುಗಳನ್ನು ಸಾಯಿಸಿದವು ಎಂದು ಸಿಟ್ಟಿಗೆದ್ದ ಊರಿನ ಕೆಲ ಜನರು ಊರಿನಲ್ಲಿದ್ದ ಬೀದಿ ನಾಯಿಗಳಿಗೆ ವಿಷಾಹಾರ ವಿಟ್ಟಿದ್ದರು. ಈ ವಿಷಾಹಾರ ಸೇವಿಸಿದ ಬೀದಿನಾಯಿಗಳು ಸತ್ತು ಬಿದ್ದಿದ್ದು, ಇವುಗಳ ಶವವನ್ನು ರಣಹದ್ದುಗಳು ಸೇವಿಸಿದ್ದು, ಪರಿಣಾಮ 25ಕ್ಕೂ ಹೆಚ್ಚು ಹಿಮಾಲಯನ್ ಗ್ರೀಫನ್ ಜಾತಿಯ ರಣಹದ್ದುಗಳು ಸಾವನ್ನಪ್ಪಿವೆ.

Related Articles

Related image1
ವಿಜಯಪುರದ ಚಡಚಣದಲ್ಲಿ ಪತ್ತೆಯಾದ ನಿಗೂಢ ರಣಹದ್ದು: ಕಾಲಿನಲ್ಲಿರೋ ವಸ್ತು ನೋಡಿ ಜನರು ಶಾಕ್
Related image2
ಮರಿಗೆ ಜನ್ಮ ನೀಡಿದ ಅಪರೂಪದ ಉದ್ದಕೊಕ್ಕಿನ ರಣಹದ್ದು: ಪರಿಸರ ಪ್ರೇಮಿಗಳಲ್ಲಿ ಸಂತಸ
36
ಬೀದಿನಾಯಿಗೆ ವಿಷವಿಟ್ಟಿದ ಗ್ರಾಮಸ್ಥರು
Image Credit : google

ಬೀದಿನಾಯಿಗೆ ವಿಷವಿಟ್ಟಿದ ಗ್ರಾಮಸ್ಥರು

ಉತ್ತರ ಪ್ರದೇಶದ ಲಖೀಂಪುರ ಖೇರಿಯ ಸೇಮರಿಯಾ ಎಂಬ ಗ್ರಾಮದ ಬಹಾದ್ದೂರ್‌ ನಗರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮೀಣ ಪ್ರದೇಶದ ಸಣ್ಣದೊಂದು ವಿವಾದವೂ ಪರಿಸರಕ್ಕೆ ಮಾರಕವಾದಂತಹ ದುರಂತವಾಗಿ ಬದಲಾಗಿದೆ.

46
ವಿಷಸೇವಿಸಿ ಸತ್ತ ಬೀದಿನಾಯಿಗಳು
Image Credit : google

ವಿಷಸೇವಿಸಿ ಸತ್ತ ಬೀದಿನಾಯಿಗಳು

ಉತ್ತರ ಪ್ರದೇಶದ ಲಖೀಂಪುರ ಕೇರಿಯ ದುದ್ವಾ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯ ಕೃಷಿ ಭೂಮಿಯಲ್ಲು 25ಕ್ಕೂ ಹೆಚ್ಚು ರಣಹದ್ದುಗಳು ಸತ್ತು ಬಿದ್ದಿವೆ ಎಂದು ವರದಿಯಾಗಿದೆ. ಹಕ್ಕಿಗಳು ಕೆಳಭಾಗದಲ್ಲಿ ಸುತ್ತುಹೊಡೆಯುತ್ತಾ ಕುಸಿದು ಬೀಳುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕೆಲವು ಬೀದಿನಾಯಿಗಳು ಗುಂಪು ಕಟ್ಟಿಕೊಂಡು ಗ್ರಾಮದಲ್ಲಿ ಮೇಕೆಗಳ ಮೇಲೆ ದಾಳಿ ಮಾಡಿ ಸಾಯಿಸುತ್ತಿದ್ದವು.

56
ಬೀದಿನಾಯಿಗಳ ವಿಷಪೂರಿತ ಶವ ಸೇವಿಸಿದ್ದ ರಣಹದ್ದುಗಳು
Image Credit : google

ಬೀದಿನಾಯಿಗಳ ವಿಷಪೂರಿತ ಶವ ಸೇವಿಸಿದ್ದ ರಣಹದ್ದುಗಳು

ಮತ್ತೆ ಮತ್ತೆ ಇದೇ ರೀತಿಯ ಘಟನೆಗಳು ಸಂಭವಿಸಿದಾಗ ಮೇಕೆಗಳ ಮಾಲೀಕರು ಸಿಟ್ಟಾಗಿದ್ದಾರೆ. ಅವರಲ್ಲಿ ಯಾರೋ ಕೆಲವರು ಸತ್ತ ಮೇಕೆಗಳ ದೇಹಕ್ಕೆ ವಿಷಪ್ರಾಶನ ಮಾಡಿದ್ದು, ಇವುಗಳನ್ನು ನಾಯಿಗಳು ತಿಂದು ನಾಯಿಗಳು ಸಾವನ್ನಪ್ಪಿವೆ. ಕೆಲ ಅಂಗ್ಲ ಮಾಧ್ಯಮಗಳ ವರದಿಯ ಪ್ರಕಾರ, ಅನ್ನಕ್ಕೆ ಕೀಟನಾಶಕ ಮಿಕ್ಸ್ ಮಾಡಿ ಇಟ್ಟು ನಾಯಿಗಳನ್ನು ಸಾಯಿಸಲಾಗಿದೆ. ಈ ವಿಷಾಹಾರ ಸೇವಿಸಿದ ನಾಯಿಗಳು ಅಲ್ಲಲ್ಲಿ ಸತ್ತು ಬಿದ್ದಿದ್ದು, ಅವುಗಳ ಮಾಂಸವನ್ನು ರಣಹದ್ದುಗಳು ಸೇವಿಸುವುದಕ್ಕೆ ಆರಂಭಿಸಿವೆ.

66
25 ಅಪರೂಪದ ರಣಹದ್ದುಗಳ ದಾರುಣ ಸಾವು
Image Credit : google

25 ಅಪರೂಪದ ರಣಹದ್ದುಗಳ ದಾರುಣ ಸಾವು

ಪರಿಣಾಮವಾಗಿ ಅವುಗಳಿಗೆ ವಿಷಪ್ರಾಶನವಾಗಿದ್ದು, ಹಲವು ರಣಹದ್ದುಗಳು ಇಲ್ಲಿನ ಹೊಲ ಗದ್ದೆಗಳಲ್ಲಿ ಸತ್ತು ಬಿದ್ದಿವೆ. ಹೀಗೆ ಸಾವನ್ನಪ್ಪಿದ ಈ ಹಿಮಾಲಯನ್ ಗ್ರೀಫನ್ ರಣಹದ್ದುಗಳು ಅತೀ ಅಪರೂಪದ ರಣಹದ್ದುಗಳಾಗಿದ್ದು, ಅಳವಿನಂಚಿನಲ್ಲಿರುವ ಪ್ರಬೇಧಗಳಾಗಿವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ. ಒಟ್ಟಿನಲ್ಲಿ ಮಾನವ ಮಾಡಿದ ಅವಾಂತರವೊಂದು ಹಲವು ಮುಗ್ಧ ಜೀವಿಗಳ ಪ್ರಾಣಕ್ಕೆ ಎರವಾಗಿದ್ದು, ಪರಿಸರದ ಅಸಮತೋಲನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕೆರೆಯಲ್ಲಿ ಮುಳುಗುತ್ತಿದ್ದ ಅಳಿಯನ ರಕ್ಷಿಸಲು ಹೋಗಿ ಮಾವ ಅಳಿಯ ಇಬ್ಬರೂ ನೀರುಪಾಲು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ವನ್ಯಜೀವಿ
ಪಕ್ಷಿ
ನಾಯಿ

Latest Videos
Recommended Stories
Recommended image1
ಮೋದಿ ಸೀತಾ ಮಾತೆಯ ಅಪಹರಿಸಲು ಪ್ರಯತ್ನಿಸಿದ ಮಾರೀಚನಂತೆ: ತೆಲಂಗಾಣ ಮುಖ್ಯಮಂತ್ರಿ ರೆಡ್ಡಿ ವಿವಾದಿತ ಹೇಳಿಕೆ
Recommended image2
India Latest News Live: ಆಡುಗಳ ಸಾಯಿಸಿದ ನಾಯಿ, ನಾಯಿಗೆ ವಿಷವಿಟ್ಟ ಮನುಷ್ಯ - ವಿಷಪೂರಿತ ನಾಯಿಗಳ ತಿಂದು 25ಕ್ಕೂ ಹೆಚ್ಚು ಅತೀ ಅಪರೂಪದ ರಣಹದ್ದುಗಳು ಸಾವು
Recommended image3
ಇನ್ಫೋಸಿಸ್‌ನಲ್ಲೂ ಟಿಸಿಎಸ್‌ ರೀತಿ ಕಾರ್ಪೊರೆಟ್‌ ಜಿಹಾದ್‌?
Related Stories
Recommended image1
ವಿಜಯಪುರದ ಚಡಚಣದಲ್ಲಿ ಪತ್ತೆಯಾದ ನಿಗೂಢ ರಣಹದ್ದು: ಕಾಲಿನಲ್ಲಿರೋ ವಸ್ತು ನೋಡಿ ಜನರು ಶಾಕ್
Recommended image2
ಮರಿಗೆ ಜನ್ಮ ನೀಡಿದ ಅಪರೂಪದ ಉದ್ದಕೊಕ್ಕಿನ ರಣಹದ್ದು: ಪರಿಸರ ಪ್ರೇಮಿಗಳಲ್ಲಿ ಸಂತಸ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved